ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಕರೋನಾ ವೈರಸ್ ಹರಡಬಹುದು ಎಂಬ ಕಾರಣಕ್ಕೆ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವ ಬದಲು ಸ್ವಂತ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಇದರಿಂದಾಗಿ ಹೊಸ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಮಾರಾಟಗಾರರು ಸಹ ಕಾರುಗಳ ವಿತರಣೆಯನ್ನು ಹೆಚ್ಚಿಸಿದ್ದಾರೆ. ಇತ್ತೀಚಿಗೆ ಹೊಸ ಕಾರ್ ಅನ್ನು ವಿತರಣೆ ಪಡೆಯುವ ಸಂದರ್ಭದಲ್ಲಿ ಗ್ರಾಹಕನೊಬ್ಬ ಎಡವಟ್ಟು ಮಾಡಿಕೊಂಡಿದ್ದಾನೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಇದರಿಂದ ಕಾರು ಹಾನಿಗೊಳಗಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೊಸ ಟಾಟಾ ಟಿಯಾಗೊ ಕಾರಿನ ವಿತರಣೆ ಪಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಈ ಘಟನೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದಿದೆ. ಟಾಟಾ ಟಿಯಾಗೊ ಕಾರು ಖರೀದಿಸಿದ್ದ ಗ್ರಾಹಕ ಶೋರೂಂನ ಮೊದಲ ಮಹಡಿಯಲ್ಲಿ ಕುಳಿತು ಕಾರ್ ಅನ್ನು ಸ್ಟಾರ್ಟ್ ಮಾಡಿದ್ದಾನೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಮುಂದಕ್ಕೆ ಚಲಿಸಿದ ಕಾರು ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದೆ. ಮಾಧ್ಯಮಗಳ ಪ್ರಕಾರ ಈ ಘಟನೆ ಟಾಟಾ ಮೋಟಾರ್ಸ್‌ ಕಂಪನಿಯ ಅಧಿಕೃತ ಮಾರಾಟಗಾರರಾದ ಸೆಲೆಕ್ಟ್ ಕಾರ್ಸ್‌ನಲ್ಲಿ ನಡೆದಿದೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಮಾಹಿತಿಗಳ ಪ್ರಕಾರ ಈ ಶೋರೂಂ ಸಾಕಷ್ಟು ದೊಡ್ಡದಾಗಿದ್ದು, ಶೋರೂಂನ ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲಿ ಕಾರುಗಳನ್ನು ಇರಿಸಲಾಗಿದೆ. ಟಾಟಾ ಟಿಯಾಗೊ ಕಾರು ಶೋರೂಂನ ಮೊದಲ ಮಹಡಿಯಲ್ಲಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಆ ಕಾರ್ ಅನ್ನು ಗ್ರಾಹಕರಿಗೆ ವಿತರಿಸಲು ಸಿದ್ಧಪಡಿಸಲಾಗುತ್ತಿತ್ತು. ಈ ಕಾರನ್ನು ನೆಲ ಮಹಡಿಗೆ ಕೊಂಡೊಯ್ಯಲು ಹೈಡ್ರಾಲಿಕ್ ರಾಂಪ್ ವಿನ್ಯಾಸಗೊಳಿಸಲಾಗಿತ್ತು. ಈ ಘಟನೆ ಸಂಭವಿಸಿದಾಗ ಕಾರು ಮಾಲೀಕ ಚಾಲಕನ ಸೀಟಿನಲ್ಲಿದ್ದ ಎಂದು ತಿಳಿದು ಬಂದಿದೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಚಾಲಕನ ಬಾಗಿಲಿನ ಪಕ್ಕದಲ್ಲಿ ನಿಂತಿರುವ ಶೋರೂಂನ ವ್ಯಕ್ತಿಯೊಬ್ಬರು ಕಾರಿನಲ್ಲಿರುವ ಫೀಚರ್'ಗಳ ಬಗ್ಗೆ ಕಾರಿನ ಮಾಲೀಕರಿಗೆ ಮಾಹಿತಿ ನೀಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಈ ವೇಳೆ ಚಾಲಕ ಗೇರ್ ಲಿವರ್ ಅನ್ನು ಡ್ರೈವ್ ಮೋಡ್'ನಲ್ಲಿ ಇರಿಸಿ, ಕಾರಿನ ಆಕ್ಸಲರೇಟರ್ ಹೆಚ್ಚಿಸಿದ್ದಾನೆ ಎಂದು ಹೇಳಲಾಗಿದೆ. ಆಗ ಟಾಟಾ ಟಿಯಾಗೊ ಶೋರೂಂನ ಮೊದಲ ಮಹಡಿಯಿಂದ ಹೊರ ಬಂದು ರಾಂಪ್ ದಾಟಿ ಕೆಳಕ್ಕೆ ಬಿದ್ದಿದೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಮೂಲಗಳ ಪ್ರಕಾರ, ಈ ಘಟನೆಯಲ್ಲಿ ಕಾರಿನ ಚಾಲಕ ಹಾಗೂ ಕೆಳಗೆ ನಿಂತಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರು ಮೊದಲ ಮಹಡಿಯಿಂದ ಮತ್ತೊಂದು ಕಾರಿನ ಮೇಲೆ ಬಿದ್ದಿದೆ.

ಈ ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಹಾನಿಗೀಡಾಗಿದೆ. ಮೇಲಿನಿಂದ ಕೆಳಗೆ ಬಿದ್ದ ಟಿಯಾಗೊ ಕಾರು ಪಲ್ಟಿಯಾಗಿದೆ. ಟಾಟಾ ಟಿಯಾಗೊ, ಟಾಟಾ ಮೋಟಾರ್ಸ್‌ ಕಂಪನಿಯ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ.

ಗ್ರಾಹಕನ ಅಚಾತುರ್ಯದಿಂದ ಮೊದಲ ಮಹಡಿಯಿಂದ ನೆಲಕ್ಕುರುಳಿದ ಟಾಟಾ ಟಿಯಾಗೊ ಕಾರು

ಈ ಕಾರ್ ಅನ್ನು ಹಲವು ಫೀಚರ್'ಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರನ್ನು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Tata Tiago car falls from first floor of the showroom due to customer's negligence. Read in Kannada.
Story first published: Tuesday, July 20, 2021, 20:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X