ಭಾರತಕ್ಕೆ ಟೆಸ್ಲಾ ಕಾಲಿಟ್ಟರೆ ಮರ್ಸಿಡಿಸ್‌ ಬೆಂಝ್ ಇವಿಗಳಿಗೆ ಹೊಡೆತ?: ಇನ್ನು ಕೋಟಿ ಬೆಲೆಯ ಕಾರುಗಳು ಕೈಗೆಟಕುವುದೇ?

ಎಲೆಕ್ಟ್ರಿಕ್‌ ವಾಹನ ಲೋಕದಲ್ಲಿ ಟೆಸ್ಲಾ (Tesla) ಕಂಪನಿಯು ಜಾಗತಿಕ ನಾಯಕ ಎಂದರೆ ತಪ್ಪಾಗಲಾರದು. ಬಹುತೇಕ ದೇಶಗಳಲ್ಲಿ ಈಗಾಗಲೇ ತನ್ನ ಮಾರುಕಟ್ಟೆಯನ್ನು ವಿಸ್ತಿರಿಸಿಕೊಂಡಿರುವ ಟೆಸ್ಲಾ ಸದ್ಯದಲ್ಲೇ ಭಾರತಕ್ಕೂ ಕಾಲಿಡಲಿದೆ. ಈ ಕುರಿತಾಗಿ ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಎಲಾನ್‌ ಮಸ್ಕ್‌ ಹೇಳಿಕೆ ನೀಡಿದ್ದಾರೆ.

ಇನ್ನು ಭಾರತದಲ್ಲೂ ಹಲವಾರು ಎಲೆಕ್ಟ್ರಿಕ್‌ ವಾಹನ ನಿರ್ಮಾಣ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದು ಅದರಲ್ಲಿ ಮರ್ಸಿಡಿಸ್‌ ಇವಿ‌ ಕೂಡ ಒಂದು. ಈಗಾಗಲೇ ಮರ್ಸಿಡಿಸ್‌ ಕೆಲವರು ಇಕ್ಯೂ ಶ್ರೇಣಿಯ ಇವಿ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದ್ದು ಕೆಲವೇ ಸಮಯಗಳಲ್ಲಿ ಈ ಕಾರುಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Tesla Coming To India

ಭಾರತಕ್ಕೆ ಟೆಸ್ಲಾ ಆಗಮಿಸದರೆ ಅದು ಮೆರ್ಸಿಡಿಸ್‌ ಇವಿ ಕಾರುಗಳಿಗೆ ದೊಡ್ಡ ಹೊಡೆತವಾಗಲಿದೆ ಎಂಬುದು ಹಲವು ಕಾರು ಪರಿಣತರ ಅಭಿಪ್ರಾಯ. ಇದಕ್ಕೆ ಕಾರಣ ಏನೆಂದರೆ ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳು ಜಾಗತಿಕ ಮಟ್ಟದಲ್ಲಿ ಬಹಳ ಜನಪ್ರಿಯವಾಗಿದೆ. ಟೆಸ್ಲಾದ ಮಾಡೆಲ್ ೩ ಮತ್ತು ಮಾಡೆಲ್‌ ವೈ ಕಾರುಗಳು ಪ್ರಪಂದಾದ್ಯಂತ ಮೆಚ್ಚುಗೆ ಗಳಿಸಿರುವ ಕಾರುಗಳಾಗಿವೆ.

ಈ ಕಾರುಗಳೇನಾದರೂ ಭಾರತಕ್ಕೆ ಕಾಲಿಟ್ಟರೆ ಮರ್ಸಿಡಿಸ್‌ ಇವಿ ಕಾರುಗಳು ಭಾರೀ ಪ್ರಮಾಣದಲ್ಲಿ ಟೆಸ್ಲಾ ಕಂಪನಿಯಿಂದ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತ ಮರ್ಸಿಡಿಸ್‌ ಇವಿ ಯೂ ಸಹ ಇವಿ ಕ್ಷೇತ್ರದಲ್ಲಿ ತನ್ನ ಇಕ್ಯು ಶ್ರೇಣಿಯ ಕಾರುಳನ್ನು ಲಾಂಚ್‌ ಮಾಡಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಈ ಕುರಿತಾಗಿ ಮಾತನಾಡಿದ ಮರ್ಸಿಡಿಸ್‌ ಬೆಂಝ್‌ ಇಂಡಿಯಾ ಸೇಲ್ಸ್‌ ಆ್ಯಂಡ್ ಮಾರ್ಕೆಟಿಂಗ್‌ ಟೀಂ ನ ವೈಸ್‌ ಪ್ರೆಸಿಡೆಂಟ್‌ ಲಾನ್ಸ್‌ ಬೆನೆಟ್‌, ಮಾರುಕಟ್ಟೆಯಲ್ಲಿ ಸ್ಫರ್ಧೆ ಇದ್ದರೆ ಅದು ಗ್ರಾಹಕರಿಗೆ ಲಾಭವಾಗಲಿದೆ. ನಮ್ಮ ಇಕ್ಯು ಶ್ರೇಣಿಯ ಇವಿ ಕಾರುಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನಾವು ಇನ್ನಷ್ಟು ಈ ರೀತಿಯ ಕಾರುಗಳನ್ನು ಮಾರುಕಟ್ಟೆಗೆ ತರುವತ್ತ ಮುಖ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸದ್ಯ ಭಾರತದಲ್ಲಿ ಮರ್ಸಿಡಿಸ್‌ ನಾಲ್ಕು ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮರ್ಸಿಡಿಸ್‌ನ ಇಕ್ಯುಸಿ, ಇಕ್ಯುಎಸ್‌ ಮತ್ತು ಇಕ್ಯುಎಸ್‌ ಎಮ್‌ಜಿ ಜೊತೆಗೆ ಇಕ್ಯುಬಿ ಎಲೆಕ್ಟ್ರಿಕ್‌ ಎಸ್‌ಯುವಿ ಯನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಜನಸಾಮಾನ್ಯನಿಗೆ ಈ ಕಾರನ್ನು ಕೊಳ್ಳುವುದು ಕೊಂಚ ಕಷ್ಟಸಾಧ್ಯವೇ ಸರಿ. ಕಾರಣ ಈ ಎಲೆಕ್ಟ್ರಿಕ್‌ ಕಾರುಗಳ ದುಬಾರಿ ಬೆಲೆ.

ಭಾರತದಲ್ಲಿ ಮರ್ಸಿಡಿಸ್‌ ಇವಿ ಕಾರುಗಳ ಬೆಲೆ ಕೊಂಚ ದುಬಾರಿಯಾಗಿದೆ. ಮರ್ಸಿಡಿಸ್‌ ಇವಿ ಕಾರುಗಳ ಆರಂಭಿಕ ಬೆಲೆ ಸುಮಾರು ೭೪.೫೦ ಲಕ್ಷದಿಂದ ಆರಂಭವಾಗುತ್ತದೆ. ಇವುಗಳಲ್ಲಿ ಹೆಚ್ಚು ಪ್ರಸಿದ್ದವಾದ ಮರ್ಡಿಡಿಸ್‌ ಬೆಂಝ್‌ ಎಕ್ಯುಎಸ್‌ ನ ಬೆಲೆ ಸುಮಾರು ೧.೫೯ ಕೋಟಿಯಿಂದ ೨.೪೫ ಕೋಟಿ ಎಕ್ಸ್‌ ಶೋ ರೂಮ್‌.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 24, 2023, 14:02 [IST]
English summary
Tesla coming to india what does it mean to mercedes electric cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+