ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ದೇಶಾದ್ಯಂತ ಮಾರ್ಚ್‌ನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಇನ್ನೂ ಚಾಲ್ತಿಯಲ್ಲಿದೆ. ಸದ್ಯಕ್ಕೆ ಮೂರನೇ ಹಂತದ ಲಾಕ್‌ಡೌನ್ ಮೇ 17ರವರೆಗೆ ಜಾರಿಯಲ್ಲಿದೆ. ಇದನ್ನು ಮತ್ತಷ್ಟು ದಿನಗಳವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ. ಲಾಕ್‌ಡೌನ್ ಕಾರಣಕ್ಕೆ ಎಲ್ಲಾ ರೀತಿಯ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಲಾಕ್‌ಡೌನ್‌ನಿಂದ ಕ್ಯಾಬ್ ಚಾಲಕರು ನಿರುದ್ಯೋಗಿಗಳಾದರು. ಟ್ಯಾಕ್ಸಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಟ್ಯಾಕ್ಸಿ ಡ್ರೈವರ್ ಒಬ್ಬರು ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಸ್ಕ್‌ಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಕೇರಳದ ಎರ್ನಾಕುಲಂ ಮೂಲದ ಟ್ಯಾಕ್ಸಿ ಚಾಲಕ ಜಿಜೊ ಎಂಬುವವರೇ ಲಾಕ್‌ಡೌನ್ ಕಾರಣಕ್ಕೆ ಮಾಸ್ಕ್ ಮಾರಾಟಕ್ಕಿಳಿದ ವ್ಯಕ್ತಿ. ಇದಕ್ಕಾಗಿ ಅವರು ತಮ್ಮ ಕಾರನ್ನೇ ಮೊಬೈಲ್ ಅಂಗಡಿಯನ್ನಾಗಿ ಬದಲಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಮಾಧ್ಯಮ ಮೂಲಗಳ ಪ್ರಕಾರ, ಅವರು ಪ್ರತಿ ತಿಂಗಳು ತಮ್ಮ ಕಾರಿಗಾಗಿ ರೂ.9500 ಇಎಂಐ ಪಾವತಿಸುತ್ತಿದ್ದಾರೆ. ಇದರ ಜೊತೆಗೆ ಅವರ ಮನೆಯ ಖರ್ಚು, ಬಾಡಿಗೆ ಸೇರಿದಂತೆ ಇಡೀ ಕುಟುಂಬದ ಜವಾಬ್ದಾರಿ ಅವರ ಮೇಲಿದೆ. ಈ ಕಾರಣಕ್ಕೆ ಕೆಲಸವಿಲ್ಲದೇ ಇರುವುದಕ್ಕಿಂತ ಫೇಸ್ ಮಾಸ್ಕ್ ಮಾರಾಟ ಮಾಡುವುದು ಸೂಕ್ತವೆಂದು ಭಾವಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಈಗಿನ ಪರಿಸ್ಥಿತಿಯಲ್ಲಿ ಟ್ಯಾಕ್ಸಿ ಓಡಿಸುವ ಮೂಲಕ ಸಂಪಾದನೆ ಮಾಡಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ತಮ್ಮ ಕುಟುಂಬವನ್ನು ಪೋಷಿಸಲು ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ ಅವರು ನನ್ನಂತೆಯೇ ಉಳಿದ ಕ್ಯಾಬ್ ಚಾಲಕರು ಸಹ ವಿಭಿನ್ನ ಕೆಲಸಗಳನ್ನು ಮಾಡುತ್ತಿದ್ದಾರೆಂದು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಜಿಜೊ ಅವರ ಮೇಲೆ ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಅವರ ಪೋಷಕರು ಅವಲಂಬಿತರಾಗಿದ್ದಾರೆ. ಅವರನ್ನು ಸಲಹುವ ಕಾರಣಕ್ಕೆ ಟ್ಯಾಕ್ಸಿ ಚಾಲನೆ ಮಾಡುವ ಬದಲು ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಲಾಕ್‌ಡೌನ್‌ನಲ್ಲಿ ಹಲವು ಉದ್ಯಮಗಳಿಗೆ ವಿನಾಯಿತಿ ನೀಡಲಾಗಿದ್ದರೂ ಸಾರ್ವಜನಿಕ ಸಾರಿಗೆ ಆರಂಭಿಸಲು ಇನ್ನೂ ಅನುಮತಿ ನೀಡಿಲ್ಲ.

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ಭಾರತದ ಹಲವೆಡೆ ಓಲಾ, ಉಬರ್‌ನಂತಹ ಕ್ಯಾಬ್ ಸೇವೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಆದರೆ ರೆಡ್ ಝೋನ್‌ನಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ. ಇದರಿಂದಾಗಿ ಕ್ಯಾಬ್ ಚಾಲಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಫೇಸ್ ಮಾಸ್ಕ್ ಮಾರಾಟಕ್ಕಿಳಿದ ಕ್ಯಾಬ್ ಡ್ರೈವರ್..!

ದೇಶದಲ್ಲಿ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದೆಂದು ಹೇಳಿದ್ದರು. ಇನ್ನು ಕೆಲ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Taxi driver selling face mask to earn during lockdown. Read in Kannada.
Story first published: Wednesday, May 13, 2020, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X