ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಎಲೆಕ್ಟ್ರಿಕ್ ಕಾರುಗಳ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಿರುವ ಟೆಸ್ಲಾ ಕಂಪನಿ ಹಾಗೂ ಆ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ ಇಬ್ಬರೂ ತಮ್ಮ ವಿಶಿಷ್ಟ ಚಿಂತನೆಗಳಿಂದ ಜನಪ್ರಿಯರಾಗಿದ್ದಾರೆ. ಟೆಸ್ಲಾ ಕಂಪನಿಯು ಈಗ ಶಾರ್ಟ್ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಎಲಾನ್ ಮಸ್ಕ್ ಟೆಸ್ಲಾ ಕಂಪನಿಯಡಿಯಲ್ಲಿ ಶಾರ್ಟ್ ಉಡುಪುಗಳನ್ನು ಬಿಡುಗಡೆಗೊಳಿಸಿ ಅವುಗಳನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಈ ಉಡುಪುಗಳನ್ನು ಭಾನುವಾರ ಬಿಡುಗಡೆಗೊಳಿಸಲಾಗಿದ್ದು, ಕಂಪನಿಯ ಇತರ ವಸ್ತುಗಳ ಜೊತೆಗೆ ಮಾರಾಟ ಮಾಡಲಾಗುತ್ತಿದೆ.ದುಬಾರಿ ಬೆಲೆಯ ಕಾರು ತಯಾರಕ ಕಂಪನಿಯ ಶಾರ್ಟ್ ಗಳು ಸಹ ದುಬಾರಿಯಾಗಿವೆ.

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಒಂದು ಜೊತೆ ಟೆಸ್ಲಾ ಶಾರ್ಟ್ ಗಳ ಬೆಲೆ 69.42 ಡಾಲರ್ ಗಳಾಗಿದೆ. ಅಂದರೆ ಭಾರತದ ಮೌಲ್ಯದಲ್ಲಿ ರೂ.5147ಗಳಾಗುತ್ತದೆ. ಎಲಾನ್ ಮಸ್ಕ್ ರವರು ಕಂಪನಿಯ ವಿರುದ್ಧ ಪಣ ತೊಟ್ಟ ಹೂಡಿಕೆದಾರರ ವಿರುದ್ದ ಶಾರ್ಟ್ ಗಳನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು. ಎಲಾನ್ ಮಸ್ಕ್ ಗಾಢ ಬಣ್ಣವನ್ನು ಹೊಂದಿರುವ ಶಾರ್ಟ್ ಗಳನ್ನು ಪ್ರದರ್ಶಿಸಿ, ತಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಹೂಡಿಕೆದಾರರನ್ನು ಕೀಟಲೆ ಮಾಡಲು ಎಲಾನ್ ಮಸ್ಕ್ ತಮ್ಮ ಗಣಿತದ ಮ್ಯಾಜಿಕ್ ಅನ್ನು 420 ನಂಬರಿಗೆ ಹೋಲಿಸಿದ್ದಾರೆ. ತಮ್ಮ ಕಂಪನಿಯನ್ನು ಖಾಸಗೀಕರಣಗೊಳಿಸಲು ಅವರು 2018ರಲ್ಲಿ ತಮ್ಮ ಕಂಪನಿಯ ಷೇರುಗಳನ್ನು 420 ಡಾಲರ್ ಗಳಿಗೆ ಮಾರಾಟ ಮಾಡಿದ್ದರು.

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಟೆಸ್ಲಾ ಕಂಪನಿಯು ಈ ಶಾರ್ಟ್ ಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಿದೆ. ಎಲಾನ್ ಮಸ್ಕ್ ಟೆಸ್ಲಾ ಸ್ಟಾಕ್ ಗಳನ್ನು ಮಾರಾಟ ಮಾಡುತ್ತಿದ್ದವರನ್ನು ಗೇಲಿ ಮಾಡಿದ್ದಾರೆ. ಇದರಿಂದ ಅದರ ಬೆಲೆ ಇನ್ನಷ್ಟು ಕುಸಿಯುತ್ತದೆ. ವಿವರಿಸಲಾಗದ ಸ್ಟಾಕ್ ಅನ್ನು ಮಾರಾಟ ಮಾಡುವುದನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಶಾರ್ಟಿಂಗ್ ಎಂದು ಕರೆಯಲಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಶಾರ್ಟ್ ಗಳ ಮೇಲೆ ಎಸ್ 3 ಎಕ್ಸ್‌ವೈ ಎಂದು ಬರೆಯಲಾಗಿದೆ. ಇದು ಕಂಪನಿಯ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಹಾಗೂ ಮಾಡೆಲ್ ವೈಗಳ ಸೂಚಕವಾಗಿದೆ. ಟೆಸ್ಲಾ ಕಂಪನಿಯು ಮಾಡೆಲ್ ಇ ಕಾರ್ ಅನ್ನು ಬಿಡುಗಡೆಗೊಳಿಸಲು ಬಯಸಿತ್ತು. ಆದರೆ ಫೋರ್ಡ್ ಕಂಪನಿಯು ಇದರ ಹಕ್ಕುಗಳನ್ನು ಹೊಂದಿರುವ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ.

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಎಲಾನ್ ಮಸ್ಕ್ ಅವರ ಟ್ವೀಟ್‌ ನಂತರ ಕಂಪನಿಯ ವೆಬ್‌ಸೈಟ್‌ಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡಿದ್ದಾರೆ. ಮಸ್ಕ್ ರವರು ಈ ಬಗ್ಗೆ ಮಾಹಿತಿ ನೀಡಿದ್ದರೂ, ಮತ್ತಷ್ಟು ಮಾಹಿತಿಗಳುವೆಬ್ ಸೈಟಿನಲ್ಲಿ ಲಭ್ಯವಾಗಲಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಎಲಾನ್ ಮಸ್ಕ್ ರವರ ಟೆಸ್ಲಾ ಪ್ರಪಂಚದ ಶ್ರೇಷ್ಠ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಾರು ಮಾರಾಟದಲ್ಲಿ ಟೆಸ್ಲಾ ಟೊಯೊಟಾ ಕಂಪನಿಯನ್ನು ಹಿಂದಿಕ್ಕಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ವಾಹನಗಳನ್ನು ವಿತರಿಸಿದೆ.

ದುಬಾರಿ ಬೆಲೆಯ ಶಾರ್ಟ್ ಉಡುಪು ಬಿಡುಗಡೆಗೊಳಿಸಿದ ಕಾರು ತಯಾರಕ ಕಂಪನಿ

ಎಲಾನ್ ಮಸ್ಕ್ ಈ ಹಿಂದೆ ಫ್ಲೆಮ್‌ಥ್ರೋವರ್ ಅನ್ನು ತಮ್ಮ ಇನ್ನೊಂದು ಕಂಪನಿಯಾದ ದಿ ಬೋರಿಂಗ್ ಕಂಪನಿಯಡಿಯಲ್ಲಿ ಇದೇ ರೀತಿಯಲ್ಲಿ ಪ್ರದರ್ಶಿಸಿದ್ದರು. ಫ್ಲೇಮ್‌ಥ್ರೋವರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟವಾಯಿತು. 20,000 ಯುನಿಟ್ ಗಳನ್ನು ಗ್ರಾಹಕರಿಗೆ ವಿತರಿಸಲಾಯಿತು.

Article Published On: Tuesday, July 7, 2020, 16:16 [IST]
English summary
Tesla introduces limited edition shorts apparel. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+