Tata: ಟಾಟಾ ಕಾರೆಂದರೆ ಯಮನಿಗೂ ಭಯ! ಎಲ್ಲರೂ ಪಾರು... ಯಾವುದೀ ಪುಟ್ಟ ಕಾರು?

ಮಹಾರಾಷ್ಟ್ರದ ಥಾಣೆಯ ಕ್ಯಾಡ್ಬರಿ ಬ್ರಿಡ್ಜ್ ಫ್ಲೈಓವರ್ ಮೇಲೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಡಂಪರ್ ಟ್ರಕ್, ಟ್ರೈಲರ್ ಮತ್ತು ಟೆಂಪೊ ನಡುವೆ ಸಿಲುಕಿ ಟಾಟಾ ಪಂಚ್ (Tata Punch) ನಜ್ಜುಗುಜ್ಜಾಗಿದೆ. ಒಟ್ಟಾರೆ ಈ ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಎಲ್ಲರಿಗೂ ತಿಳಿದಿರುವಂತೆ ಟಾಟಾ ಕಾರುಗಳು ಸುರಕ್ಷತೆಯಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಅಂತೆಯೇ ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ಬಳಿಕ ಟಾಟಾ ಪಂಚ್ ಕಾರನ್ನು ನೋಡಿದರೆ ಅದರಲ್ಲಿದ್ದವರು ಜೀವಂತವಾಗಿ ಹೊರಬಂದಿದ್ದಾರೆ ಎಂದು ನಂಬಲು ಯಾರಿಗಾದರೂ ಕಷ್ಟವಾಗುತ್ತದೆ. ಆದರೆ ಇದು ನಿಜ, ಕಾರಿನಲ್ಲಿದ್ದ ಎಲ್ಲರೂ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿ ಅಚ್ಚರಿಗೊಳಿಸಿದ್ದಾರೆ. ವರದಿಗಳ ಪ್ರಕಾರ ಇಲ್ಲಿನ ಸೇತುವೆಯ ಇಳಿಜಾರಿನಲ್ಲಿ ಟ್ರೈಲರ್ ಹಠಾತ್ ಬ್ರೇಕ್‌ನಿಂದಾಗಿ ಸರಣಿ ಅಪಘಾತ ನಡೆದಿದೆ.

tata-punch-and-trailer-truck-collision-all-passengers-safe

ಈ ಟ್ರೈಲರ್ ಹಿಂದೆಯೇ ಬರುತ್ತಿದ್ದ ಟಾಟಾ ಪಂಚ್ ಬಲವಾಗಿ ಬ್ರೇಕ್ ಹಾಕಲಾಗಿದೆಯಾದರೂ ಸಮಯಕ್ಕೆ ಸರಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಟ್ರೈಲರ್ ಅಡಿಯಲ್ಲಿ ಸಿಲುಕಿಕೊಂಡು ಅದರಲ್ಲಿದ್ದವರು ತಪ್ಪಿಸಿಕೊಳ್ಳುವ ಮೊದಲೇ ಟೆಂಪೊ ಅದಕ್ಕೆ ಡಿಕ್ಕಿ ಹೊಡೆದಿದೆ. ನಂತರ ಡಂಪರ್ ಟ್ರಕ್ ಕೂಡ ಟೆಂಪೊಗೆ ಡಿಕ್ಕಿ ಹೊಡೆದಿದೆ. ಈ ಎಲ್ಲಾ ವಾಹನಗಳ ಭಾರೀ ಹೊಡೆತಕ್ಕೆ ಸಿಲುಕಿ ಟಾಟಾ ಪಂಚ್ ನಜ್ಜುಗುಜ್ಜಾಗಿದೆ.

ಟಾಟಾ ಪಂಚ್ ಕಾರಿನಲ್ಲಿ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಇದ್ದರು ಎನ್ನಲಾಗಿದೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿದ್ದಾರೆ. ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದ ಮತ್ತಿಬ್ಬರು ಕೂಡ ಗಾಯಗೊಂಡಿದ್ದಾರೆ. ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಕಾರಿನಲ್ಲಿ ಸಿಕ್ಕಿಬಿದ್ದ ಕುಟುಂಬವನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಒಟ್ಟಾರೆ ಟಾಟಾ ಕಾರುಗಳು ಮತ್ತೊಮ್ಮೆ ಸುರಕ್ಷಿತ ವಾಹನಗಳು ಎಂಬುದನ್ನು ಸಾಭೀತು ಪಡಿಸಿವೆ.

tata-punch-and-trailer-truck-collision-all-passengers-safe

ಟಾಟಾ ಪಂಚ್ ವಿಶೇಷತೆಗಳು: ಟಾಟಾ ಪಂಚ್ ಬೆಲೆಯು ರೂ.6 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ಮಾದರಿಯ ಬೆಲೆಯು ರೂ.10.32 (ಎಕ್ಸ್‌ ಶೋರೂಂ ಬೆಲೆಗಳು) ಲಕ್ಷಗಳಾಗುತ್ತದೆ. ಪಂಚ್ ಅನ್ನು 38 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಹ್ಯಾಚ್ ಬ್ಯಾಕ್ ಗಾತ್ರದೊಳಗೆ ಆರಾಮ, ಸ್ಥಳಾವಕಾಶ ಮತ್ತು ಸವಾರಿ ಗುಣಮಟ್ಟದ ಅನುಕೂಲಗಳನ್ನು ಬಯಸುವ ಜನರಿಗೆ ಟಾಟಾ ಪಂಚ್ ಉತ್ತಮ ಆಯ್ಕೆಯಾಗಿದೆ.

ಡ್ಯುಯಲ್ ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸಾಧನಗಳು, ರಿಯರ್ ವೈಪರ್ ಮತ್ತು ವಾಷರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫೋಗರ್, ರೇನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಟೈರ್ ಪ್ರೆಶರ್ ವಾರ್ನಿಂಗ್ ಸಿಸ್ಟಮ್ ನೊಂದಿಗೆ ನಿಮಗೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಪ್ಯಾಕ್ ಮಾಡಲಾಗಿದೆ. ಇದರಲ್ಲಿ ಆರು ಏರ್ ಬ್ಯಾಗ್‌ಗಳು ಲಭ್ಯವಿಲ್ಲ ಎಂಬುದನ್ನು ಗಮನಿಸಬೇಕು.

tata-punch-and-trailer-truck-collision-all-passengers-safe

ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (ಸಿಎಸ್‌ಸಿ), ಐಎಸ್‌ಒಫಿಕ್ಸ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ (ಇಎಸ್ ಪಿ), ಎಬಿಎಸ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಒಟ್ಟಾರೆ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಪಂಚ್ ಹೆಚ್ಚಿನ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಒರಟಾಗಿ ಕಾಣುವ ಕ್ಲಾಡಿಂಗ್ ನೊಂದಿಗೆ ಸರಿಯಾದ ಮಿನಿ ಎಸ್‌ಯುವಿಯಂತೆ ಕಾಣುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 13, 2025, 17:30 [IST]
English summary
Tata punch and trailer truck collision all passengers safe
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+