ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಭಾರತದಲ್ಲಿ ನಿರ್ಮಿಸಿರುವ ತೇಜಸ್ ಲಘು ಯುದ್ದ ವಿಮಾನದಲ್ಲಿ ಪೈಥಾನ್ 5 ಕ್ಷಿಪಣಿಯನ್ನು ಜೋಡಿಸಲು ಅನುಮತಿ ನೀಡಲಾಗಿದೆ. ಇದರಿಂದ ತೇಜಸ್ ಯುದ್ಧ ವಿಮಾನವು ಮತ್ತಷ್ಟು ಬಲಿಷ್ಟವಾದಂತಾಗಿದೆ.

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಡರ್ಬಿ ಮಾದರಿಯ ಕ್ಷಿಪಣಿಯನ್ನು ಈಗಾಗಲೇ ತೇಜಸ್ ಫೈಟರ್ ಜೆಟ್‌ನಲ್ಲಿ ಜೋಡಿಸಲಾಗಿದೆ. ಈಗಾಗಲೇ ನಡೆಸಿರುವ ಪರೀಕ್ಷೆಗಳಲ್ಲಿ ಡರ್ಬಿ ಕ್ಷಿಪಣಿಯು ನಿಖರವಾಗಿ ಗುರಿಯನ್ನು ತಲುಪಿದೆ. ಈಗ ತೇಜಸ್ ಯುದ್ಧ ವಿಮಾನದ ಬಲವನ್ನು ಹೆಚ್ಚಿಸಲು ಮತ್ತೊಂದು ಕ್ಷಿಪಣಿಯನ್ನು ಜೋಡಿಸಲಾಗಿದೆ. ಇಸ್ರೇಲ್ ತಯಾರಿಸಿರುವ 5ನೇ ತಲೆಮಾರಿನ ಪೈಥಾನ್ 5 ಕ್ಷಿಪಣಿಯನ್ನು ಈಗ ತೇಜಸ್ ಫೈಟರ್ ಜೆಟ್‌ನಲ್ಲಿ ಸೇರಿಸಲು ಅನುಮತಿ ನೀಡಲಾಗಿದೆ.

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಪೈಥಾನ್ 5 ಕ್ಷಿಪಣಿಯನ್ನು ತೇಜಸ್ ಫೈಟರ್ ಜೆಟ್‌ನಲ್ಲಿ ಅಳವಡಿಸಿ ಪರೀಕ್ಷಿಸಲಾಗಿದೆ. ಕಠಿಣ ಪರಿಸ್ಥಿತಿಗಳಲ್ಲಿ ನಡೆಸಲಾದ ಪರೀಕ್ಷೆಗಳು ತೃಪ್ತಿಕರವಾಗಿದ್ದು, 100%ನಷ್ಟು ನಿಖರವಾಗಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಪೈಥಾನ್ 5 ಕ್ಷಿಪಣಿಯು ಆಕಾಶದಿಂದ ಆಕಾಶಕ್ಕೆ ಗುರಿಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಪರೀಕ್ಷಾ ಸಮಯದಲ್ಲಿ ತೇಜಸ್ ಫೈಟರ್ ಜೆಟ್‌ನಿಂದ ಹಾರಿಸಿದ ಪೈಥಾನ್ 5 ಕ್ಷಿಪಣಿ ನಿಗದಿಯಂತೆ ಗುರಿಗಳನ್ನು ಹೊಡೆದು ಉರುಳಿಸಿದೆ.

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ವಿಮಾನಯಾನ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ (ಎಡಿಎ), ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಹಾಗೂ ಭಾರತೀಯ ವಾಯುಪಡೆ (ಐಎಎಫ್) ವಿಜ್ಞಾನಿಗಳು ಮತ್ತು ತಂತ್ರಜ್ಞರು ಹಾಗೂ ಪೈಥಾನ್ ಜಂಟಿ ಸಹಭಾಗಿತ್ವದಲ್ಲಿ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಪೈಥಾನ್ 5 ಕ್ಷಿಪಣಿಯನ್ನು ಇಸ್ರೇಲಿ ಕಂಪನಿಯಾದ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸಿವ್ ಸಿಸ್ಟಮ್ಸ್ ಉತ್ಪಾದಿಸಿದೆ. ಈ ಕ್ಷಿಪಣಿಯು 3.1 ಮೀಟರ್ ಉದ್ದ ಹಾಗೂ 6.3 ಇಂಚಿನ ಡಯಾಮೀಟರ್ ಹೊಂದಿದೆ.

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಪೈಥಾನ್ 5 ಕ್ಷಿಪಣಿ 20 ಕಿ.ಮೀ ದೂರದಲ್ಲಿ ವಾಯು ಗುರಿಯನ್ನು ಹೊಡೆದು, ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿ ಮ್ಯಾಕ್ 4 ವೇಗದಲ್ಲಿ ಗುರಿಯತ್ತ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಈ ಕ್ಷಿಪಣಿಯ ಮುಂಭಾಗದಲ್ಲಿ 11 ಕೆಜಿ ಸ್ಫೋಟಕ ಸಾಧನವನ್ನು ಅಳವಡಿಸಲಾಗುತ್ತದೆ. ಈ ಕ್ಷಿಪಣಿಯು ಏರ್ ಸ್ಪೇಸ್ ಕ್ರಾಫ್ಟ್ ಅನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

2006ರ ಲೆಬನಾನ್ ಯುದ್ಧದ ಸಂದರ್ಭದಲ್ಲಿ ಪೈಥಾನ್ ಕ್ಷಿಪಣಿಯನ್ನು ಎಫ್ 16 ಫೈಟರ್ ಜೆಟ್‌ನಲ್ಲಿ ಬಳಸಲಾಗಿತ್ತು. ತೇಜಸ್ ಫೈಟರ್ ಜೆಟ್‌ನಲ್ಲಿ ಬಳಸಲಾದ ಮತ್ತೊಂದು ಕ್ಷಿಪಣಿಯಾದ ಡರ್ಬಿಯನ್ನು ಪೈಥಾನ್ 4 ಕ್ಷಿಪಣಿಯನ್ನು ಆಧರಿಸಿ ಅಪ್ ಡೇಟ್ ಆವೃತ್ತಿಯಾಗಿ ಅಭಿವೃದ್ಧಿಪಡಿಸಲಾಗಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪೈಥಾನ್ 5 ಕ್ಷಿಪಣಿಯೊಂದಿಗೆ ಮತ್ತಷ್ಟು ಬಲಿಷ್ಠವಾದ ತೇಜನ್ ಫೈಟರ್ ಜೆಟ್

ಆದರೆ ಈ ಕ್ಷಿಪಣಿಯನ್ನು ಬೇರೊಂದು ಹೆಸರಿನಿಂದ ಕರೆಯಲಾಗುತ್ತದೆ. ಈ ಕ್ಷಿಪಣಿಯು ದೃಷ್ಟಿಗೆ ಮೀರಿದ ಗುರಿಗಳನ್ನು ಹೊಡೆಯುವ ಹಾಗೂ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Tejas fighter jet becomes more powerful with Python 5 missile. Read in Kannada.
Story first published: Friday, April 30, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X