ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಭಾರತದಲ್ಲಿರುವ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ವಯ ಯಾವುದೇ ವಾಹನಗಳನ್ನು ಮಾಡಿಫೈ ಮಾಡುವಂತಿಲ್ಲ. ಈ ಕಾಯ್ದೆಯ ಪ್ರಕಾರ ವಾಹನಗಳನ್ನು ಮಾಡಿಫೈಗೊಳಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಬೈಕುಗಳಲ್ಲಿ ಮಾಡಿಫೈ ಮಾಡಲಾದ ಸೈಲೆನ್ಸರ್ ಹಾಗೂ ಹಾರ್ನ್ ಬಳಸದಂತೆ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಸೂಚನೆ ನೀಡುತ್ತಲೇ ಇರುತ್ತಾರೆ. ಪೊಲೀಸರ ತಪಾಸಣೆ ವೇಳೆಯಲ್ಲಿ ಸಿಕ್ಕಿ ಬೀಳುವ ಮಾಡಿಫೈಗೊಂಡ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಮಾಡಿಫೈಗೊಂಡ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಈ ಹಿಂದೆ ಬೈಕುಗಳಲ್ಲಿ ಮಾಡಿಫೈ ಮಾಡಲಾದ ಸೈಲೆನ್ಸರ್‌ಗಳನ್ನು ಅಳವಡಿಸಿದ್ದ ಬೈಕುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಆಕ್ರಮವಾಗಿ ಅಳವಡಿಸಲಾಗಿದ್ದ ಸೈಲೆನ್ಸರ್‌ಗಳನ್ನು ತೆಗೆದು ಹಾಕಿ ಅವುಗಳನ್ನು ರೋಡ್ ರೋಲರ್ ಬಳಸಿ ನಾಶಪಡಿಸಲಾಗಿತ್ತು.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಈಗ ಇದೆ ರೀತಿಯ ಮತ್ತೊಂದು ಘಟನೆಯಲ್ಲಿ ಥಾಣೆ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಸುಮಾರು 350 ಮಾಡಿಫೈಗೊಂಡ ಸೈಲೆನ್ಸರ್ ಹಾಗೂ 125 ಹಾರ್ನ್'ಗಳನ್ನು ರೋಡ್ ರೋಲರ್ ಬಳಸಿ ನಾಶಪಡಿಸಿದ್ದಾರೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಈ ಬಗ್ಗೆ ನಮಸ್ತೆ ಥಾಣೆನ್ಯೂಸ್ ಫೇಸ್‌ಬುಕ್ ಪೇಜ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಮಾರ್ಪಡಿಸಿದ ಸೈಲೆನ್ಸರ್‌ಗಳು ಬೈಕ್‌ಗಳ ಮೈಲೇಜ್ ಅನ್ನು ಕಡಿಮೆ ಮಾಡುತ್ತವೆ. ಜೊತೆಗೆ ಸಾಮಾನ್ಯ ಎಕ್ಸಾಸ್ಟ್ ಪೈಪ್'ಗಳಿಗಿಂತ ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತವೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಸಾಮಾನ್ಯವಾಗಿ ಮಾಡಿಫೈ ಮಾಡಲಾದ ಎಕಾಸ್ಟ್ ಪೈಪ್'ಗಳನ್ನು ಯಾರಾದರೂ ಮೆಕ್ಯಾನಿಕ್ ಅಥವಾ ಯಾವುದಾದರೂ ಕಸ್ಟಂ ಕಂಪನಿ ವಿನ್ಯಾಸಗೊಳಿಸಿರುತ್ತದೆ. ಇದರಿಂದ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದಂತಹ ಸಮಸ್ಯೆಗಳು ಉಂಟಾಗುತ್ತವೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಕೆಲವೊಮ್ಮೆ ಮಾಡಿಫೈ ಮಾಡಲಾದ ಸೈಲೆನ್ಸರ್‌ಗಳನ್ನು ಇತರ ಬೈಕುಗಳಿಂದ ಪಡೆಯಲಾಗಿರುತ್ತದೆ. ಯುವ ಜನರಂತೂ ಹೆಚ್ಚು ಶಬ್ದವನ್ನುಂಟು ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಜೂನ್ 14ರಿಂದ 17ರವರೆಗೆ ಥಾಣೆ ಪೊಲೀಸರು 18 ಟ್ರಾಫಿಕ್ ಉಪವಿಭಾಗಗಳಲ್ಲಿ ಅಕ್ರಮವಾಗಿ ಮಾಡಿಫೈಗೊಂಡ ಬೈಕುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು.ಈ ಪ್ರದೇಶಗಳಲ್ಲಿ 190 ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಲಾಗಿದೆ.

ರೋಡ್ ರೋಲರ್'ನಿಂದ ಪುಡಿ ಪುಡಿಯಾದ ಮಾಡಿಫೈಗೊಂಡ ಸೈಲೆನ್ಸರ್‌ಗಳು

ಇವುಗಳಲ್ಲಿ ಅಕ್ರಮವಾಗಿ ಮಾಡಿಫೈಗೊಂಡ ಸೈಲೆನ್ಸರ್ ಹೊಂದಿದ್ದ 121 ಬೈಕುಗಳು ಸಹ ಸೇರಿವೆ. ಇದರ ಜೊತೆಗೆ ಸನ್ ಫಿಲ್ಮ್ ಹೊಂದಿದ್ದ ಕಾರುಗಳಿಗೂ ಸಹ ಥಾಣೆ ಪೊಲೀಸರು ದಂಡ ವಿಧಿಸಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Thane police destroys modified silencers using road roller. Read in Kannada.
Story first published: Monday, July 12, 2021, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X