ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಹೈಪರ್ ಕಾರುಗಳು ನೋಡಲು ಎಷ್ಟು ಆಕರ್ಷವಾಗಿರುತ್ತವೆಯೋ ಅವುಗಳು ಅಷ್ಟೇ ಭಯ ಹುಟ್ಟಿಸುತ್ತವೆ. ಏಕೆಂದರೆ ಆ ಕಾರುಗಳಿಂದ ಆಗುವ ಅಪಘಾತಗಳು ಸಹ ಅಷ್ಟೇ ಭಯಾನಕ. ಹೈಪರ್ ಕಾರುಗಳಿಂದ ಆ ಕಾರಿನ ಚಾಲಕ, ಪ್ರಯಾಣಿಕ ಅಥವಾ ಸುತ್ತಮುತ್ತಲಿರುವವರಿಗೂ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಇತ್ತೀಚಿಗೆ ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಹೈಪರ್ ಕಾರೊಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಈ ಕಾರಿನ ಮುಂಭಾಗವು ಅಪ್ಪಚ್ಚಿಯಾಗಿದೆ. ಈ ಅಪಘಾತದ ತೀವ್ರತೆ ಎಷ್ಟಿದೆಯೆಂದರೆ ಚಾಲಕನ ಬಳಿಯಿದ್ದ ಡೋರು ಹೊರಬಂದು ರಸ್ತೆಯಲ್ಲಿ ಬಿದ್ದಿದ್ದರೆ, ಮುಂಭಾಗದ ವ್ಹೀಲ್ ಗಳು ಚಾಸಿಸ್ ನಿಂದ ಸಂಪೂರ್ಣವಾಗಿ ಹೊರಬಂದಿವೆ.

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ರಸ್ತೆಯಲ್ಲಿ ಬಿದ್ದಿರುವ ಕಾರ್ಬನ್-ಫೈಬರ್ ತುಣುಕುಗಳನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿಗಳ ಪ್ರಕಾರ, 17 ವರ್ಷದ ಕೇಜ್ ಗಿಲಿಯನ್ ಎಂಬಾತ ತನ್ನ ತಂದೆಗೆ ಸೇರಿದ ಈ ಪಗಾನಿ ಹ್ಯುರಾ ರೋಡ್‌ಸ್ಟರ್ ಹೈಪರ್ ಕಾರನ್ನು ಚಾಲನೆ ಮಾಡುತ್ತಿದ್ದ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಟೆಕ್ಸಾಸ್‌ನ ಖಾಸಗಿ ಷೇರುದಾರ ಟಿಮ್ ಗಿಲಿಯನ್ ಅವರ ಮಗನಾದ ಕೇಜ್ ಯೂಟ್ಯೂಬ್‌ನಲ್ಲಿ ಚಾನೆಲ್‌ಗಳನ್ನು ನಡೆಸುತ್ತಿದ್ದಾನೆ. ಉದ್ಯಮಿ ಟಿಮ್ ಗಿಲಿಯನ್ ಮೆಕ್‌ಲಾರೆನ್ ಸೆನ್ನಾ, ಬುಗಾಟ್ಟಿ ಚಿರೋನ್, ಫೆರಾರಿ ಲಾಫೆರಾರಿ, ರೋಲ್ಸ್ ರಾಯ್ಸ್ ಟೌನ್ ಹಾಗೂ ಲ್ಯಾಂಬೊರ್ಗಿನಿ ಉರುಸ್ ನಂತಹ ಹಲವು ಐಷಾರಾಮಿ ಸೂಪರ್ ಕಾರುಗಳನ್ನು ಹೊಂದಿದ್ದಾರೆ.

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಅಪಘಾತದಲ್ಲಿ ಅಪ್ಪಚ್ಚಿಯಾಗಿರುವ ಪಗಾನಿ ಹ್ಯುರಾ ರೋಡ್‌ಸ್ಟರ್ ಕಾರಿನ ಬೆಲೆ 3.4 ದಶಲಕ್ಷ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.25 ಕೋಟಿಗಳಾಗುತ್ತದೆ. ರಸ್ತೆಯ ಮೇಲಿರುವ ಕಾರ್ಬನ್-ಫೈಬರ್ ತುಂಡುಗಳನ್ನು ನೋಡಿದರೆ ಅಪಘಾತದ ತೀವ್ರತೆ ಕಂಡು ಬರುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಅಪಘಾತದಲ್ಲಿ ಕೇಜ್ ಗಿಲಿಯನ್ ಗೆ ತೀವ್ರ ಸ್ವರೂಪದ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ.

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಕೇಜ್ ಗಿಲಿಯನ್ ಕೆಲವು ವೀಡಿಯೊಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಅವುಗಳಲ್ಲಿ ಹೆಚ್ಚಿನ ವೀಡಿಯೊಗಳು ಕಾರಿನ ಪೆಡಲ್ ಗಳಿಗೆ ಸಂಬಂಧಿಸಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

2018ರಲ್ಲಿ ಬಿಡುಗಡೆಯಾದ ಬಗಾನಿ ಹೈಪರ್ ಕಾರು 754 ಬಿಎಚ್‌ಪಿ ಪವರ್ ಉತ್ಪಾದಿಸುವ ಎಂಜಿನ್ ಅನ್ನು ಹೊಂದಿದೆ. ಕಳೆದ ಜೂನ್‌ನಲ್ಲಿ, ಟಿಮ್ ಗಿಲಿಯನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪಗಾನಿ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ಅಪ್ಪಚ್ಚಿ ಮಾಡಿದ ಮಗ

ಇದಾದ ಆರು ತಿಂಗಳ ಬಳಿಕ ಈ ಅಪಘಾತ ಸಂಭವಿಸಿದೆ. ಪಗಾನಿ ಕಂಪನಿಯು ವರ್ಷಕ್ಕೆ ಕೇವಲ 30 ಹೈ ಪರ್ಫಾಮೆನ್ಸ್ ಹೈಪರ್ ಕಾರುಗಳನ್ನು ಉತ್ಪಾದಿಸುತ್ತದೆ. ಏಕೆಂದರೆ ಪ್ರತಿ ಕಾರನ್ನು ಉತ್ಪಾದಿಸಲು 10 ತಿಂಗಳು ಬೇಕಾಗುತ್ತದೆ.

Most Read Articles

Kannada
English summary
Teen youtuber crashes Dads Pagani Huayra Roadster car worth Rs.25 crore. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X