ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

ಟೆಕ್ನಿಕಲ್ ಗುರೂಜಿ ಎಂದೇ ಜನಪ್ರಿಯವಾಗಿರುವ ಗೌರವ್ ಚೌಧರಿ ಭಾರತದ ಖ್ಯಾತ ಪ್ರಕಾಶಕರಲ್ಲಿ ಒಬ್ಬರು. ಮೊಬೈಲ್ ಹಾಗೂ ಗ್ಯಾಜೆಟ್ ವಿಮರ್ಶೆಗಳ ಮೂಲಕ ಯೂಟ್ಯೂಬ್‌ನಲ್ಲಿ ದೊಡ್ಡ ಹೆಸರನ್ನು ಗಳಿಸಿದ್ದಾರೆ.

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

ಗೌರವ್ ಚೌಧರಿರವರು ಭಾರತೀಯರಾಗಿದ್ದರೂ ತಮ್ಮ ಕುಟುಂಬದೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ತಂತ್ರಜ್ಞಾನದ ಜೊತೆಗೆ, ಅವರು ಕಾರು ಹಾಗೂ ಬೈಕ್ ಗಳ ಬಗೆಯೂ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಟೆಕ್ನಿಕಲ್ ಗುರೂಜಿರವರು ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು, ಪೋರ್ಷೆ, ರೇಂಜ್ ರೋವರ್, ಜಾಗ್ವಾರ್, ಕವಾಸಕಿ, ಹಾರ್ಲೆ ಡೇವಿಡ್ಸನ್ ಸೇರಿದಂತೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ 10ಕ್ಕೂ ಹೆಚ್ಚು ವಾಹನಗಳನ್ನು ಹೊಂದಿದ್ದಾರೆ. ಟೆಕ್ನಿಕಲ್ ಗುರೂಜಿರವರ ಬಳಿಯಿರುವ ವಾಹನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

1. ರೋಲ್ಸ್ ರಾಯ್ಸ್ ಘೋಸ್ಟ್

ಈ ಕಾರನ್ನು ಟೆಕ್ನಿಕಲ್ ಗುರೂಜಿರವರು ಇತ್ತೀಚೆಗಷ್ಟೇ ಖರೀದಿಸಿದ್ದಾರೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.5.25 ಕೋಟಿಗಳಾಗಿದೆ. ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 6.6-ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 563 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0ರಿಂದ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

2. ಬಿಎಂಡಬ್ಲ್ಯು 720 ಡಿ

ಬಿಎಂಡಬ್ಲ್ಯು 7 ಸೀರೀಸ್ ಕಾರಿನ ಬೆಲೆ ಸುಮಾರು ರೂ.1 ಕೋಟಿಗಳಾಗಿದೆ. ಟೆಕ್ನಿಕಲ್ ಗುರೂಜಿ ಬಳಿಯಿರುವ ಈ ಕಾರು ಹಲವಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಈ ಕಾರು ಬಿಎಂಡಬ್ಲ್ಯು ಕಂಪನಿಯ ಇತ್ತೀಚಿನ ಕಾರುಗಳಲ್ಲಿ ಒಂದಾಗಿದೆ. ಬಿಎಂಡಬ್ಲ್ಯು 7 ಸೀರೀಸ್ ಕಾರು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

3. ಮರ್ಸಿಡಿಸ್ ಜಿ 65 ಎಎಂಜಿ

ಟೆಕ್ನಿಕಲ್ ಗುರೂಜಿ ಐಷಾರಾಮಿ ಕಾರುಗಳನ್ನು ಮಾತ್ರವಲ್ಲದೇ ಎಸ್‌ಯುವಿಗಳನ್ನು ಸಹ ಇಷ್ಟಪಡುತ್ತಾರೆ. ಅವರು ಜನಪ್ರಿಯ ಜಿ 65 ಎಎಂಜಿ ಎಸ್‌ಯುವಿಯನ್ನು ಹೊಂದಿದ್ದಾರೆ. ಮರ್ಸಿಡಿಸ್ ಜಿ 65 ಎಎಂಜಿ ತನ್ನ ಆಫ್-ರೋಡಿಂಗ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಎಸ್‌ಯುವಿಯಲ್ಲಿ ಟ್ವಿನ್ ಟರ್ಬೊ 6.0 ಲೀಟರಿನ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5,000 ಆರ್‌ಪಿಎಂನಲ್ಲಿ 621 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

4. ಪೋರ್ಷೆ ಪನಾಮೆರಾ

ಟೆಕ್ನಿಕಲ್ ಗುರೂಜಿರವರು ಕೆಂಪು ಬಣ್ಣದ ಪೋರ್ಷೆ ಪನಾಮೆರಾ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು ರೂ.1 ಕೋಟಿಗಳಾಗಿದೆ. ಈ ಕಾರು ಸಹ ಹಲವಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಈ ಕಾರಿನಲ್ಲಿರುವ 3.0 ಲೀಟರಿನ ವಿ6 ಡೀಸೆಲ್ ಎಂಜಿನ್, 250 ಬಿಹೆಚ್‌ಪಿ ಪವರ್ ಹಾಗೂ 550 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

5. ಆಡಿ ಎ6

ಟೆಕ್ನಿಕಲ್ ಗುರೂಜಿ ಬಿಳಿ ಬಣ್ಣದ ಆಡಿ ಎ6 ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 55 ಲಕ್ಷ ರೂಪಾಯಿಗಳಾಗಿದೆ. ಆಡಿ ಎ6 ಕಾರ್ ಅನ್ನು 2.0 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

6. ಸುಜುಕಿ ಹಯಾಬುಸಾ

ಸುಜುಕಿ ಕಂಪನಿಯ ಹಯಾಬುಸಾ ಬೈಕ್ ಪ್ರಿಯರ ನೆಚ್ಚಿನ ಬೈಕ್. ಟೆಕ್ನಿಕಲ್ ಗುರೂಜಿ ಸಹ ಈ ಬೈಕ್ ಅನ್ನು ಹೊಂದಿದ್ದಾರೆ. ಟೆಕ್ನಿಕಲ್ ಗುರೂಜಿ ಬಳಿಯಿರುವ ಬಿಳಿ ಬಣ್ಣದ ಸುಜುಕಿ ಹಯಾಬುಸಾ ಬೈಕಿನ ಬೆಲೆ 13 ಲಕ್ಷ ರೂಪಾಯಿಗಳಾಗಿದೆ.

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

7. ರಾಯಲ್ ಎನ್‌ಫೀಲ್ಡ್ ಹಿಮಾಲಯ

ಟೆಕ್ನಿಕಲ್ ಗುರೂಜಿ ಗುಡ್ಡಗಾಡುಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಅನ್ನು ಸಹ ಹೊಂದಿದ್ದಾರೆ. ಈ ಬೈಕ್‌ನೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ಸುಮಾರು 2 ಲಕ್ಷ ರೂಪಾಯಿಗಳಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಟೆಕ್ನಿಕಲ್ ಗುರೂಜಿ ಬಳಿಯಿರುವ ಐಷಾರಾಮಿ ಕಾರು ಬೈಕುಗಳಿವು

8. ಎಟಿವಿ 4x4

ಮೊದಲೇ ತಿಳಿಸಿದಂತೆ ಟೆಕ್ನಿಕಲ್ ಗುರೂಜಿ ವಾಸಿಸುತ್ತಿರುವುದು ದುಬೈನಲ್ಲಿ. ಅಲ್ಲಿನ ಮರುಭೂಮಿಯಲ್ಲಿ ಸಂಚರಿಸಲು ಎಟಿವಿ 4x4 ಹೊಂದಿದ್ದಾರೆ. ಇದು ಕಡಿಮೆ ಎತ್ತರದ ಓಪನ್ ಕಾರಿನಂತಿದ್ದು, ಮರುಭೂಮಿಯಲ್ಲಿ ಕ್ರೀಡೆಗಳಿಗಾಗಿ ಬಳಸಲಾಗುತ್ತದೆ.

Most Read Articles

Kannada
English summary
Technical Guruji's car and bike collection. Read in Kannada.
Story first published: Tuesday, July 7, 2020, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X