ಹೆಲ್ಮೆಟ್ ಇಲ್ಲದೆ ದಿ ಗ್ರೇಟ್ ಖಲಿ ಬೈಕ್ ರೈಡ್: ಚಿಕ್ಕದಾಗಿ ಕಂಡ ಬೃಹತ್‌ಕಾರದ ಹಾರ್ಲೆ-ಡೇವಿಡ್ಸನ್ ಬೈಕ್

ಹಾರ್ಲೆ-ಡೇವಿಡ್ಸನ್ (Harley Davidson) ಬೈಕ್ ಅನ್ನು ಚಿಕ್ಕ ಬೈಕ್‌ನಂತೆ ಮಾಡಬಲ್ಲವರು ಯಾರಾದರೂ ಇದ್ದರೆ, ಅದು ದಿ ಗ್ರೇಟ್ ಖಲಿಯೇ (The Great Khali) ಆಗಿರಬೇಕು. ಮಾಜಿ WWE ಕುಸ್ತಿಪಟು ಇತ್ತೀಚೆಗೆ ಚಂಡೀಗಢದಲ್ಲಿ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ ಅನ್ನು ರೈಡ್ ಮಾಡಿದ್ದಾರೆ. ಅವರು ಹೆಲ್ಮೆಟ್ ಇಲ್ಲದೆ ಈ ಬೈಕ್ ಅನ್ನು ರೈಡ್ ಮಾಡಿದ್ದಾರೆ.

ಹೆಲ್ಮೆಟ್ ಇಲ್ಲದೆ ಭಾರತೀಯ ರಸ್ತೆಗಳಲ್ಲಿ ಬೈಕಿನಲ್ಲಿ ಸಂಚಾರ ಮಾಡುವುದು ಅಪರಾಧವಾಗಿದೆ. ಈ ವೀಡಿಯೊವನ್ನು ಮಾಜಿ WWE ಕುಸ್ತಿಪಟು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ಬೈಕ್ ಅಗಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.26.56 ಲಕ್ಷವಾಗಿದೆ.

The Great Khali

ಖಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೆರ್ ಮಾಡಿಕೊಂದ ವೀಡಿಯೊವು ಅವರು ಬೃಹತ್ ಬೈಕ್ ಅನ್ನು ಸುಲಭವಾಗಿ ಓಡಿಸುತ್ತಿರುವುದನ್ನು ತೋರಿಸುತ್ತದೆ. ಇದರ ಸಂಪೂರ್ಣ ಗಾತ್ರವು ಬೈಕ್ ಅನ್ನು ಮಗುವಿನ ಬೈಕಿನಂತೆ ಕಾಣುವಂತೆ ಮಾಡುತ್ತದೆ. ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟ್‌ಟೇಲ್ ಕ್ಲಾಸಿಕ್ ಯಾವುದೇ ರೀತಿಯಿಂದಲೂ ಸಣ್ಣ ಬೈಕ್ ಅಲ್ಲ. ಇದು 1048 ಎಂಎಂ ಎತ್ತರ, 2405 ಎಂಎಂ ಉದ್ದ ಮತ್ತು 955 ಎಂಎಂ ಅಗಲವಿದೆ.

ಹಾರ್ಲೆ ಬೈಕ್‌ನ ಸೀಟ್ ಎತ್ತರವು ಸುಮಾರು 700 ಎಂಎಂ ಆಗಿದೆ. ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ 347 ಕೆಜಿ ತೂಕವನ್ನು ಹೊಂದಿದೆ. ಇ ಹೆರಿಟೇಜ್ ಸಾಫ್ಟ್‌ಟೇಲ್ ಕ್ಲಾಸಿಕ್‌ನ ವೀಲ್‌ಬೇಸ್ 1635 ಎಂಎಂ, 16 ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ ಮತ್ತು 131 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಹಾರ್ಲೆ ಡೇವಿಡ್‌ಸನ್ ಹೆರಿಟೇಜ್ ಸಾಫ್ಟ್‌ಟೇಲ್ ಕ್ಲಾಸಿಕ್ ದೈತ್ಯ 1,690 cc V-ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

The Great Khali

ಇದು ಭಾರತದಲ್ಲಿ ಮಾರಾಟವಾಗುವ ಕೆಲವು ಎಸ್‍ಯುವಿಗಳಿಗಿಂತ ದೊಡ್ಡದಾಗಿದೆ. ಈ ಎಂಜಿನ್ 65 bhp ಪವರ್ ಮತ್ತು 124 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಬೈಕ್ 18 ಕಿ.ಮೀ ಮೈಲೇಜ್ ಅನ್ನು ಎಂದು ಹಾರ್ಲೆ ಹೇಳಿಕೊಂಡಿದೆ.

ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ ಅದರ ಬೃಹತ್ ಗಾತ್ರದ ಕಾರಣದಿಂದಾಗಿ ಸಸ್ಪೆನ್ಷನ್ ಸೆಟಪ್ 49 ಎಂಎಂ ಟೆಲಿಸ್ಕೋಪಿಕ್ ಸ್ಟೀಲ್ ಲೇಸ್ಡ್ ಫ್ರಂಟ್ ಫೋರ್ಕ್ಸ್ ಮತ್ತು ಹೈಡ್ರಾಲಿಕ್ ಪ್ರಿಲೋಡ್ ಹೊಂದಾಣಿಕೆಯೊಂದಿಗೆ ಹಿಂಭಾಗದ ಮೊನೊಶಾಕ್ ಅನ್ನು ಒಳಗೊಂಡಿದೆ. ಈ ಬೈಕನ್ನು ನಿಲ್ಲಿಸಲು ದೊಡ್ಡ ಬ್ರೇಕಿಂಗ್ ಶಕ್ತಿಯ ಅಗತ್ಯವಿದೆ. ಇದರಲ್ಲಿ 292 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಮುಂಭಾಗದಲ್ಲಿ 4 ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ 2 ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ನೀಡಲಾಗುತ್ತದೆ.

ಹೊಸ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ ಬ್ಲೂ, ರೆಡ್, ವೈಟ್, ಯೆಲ್ಲೋ, ಮ್ಯಾಟ್ ಬ್ಲ್ಯಾಕ್, ಡಾರ್ಕ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಸೇರಿದಂತೆ ಏಳು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ನೀಡುತ್ತದೆ. ಈ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ ತಮ್ಮ ವಿಭಾಗದಲ್ಲಿ ಟ್ರಯಂಫ್ ಥಂಡರ್‌ಬರ್ಡ್ ಮತ್ತು ಡುಕಾಟಿ ಎಕ್ಸ್‌ಡೈವೆಲ್‌ಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನು ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಹೊಸ ಬಿರುಗಾಳಿ ಎಬ್ಬಿಸಿದೆ. 2023ರ ಹಾರ್ಲೆ-ಡೇವಿಡ್ಸನ್ X440 ಬೈಕಿಗೆ ಜುಲೈ 4 ರಂದು ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು. ಈ ಬೈಕಿಗೆ 25,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದ್ದಾರೆ.

ಇದರಲ್ಲಿ 65 ಪ್ರತಿಶತದಷ್ಟು ಟಾಪ್-ಎಂಡ್ S ವೇರಿಯಂಟ್‌ಗೆ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೆ, ತಯಾರಕರು ಅದರ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ವಿತರಣೆ ಪ್ರಾರಂಭವಾಗಲಿದೆ. ಬಹುಬೇಡಿಕೆಯ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಟೆಸ್ಟ್ ಡ್ರೈವ್ ಪ್ರಾರಂಭವಾಗಿದೆ. ಇನ್ನು ಈ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ.

Article Published On: Wednesday, September 13, 2023, 8:30 [IST]
English summary
The great khali riding harley davidson bike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+