ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಆಂಧ್ರಪ್ರದೇಶ ಸರ್ಕಾರವು ಲಾಕ್‌ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರವು ಎಲ್ಲಾ ಆಟೋ, ಟ್ಯಾಕ್ಸಿ ಚಾಲಕರಿಗೆ ರೂ.10,000ಗಳ ನೆರವನ್ನು ನೀಡಲಿದೆ.

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ರಾಜ್ಯ ಸರ್ಕಾರವು ತನ್ನ ಕಲ್ಯಾಣ ಯೋಜನೆಯಡಿ 2.62 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಈ ಧನಸಹಾಯವನ್ನು ನೀಡಲಿದೆ. ಜಿಲ್ಲಾಧಿಕಾರಿಗಳು ಹಾಗೂ ಫಲಾನುಭವಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿರವರು, ವೈಎಸ್ಆರ್ ವಾಹನ ಮಿತ್ರ ಯೋಜನೆಯಡಿ ಒಟ್ಟು ರೂ.262.49 ಕೋಟಿಗಳನ್ನು 2,62,493 ಫಲಾನುಭವಿಗಳಿಗೆ ವರ್ಗಾಯಿಸುವುದಾಗಿ ಘೋಷಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಈ ಹಣವನ್ನು ಫಲಾನುಭವಿಗಳು ಮದ್ಯಪಾನಕ್ಕಾಗಿ ಬಳಸದೇ ತಮ್ಮ ಹಾಗೂ ತಮ್ಮ ಕುಟುಂಬದವರ ಜೀವನ ನಿರ್ವಹಣೆಗಾಗಿ ಬಳಸಬೇಕೆಂದು ಮನವಿ ಮಾಡಿದರು. ಈ ಹಣವನ್ನು ಕುಡಿತಕ್ಕೆ ಬಳಸಿದರೆ, ಇದರಿಂದ ಪ್ರಯಾಣಿಕರು ಹಾಗೂ ಚಾಲಕರಿಗೂ ಸಮಸ್ಯೆಗಳಾಗಲಿದೆ ಎಂದು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ವಿಮಾ ಕಂತು ಪಾವತಿ, ಪರವಾನಗಿ ಶುಲ್ಕ ಹಾಗೂ ಇತರ ವೆಚ್ಚಗಳನ್ನು ಪಾವತಿಸಲು ನೆರವಾಗುವ ಉದ್ದೇಶದಿಂದ ವಾರ್ಷಿಕ ರೂ.10,000ಗಳನ್ನು ನೀಡುವ ವೈಎಸ್ಆರ್ ವಾಹನ್ ಮಿತ್ರ ಯೋಜನೆಯನ್ನು 2019ರ ಅಕ್ಟೋಬರ್ 4ರಂದು ಆರಂಭಿಸಲಾಯಿತು.

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳುಗಳಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಯಾವುದೇ ಆದಾಯವಿಲ್ಲದ ಕಾರಣಕ್ಕೆ ವೈಎಸ್ಆರ್ ವಾಹನ್ ಮಿತ್ರ ಯೋಜನೆಯಡಿ ನಾಲ್ಕು ತಿಂಗಳ ಮುಂಗಡ ಭತ್ಯೆ ನೀಡಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಈ ಯೋಜನೆಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಲು ಜನರು ತಮ್ಮ ಗ್ರಾಮ ಅಥವಾ ವಾರ್ಡ್‌ಗಳ ಕಾರ್ಯದರ್ಶಿಯನ್ನು ಭೇಟಿಯಾಗುವಂತೆ ಜಗನ್ ಮೋಹನ್ ರೆಡ್ಡಿರವರು ಹೇಳಿದ್ದಾರೆ. ಧನ ಸಹಾಯ ಪಡೆಯಲು ಅರ್ಹತೆ ಹೊಂದಿ ಇನ್ನೂ ಯಾವುದೇ ಹಣವನ್ನು ಪಡೆಯದವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಲಾಕ್‌ಡೌನ್ ಎಫೆಕ್ಟ್: ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಜಗನ್ ಸರ್ಕಾರ

ಆನ್‌ಲೈನ್ ಪ್ಲಾಟ್‌ಫಾರಂ ಮೂಲಕವು ಅರ್ಹತಾ ಮಾನದಂಡಗಳನ್ನು ಪೂರೈಸಿದವರು ಪ್ರಯೋಜನಗಳನ್ನು ಪಡೆಯಬಹುದು ಎಂದು ಜಗನ್ ಮೋಹನ್ ರೆಡ್ಡಿರವರು ಹೇಳಿದರು. ಅರ್ಹರಾಗಿರುವ ಎಲ್ಲಾ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಜುಲೈ 4ರೊಳಗೆ ಈ ಹಣವನ್ನು ಪಾವತಿಸಲಾಗುವುದು.

Article Published On: Saturday, June 6, 2020, 17:21 [IST]
English summary
Taxi Auto Rickshaw Drivers to receive Rs 10000 allowance from AP State Government. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+