ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ವಿಶ್ವದ ಜನಪ್ರಿಯ ಮತ್ತು ಅತಿ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಟೆಸ್ಲಾ ಹೊಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟೆಸ್ಲಾ ಹೊಸ ಸಂಚಲವನ್ನು ಮೂಡಿಸಿದೆ. ಅತಿ ವೇಗದ ಎಲೆಕ್ಟ್ರಿಕ್ ಕಾರನ್ನು ಹೊಂದಿರುವ ಖ್ಯಾತಿ ಟೆಸ್ಲಾ ಕಂಪನಿಗೆ ಸಲ್ಲುತ್ತದೆ.

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಹಲವು ದಾಖಲೆಗಳು ಸೃಷ್ಟಿಸಿದೆ. ಆದರೆ ಇತ್ತೀಚೆಗೆ ಹಲವು ಬಾರಿ ಟೆಸ್ಲಾ ಕಾರುಗಳು ಅಪಘಾತಗಳಿಗೆ ಒಳಗಾಗಿ ಅಪಖ್ಯಾತಿಗೆ ಒಳಗಾಗುತ್ತಿದೆ. ಇತ್ತೀಚೆಗೆ ಚೀನಾದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಟೆಸ್ಲಾ ಮಾಡೆಲ್ ಎಸ್ ಕಾರಿನ ರೂಫ್ ಹಾರಿಹೋದ ಘಟನೆ ನಡೆದಿದೆ. ಟೆಸ್ಲಾ ಕಾರಿನ ರೂಫ್ ಹರಿಹೋಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಟೆಸ್ಲಾ ಮಾಡೆಲ್ ಎಸ್ ಕಾರಿನ ರೂಫ್ ಹರಿಹೋಗಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವೀಡಿಯೋದಲ್ಲಿ ಅತಿ ವೇಗವಾಗಿ ಟೆಸ್ಲಾ ಕಾರು ಚಲಿಸುವಾಗ ಇದ್ದಕ್ಕಿದ್ದಂತೆ ರೂಫ್ ಹಾರಿಹೋಗುವುದನ್ನು ಕಂಡುಬರುತ್ತದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಈ ಘಟನೆ ಸಂಭವಿಸಿದಾಗ ಹೆದ್ದಾರಿಯಲ್ಲಿ ಯಾರಿಗೂ ಯಾವುದೇ ಅಪಘಾತ ಅಥವಾ ಹಾನಿ ಸಂಭವಿಸಿಲ್ಲ. ಕಾರಿನ ರೂಫ್ ಫಲಕ ಇದ್ದಕ್ಕಿದ್ದಂತೆ ಹೊರಬಂದು ಹೆದ್ದಾರಿಯಲ್ಲಿ ಹಾರುತ್ತಿರುವುದನ್ನು ನೋಡಬಹುದು.

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ವೀಡಿಯೋದಲ್ಲಿರುವ ಟೆಸ್ಲಾ ಮಾಡೆಲ್ ಎಸ್‌ನ ಮಾಲೀಕರು ತಮ್ಮ ಕಾರಿನ ರೂಫ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತ ಸರ್ವಿಸ್ ಸೆಂಟರ್ ನಲ್ಲಿ ರಿಪೇರಿ ಮಾಡಿದ್ದಾರೆ ಎಂದು ವರದಿಗಳು ಪ್ರಕಟವಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಟೆಸ್ಲಾ ಕಾರಿನ ರೂಫ್ ಹಾರಿಹೋಗುವ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅಮೆರಿಕಾದಲ್ಲಿ ಹೊಚ್ಚ ಹೊಸ ಟೆಸ್ಲಾ ಕಾರನ್ನು ಶೋರೂಂ ನಿಂದ ವಿತರಣೆ ಪಡೆದು ತೆರಳುವ ವೇಳೆ ರೂಫ್ ಹರಿಹೋದ ಘಟನೆ ನಡೆದಿರುವುದು ವರದಿಯಾಗಿತ್ತು.

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಈ ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಮಾಡೆಲ್ ವೈ ಯಿಂದ ರೂಫ್ ಹೇಗೆ ಹೊರಟುಹೋಯಿತು ಎಂಬುದು ಕಾಣುತ್ತಿರಲಿಲ್ಲ. ಆದರೆ ರೂಫ್ ಹೆದ್ದಾರಿಯಲ್ಲಿ ಹರೊಹೋಯ್ತು ಎಂದು ಮಾಲೀಕರು ಹೇಳುತ್ತಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಈ ಘಟನೆಯ ಬಳಿಕ ಟೆಸ್ಲಾ ಕಂಪನಿಯು ಆ ಗ್ರಾಹಕನಿಗೆ ಹೊಸ ವೈ ಎಲೆಕ್ಟ್ರಿಕ್ ಕಾರನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದರು. ಆದರೆ ಅವರು ಕಂಪನಿಯ ಆಫರ್ ಅನ್ನು ತಿರಸ್ಕರಿಸಿದರು. ಅವರು ಯಾವ ಕಾರಣಕ್ಕಾಗಿ ಕಂಪನಿಯ ಆಫರ್ ಅನ್ನು ತಿರಸ್ಕರಿಸಿದರು ಎಂಬ ಮಾಹಿತಿಯು ಬಹಿರಂಗವಾಗಿಲ್ಲ.

ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವಾಗ ಹಾರಿಹೋಯ್ತು ಎಲೆಕ್ಟ್ರಿಕ್ ಕಾರಿನ ರೂಫ್

ಈ ರೀತಿ ಘಟನೆಗಳಿಂದ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಅಪಖ್ಯಾತಿ ಒಳಗಾಗುತ್ತಿದ್ದಾರೆ. ಆದರೆ ಇಂದು ಟೆಸ್ಲಾ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪಾದಕರಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೆಸ್ಲಾ ಕಾರುಗಳು ಉತ್ತಮ ಬೇಡಿಕೆಯನ್ನು ಹೊಂದಿದೆ. ಈ ಟೆಸ್ಲಾ ಕಂಪನಿಯು ಶೀಘ್ರದಲ್ಲೇ ಭಾರತಕ್ಕೆ ಲಗ್ಗೆ ಇಡಲಿದೆ ಎಂದು ಕಂಪನಿಯು ಖಚಿತಪಡಿಸಿದೆ.

Most Read Articles

Kannada
English summary
Tesla Model S lose Its Roof On A Highway. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X