ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಫೀಚರ್
ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಗ್ರಾಹಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಕಾರಿನಲ್ಲಿ ಚಲಿಸುತ್ತಿದ್ದ ತಮ್ಮ ಗೆಳತಿ (ಗರ್ಲ್ ಫ್ರೆಂಡ್) ಹಾಗೂ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಬಿಎಂಡಬ್ಲ್ಯು ಕಾರಿನಲ್ಲಿರುವಂತಹ ಹಲವು ಐಷಾರಾಮಿ ಫೀಚರ್'ಗಳನ್ನು ಹೊಂದಿದ್ದು, ಹಾಟ್ ಕೇಕ್'ಗಳಂತೆ ಮಾರಾಟವಾಗುತ್ತಿದೆ. ಮಾರ್ಕೊ ಡಿಝೊ ಎಂಬುವವರು ಈ ಕಾರ್ ಅನ್ನು ಹೊಂದಿದ್ದಾರೆ.

ಅವರ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಇತ್ತೀಚಿಗೆ ಅಪಘಾತಕ್ಕೀಡಾಯಿತು. ಈ ಕಾರಿನಲ್ಲಿ ಅವರ ಗೆಳತಿ ಹಾಗೂ ಅವರ ಮಗ ಪ್ರಯಾಣಿಸುತ್ತಿದ್ದರು. ಅವರ ಗೆಳತಿ ಗರ್ಭಿಣಿಯಾಗಿದ್ದಾರೆ. ಈ ಅಪಘಾತದಲ್ಲಿ ತಮ್ಮ ಗರ್ಭಿಣಿ ಸ್ನೇಹಿತೆ ಹಾಗೂ ಮಗ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಅಟಾನಾಮಸ್ ಟೆಕ್ನಾಲಜಿಯನ್ನು ಹೊಂದಿದೆ. ಅಟಾನಾಮಸ್ ಟೆಕ್ನಾಲಜಿ ಅಪಘಾತದ ಸಮಯದಲ್ಲಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಕಾರಿನೊಳಗಿರುವವರನ್ನು ರಕ್ಷಿಸುತ್ತದೆ.

ಈ ಅಪಘಾತವಾದಾಗ ಸಹ ಅಟಾನಾಮಸ್ ಟೆಕ್ನಾಲಜಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಕಾರಿನಲ್ಲಿದ್ದವರ ಪ್ರಾಣ ಉಳಿಸಿದೆ. ಈ ಅಪಘಾತದ ಬಗ್ಗೆಕಾರು ಮಾಲೀಕ ಮಾರ್ಕೊ ಡಿಝೊ ಟ್ವೀಟ್ ಮೂಲಕ ಹೊರಗಿನ ಜಗತ್ತಿಗೆ ಮಾಹಿತಿ ನೀಡಿದ್ದಾರೆ.

ಮಾರ್ಕೊರವರ ಪ್ರಕಾರ, ಜೀಪ್ ವ್ರಾಂಗ್ಲರ್ ಕಾರಿನಿಂದ ಈ ಅಪಘಾತ ಸಂಭವಿಸಿದೆ. ಜೀಪ್ ವ್ರಾಂಗ್ಲರ್ ಚಾಲಕ ಕುಡಿದು ರಾಂಗ್ ಸೈಡಿನಲ್ಲಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ.

ರಾಂಗ್ ಸೈಡಿನಲ್ಲಿ ಜೀಪ್ ವ್ರಾಂಗ್ಲರ್ ಕಾರು ಬರುತ್ತಿದ್ದಿದ್ದನ್ನು ಗಮನಿಸಿದ ಮಾರ್ಕೊರವರು ತಮ್ಮ ಟೆಸ್ಲಾ ಮಾಡೆಲ್ 3 ಕಾರನ್ನು ಕಾರಿನೊಂದಿಗೆ ಡಿಕ್ಕಿ ಹೊಡೆಯದಂತೆ ತಿರುಗಿಸಲು ಪ್ರಯತ್ನಿಸಿದ್ದಾರೆ. ಆದರೆ ವ್ರಾಂಗ್ಲರ್ ಕಾರು ಅವರ ಕಾರಿಗೆ ಗುದ್ದಿದೆ.

ಅವರು ತಮ್ಮ ಕಾರನ್ನು ತಿರುಗಿಸುವ ಮೊದಲೇ ಟೆಸ್ಲಾ ಮಾಡೆಲ್ 3 ಕಾರಿನಲ್ಲಿದ್ದ ಅಟಾನಾಮಸ್ ಟೆಕ್ನಾಲಜಿ ಫೀಚರ್ ಕಾರನ್ನು ಬೇರೆ ದಿಕ್ಕಿಗೆ ತಿರುಗಿಸಿದೆ. ಇದರಿಂದ ನಮ್ಮ ಪ್ರಾಣ ಉಳಿಯಿತು ಎಂದು ಮಾರ್ಕೊ ಹೇಳಿದ್ದಾರೆ.

ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಜೀಪ್ ವ್ರಾಂಗ್ಲರ್ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಅಪಘಾತಕ್ಕೆ ವ್ರಾಂಗ್ಲರ್ ಕಾರಿನ ಚಾಲಕನೇ ಕಾರಣವೆಂಬುದು ತಿಳಿದು ಬಂದಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಿದ್ದ ಸುರಕ್ಷತಾ ಫೀಚರ್'ನಿಂದ ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.


Click it and Unblock the Notifications