ಗುರುದಕ್ಷಿಣೆಯಾಗಿ ಶಿಕ್ಷಕನಿಗೆ ಪ್ರೀಮಿಯಂ ಕಾರು ಗಿಫ್ಟ್​: ವಿದ್ಯಾರ್ಥಿಗಳ ಪ್ರೀತಿಗೆ ಕಣ್ಣೀರಿಟ್ಟ ಮೇಷ್ಟ್ರು

ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಶಿಕ್ಷಣ ಕೇವಲ ಪಾಠದಿಂದ ಮಾತ್ರ ಬರುವುದಲ್ಲ, ಶಿಕ್ಷಕರ ನಡೆ ನುಡಿಗಳೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕೆ ಹಲವಾರು ಮಾದರಿ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕನಿಗೆ (Teacher)ಕೆಲವು ವಿದ್ಯಾರ್ಥಿಗಳು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸದ್ಯ ಹಳೆ ವಿದ್ಯಾರ್ಥಿಗಳು (Students) ಶಿಕ್ಷಕನಿಗೆ ಕಾರು ನೀಡಿರುವ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳದಿದೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಮಂಡಲದಲ್ಲಿ ಈ ಘಟನೆ ನಡೆದಿದೆ. ವರದಿ ಪ್ರಕಾರ, ಚಿಲಕಲೂರಿಪೇಟೆ ಮಂಡಲದ ಮದ್ದಿರಾಳ ಜವಾಹರ ನವೋದಯ ವಿದ್ಯಾಲಯದಲ್ಲಿ ಬಂಡಿ ಜೇಮ್ಸ್ ಎಂಬ ವ್ಯಕ್ತಿ ಕಲಾ ಶಿಕ್ಷಕರಾಗಿದ್ದಾರೆ.

Car Gift To Teacher In

ಈ ಹಿಂದೆ ಜೇಮ್ಸ್ ಅವರು ಅನಂತಪುರ ಜಿಲ್ಲೆಯ ಲೇಪಾಕ್ಷಿ ನವೋದಯ ಮತ್ತು ನೆಲ್ಲೂರು ಜಿಲ್ಲೆಯ ನವೋದಯದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 2016 ರಿಂದ ಮದ್ದಿರಾಳ ನವೋದಯದಲ್ಲಿ ಶಿಕ್ಷಕರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕ ಜೇಮ್ಸ್ ಅವರು ಏಪ್ರಿಲ್ 30 ರಂದು (ಇಂದು) ನಿವೃತ್ತರಾಗಲಿದ್ದಾರೆ. ಈ ಸಂದರ್ಭದಲ್ಲಿ ಲೇಪಾಕ್ಷಿ ನವೋದಯ ಮಾಜಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸನ್ಮಾನಿಸಿ ಗುರುದಕ್ಷಿಣೆ ನೀಡಲು ನಿರ್ಧರಿಸಿದರು.

ಗುರು ದಕ್ಷಿಣೆಯಾಗಿ ಮಾರುತಿ ಸುಜುಕಿ ಬಲೆನೊ ಕಾರನ್ನು ನೀಡಿದ್ದಾರೆ. ಭಾನುವಾರ ಮದ್ದಿರಾಳ ನವೋದಯದಲ್ಲಿ ಕಲಾ ಶಿಕ್ಷಕ ಜೇಮ್ಸ್ ಅವರಿಗೆ ಹಳೆ ವಿಧ್ಯಾರ್ಥಿಗಳಳು ಕಾರನ್ನು ನೀಡಿ ಸನ್ಮಾನಿಸಿದರು. ಗುರು ದಕ್ಷಿಣೆ ನೀಡಿದ ಈ ಕಾರಿನ ಆನ್ ರೋಡ್ ಬೆಲೆಯು ರೂ.8.07 ರಿಂದ 11.91 ಲಕ್ಷವಾಗಿದೆ. ಶಿಕ್ಷಕರಿಗೆ ಪ್ರೀತಿಯಿಂದ ಇಷ್ಟೊಂದು ದುಬಾರಿ ಉಡುಗೊರೆ ನೀಡಿರಿವುದು ನೆಟ್ಟಿಗರ ಗಮನ ಸೆಳೆದಿದೆ.

Car Gift To Teacher In

ವಿದ್ಯಾರ್ಥಿಗಳು ಗಿಫ್ಟ್ ನೀಡಿದ ಮಾರುತಿ ಸುಜುಕಿ ಬಲೆನೊ (Maruti Suzuki Baleno), ಕಾರಿನ ಬಗ್ಗೆ ಹೇಳುವುದಾದರೆ, ಇದು ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 5 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು. ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿರುವುದರಿಂದ ನೆಕ್ಸಾ ಡೀಲರ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಸಿಗ್ಮಾ, ಡೆಲ್ಟಾ, ಜಿಟಾ, ಆಲ್ಪಾ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರೈಂಡರ್ ಗ್ರೇ ಒಳಗೊಂಡಂತೆ 7-ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಮಾರುತಿ ಸುಜುಕಿ ಬಲೆನೊ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

Car Gift To Teacher In

ಇನ್ನು ಸಿಎನ್‌ಜಿ ಚಾಲಿತ ಬಲೆನೊ ಸಹ ಈ ರೀತಿಯ ಪವರ್‌ಟ್ರೇನ್ ಅನ್ನು ಪಡೆದಿದೆ. ಆದರೆ, 77.49 PS ಪವರ್, 98.5 Nm ಪೀಕ್ ಟಾರ್ಕ್ ಹೊರಕಾಕುತ್ತದೆ. ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಇಂಧನ ದಕ್ಷತೆ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 ಕಿ.ಮೀ - 22.94 ಕಿ.ಮೀ, ಸಿಎನ್‌ಜಿ ರೂಪಾಂತರಗಳು 30.61 ಕಿ.ಮೀಮೈಲೇಜ್ ನೀಡುತ್ತವೆ.

ಈ ಮಾರುತಿ ಸುಜುಕಿ ಬಲೆನೊ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಐಡಲ್ ಸ್ಟಾರ್ಟ್/ ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಟ್ಟಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಯಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್‌ಗಳನ್ನು ಒಳಗೊಂಡ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿಯನ್ನು ಹೊಂದಿದೆ.

Car Gift To Teacher

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Samayam

More from DriveSpark

Article Published On: Tuesday, April 30, 2024, 13:33 [IST]
English summary
Teacher receives maruti suzuki baleno car as gift from students in chilakalurip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+