ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಸಂಚಾರಿ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಬಹುತೇಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಆದರೆ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಜನ ಸಾಮಾನ್ಯರ ವಾಹನಗಳಿಗೆ ಮಾತ್ರ ದಂಡ ವಿಧಿಸುತ್ತಾರೆ. ನಿಯಮ ಉಲ್ಲಂಘಿಸುವ ರಾಜಕಾರಣಿಗಳಿಗೆ, ಗಣ್ಯ ವ್ಯಕ್ತಿಗಳಿಗೆ ದಂಡ ವಿಧಿಸುವುದಿಲ್ಲವೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಅಪ್ಪಿ ತಪ್ಪಿ ರಾಜಕಾರಣಿಗಳಿಗೆ ದಂಡ ವಿಧಿಸುವ ಅಧಿಕಾರಿಗಳ ವಿರುದ್ಧ ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರು ಕಿಡಿ ಕಾರುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಮ್ಮ ನೆರೆ ರಾಜ್ಯ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ. ಕೆ.ಟಿ ರಾಮರಾವ್ ತೆಲಂಗಾಣದ ಪ್ರಭಾವಿ ಸಚಿವರಲ್ಲಿ ಒಬ್ಬರು. ಅಕ್ಟೋಬರ್ 2 ರಂದು ಅವರ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಅವರಿಗೆ ಚಲನ್ ನೀಡಲಾಗಿದೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ತಮಗೆ ದಂಡ ವಿಧಿಸುವ ಅಥವಾ ಚಲನ್ ನೀಡುವ ಅಧಿಕಾರಿಗಳ ವಿರುದ್ಧ ರಾಜಕಾರಣಿಗಳು ಕತ್ತಿ ಮಸೆಯುವುದೇ ಹೆಚ್ಚು. ಆದರೆ ಚಲನ್ ಪಡೆದ ಎರಡು ದಿನಗಳ ನಂತರ ತೆಲಂಗಾಣ ಸಚಿವ ಕೆ.ಟಿ ರಾಮರಾವ್ ರವರು ತಮಗೆ ಚಲನ್ ನೀಡಿದ ಪೊಲೀಸ್ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆದು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಚಿವರು ತಮಗೆ ಚಲನ್ ನೀಡಿದ ಸಬ್ ಇನ್ಸ್‌ಪೆಕ್ಟರ್ ಇಳಯ್ಯ ಹಾಗೂ ಕಾನ್‌ಸ್ಟೇಬಲ್ ವೆಂಕಟೇಶ್ವರಲು ಅವರನ್ನು ತಮ್ಮ ಕಚೇರಿಗೆ ಕರೆಸಿ ಕೊಂಡಿದ್ದಾರೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಈ ವೇಳೆ ಅವರು ಈ ಪೊಲೀಸ್ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಹೂಗುಚ್ಛ ನೀಡಿ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೈದರಾಬಾದ್ ಪೋಲಿಸ್ ಆಯುಕ್ತರಾದ ಅಂಜನಿ ಕುಮಾರ್ ರವರು ಹಾಜರಿದ್ದರು. ಕೆ.ಟಿ ರಾಮರಾವ್ ರವರು ಅಕ್ಟೋಬರ್ ಎರಡರಂದು ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧೀಜಿರವರಿಗೆ ನಮನ ಸಲ್ಲಿಸಲು ಬಾಪು ಘಾಟ್‌ಗೆ ಭೇಟಿ ನೀಡಿದ್ದರು.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಅವರು ಬಾಪು ಘಾಟ್‌ನಿಂದ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್, ಹರಿಯಾಣ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಹಾಗೂ ಗೃಹ ಸಚಿವ ಮಹಮೂದ್ ಅಲಿ ರವರೊಂದಿಗೆ ಹೊರಟಿದ್ದರು. ರಾಜ್ಯಪಾಲರ ಕಾರು ಚಲಿಸುತ್ತಿದ್ದ ಕಾರಣ ಉಳಿದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕೆ.ಟಿ ರಾಮರಾವ್ ರವರ ಬಳಿ ತಲುಪಲು ಅವರ ಕಾರು ಚಾಲಕ ರಾಂಗ್ ವೇನಲ್ಲಿ ಚಲಿಸಿದ್ದಾನೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಈ ವೇಳೆ ಕರ್ತವ್ಯ ನಿರತರಾಗಿದ್ದ ಸಂಚಾರಿ ವಿಭಾಗದ ಎಸ್‌ಐ ಇಳಯ್ಯ, ಕಾರ್ ಅನ್ನು ಅಡ್ಡ ಗಟ್ಟಿ ಕಾರು ತಪ್ಪು ದಿಕ್ಕಿನಲ್ಲಿ ಚಲಿಸುತ್ತಿರುವ ಕಾರಣ ಸರಿಯಾದ ದಾರಿಯಲ್ಲಿ ಚಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಈ ಕಾರು ಸಚಿವರಿಗೆ ಸೇರಿದ್ದು ಎಂದು ಸಬ್ ಇನ್ಸ್‌ಪೆಕ್ಟರ್‌ ಇಳಯ್ಯರವರಿಗೆ ತಿಳಿದಿರಲಿಲ್ಲ. ಈ ಕಾರಣಕ್ಕೆ ಕಾರು ಚಾಲಕ ಹಾಗೂ ಇಳಯ್ಯರವರ ನಡುವೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಕಾರು ರಾಂಗ್ ವೇನಲ್ಲಿ ಚಲಿಸಿದ ಕಾರಣಕ್ಕೆ ಕೆ.ಟಿ ರಾಮರಾವ್ ರವರ ಕಾರಿಗೆ ದಂಡ ವಿಧಿಸಿ ಚಲನ್ ನೀಡಲಾಗಿದೆ. ಆದರೆ ಎಷ್ಟು ದಂಡ ವಿಧಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಚಲನ್ ಅನ್ನು ಆನ್ ಲೈನ್ ಮೂಲಕ ಕಳುಹಿಸಲಾಗಿದೆ. ಕೆ.ಟಿ ರಾಮರಾವ್ ರವರು ದಂಡವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಬಹುತೇಕ ಹೆಚ್ಚಿನ ಸರ್ಕಾರಿ ನೌಕರರು, ಪೊಲೀಸರು, ಇತರ ಅಧಿಕಾರಿಗಳು ಸಚಿವರನ್ನು ವಿಶೇಷ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರು ನಿಯಮ ಉಲ್ಲಂಘಿಸುವ ರಾಜಕಾರಣಿಗಳಿಗೂ ಚಲನ್ ನೀಡುತ್ತಿದ್ದು, ಟ್ರೆಂಡ್ ಬದಲಾಗುತ್ತಿದೆ ಎಂದೇ ಹೇಳಬಹುದು. ಬಹುತೇಕ ಸಂದರ್ಭಗಳಲ್ಲಿ, ರಾಜಕಾರಣಿಗಳಿಗೆ ಸೇರಿದ ವಾಹನಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಪೊಲೀಸರು ಅಡ್ಡ ಗಟ್ಟಿದಾಗ ತಮ್ಮ ವಾಹನಗಳನ್ನು ನಿಲ್ಲಿಸುವುದಿಲ್ಲ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಈ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ರಾಜಕಾರಣಿಗಳ ಮನೆ ಬಾಗಿಲಿಗೆ ಇ ಚಲನ್ ಕಳುಹಿಸಲಾಗುತ್ತಿದೆ. ದಂಡ ವಿಧಿಸುವ ಹಾಗೂ ಚಲನ್ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಲವು ಸಂದರ್ಭಗಳಲ್ಲಿ ಪೊಲೀಸರು ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಇ ಚಲನ್ ಕಳುಹಿಸುತ್ತಾರೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಇನ್ನು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಫೋಟೋಗಳನ್ನು ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವೀಡಿಯೊ ಅಥವಾ ಫೋಟೋಗಳು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಅಂತಹ ವಾಹನಗಳ ನಂಬರ್ ಮೂಲಕ ವಾಹನ ಮಾಲೀಕರನ್ನು ಪತ್ತೆ ಹಚ್ಚಿ ಚಲನ್ ಕಳುಹಿಸುತ್ತಿದ್ದಾರೆ.

ತಮ್ಮ ಕಾರಿಗೆ ದಂಡ ವಿಧಿಸಿದ ಪೊಲೀಸರನ್ನು ಸನ್ಮಾನಿಸಿದ ಸಚಿವ

ಇದರಿಂದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತಿವೆ. ಒಂದು ವೇಳೆ ಸಂಚಾರಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದರೆ ಯಾವುದೇ ಕಾರಣಕ್ಕೂ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರಿ. ತಪ್ಪಿಸಿಕೊಳ್ಳುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಪೊಲೀಸರು ತಪ್ಪಾಗಿ ದಂಡ ವಿಧಿಸಿದ್ದಾರೆ ಎಂದು ಅನಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬಹುದು.

ಗಮನಿಸಿ: ಮೊದಲ ಎರಡು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Telangana minister felicitates police officers who fined his car details
Story first published: Wednesday, October 6, 2021, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X