ಆನೆ ದಾಳಿಯಿಂದ ತಪ್ಪಿಸಿಕೊಂಡ ಟಾಟಾ ಪಂಚ್‌ ಪ್ರಯಾಣಿಕರು: ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್‌

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಕಾಡು ಕಡಿಮೆಯಾಗುತ್ತಿದೆ. ಈ ಕಾರಣದಿಂದಲೇ ಹಲವು ಬಾರಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿನೆಡೆಗೆ ಬರುತ್ತವೆ. ಕಾಡಿನಿಂದ ನಾಡಿಗೆ ಬರುವುದರ ಜೊತೆಗೆ ಹಲವು ಬಾರಿ ದಾಂದಲೆಗಳು ನಡೆಸುತ್ತಲೇ ಇರುತ್ತದೆ. ಎಷ್ಟೋ ಜನ ಈ ಕಾಡು ಪ್ರಾಣಿಗಳಿಗೆ ಬಲಿಯಾಗಿರುವುದನ್ನು ನಾವು ನೊಡಿದ್ದೇವೆ.

ಇದೇ ರೀತಿಯ ಮತ್ತೊಂದು ಘಟನೆ ಇತ್ತೀಚೆಗೆ ನಡೆದಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಡ್ಡಬಂದ ಕಾಡಾನೆಯೊಂದು ಕೆಲವು ಸಮಯಗಳ ಕಾಲ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಲ್ಲದೇ ಕಾರಿನಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡುವಂತೆ ಮಾಡಿದೆ ಎಂದರೆ ನೀವು ನಂಬಲೇ ಬೇಕು. ಇಂದಿನ ಈ ಲೇಖನದಲ್ಲಿ ಈ ಸುದ್ದಿಯ ಕುರಿತಾಗಿ ನೋಡೋಣ.

Tata Punch

ಈ ಘಟನೆ ಉತ್ತರಾಖಂಡ್‌ನ ಕೊತ್ವಾರ್‌ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಭಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೋಡುಗರ ಎದೆ ಝಲ್ಲೆನ್ನಿಸುವ ಹಾಗಿದೆ ದೃಶ್ಯಗಳು. ವಿಡಿಯೋದಲ್ಲಿ ಕಾಣಿಸುವ ಕಾರು ಟಾಟಾ ಪಂಚ್ ಆಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಯಾವುದೇ ಹಾನಿಯಾಗದೇ ಪಾರಾಗುವಲ್ಲಿ ಸಫಲರಾಗಿದ್ದಾರೆ.

ಇನ್ನು ವಿಡಿಯೋವನ್ನು ಅದೇ ಮಾರ್ಗವಾಗಿ ಚಲಿಸುತ್ತಿದ್ದ ಬೈಕ್‌ ಸವಾರನೊಬ್ಬ ಸಂಪೂರ್ಣ ಘಟನೆಯನ್ನು ತನ್ನ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಕಾಣುವಂತೆ ಕಾರಿನಲ್ಲಿದ್ದ ಕುಟುಂಬಸ್ಥರೆಲ್ಲಾ ಅವಸರವಸರವಾಗಿ ಹೊರ ಬರುತ್ತಿದ್ದು, ಕೊಂಚದರಲ್ಲೆ ಆನೆಯ ದಾಳಿಯಿಂದ ತಪ್ಪಿಸಿಕೊಂಡಿದ್ದು, ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

Tata Punch

ಇನ್ನು ರಸ್ತೆಯಲ್ಲಿ ವಾಹನಗಳ ಅಧಿಕವಾಗಿ ಬಂದಂತೆ ಆನೆಯ ಗಮನ ಬೇರೆ ಕಡೆಗೆ ತಿರುಗಿದೆ. ಈ ಕಾರಣದಿಂದಾಗಿ ಟಾಟಾ ಪಂಚ್‌ ಬಳಿ ಬಂದಿದ್ದ ಆನೆ ಬೇರೆ ಕಡೆಗೆ ತನ್ನ ಗಮನ ಹೋಗಿದ್ದರಿಂದ ಕಾರಿಗೆ ಯಾವುದೇ ರೀತಿಯಯಲ್ಲೂ ಹಾನಿ ಮಾಡದೇ ತೆರಳಿದೆ. ಇದರಿಂದ ನಿಟ್ಟುಸಿರು ಬಿಟ್ಟ ಟಾಟಾ ಪಂಚ್‌ ಕಾರ್‌ನಲ್ಲಿದ್ದ ಸದಸ್ಯರು ಮರಳಿ ತಮ್ಮ ಮನೆ ಸೇರಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮೂರು ಗೆಳೆಯರನ್ನು ಆನೆಯೊಂದು ಆಕ್ರಮಿಸಿತ್ತು. ಪ್ರಾಣಿಗಳು ಚಲಿಸುವ ಹಾದಿಯಲ್ಲಿ್ಎ ಮೂವರು ಯುವಕರು ಕಾರನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಆನೆಯೊಂದು ಇವರು ಕಾಣದಂತೆ ಹಿಂಭಾಗದಿಂದ ಬಂದು ಆಕ್ರಮಿಸಿದೆ. ಈ ಸಂಧರ್ಭದಲ್ಲಿ ಎಚ್ಚೆತ್ತ ಅವರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದರಲ್ಲಿ ಒಬ್ಬ ಆನೆಯಿಂದ ತಪ್ಪಿಸಿಕೊಳ್ಳಲು ದೂರ ಓಡಿ ಹೋಗಿದ್ದು, ತನ್ನ ಕಾರಿನ ಬಳಿ ಮರಳಿದ್ದಾನೆ. ಆನೆಯೂ ಆತನನ್ನು ಬೆನ್ನಟ್ಟಿದ್ದು ಚಲಿಸುತ್ತಿದ್ದ ಕಾರನ್ನು ಪ್ರವೇಶಿಸುವ ವೇಳೆ ಯುವಕ ಕೆಳಗೆ ಬಿದ್ದಿದ್ದು, ಡೋರ್‌ನಲ್ಲಿ ನೇತಾಡಿಕೊಂಡು ಅಲ್ಲಿಂದ ಬದುಕಿದೆಯಾ ಬಡಜೀವವೇ ಎಂದು ಪ್ರಾರ್ಥಸುತ್ತಾ ಅಲ್ಲಿಂದ ಪಲಾಯನ ಮಾಡಿದ್ದಾರೆ. ಇನ್ನು ಮುಂದೆ ಯಾವತ್ತೂ ಈ ರೀತಿ ಕಾರನ್ನು ನಿಲ್ಲಿಸಿ ಪೋಟೋ ತೆಗೆಯಲಾರರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Thursday, November 23, 2023, 18:31 [IST]
English summary
Tata punch family gets away from elephant attack on road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+