14 ವರ್ಷದ ಬಾಲಕನಿಂದ ಅಡ್ಡಾದಿಡ್ಡಿ ಕಾರು ಚಾಲನೆ, ಅಮಾಯಕ ವ್ಯಕ್ತಿಗೆ ಡಿಕ್ಕಿ: ಪೋಷಕರಿಗೆ ಬಿತ್ತು ದಂಡ
ಭಾರತದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದು ದೊಡ್ಡ ಅಪರಾಧ, ಅಪ್ರಾಪ್ತರ ವಾಹನ ಚಾಲನೆಗೆ ಪೋಷಕರು ಕೂಡ ಕಾರಣ. ಪೋಷಕರೇ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಡ್ರೈವಿಂಗ್ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡುವ ತಮ್ಮ ಮಕ್ಕಳಿಗೆ ತೆರಳಲು ಅನುಕೂಲವಾಗಲು ಬೈಕ್ ಮತ್ತು ಕಾರುಗಳನ್ನು ನೀಡುತ್ತಾರೆ.
ಹೆಚ್ಚಿನ ಮಕ್ಕಳು ವಾಹನವನ್ನು ಅತಿಯಾದ ವೇಗ ಮತ್ತು ನಿರ್ಲಕ್ಷದಿಂದ ಚಾಲನೆ ಮಾಡುತ್ತಾರೆ. ಇವತ್ತು ಸೋಶಿಯಲ್ ಮೀಡಿಯಾದಲ್ಲಿ ತಾವು ಮಿಂಚಬೇಕೆಂದು ಅತಿಯಾಗಿ ವೇಗವಾಗಿ ಅಥವಾ ಸ್ಟಂಟ್ ಮಾಡಿ ರೀಲ್ಸ್ ವಿಡಿಯೋ ಮಾಡುವುದು ಒಂದು ಟ್ರೆಂಡ್ ಆಗಿದೆ. ಇದರಿಂದ ಅಪಾಯಕಾರಿಯಾಗಿ ವಾಹನ ಚಲಾಯಿಸುವುದರಿಂದ ಅನಾಹುತಗಳು ಸಂಭವಿಸಬಹುದು. ಇದರಿಂದ ಪೋಷಕರು ಮಕ್ಕಳಿಗೆ ವಾಹನ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಬೇಕು. ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.

ಇದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಇತ್ತೀಚೆಗೆ, ಮುಂಬೈನ 14 ವರ್ಷದ ಬಾಲಕ ತನ್ನ ತಂದೆಯ ಟೊಯೊಟಾ ಇನೋವಾ (Toyota Innova) ಕಾರನ್ನು ತೆಗೆದುಕೊಂಡು ಹೋಗಿ ಸೊಸೈಟಿಯ ಗೇಟ್‌ನ ಹೊರಗೆ ಆಟೋರಿಕ್ಷಾದೊಂದಿಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ವರದಿಯಾಗಿದೆ. ರಿಕ್ಷಾವನ್ನು ಡಿಕ್ಕಿ ಹೊಡೆದ ನಂತರ, ಹಿರಿಯ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ.
ಈ ಸಂಪೂರ್ಣ ಘಟನೆಯ ವೀಡಿಯೊವನ್ನು X (ಹಿಂದೆ ಟ್ವಿಟರ್) ನಲ್ಲಿ ಚಾಂಡಿವಲಿ ಸಿಟಿಜನ್ಸ್ ವೆಲ್ಫೇರ್ ಅಸೋಸಿಯೇಷನ್ (CCWA) ತಮ್ಮ ಅಧಿಕೃತ ಪುಟದಲ್ಲಿ ಹಂಚಿಕೊಂಡಿದೆ. ಮುಂಬೈನ ಚಂಡಿವಾಲಿಯಲ್ಲಿರುವ ನಹರ್ ಅಮೃತ್ ಶಕ್ತಿ ರಸ್ತೆಯಲ್ಲಿರುವ ಹಿರಿಯ ನಾಗರಿಕರೊಬ್ಬರು ಸೊಸೈಟಿಯ ಗೇಟ್‌ನಿಂದ ಹೊರಬರುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ನಂತರ 14 ವರ್ಷ ಬಾಲಕ ಓಡಿಸುವ ಟೊಯೊಟಾ ಇನೋವಾ ಎಂಪಿವಿಯನ್ನು ನೋಡಬಹುದು. ಈ ಇನೋವಾ ಕಾರು ಗೇಟ್‌ನಿಂದ ಹೊರಬಂದು ಮುಖ್ಯರಸ್ತೆ ತಿರುವು ಪಡೆದುಕೊಂಡು ನಿಲ್ಲಿಸಿದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಗುತ್ತದೆ. ಈ ವೇಳೆ ಯುವಕ ಕಾರಿಮ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ನಂತರ ಕಾರು ಮತ್ತಷ್ಟು ವೇಗದಲ್ಲಿ ಮುನ್ನುಗುತ್ತದೆ. ನಂತರ ಹಿರಿಯ ನಾಗರಿಕನಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದಿದೆ.
ಈ ಘಟನೆಯ ನಂತರ ಬಾಲಕ ಕಾರಿನ ಮೇಲಿನ ನಿಯಂತ್ರಣ ಪಡೆಯಲು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸುವುದನ್ನು ವೀಡಿಯೊದಲ್ಲಿ ನೋಡಬಹುದು. ಈ ಅನಿಯಂತ್ರಿತ ಕಾರನ್ನು ನೋಡಿದ ನಂತರ ಕೆಲವು ದ್ವಿಚಕ್ರ ವಾಹನ ಸವಾರರು ನಿಲ್ಲಿಸುತ್ತಾರೆ. ಇತರ ಕೆಲವು ದಾರಿಹೋಕರು ಸಹ ವೃದ್ದನ ರಕ್ಷಣೆಗೆ ಬರುತ್ತಾರೆ. ಹಿರಿಯ ನಾಗರಿಕ 63 ವರ್ಷದ ಕೆ.ಸುಭರಾಮನ್, ಕಾರ್ಪೊರೇಟ್ ಕಾನೂನು ಸಂಸ್ಥೆಯ ನಿವೃತ್ತ ಸಲಹೆಗಾರ ಎಂದು ನಂತರ ವರದಿಯಾಗಿದೆ.
ಅವರಿಗೆ ಕೆಲವು ಗಾಯಗಳಾಗಿವೆ ಮತ್ತು ಈಗ ಮುಂಬರುವ ಮೂರು ತಿಂಗಳ ಕಾಲ ಬೆಡ್ ರೆಸ್ಟ್ ಅನ್ನು ಸೂಚಿಸಲಾಗಿದೆ ಎಂದು ವರದಿಯಾಗಿದೆ. ಕೆ.ಸುಭರಾಮನ್ ಅವರು ಸಕಿನಾಕಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಸಂಜೆ 4 ಗಂಟೆ ಸುಮಾರಿಗೆ ನಾನು ನನ್ನ ಎದುರಿನ ಕಟ್ಟಡದಲ್ಲಿ ವಾಕ್ ಮಾಡಲು ಹೊರಟೆ. ಹುಡುಗ ಕಾರು ಓಡಿಸುತ್ತಿದ್ದ. ಕಟ್ಟಡದಿಂದ ಹೊರ ಬರುತ್ತಿದ್ದಂತೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದಿದೆ. ನಂತರ ಕಾರು ರಸ್ತೆ ಬದಿಗೆ ಡಿಕ್ಕಿ ಹೊಡೆದಿದೆ.
ಸೆಕ್ಯುರಿಟಿ ಗಾರ್ಡ್ ನನಗೆ ಸಹಾಯ ಮಾಡಿದರು ಮತ್ತು ನನ್ನ ಮಗ ಮತ್ತು ಹೆಂಡತಿಗೆ ತಿಳಿಸಿದರು. ಅವರು ಗೇಟ್‌ಗೆ ಧಾವಿಸಿದರು. ನಾನು ನಿಲ್ಲಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಆಂಬ್ಯುಲೆನ್ಸ್ ಅನ್ನು ಕರೆದರು. ನಾನು ಅರ್ಧ ಗಂಟೆಗೂ ಹೆಚ್ಚು ಕಾಲ ನೆಲದ ಮೇಲೆ ಮಲಗಿದ್ದೆ. ನನ್ನ ಬೆನ್ನುಮೂಳೆಗೆ ಮತ್ತು ಸೊಂಟದ ಭಾಗದಲ್ಲಿ ಗಾಯಗೊಂಡಿದ್ದೇನೆ. ನನಗೆ ನಿಲ್ಲಲು ಅಥವಾ ನಡೆಯಲು ಸಾಧ್ಯವಾಗುತ್ತಿಲ್ಲ.
ವೈದ್ಯರು ನನಗೆ ಕನಿಷ್ಠ ಮೂರು ತಿಂಗಳ ಕಾಲ ಬೆಡ್ ರೆಸ್ಟ್ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಟೊಯೊಟಾ ಇನೋವಾ ಕಾರನ್ನು ಚಾಲನೆ ಮಾಡುತ್ತಿರುವ 14 ವರ್ಷದ ಯುವಕನ ಹೆಸರು ವರದಿಯಾಗಿಲ್ಲ. ಆದರೆ, ಬಾಲಕನ ಪೋಷಕರಿಗೆ ಸಮಾಜದಿಂದ 5 ಸಾವಿರ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ, ಸಕಿನಾಕಾ ಪೊಲೀಸ್‌ನ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ (ಪಿಎಸ್‌ಐ) ಪ್ರಕಾಶ ವಗರೆ, ಬಾಲಕನ ವಯಸ್ಸು 14 ವರ್ಷವಾಗಿರುವುದರಿಂದ ಎಫ್‌ಐಆರ್ ದಾಖಲಿಸಿಲ್ಲ.


Click it and Unblock the Notifications








