ಭಾರೀ ಗಾತ್ರದ ಕಾರು ತಳ್ಳುವುದೇ ಈ ನಟನ ದಿನ ನಿತ್ಯದ ವರ್ಕ್ ಔಟ್
ಜನಪ್ರಿಯ ನಟರೊಬ್ಬರು ಪ್ರತಿದಿನ ರಸ್ತೆಯಲ್ಲಿ ಕಾರನ್ನು ತಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಕಾರನ್ನು ತಳ್ಳುವಾಗ ಅವರು ಚಪ್ಪಲಿಯನ್ನು ಸಹ ಧರಿಸಿರುವುದಿಲ್ಲ ಎಂಬುದು ವಿಶೇಷ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ಆ ನಟ ತಮ್ಮ ಫೋರ್ಡ್ ಎಂಡೀವರ್ ಎಸ್‌ಯುವಿಯನ್ನು ಟಾರ್ ರಸ್ತೆಯಲ್ಲಿ ಬರಿಗಾಲಿನಲ್ಲಿ ತಳ್ಳುತ್ತಿರುವುದನ್ನು ಕಾಣಬಹುದು. ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಸುಧೀರ್ ಬಾಬುರವರೇ ಈ ರೀತಿ ಭಾರೀ ಗಾತ್ರದ ಕಾರ್ ಅನ್ನು ತಳ್ಳುತ್ತಿರುವ ನಟ.

ತಮ್ಮ ಬಾಡಿಯನ್ನು ಫಿಟ್ ಆಗಿಟ್ಟು ಕೊಳ್ಳುವ ಸಲುವಾಗಿ ಅವರು ಪ್ರತಿ ದಿನ ಕಾರ್ ಅನ್ನು ಹೀಗೆ ತಳ್ಳುತ್ತಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಅವರೇ ಅಪ್ ಲೋಡ್ ಮಾಡಿರುವುದು ವಿಶೇಷ.
MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ನಟ ಸುಧೀರ್ ಬಾಬು ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಈ ಚಾನೆಲ್'ನಲ್ಲಿ ಅವರು ತಮ್ಮ ವರ್ಕ್ ಔಟ್ ಬಗೆಗಿನ ವೀಡಿಯೊವನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ತೆಲುಗು ಚಿತ್ರರಂಗದ ಉದಯೋನ್ಮುಖ ನಟರಲ್ಲಿ ಸುಧೀರ್ ಬಾಬು ಸಹ ಒಬ್ಬರು. ಅವರು ಫಿಟ್ನೆಸ್'ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ನಾನಾ ರೀತಿಯ ಕಸರತ್ತು ಮಾಡುತ್ತಲೇ ಇರುತ್ತಾರೆ.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ರಸ್ತೆ ಮಧ್ಯೆ ಫೋರ್ಡ್ ಎಂಡೀವರ್ ದೈತ್ಯ ಕಾರನ್ನು ತಳ್ಳಲು ಅವರಿಗೆ ಅವರ ಜಿಮ್ ಕೋಚ್ ತರಬೇತಿ ನೀಡುತ್ತಿದ್ದಾರೆ. ಈ ಕಾರನ್ನು ತಳ್ಳಲು ಅವರು ಪ್ರತಿದಿನ ಸ್ವಲ್ಪ ಎತ್ತರವಾಗಿರುವ ರಸ್ತೆಗಳನ್ನು ಬಳಸುತ್ತಾರೆ ಎಂದು ಹೇಳಲಾಗಿದೆ.

ಪ್ರತಿದಿನ ಕಾರನ್ನು ತಳ್ಳುವುದು ಸಣ್ಣ ಸಂಗತಿಯಲ್ಲ. ಫೋರ್ಡ್ ಎಂಡೀವರ್ ಸುಮಾರು 2 ಟನ್ ತೂಕವನ್ನು ಹೊಂದಿದೆ. ಇಷ್ಟು ತೂಕವನ್ನು ಹೊಂದಿರುವ ಕಾರನ್ನು ಸಮತಟ್ಟಾಗಿರುವ ರಸ್ತೆಗಳಲ್ಲಿಯೇ ತಳ್ಳುವುದು ಸಾಮಾನ್ಯ ಸಂಗತಿಯಲ್ಲ.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹಾಗಿದ್ದರೂ ಫಿಟ್ ನೆಸ್ ಕಾಯ್ದು ಕೊಳ್ಳಲು ನಟ ಸುಧೀರ್ ಬಾಬು ಪ್ರತಿದಿನ ಎತ್ತರವಾಗಿರುವ ರಸ್ತೆಗಳಲ್ಲಿ ಈ ಭಾರೀ ಗಾತ್ರದ ಕಾರನ್ನು ತಳ್ಳುತ್ತಿರುವುದು ನಿಜಕ್ಕೂ ಅಸಾಮಾನ್ಯ ಸಂಗತಿಯಾಗಿದೆ.
ಫೋರ್ಡ್ ಎಂಡೀವರ್ ಎಸ್‌ಯುವಿಯನ್ನು ಪ್ರಪಂಚದಾದ್ಯಂತ ವಿವಿಧ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಈ ಎಸ್‌ಯುವಿಯನ್ನು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.
MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಫೋರ್ಡ್ ಎಂಡೀವರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ 4x2 ಹಾಗೂ 4x4 ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಈ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.29,99,000ಗಳಾಗಿದೆ.


Click it and Unblock the Notifications