ಕಾರಿನ ಗುಣಮಟ್ಟಕ್ಕೆ ಸಾಟಿಯಿಲ್ಲ... ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್... ಕಾರಿನೊಂದಿಗೆ ಮಾಲೀಕ ಪೋಸ್
ಹೆದ್ದಾರಿಗಳಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ, ಇಲ್ಲಿ ನಡೆಯುವ ಹೆಚ್ಚಿನ ಅಪಘಾತಗಳಲ್ಲಿ ಬದುಕುಳಿಯುವೇ ಕಷ್ಟ. ಏಕೆಂದರೇ ಹೆದ್ದಾರಿಗಳಲ್ಲಿ ಸಿಟಿಯಂತಲ್ಲದೇ ವಾಹನಗಳು ಹೆಚ್ಚಿನ ವೇಗದಲ್ಲಿ ಇರುವುದರಿಂದ ಅಪಘಾತದ ತೀರ್ವತೆ ಹೆಚ್ಚಾಗಿರುತ್ತದೆ. ಅಂತೆಯೇ ಇತ್ತೀಚೆಗೆ ನಡೆದ ಅಪಘಾತದಲ್ಲಿ ಕಾರು ಪಲ್ಟಿಯಾಗಿದ್ದರೂ ಮಾಲೀಕ ಮರುದಿನ ಬಂದು ಕಾರು ಪಕ್ಕದಲ್ಲಿ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾನೆ.
ರೋಪರ್ ಮನಾಲಿ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತ ಈಗ ಮಾಲೀಕನ ಫೋಟೋದಿಂದ ವೈರಲ್ ಆಗಿದೆ. ಫೋರ್ಡ್ ಫಿಗೋ ಹ್ಯಾಚ್‌ಬ್ಯಾಕ್ ಕಾರು ಮಾಲೀಕ ಹೆದ್ದಾರಿಯಲ್ಲಿ ಚಾಲನೆ ಮಾಡುತ್ತಿದ್ದಾಗ ತಡರಾತ್ರಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಯ ಹೊರತಾಗಿಯೂ, ಮಾಲೀಕ ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಮೆಚ್ಚಿ ಪಲ್ಟಿಯಾದ ವಾಹನದ ಜೊತೆಗೆ ಪೋಸ್ ನೀಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು, ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಅಪಘಾತದ ದೃಷ್ಯ ಸೆರೆಯಾಗಿದೆ.

ನೇರ ರಸ್ತೆಯ ತುಸು ಉದ್ದದ ತಿರುವಿರುವ ಬದಿಗೆ ಸರಿದು ಪೋಲ್ ಒಂದಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಅಪಘಾತದ ಸಮಯದಲ್ಲಿ ವಾಹನವು ಗಂಟೆಗೆ 70 ಕಿ.ಮೀ ವೇಗದಲ್ಲಿ ಚಲಿಸುತ್ತಿರುವುದು ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಕಂಡುಬಂದಿದೆ. ಮಾಲೀಕ ತನ್ನ ಇಬ್ಬರು ಸ್ನೇಹಿತರೊಂದಿಗೆ ವಾಹನ ಚಲಾಯಿಸುತ್ತಿದ್ದಾಗ ರೋಪರ್ ಬಳಿ ಬಂದಾಗ ಅವರೆಲ್ಲರೂ ನಿದ್ದೆಗೆ ಜಾರಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್ ಮಾಲೀಕ ರಸ್ತೆಯ ತಿರುವನ್ನು ಗಮನಹರಿಸದೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಸಿಲುಕಿದ್ದಾರೆ.
ಕಾರು ಉರುಳಿದರೂ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಪಘಾತಕ್ಕೆ ಮುಖ್ಯ ಕಾರಣವೆಂದರೆ ಮಾಲೀಕ 12 ಗಂಟೆಗಳಿಗೂ ಹೆಚ್ಚು ಕಾಲ ವಾಹನ ಚಲಾಯಿಸಿದ್ದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಇದು ಆತನ ಏಕಾಗ್ರತೆಯನ್ನು ಕಳೆದುಕೊಂಡು ಅಪಘಾತಕ್ಕೆ ಸಿಲುಕಲು ಕಾರಣವಾಗಿದೆ. ಎರಡು- ಮೂರು ಬಾರಿ ಪಲ್ಟಿ ಹೊಡೆದ ನಂತರ ಫೋರ್ಡ್ ಫಿಗೋ ತೀವ್ರವಾಗಿ ಹಾನಿಗೊಳಗಾಗಿದೆ. ಕಾರಿನ ರೂಫ್ ಭಾಗವು ಪುಡಿಪುಡಿಯಾಗಿದೆ, ಇಷ್ಟಾದರೂ ಕಾರಿನಲ್ಲಿ ಇದ್ದ ಮೂವರು ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿದೆ.

ಉಳಿದಂತೆ ಕಾರಿನ ಎಲ್ಲಾ ಪಿಲ್ಲರ್‌ಗಳು ಯಥಾಸ್ಥಿತಿಯಲ್ಲಿದ್ದು ಯಾವುದೇ ಹಾನಿಯಾಗಿಲ್ಲ. ಏರ್‌ಬ್ಯಾಗ್‌ಗಳು ಸಹ ತೆರೆದುಕೊಂಡು ಪ್ರಯಾಣಿಕರನ್ನು ಗಂಭೀರ ಗಾಯಗಳಿಂದ ರಕ್ಷಿಸಿವೆ. ಜೀವ ಉಳಿಸದ ಕಾರಿನ ಕುರಿತು ಮಾಲಿಕ ಹಾಡಿಹೊಗಳಿದ್ದಾನೆ. ಮಗುಚಿ ಬಿದ್ದ ಫಿಗೋ ಚಿತ್ರವನ್ನೂ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ದುಃಖಕರ ವಿಷಯವೆಂದರೆ, ಫೋರ್ಡ್ ಭಾರತೀಯ ಮಾರುಕಟ್ಟೆಯನ್ನು ತೊರೆದಿದೆ. ಪ್ರಸ್ತುತ ಯಾವುದೇ ವಾಹನಗಳನ್ನು ಮಾರಾಟ ಮಾಡುತ್ತಿಲ್ಲ. ಬ್ರ್ಯಾಂಡ್‌ನ ಕೆಲವು ಸೇವಾ ಕೇಂದ್ರಗಳು ಮಾತ್ರ ಇನ್ನೂ ಸಕ್ರಿಯವಾಗಿವೆ.
ನಿದ್ದೆ ಬಂದರೆ ಡ್ರೈವಿಂಗ್ ಬೇಡ:
ತೂಕಡಿಕೆಯ ಭಾವನೆಯಿಂದ ವಾಹನ ಚಲಾಯಿಸುವುದು ಅಪಾಯಕಾರಿ ಅಪಘಾತಗಳಿಗೆ ಕಾರಣವಾಗಬಹುದು. ಅನೇಕ ಸಂದರ್ಭಗಳಲ್ಲಿ, ಯಾವುದೇ ವಿರಾಮವಿಲ್ಲದೆ ಹೆಚ್ಚು ಗಂಟೆಗಳ ಕಾಲ ಚಾಲನೆ ಮಾಡುವುದರಿಂದ ಒತ್ತಡಕ್ಕೆ ಗುರಿಯಾಗಬಹುದು. ಚಾಲಕ ಹೈವೇ ಹಿಪ್ನಾಸಿಸ್ ಅನ್ನು ಅನುಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಮೆದುಳು ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕಣ್ಣುಗಳು ಅಗಲವಾಗಿ ತೆರೆದು ಮಲಗುವಂತೆ ಭಾಸವಾಗುತ್ತದೆ. ಹೆದ್ದಾರಿಗಳಲ್ಲಿ ಅನೇಕ ಅಪಘಾತಗಳು ಇದೇ ಕಾರಕ್ಕೆ ಆಗುತ್ತವೆ.
NHAI, ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುವ NH2 ನಲ್ಲಿ ಹಲವಾರು ಅಧ್ಯಯನಗಳನ್ನು ನಡೆಸಿದೆ. ಹೊಸದಾಗಿ ಮಾಡಿದ ಈ ಅಧ್ಯಯನವು ಹೆದ್ದಾರಿಗಳಿಂದ ಉಂಟಾಗುವ ಶೇ 60 ರಷ್ಟು ಅಪಘಾತಗಳು ಹೆದ್ದಾರಿ ಸಂಮೋಹನದ (Highway hypnosis) ಕಾರಣದಿಂದಾಗಿವೆ ಎಂದು ಕಂಡುಹಿಡಿದಿದೆ. ದೇಶದ ಕೆಲವು ನೇರವಾದ ಮತ್ತು ಸುಗಮ ರಸ್ತೆಗಳಾಗಿರುವ ಬರಕ್‌ಪುರ ಮತ್ತು ದಕುನಿ ನಡುವೆ ಈ ಅಧ್ಯಯನವನ್ನು ನಡೆಸಲಾಗಿದೆ. ಹಾಗಾಗಿ ನಿಯಮಿತ ವಿರಾಮಗಳನ್ನು ತೆಗೆದುಕೊಂಡು ನಿದ್ದೆ ಮಾಡುವುದು ಹೆದ್ದಾರಿಗಳಲ್ಲಿ ಅಪಘಾತಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications