ಜೀವ ಉಳಿಸಿದ ರತನ್ ಟಾಟಾ ಕಂಪನಿಯ ಕಾರು: ಗೂಗಲ್ ಮ್ಯಾಪ್ ನೋಡಿ ಹೋಗಿ ಕಾಲುವೆ ಬಿದ್ದ ಟಿಗೋರ್

ಟಾಟಾ ಕಾರುಗಳು (Tata Cars) ತಮ್ಮ ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತೆಯಿಂದ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಟಾಟಾ ಕಾರುಗಳಿಗೆ ದೇಶದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವಿದೆ. ಈ ಹಿಂದೆ, ಟಾಟಾ ಕಾರು ಮಾಲೀಕರು ಅಪಘಾತಗಳಿಂದ ಬದುಕುಳಿದ ನಂತರ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಧನ್ಯವಾದ ಸಲ್ಲಿಸಿದ ಹಲವಾರು ವೀಡಿಯೊಗಳು ವೈರಲ್ ಆಗಿತ್ತು. ಹಲವು ಸಂದರ್ಭಗಳಲ್ಲಿ ಚಾಲಕನ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಆದರೆ ಇತ್ತೀಚೆಗೆ ಗೂಗಲ್ ಮ್ಯಾಪ್ ನಂಬಿ ಹೋಗಿ ಕಾಲುವೆ ಉರುಳಿ ಬಿದ್ದ ಘಟನೆ ವರದಿಯಾಗಿದೆ.

ಗೂಗಲ್ ಮ್ಯಾಪ್ ಮತ್ತು ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಅನ್ನು ಅತಿಯಾಗಿ ಅವಲಂಬಿಸಿರುವುದು ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ದಿವ್ಯಾಂಶು ಸಿಂಗ್ ಚಾಲನೆ ಮಾಡಿದ ವೈಟ್ ಟಾಟಾ ಟಿಗೋರ್ (Tata Tigor) ಕಾರು ಗೂಗಲ್ ಮ್ಯಾಪ್ ನಿರ್ದೇಶನಗಳನ್ನು ಅನುಸರಿಸಿ ಡ್ರೈವ್ ಮಾಡಿದ್ದಾರೆ. ಅಪಘಾತಕ್ಕೆ ಕೇವಲ ಗೂಗಲ್ ಮ್ಯಾಪ್ ಪ್ರಮುಖ ಕಾರಣ ಎಂಬುವುದು ಇನ್ನು ಕೂಡ ಖಚಿತವಾಗಿಲ್ಲ.

Tata Tigor

ವರದಿಗಳ ಪ್ರಕಾರ, ಗೂಗಲ್ ಮ್ಯಾಪ್ ಅನ್ನು ಅನುಸರಿಸಿ ಡ್ರೈವ್ ಮಾಡಿ ಹೋಗುತ್ತಿರುವಾಗ ಟೀಗೊರ್ ಶೀಘ್ರದಲ್ಲೇ ಕಾಲಾಪುರ ಕಾಲುವೆಯ ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಅದೃಷ್ಟವಶಾತ್, ವಾಹನದಲ್ಲಿದ್ದವರು ಬಿದ್ದ ಕೂಡಲೇ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾದರು, ಇದರಿಂದ ಹೆಚ್ಚಿನ ಗಾಯಗಳಿಲ್ಲ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವಿಧಾನಗಳನ್ನು ಪ್ರಾರಂಭಿಸಿದರು.

ಬಳಿಕ ಕ್ರೇನ್ ಬಳಸಿ ಕಾರನ್ನು ಹೊರತೆಗೆಯಲಾಯಿತು. ಪೊಲೀಸರು ತನಿಖೆ ಆರಂಭಿಸಿದ್ದು, ಕಾರು ಕಾಲುವೆಗೆ ಬೀಳಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದಾರೆ. ತನೆಖೆಯ ವರದಿ ಸಲ್ಲಿಕೆಯ ಬಳಿಕ ನಿಖರವಾದ ಮಹಿತಿ ಹೊರಬರಲಿದೆ. ಗೂಗಲ್ ಮ್ಯಾಪ್ ಅನ್ನು ನೋಡಿ ನೀವು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಎಚ್ಚರವಹಿಸಬೇಕು.

Tata Tigor

ಈ ಟಾಟಾ ಟಿಗೂರ್ ಕಾರಿನ ಬಗ್ಗೆ ಹೇಳುವುದಾದರೆ, ಈ ಸೆಡಾನ್ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 19.28 ರಿಂದ 19.60 ಕಿ.ಮೀ ಮತ್ತು ಸಿಎನ್‌ಜಿ ಮಾದರಿಗಳು 26.49 ರಿಂದ 28.06 ಕಿ.ಮೀ ಮೈಲೇಜ್ ಅನ್ನು ನೀಡುತ್ತವೆ.

ಹೊಸ ಟಿಗೂರ್ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8 ಸ್ಪೀಕರ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರು ಮ್ಯಾಗ್ನೆಟಿಕ್ ರೆಡ್, ಅರಿಜೋನಾ ಬ್ಲೂ, ಓಪಲ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ.

Tata Tigor

ಸುರಕ್ಷತೆಗೂ ಈ ಕಾರು ಹೆಸರುವಾಸಿಯಾಗಿದ್ದು, ಡುಯಲ್ ಫ್ರಂಟ್ ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ಕಾರಿಗೆ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ ಸೆಡಾನ್ ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Cartoq

Article Published On: Thursday, December 5, 2024, 19:11 [IST]
English summary
Tata tigor saves life of passengers after falls into canal details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+