ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಅಮೆರಿಕಾದ ಒರೆಗಾನ್ ನಗರದಲ್ಲಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಟೆಸ್ಲಾ ಮಾಡೆಲ್ 3 ಕಾರು ಚಾಲಕ ಹಲವು ಮರಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಸಮಯದಲ್ಲಿ ಕಾರು 160 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಹೇಳಲಾಗಿದೆ.

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಅಪಘಾತದಲ್ಲಿ ಕಾರಿಗೆ ತೀವ್ರ ಹಾನಿಯಾಗಿದೆ. ಕಾರು ಅತಿ ವೇಗದಲ್ಲಿ ಚಳಿಸಿರುವುದು ಮಾತ್ರವಲ್ಲದೇ ಕಾರಿನ ಚಾಲಕ ಕುಡಿದಿದ್ದ ಎಂದು ವರದಿಯಾಗಿದೆ. ಕುಡಿದು ವೇಗವಾಗಿ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಚಾಲಕನು ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಕುಡಿದು ವಾಹನ ಚಾಲನೆ ಮಾಡುವುದು ಹಾಗೂ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಅರಿವು ಮೂಡಿಸಲು ಕಾರ್ವಾಲಿಸ್ ಪೊಲೀಸರು ಅಪಘಾತಕ್ಕೀಡಾದ ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಈ ಕಾರಿನ ಚಾಲಕನು ಮರಗಳಿಗೆ ಮಾತ್ರವಲ್ಲದೇ ವಿದ್ಯುತ್ ಕಂಬ ಹಾಗೂ ಟೆಲಿಫೋನ್ ಜಂಕ್ಷನ್ ಬಾಕ್ಸ್ ಗೂ ಸಹ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ. ಕಾರು ಅತಿ ವೇಗದಲ್ಲಿ ಡಿಕ್ಕಿ ಹೊಡೆದ ಕಾರಣಕ್ಕೆ ಹತ್ತಿರದಲ್ಲಿರುವ ಮನೆಯ ಕಿಟಕಿಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವೀಡಿಯೊ ನೋಡಿ..

ಕಾರಿನ ಒಂದು ವ್ಹೀಲ್ ಹೊರಬಂದು ಹತ್ತಿರದ ಕಟ್ಟಡದ ಕುಡಿಯುವ ನೀರಿನ ಪೈಪಿಗೆ ಹಾನಿಯಾಗಿ ಆ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ. ಇಷ್ಟೆಲ್ಲಾ ಅವಾಂತರಗಳಾದರೂ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಬಂಧಿತ ಕಾರು ಚಾಲಕನ ವಿರುದ್ಧ ಪೊಲೀಸರು ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಟೆಸ್ಲಾ ಕಾರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿವೆ.

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಟೆಸ್ಲಾ ಕಾರುಗಳಲ್ಲಿರುವ ಆಟೊಪೈಲಟ್ ಟೆಕ್ನಾಲಜಿಯನ್ನು ಕೆಲವರು ಕುಡಿದು ವಾಹನ ಚಾಲನೆ ಮಾಡಲು, ಅತಿ ವೇಗದಲ್ಲಿ ವಾಹನ ಚಾಲನೆ ಮಾಡಲು ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಇನ್ನೂ ಕೆಲವರು ಆಟೊಪೈಲಟ್‌ ಮೋಡ್ ನಲ್ಲಿ ಕಾರನ್ನು ಚಲಿಸಲು ಬಿಟ್ಟು ಮೊಬೈಲ್ ನಲ್ಲಿ ಮಾತನಾಡುವುದು, ಚಲನಚಿತ್ರಗಳನ್ನು ವೀಕ್ಷಿಸುವುದು, ಕಾರಿನಲ್ಲಿಯೇ ಮಲಗುವುದು ಮಾಡುತ್ತಿದ್ದಾರೆ.

ಮತ್ತೆ ಅಪಘಾತದಿಂದಲೇ ಸುದ್ದಿಯಾದ ಟೆಸ್ಲಾ ಕಾರು

ಟೆಸ್ಲಾ ಕಾರುಗಳು ಆಟೊ ಪೈಲಟ್‌ನಲ್ಲಿ ಚಲಿಸುವಾಗ ಚಾಲಕರ ಕಣ್ಗಾವಲು ಅಗತ್ಯವಾಗಿದೆ. ಆದರೆ ಕೆಲವು ಚಾಲಕರು ಇದರ ಬಗ್ಗೆ ಗಮನ ಹರಿಸದೇ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

Most Read Articles

Kannada
English summary
Tesla Model 3 car crashes to trees. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X