ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಕಡ್ಡಾಯವಾಗಿ 18 ವರ್ಷ ವಯಸ್ಸಾಗಿರಬೇಕು. ನೀವು ಇರುವ ದೇಶವನ್ನು ಅವಲಂಬಿಸಿ ವಿವಿಧ ದೇಶಗಳಲ್ಲಿ ಲೈಸೆನ್ಸ್ ಪಡೆಯಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾತ್ತದೆ. ಆದರೆ ಅಪ್ರಾಪ್ತ ವಯಸ್ಕರಿಗೆ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲು ಅನುಮತಿಸುವ ಯಾವುದೇ ದೇಶವಿಲ್ಲ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಮುಂದುವರಿದ ಹಲವು ದೇಶಗಳಲ್ಲಿನ ಪ್ರಜೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಭಾರತದಲ್ಲಿ ಹಾಗಲ್ಲ ಇಲ್ಲಿನ ವಿಷಯಗಳು ಸ್ವಲ್ಪ ವಿಭಿನ್ನವಾಗಿವೆ. ನಮ್ಮ ರಸ್ತೆಗಳಲ್ಲಿ ಅನೇಕ ಅಪ್ರಾಪ್ತ ಮಕ್ಕಳು ಕಾರು, ಬೈಕ್ ಮತ್ತು ಸ್ಕೂಟರ್‌ಗಳನ್ನು ಓಡಿಸುವುದನ್ನು ನಾವು ನೋಡಿದ್ದೇವೆ. ಇವರೆಲ್ಲರೂ ಪೋಷಕರ ಅನುಮತಿಯಿಲ್ಲದೇ ಓಡುಸುತ್ತಾರೆಂಬುದು ಗೊತ್ತೇ ಇದೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಮುಖ್ಯ ರಸ್ತೆಗಳಲ್ಲಿ ಮಕ್ಕಳು ಬೈಕ್, ಸ್ಕೂಟರ್‌ಗಳನ್ನು ಓಡಿಸುತ್ತಾ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಹಲವು ಉದಾಹರಣೆಗಳು ಇವೆ. ಈ ಎಲ್ಲಾ ಸಂದರ್ಭಗಳಲ್ಲೂ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ವಾಹನಗಳನ್ನು ಹೊರತಂದು ಓಡಿಸುತ್ತಿರುವುದು ತಿಳಿದುಬಂದಿದೆ. ಪೋಷಕರ ಅನುಮತಿಯೊಂದಿಗೆ ವಾಹನಗಳನ್ನು ಓಡುಸುವ ಮಕ್ಕಳು ತೀರಾ ಕಡಿಮೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಒಂದು ವೇಳೆ ಪೋಷಕರೇ ಜೊತೆಗಿದ್ದು ಮಕ್ಕಳಿಗೆ ವಾಹನಗಳನ್ನು ಓಡಿಸಿಲು ಪ್ರೋತ್ಸಾಹಿಸಿದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ. ಏಕೆಂದರೆ ಮಕ್ಕಳಿಗೆ ವಾಹನವನ್ನು ನಿಯಂತ್ರಿಸುವ ಸಾಮರ್ಥ್ಯವಿರುವುದಿಲ್ಲ. ಇದು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ದ್ವಿಚಕ್ರ ವಾಹನಗಳಿಗೆ ಪರಿಸ್ಥಿತಿ ಇಷ್ಟು ಗಂಭೀರವಾದರೆ ಮಕ್ಕಳು ಕಾರುಗಳನ್ನು ಓಡಿಸಿದರೆ ಪರಿಣಾಮಗಳು ಹೇಗಿರುತ್ತವೆ ಒಮ್ಮೆ ಊಹಿಸಿಕೊಳ್ಳಿ.

ಇತ್ತೀಚೆಗೆ ಬಾಲಕನೊಬ್ಬ MG ಗ್ಲೋಸ್ಟರ್ SUV ಅನ್ನು ಓಡಿಸುತ್ತಿದ್ದರೇ ಅವನ ತಂದೆ ಪಕ್ಕದಲ್ಲೇ ಕುಳಿತು ಚಾಲನೆ ಮಾಡುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಿ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಈ ವಿಡಿಯೋವನ್ನು ರಾಜಾ ಸಾಹಬ್ ಜಬಲ್ಪುರ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಈ ವೀಡಿಯೊದಲ್ಲಿ ಬಾಲಕನ ತಂದೆ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದು, ಬಾಲಕ MG ಗ್ಲೋಸ್ಟರ್‌ನ ಡ್ರೈವರ್ ಸೀಟಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಕಾರನ್ನು ಸ್ಟಾರ್ಟ್ ಮಾಡುವುದನ್ನು ತಂದೆ ಅವನಿಗೆ ಸೂಚಿಸುತ್ತಿದ್ದಂತೆ ಮಗು ಬ್ರೇಕ್‌ನಿಂದ ತನ್ನ ಪಾದವನ್ನು ತೆಗೆದು ಕಾರು ಮುಂದೆ ಚಲಿಸಲು ಪ್ರಾರಂಭಿಸುತ್ತಾನೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಈ ವೇಳೆ ಡ್ಯಾಶ್‌ಬೋರ್ಡ್, ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್‌ನ ಒಂದು ಭಾಗವು ವಿಡಿಯೋದಲ್ಲಿ ಗೋಚರಿಸುತ್ತದೆ. ಬಾಲಕ SUV ಅನ್ನು ಹೆಚ್ಚಿನ ವೇಗದಲ್ಲಿ ಓಡಿಸುತ್ತಿಲ್ಲವಾದರೂ ಕಾನೂನು ಬಾಹಿರವಾಗಿ ಎಸ್‌ಯುವಿಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲಾಗುತ್ತಿದೆ. ಇದ್ಯಾವುದನ್ನು ಲೆಕ್ಕಸಿದ ಬಾಲಕನ ತಂದೆ ಮುಂಭಾಗದ ರಸ್ತೆಯನ್ನು ತೋರುತ್ತಾನೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ರಾತ್ರಿ ವೇಳೆಯಲ್ಲಿ ಬಾಲಕ ವಸತಿ ಪ್ರದೇಶದ ಮೂಲಕ ಕಾರನ್ನು ಓಡಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಿಡಿಯೋ ರೆಕಾರ್ಡ್ ಆಗುತ್ತಿದ್ದ ವೇಳೆ ರಸ್ತೆಯಲ್ಲಿ ಯಾವುದೇ ವಾಹನಗಳು ಇರಲಿಲ್ಲ. ನಮಗೆ ತಿಳಿದಿರುವಂತೆ MG ಗ್ಲೋಸ್ಟರ್ ಭಾರತದಲ್ಲಿ MG ಯ ಪ್ರಮುಖ SUV ಆಗಿದ್ದು, ಇದು ADAS ಸೇರಿದಂತೆ ವೈಶಿಷ್ಟ್ಯಗಳ ದೀರ್ಘ ಪಟ್ಟಿಯೊಂದಿಗೆ ಬರುತ್ತದೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

360 ಡಿಗ್ರಿ ಕ್ಯಾಮೆರಾ ಮತ್ತು ಪನೋರಮಿಕ್ ಸನ್‌ರೂಫ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಕಾರು ಚಾಲನೆಯಲ್ಲಿರುವಾಗ ಈ ವೈಶಿಷ್ಟ್ಯಗಳಲ್ಲಿ ಯಾವ ವೈಶಿಷ್ಟ್ಯ ನಿನಗೆ ಇಷ್ಟವೆಂದು ಆತ ಬಾಲಕನನ್ನು ಕೇಳುತ್ತಾನೆ. ಇದು ಹೀಗಿದ್ದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಮಗು ಸೀಟ್ ಬೆಲ್ಟ್ ಕೂಡ ಧರಿಸಿಲ್ಲ.

ಕಾರನ್ನು ಹತ್ತಿದ ನಂತರ ಸೀಟ್ ಬೆಲ್ಟ್ ಧರಿಸುವುದು ನಮ್ಮ ಆದ್ಯ ಕರ್ತವ್ಯ. ಆದರೆ ಬಾಲಕ ಸೀಟ್ ಬೆಲ್ಟ್ ಧರಿಸಿದರೆ ಅವನನ್ನು ಹಿಂದಕ್ಕೆ ಎಳೆಯಲಾಗುತ್ತದೆ, ಅಲ್ಲದೇ ಅವನ ಪಾದಗಳು ಬ್ರೇಕ್ ಮತ್ತು ಆಕ್ಸಿಲೇಟರ್ ಪೆಡಲ್ ಅನ್ನು ತಲುಪಲು ಸಾಧ್ಯವಾಗುವುದಿಲ್ಲ. ಇವೆಲ್ಲವನ್ನು ನೋಡಿದರೇ ಬಾಲಕನ ಹಟದಿಂದ ತಂದೆಯೇ ತನ್ನ ಮಗುವಿಗೆ ಕಾರು ಓಡಿಸಲು ಕಲಿಸುತ್ತಿರುವಂತೆ ತೋರುತ್ತಿದೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಗ್ಲೋಸ್ಟರ್‌ನಂತಹ ಬೃಹತ್ ಎಸ್‌ಯುವಿಯ ಸ್ಟೀರಿಂಗ್ ವೀಲ್ ಅನ್ನು ಬಾಲಕನಿಗೆ ನೀಡುವುದು ಉತ್ತಮ ನಿರ್ಧಾರವಲ್ಲ. ಈ ಕಾರಿನಲ್ಲಿ ಸಾಕಷ್ಟು ಸೇಫ್ಟಿ ಫೀಚರ್ಸ್ ಇವೆಯಾದರೂ ಮಕ್ಕಳ ಮನಸ್ಥಿತಿ ಚಂಚಲವಾಗಿರುವುದರಿಂದ ಕಂಡಿತವಾಗಿಯೂ ಅಪಾಯನ್ನು ಆಹ್ವಾನಿಸಬಹುದು. ಮಕ್ಕಳಿಗೆ ಡ್ರೈವಿಂಗ್ ಲೈಸೆನ್ಸ್ ನೀಡದಿರಲು ಇದು ಒಂದು ಕಾರಣವಾಗಿದೆ.

ಮಗು ಡ್ರೈವಿಂಗ್‌ನಲ್ಲಿ ಅದ್ಭುತವಾಗಿದ್ದರೂ ಸಹ ಅವನು ವಯಸ್ಕರಂತೆ ಕಾರನ್ನು ಸರಿಯಾಗಿ ಬಳಸುವುದನ್ನು ತಿಳಿದಿರುವುದಿಲ್ಲ. ಈ ಹಿಂದೆಯೂ ಮಕ್ಕಳು ರಸ್ತೆಯಲ್ಲಿ ಕಾರುಗಳನ್ನು ಓಡಿಸುವುದನ್ನು ನಾವು ನೋಡಿದ್ದೇವೆ, ಅಲ್ಲದೇ ಮಕ್ಕಳು ಓಡಿಸಿದ ಕಾರು ಅಪಘಾತಕ್ಕೀಡಾಗಿ ಈ ಅಪರಾಧಕ್ಕಾಗಿ ಪೋಷಕರಿಗೆ ಶಿಕ್ಷೆಯಾಗಿದೆ.

ಅಪ್ರಾಪ್ತ ಮಗನ ಪಕ್ಕದಲ್ಲೇ ಕುಳಿತು ಕಾರು ಓಡಿಸುತ್ತಿದ್ದರೇ ವಿಡಿಯೋ ಮಾಡಿ ಹಂಚಿಕೊಂಡ ತಂದೆ: ಇದು ಸರಿಯೇ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಅಪ್ರಾಪ್ತ ಮಕ್ಕಳಿಗೆ ಕಾರನ್ನು ಕಲಿಸುವುದು ಕಾನೂನು ಬಾಹಿರವಾಗಿದೆ. ಮಕ್ಕಳಿಗೆ ಗೇಮ್‌ಗಳಲ್ಲಿ ಕಾರುಗಳನ್ನು ಓಡಿಸಿ ನಿಜ ಜೀವನದಲ್ಲೂ ಕಾರುಗಳನ್ನು ಓಡಿಸುವ ಹುಚ್ಚು ಹೆಚ್ಚಾಗುತ್ತಿದೆ. ಹಾಗಾಗಿ ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಡಬೇಕು, ಇಲ್ಲದಿದ್ದರೇ ದೊಡ್ಡ ಅನಾಹುತಗಳು ಕಟ್ಟಿಟ್ಟ ಬುತ್ತಿ.

Most Read Articles

Kannada
English summary
The father made a video and shared it while driving the car sitting next to his minor son
Story first published: Wednesday, October 12, 2022, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X