ವಿಂಬಲ್ಡನ್ ಚಾಂಪಿಯನ್ ಮುರ್ರೆ ಕಾರು ಕಲೆಕ್ಷನ್

By Nagaraja

ಇತ್ತೀಚೆಗಷ್ಟೇ ಸಾಗಿದ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದ ಆಂಡಿ ಮುರ್ರೆ, ಬ್ರಿಟನ್‌ ಜನತೆಯ 77 ವರ್ಷಗಳ ಸುರ್ದೀರ್ಘ ಕನಸನ್ನು ನನಸು ಮಾಡಿದ್ದರು. ಪ್ರಸ್ತುತ ಅಂತರಾಷ್ಟ್ರೀಯ ಎಟಿಪಿ ರಾಂಕಿಂಗ್‌ನಲ್ಲಿ ನಂ.2 ಸ್ಥಾನದಲ್ಲಿರುವ ಮುರ್ರೆ, 77 ವರ್ಷಗಳ ಬಳಿಕ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಗೆದ್ದ ಮೊದಲ ಬ್ರಿಟಿಷ್ ಆಟಗಾರನೆಂಬ ದಾಖಲೆ ಬರೆದಿದ್ದರು. ಮೂಲತ: ಸ್ಕಾಟ್ಲೆಂಡ್‌ನ ವೃತಿ ನಿರತ ಟೆನಿಸ್ ಆಟಗಾರನಾಗಿರುವ ಮುರ್ರೆ ಈ ವರೆಗೆ ಒಟ್ಟು ಎರಡು ಗ್ರ್ಯಾನ್ ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದಾರೆ.

ಈ ಪೈಕಿ 2012ರಲ್ಲಿ ಅಮೆರಿಕನ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ವಿಶೇಷವೆಂದರೆ ಎರಡೂ ಗ್ರ್ಯಾನ್‌ಸ್ಲಾಮ್‌ಗಳಲ್ಲೂ ಸೆರ್ಬಿಯಾದ ವಿಶ್ವ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮಣಿಸುವ ಮೂಲಕ ಮುರ್ರೆ ಈ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ 2012 ಲಂಡನ್ ಒಲಿಂಪಿಕ್ಸ್ ಚಿನ್ನದ ಹಾರ ಕೂಡಾ ಮುರ್ರೆ ಕೊರಳಲ್ಲಿ ರಾರಾಜಿಸುತ್ತಿದೆ.

ಅಂದ ಹಾಗೆ ಈ ಛಲವಾದಿ ಮುರ್ರೆ ಬಳಿ ಅದ್ಭುತ ಕಾರು ಕಲೆಕ್ಷನ್‌ಗಳಿವೆ. ಮೈದಾನದಲ್ಲಿ ಎಷ್ಟು ತೀವ್ರತೆಯಾಗಿ ಆಡುತ್ತಾರೋ ಅದೇ ರೀತಿ ತಮ್ಮ ಕಾರು ನಿರ್ವಹಣೆಯಲ್ಲೂ ಮುರ್ರೆ ಹೆಚ್ಚು ಗಮನಕೇಂದ್ರಿತರಾಗಿದ್ದಾರೆ.

ಆಂಡಿ ಮುರ್ರೆ

ಆಂಡಿ ಮುರ್ರೆ

ಆಂಡಿ ಮುರ್ರೆ ಬಳಿ ಫೆರಾರಿಗಳಂತಹ ಅದ್ಭುತ ಕಾರುಗಳಿವೆ. ಮುಂದಿನ ಸ್ಲೈಡರ್ ಕ್ಲಿಕ್ಕಿಸಿ ಮುರ್ರೆ ಕಾರುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿರಿ...

ಆಂಡಿ ಮುರ್ರೆ

ಆಂಡಿ ಮುರ್ರೆ

ಇದು ಮುರ್ರೆ ಬಳಿಯಿರುವ ಅತಿ ದುಬಾರಿ ಫೆರಾರಿ ಎಫ್430 ಸ್ಪೈಡರ್ ಕಾರಾಗಿದೆ. ಇದನ್ನು ಅವರು 2011ರಲ್ಲಿ ಖರೀದಿಸಿದ್ದರು.

ಆಂಡಿ ಮುರ್ರೆ

ಆಂಡಿ ಮುರ್ರೆ

ಆಕರ್ಷಕ ಲುಕ್ ಹಾಗೂ ಗರಿಷ್ಠ ಎಂಜಿನ್ ಸಾಮರ್ಥ್ಯವುಳ್ಳ ಫೆರಾರಿ ಎಫ್430 ಅದ್ಭುತ ಸ್ಪೋರ್ಟ್ಸ್ ಕಾರಾಗಿದೆ. ಲಂಡನ್ ರಸ್ತೆಗಳಲ್ಲಿ ಫೆರಾರಿ ಚಲಾಯಿಸುವುದನ್ನು ಮುರ್ರೆ ಇಷ್ಟಪಡುತ್ತಾರೆ.

ಆಂಡಿ ಮುರ್ರೆ

ಆಂಡಿ ಮುರ್ರೆ

ನಿಮ್ಮ ಮಾಹಿತಿಗಾಗಿ, ಮುರ್ರೆ ಬಳಿಯಿದ್ದ ಮೊದಲ ಕಾರು ಫೋಕ್ಸ್‌ವ್ಯಾಗನ್ ಪೊಲೊ ಆಗಿದೆ.

ಆಂಡಿ ಮುರ್ರೆ

ಆಂಡಿ ಮುರ್ರೆ

ಪೊಲೊ ಜಿಟಿ ಟಿಎಸ್‌ಐ ಕಾರಿನಲ್ಲಿ 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

ಆಂಡಿ ಮುರ್ರೆ

ಆಂಡಿ ಮುರ್ರೆ

ಇದು ಜರ್ಮನಿಯ ಕಾರು ತಯಾರಕ ಕಂಪನಿನಿಂದ ನಿರ್ಮಾಣಗೊಂಡ ಆಕರ್ಷಕ ಹ್ಯಾಚ್‌ಬ್ಯಾಕ್ ಕಾರಾಗಿದೆ. ಎಕ್ಸ್‌ಟೀರಿಯರ್ ಸೇರಿದಂತೆ ಇಂಟಿರಿಯರ್ ಕೂಡಾ ಆಕರ್ಷಕವಾಗಿದೆ.

ಆಂಡಿ ಮುರ್ರೆ

ಆಂಡಿ ಮುರ್ರೆ

ಆಂಡಿ ಮುರ್ರೆ ಮೈದಾನದ ಹೊರಗೂ ಉತ್ತಮ ವ್ಯಕ್ತಿತ್ವವನ್ನು ಹೊಂದಿದೆ. ಹಾಗೆಯೇ ತಮ್ಮ ಮೊದಲ ಕಾರಿನಲ್ಲಿ ಪಯಣಿಸಲು ಹೆಚ್ಚು ಇಷ್ಟಪಡುತ್ತಾರೆ.

More from DriveSpark

Article Published On: Monday, July 22, 2013, 10:25 [IST]
English summary
Andy Murray won his first Wimbledon title and ended Britain's 77-year wait for a men's champion. Andy Murray has good car collection, he owns Ferrari and many more cars. But he still drive's his first car Volkswagen Polo too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+