ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಕರೋನಾ ವೈರಸ್ ವಿಶ್ವದ ಎಲ್ಲಾ ದೇಶಗಳನ್ನು ಭಾದಿಸಿದೆ. ಕರೋನಾ ವೈರಸ್ ನಿಂದಾಗಿ ಇದುವರೆಗೂ 24,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಇದರಿಂದಾಗಿ ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಇದಕ್ಕಾಗಿ ವಿಶ್ವದ ವಿವಿಧ ಸರ್ಕಾರಗಳು ಆಟೋಮೊಬೈಲ್ ಕಂಪನಿಗಳ ಸಹಾಯವನ್ನು ಕೋರಿವೆ. ವೆಂಟಿಲೇಟರ್ ಹಾಗೂ ಇನ್ನಿತರ ವೈದ್ಯಕೀಯ ಉಪಕರಣಗಳನ್ನು ತಯಾರಿಸಿ, ಪೂರೈಸಲು ಆಯಾ ಸರ್ಕಾರಗಳು ವಾಹನ ತಯಾರಕ ಕಂಪನಿಗಳಿಗೆ ಸೂಚಿಸಿವೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಆಟೋಮೊಬೈಲ್ ಕಂಪನಿಗಳು ಸಹ ವೆಂಟಿಲೇಟರ್ ತಯಾರಿಸಲು ಮುಂದಾಗಿವೆ. ಕೆನಡಾದಲ್ಲಿಯೂ ವಾಹನ ತಯಾರಕ ಕಂಪನಿಗಳು ವೆಂಟಿಲೇಟರ್‌ ಉತ್ಪಾದಿಸಲಿವೆ. ಈ ಕಂಪನಿಗಳಿಗೆ ಕೆನಡಾ ಸರ್ಕಾರವು ಸಹಾಯ ಮಾಡಲಿದೆ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಫೋರ್ಡ್, ಜನರಲ್ ಮೋಟಾರ್ಸ್ ಹಾಗೂ ಟೆಸ್ಲಾ ಸೇರಿದಂತೆ ವಿವಿಧ ವಾಹನ ತಯಾರಕ ಕಂಪನಿಗಳು ವೆಂಟಿಲೇಟರ್ ತಯಾರಿಸಲು ನಿರ್ಧರಿಸಿದೆ. ವೆಂಟಿಲೇಟರ್ ಉತ್ಪಾದನೆಗಾಗಿ ಟೆಸ್ಲಾ ಕಂಪನಿಯು ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮತ್ತೆ ತೆರೆಯಲಿದೆ. ಕರೋನಾ ವೈರಸ್ ನಿಂದಾಗಿ ವಿಶ್ವದಾದ್ಯಂತ ವಾಹನಗಳ ಮಾರಾಟವು ಕುಸಿದಿದೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಈ ಕಾರಣಕ್ಕೆ ವಿವಿಧ ವಾಹನ ತಯಾರಕ ಕಂಪನಿಯ ಉತ್ಪಾದನಾ ಘಟಕಗಳನ್ನು ಮುಚ್ಚಲಾಗಿದೆ. ಕರೋನಾ ವೈರಸ್ ಹರಡುತ್ತದೆ ಎಂಬುದು ಸಹ ಇದಕ್ಕೆ ಕಾರಣ. ಟೆಸ್ಲಾ ಕಂಪನಿಯು ವೆಂಟಿಲೇಟರ್ ತಯಾರಿಸಲು ಮುಂದಾಗಿರುವ ವಿಷಯವನ್ನು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಟೆಸ್ಲಾ ಚೀನಾದಲ್ಲಿ ವೆಂಟಿಲೇಟರ್‌ಗಳನ್ನು ಖರೀದಿಸಿ ಅವುಗಳನ್ನು ಅಮೆರಿಕಾಗೆ ರವಾನಿಸಿತ್ತು. ಕೋವಿಡ್ -19 ವೈರಸ್ ಪ್ರಪಂಚದಾದ್ಯಂತ ಹರಡಿರುವ ಬಗ್ಗೆ ಅಮೆರಿಕಾ ಹಾಗೂ ಚೀನಾ ದೇಶಗಳು ಪರಸ್ಪರ ಆರೋಪ ಮಾಡಿವೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಆದರೂ ಚೀನಾ ಅಮೆರಿಕಾಗೆ ನೆರವಾಗಿದೆ. ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಕೋವಿಡ್ -19 ವೈರಸ್‌ ಕಾಣಿಸಿಕೊಂಡಿತು. ಈಗ ವುಹಾನ್ ಸೇರಿದಂತೆ ಚೀನಾದಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಈ ಕಾರಣಕ್ಕೆ ಚೀನಾ ಕೋವಿಡ್ -19 ವೈರಸ್ ನಿಂದ ಬಾಧಿತವಾಗಿರುವ ದೇಶಗಳಿಗೆ ನೆರವು ನೀಡಲು ಆರಂಭಿಸಿದೆ. ಚೀನಾಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ -19 ವೈರಸ್‌ನಿಂದ ಬಾಧಿತವಾಗಿರುವ ಇಟಲಿಗೆ ಸಹ ಚೀನಾ ದೇಶವು ನೆರವನ್ನು ನೀಡಿದೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಎಲ್ಲಾ ದೇಶಗಳು ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಕೋವಿಡ್ -19 ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯ. ಭಾರತದಲ್ಲಿಯೂ ಸಹ ಕರೋನಾ ವೈರಸ್ ಸಂತ್ರಸ್ತರ ಸಂಖ್ಯೆ ಹೆಚ್ಚಾಗತೊಡಗಿದೆ. ಈ ಕಾರಣಕ್ಕೆ ಭಾರತದಲ್ಲಿ 21 ದಿನಗಳ ಕರ್ಫ್ಯೂಗೆ ವಿಧಿಸಲಾಗಿದೆ.

ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಟೆಸ್ಲಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಸಹ ವೆಂಟಿಲೇಟರ್ ತಯಾರಿಸಲು ಮುಂದಾಗಿದೆ. ತಮ್ಮ ಉತ್ಪಾದನಾ ಘಟಕಗಳಲ್ಲಿ ವೆಂಟಿಲೇಟರ್ ತಯಾರಿಸಲು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾರವರು ಸೂಚಿಸಿದ್ದಾರೆ. ಮಹೀಂದ್ರಾ ಕಂಪನಿಯ ವೆಂಟಿಲೇಟರ್ ಬೆಲೆ ಸುಮಾರು ರೂ.7,500 ರೂಪಾಯಿಗಳಾಗಲಿದೆ ಎಂದು ಹೇಳಲಾಗಿದೆ.

Article Published On: Friday, March 27, 2020, 13:00 [IST]
English summary
Tesla to reopen Newyork factory to manufacture ventilators. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+