ಸಾರ್ವಕಾಲಿಕ 15 ಶ್ರೇಷ್ಠ ಯಮಹಾ ಬೈಕ್ಸ್
ಯಮಹಾ ಮೋಟಾರುಸೈಕಲ್ ಗಳು ಆಗಲೇ ದೇಶ ನಿವಾಸಿಗಳಿಗೆ ಚಿರ ಪರಿಚಿತವಾಗಿದೆ. ವೃತ್ತಾಕಾರದ ಹೆಡ್ ಲೈಟ್, ವಿಶಿಷ್ಟ ಎಂಜಿನ್ ಶಬ್ದದೊಂದಿಗೆ ರಸ್ತೆಯಲ್ಲಿ ಸರ್ರನೆ ನುಗ್ಗಿ ಬರುವ ಯಮಹಾ ಬೈಕ್ ಗಳು ಒಂದು ಕ್ಷಣ ರೋಚಕತೆಗೆ ಸಾಕ್ಷಿಯಾಗಿದೆ.
ಆರ್ ಎಕ್ಸ್100, ಆರ್ ಡಿ350 ಹಾಗೂ ಆರ್ ಎಕ್ಸ್135 ಯಮಹಾದ ಕೆಲವು ಐಕಾನಿಕ್ ಮಾದರಿಗಳಾಗಿವೆ. 1970 ಹಾಗೂ 80ರ ದಶಕದಲ್ಲಿ ಇದು ದೇಶದ ರಸ್ತೆಯಲ್ಲಿ ಮಾಡಿದ ಸದ್ದು ಅಷ್ಟಿಷ್ಟಲ್ಲ. ಕಾಲ ಬದಲಾಗಿದೆ. ಬದಲಾವಣೆಯೇ ಜಗತ್ತಿನ ನಿಯಮ ಎಂಬಂತೆ ಯಮಹಾ ಬೈಕ್ ಗಳಲ್ಲೂ ಬದಲಾವಣೆಯಾಗಿದ್ದು, ಆಧುನಿಕ ಸ್ಪರ್ಶ ನೀಡಲಾಗಿದೆ. ಈಗ ಸಮಯ ಕೂಡಿಬಂದಿದ್ದು, ಇಂದಿನ ಲೇಖನದಲ್ಲಿ ಸಾರ್ವಕಾಲಿಕ 15 ಶ್ರೇಷ್ಠ ಯಮಹಾ ಮೋಟಾರ್ ಸೈಕಲ್ ಗಳ ಬಗ್ಗೆ ಚರ್ಚಿಸಲಿದ್ದೇವೆ. ಹಾಗೊಂದು ವೇಳೆ ನೀವು ಯಾವತ್ತಾದರೂ ಯಮಹಾ ಬೈಕ್ ಓಡಿಸಿದ್ದರೆ ನಿಮ್ಮ ಅಮೂಲ್ಯ ಅನುಭವ ಸಂಪತ್ತನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯರಿದಿ.

ಯಮಹಾ ವೈಡಿ2
ಬಿಡುಗಡೆಯಾದ ವರ್ಷ: 1959
ಎಂಜಿನ್ ಸಾಮರ್ಥ್ಯ: 247 ಸಿಸಿ
ಅಶ್ವಶಕ್ತಿ: 14.5
ಭಾರ: 140 ಕೆ.ಜಿ
ಗರಿಷ್ಠ ವೇಗ: 113 km/h
ದೇಶ: ಜಪಾನ್

ಯಮಹಾ ವೈಡಿ2
ವೈಡಿ2 ಯಮಹಾದ ಚೊಚ್ಚಲ ಟು ಸ್ಟ್ರೋಕ್ ಟ್ವಿನ್ ಸಿಲಿಂಡರ್ ಮೋಟಾರ್ ಸೈಕಲ್ ಆಗಿದೆ. ಆಡ್ಲೆರ್ ಎಂಬಿಯಿಂದ ಸ್ಪೂರ್ತಿ ಪಡೆದ ಈ ಬೈಕ್ ನಲ್ಲಿ ಡಿ ಎಂಬುದು ಎಂಜಿನ್ ಸಾಮರ್ಥ್ಯವನ್ನು (250) ಸೂಚಿಸುತ್ತದೆ. ಇದು ಪಶ್ಚಿಮ ರಾಷ್ಟ್ರಗಳಿಗೆ ರಫ್ತಾಗಿರುವ ಮೊದಲ ಬೈಕ್ ಕೂಡಾ ಆಗಿದೆ. ಸುತ್ತುವರಿದ ಚೈನ್, ಸಂಯೋಜಿತ ಡೈನಮೋ, ಎಲೆಕ್ಟ್ರಿಕ್ ಸ್ಟ್ಯಾರ್ಟರ್ ಹಾಗೂ ಆಳವಾದ ಮಡ್ ಗಾರ್ಡ್ ಇದರ ವಿಶೇಷತೆಯಾಗಿದೆ.

ಯಮಹಾ ವೈಡಿಎಸ್3ಸಿ ಬಿಗ್ ಬಿಯರ್
ಬಿಡುಗಡೆಯಾದ ವರ್ಷ: 1965
ಎಂಜಿನ್ ಸಾಮರ್ಥ್ಯ: 246 ಸಿಸಿ
ಅಶ್ವಶಕ್ತಿ: 21
ಭಾರ: 159 ಕೆ.ಜಿ
ಗರಿಷ್ಠ ವೇಗ: 142 km/h
ದೇಶ: ಜಪಾನ್

ದೈತ್ಯಕಾರವನ್ನು ಹೊಂದಿರುವ ಯಮಹಾ ವೈಡಿಎಸ್3ಸಿ ಬಿಗ್ ಬಿಯರ್ ಬೈಕ್ ನಲ್ಲಿ ಎಕ್ಸಾಸ್ಟ್ ರಂಧ್ರವು ದೊಡ್ಡ ರಾಡ್ ನಂತೆ ಕಾಣಿಸುತ್ತದೆ. ಇದು ಆಟೋಮ್ಯಾಟಿಕ್ ಒಯಿಲ್ ಸಿಸ್ಟಂ ಹೊಂದಿದೆ ಮೊದಲ ಟು ಸ್ಟ್ರೋಕ್ ಮೋಟಾರ್ ಸೈಕಲ್ ಅಗಿದೆ. 1964ರಲ್ಲಿ ರೋಡ್ ರೇಸಿಂಗ್ ಗೆಲ್ಲುವಲ್ಲಿಯೂ ಇದು ಯಮಹಾಗೆ ನೆರವಾಗಿತ್ತು.

ಯಮಹಾ ಟಿಆರ್3
ಬಿಡುಗಡೆಯಾದ ವರ್ಷ: 1972
ಎಂಜಿನ್ ಸಾಮರ್ಥ್ಯ: 347 ಸಿಸಿ
ಅಶ್ವಶಕ್ತಿ: 58
ಭಾರ: 107 ಕೆ.ಜಿ
ಗರಿಷ್ಠ ವೇಗ: ಲಭ್ಯವಿಲ್ಲ
ದೇಶ: ಜಪಾನ್

1960ರ ದಶಕದ ಅಂತ್ಯದಲ್ಲಿ ಅನೇಕ ಜಪಾನ್ ಫಾಕ್ಟರಿ ತಂಡಗಳು ಅಂತರಾಷ್ಟ್ರೀಯ ಸ್ಪರ್ಧೆಯಿಂದ ಹಿಂಜರಿಯ ತೊಡಗಿತು. ಇದು ರೇಸ್ ಗಳಲ್ಲಿ ಯಮಹಾ ಟು ಸ್ಟ್ರೋಕ್ ಎಂಜಿನ್ ಬೈಕ್ ಗಳಿಗೆ ಅಧಿಪತ್ಯ ಸ್ಥಾಪಿಸಲು ನೆರವಾಗಿತ್ತು. ಅಷ್ಟೇ ಅಲ್ಲದೆ ಡೇಟೋನಾ 200 ಟೂರ್ನಮೆಂಟ್ ಪ್ರಶಸ್ತಿ ಗೆದ್ದ ಯಮಹಾದ ಅತ್ಯಂತ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್ ಎಂಬ ಗೌರವಕ್ಕೂ ಟಿಆರ್3 ಪಾತ್ರವಾಗಿತ್ತು.

ಯಮಹಾ ವೈಝಡ್250
ಬಿಡುಗಡೆಯಾದ ವರ್ಷ: 1974
ಎಂಜಿನ್ ಸಾಮರ್ಥ್ಯ: 246 ಸಿಸಿ
ಅಶ್ವಶಕ್ತಿ: 21
ಭಾರ: 159 ಕೆ.ಜಿ
ಗರಿಷ್ಠ ವೇಗ: 141 km/h
ದೇಶ: ಜಪಾನ್

ಯಮಹಾ ವೈಝಡ್250
1973ನೇ ಇಸವಿಯಲ್ಲಿ ಮೊಟೊಕ್ರಾಸ್ ವರ್ಲ್ ಚಾಂಪಿಯನ್ ಶಿಪ್ ಗೆಲುವಿನ ನಂತರ ಮೊದಲ ಬಾರಿಗೆ ವೈಝಡ್250 ತನ್ನೆಲ್ಲ ರಸ್ತೆ ಹಾಗೂ ಸ್ಪರ್ದೆಯ ಮೋಟಾರುಸೈಕಲ್ ಗಳಿಗೆ ಯಮಹಾ ಮೊನೊಶಾಕ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಪರಿಚಯಿಸಿತ್ತು. ಇದೇ ಕಾರಣಕ್ಕಾಗಿ ಆ ಕಾಲಘಟ್ಟದಲ್ಲಿ ನಿರ್ಮಾಣವಾದ ಅತ್ಯುತ್ತಮ ಹಾಗೂ ಅತ್ಯಂತ ಜನಪ್ರಿಯ ಮೋಟಾರುಸೈಕಲ್ ಎಂದೆನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಯಮಹಾ ಆರ್ ಡಿ350ಬಿ
ಬಿಡುಗಡೆಯಾದ ವರ್ಷ: 1973
ಎಂಜಿನ್ ಸಾಮರ್ಥ್ಯ: 347 ಸಿಸಿ
ಅಶ್ವಶಕ್ತಿ: 39
ಭಾರ: 154 ಕೆ.ಜಿ
ಗರಿಷ್ಠ ವೇಗ: 169 km/h
ದೇಶ: ಜಪಾನ್

ಯಮಹಾ ಆರ್ ಡಿ350ಬಿ
1970ರ ದಶಕದಲ್ಲಿ ತನಗಿಂತಲೂ ಹೆಚ್ಚಿನ ಸಾಮರ್ಥ್ಯದ ಬೈಕ್ ಗಳನ್ನು ಹಿಮ್ಮೆಟ್ಟಿಸುವಲ್ಲಿ ಯಮಹಾ ಯಶಸ್ವಿಯಾಗಿತ್ತು. ಟು ಸ್ಟ್ರೋಕ್ ಟ್ವಿನ್ ಶ್ರೇಣಿಯ ಮೋಟಾರುಸೈಕಲ್ ಗಳನ್ನು ಅಪ್ ಗ್ರೇಡ್ ಮಾಡಿ ಗರಿಷ್ಠ ನಿರ್ವಹಣೆ ಕಾಪಾಡಿರುವುದೇ ಬಳಿಕ ಇತಿಹಾಸ ಪುಟಗಳಲ್ಲಿ ಹೆಸರು ಮಾಡುವಲ್ಲಿ ಯಮಹಾ ಆರ್ ಡಿ ಬೈಕ್ ಗಳಿಗೆ ಸಾಧ್ಯವಾಗಿತ್ತು.

1983ರಲ್ಲಿ ಭಾರತಕ್ಕೆ ಲಗ್ಗೆಯಿಟ್ಟ ಈ ಬೈಕ್ ಕೆಲವೇ ಸಮಯದಲ್ಲಿ ಅದ್ಭುತ ನಿರ್ವಹಣೆ ಕಾಯ್ದುಕೊಂಡಿತ್ತು. ಅತ್ಯುತ್ತಮ ಇಂಧನ ಕ್ಷಮತೆಯು ಯಮಹಾ ಸಂಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಯಮಹಾ ಟಿಝಡ್250
ಬಿಡುಗಡೆಯಾದ ವರ್ಷ: 1973
ಎಂಜಿನ್ ಸಾಮರ್ಥ್ಯ: 247 ಸಿಸಿ
ಅಶ್ವಶಕ್ತಿ: 53
ಭಾರ: 108 ಕೆ.ಜಿ
ಗರಿಷ್ಠ ವೇಗ: 225 km/h
ದೇಶ: ಜಪಾನ್

ಯಮಹಾ ಟಿಝಡ್250
ಇದೇ ಕಾಲಘಟ್ಟದಲ್ಲಿ ಪರಿಚಯವಾದ ಕಡಿಮೆ ಸಾಮರ್ಥ್ಯದ ಫುಲ್ ಫೇರ್ಡ್ ವರ್ಷನ್ ಬೈಕ್ ಇದಾಗಿದೆ. ಇದು ಏರ್ ಕೂಲ್ಡ್ ಟಿಡಿ ಮಾದರಿಗಳ ಸ್ಥಾನವನ್ನು ಈ ವಾಟರ್ ಕೂಲ್ಡ್ ಟಿಝಡ್ ರೇಸರ್ ತುಂಬಿಕೊಂಡಿತ್ತು.

ಯಮಹಾ ಒಡಬ್ಲ್ಯು48
ಎಂಜಿನ್ ಸಾಮರ್ಥ್ಯ: 498 ಸಿಸಿ
ಅಶ್ವಶಕ್ತಿ: 130
ಭಾರ: 145 ಕೆ.ಜಿ
ಗರಿಷ್ಠ ವೇಗ: 290 km/h
ದೇಶ: ಜಪಾನ್

ಯಮಹಾ ಒಡಬ್ಲ್ಯು48
ಮೋಟಾರುಸೈಕಲ್ ದಂತಕಥೆ ಗಿಯಾಕೊಮೊ ಆಗಸ್ಟಿನಿ ಮತ್ತು ಕೆನ್ನಿ ರಾಬರ್ಟ್ ನೆಚ್ಚಿನ ಬೈಕ್ ಆಗಿರುವ ಅನೇಕ ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಟ್ವಿನ್ ಮಿಕುನಿ ಕಾರ್ಬ್ಯುರೇಟರ್ ಜೊತೆಗಿನ ಈ ಇನ್ ಲೈನ್ ಟು ಸ್ಟ್ರೋಕ್ ಫೋರ್ ಸಿಲಿಂಡರ್ ಮೋಟಾರ್ ಸೈಕಲ್ (ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್) ಗಂಟೆಗೆ 290 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ .

ಯಮಹಾ ಆರ್ ಡಿ250 ಎಲ್ ಸಿ
ಬಿಡುಗಡೆಯಾದ ವರ್ಷ: 1980
ಎಂಜಿನ್ ಸಾಮರ್ಥ್ಯ: 247 ಸಿಸಿ
ಅಶ್ವಶಕ್ತಿ: 35
ಭಾರ: 139 ಕೆ.ಜಿ
ಗರಿಷ್ಠ ವೇಗ: 171 km/h
ದೇಶ: ಜಪಾನ್

ಯಮಹಾ ಆರ್ ಡಿ250 ಎಲ್ ಸಿ
ಲಿಕ್ವಿಡ್ ಕೂಲ್ಡ್ ಪವರ್ ಹಾಗೂ ಮೊನೊಕಾಕ್ ಸಸ್ಪೆನ್ಷನ್ ಎಲ್ಲವೂ ಆರ್ ಡಿ250 ಎಲ್ ಸಿ ಮಾದರಿಯ ವಿಶಿಷ್ಟತೆಯಾಗಿದ್ದವು. 1980ರ ದಶಕದಲ್ಲಿ ಇದು ಎಲ್ಲ ಯುವ ಜನಾಂಗದ ಕನಸಿನ ಬೈಕಾಗಿತ್ತು.

ಯಮಹಾ ಆರ್ ಝಡ್500
ಬಿಡುಗಡೆಯಾದ ವರ್ಷ: 1984
ಎಂಜಿನ್ ಸಾಮರ್ಥ್ಯ: 499 ಸಿಸಿ
ಅಶ್ವಶಕ್ತಿ: 87
ಭಾರ: 180 ಕೆ.ಜಿ
ಗರಿಷ್ಠ ವೇಗ: 216 km/h
ದೇಶ: ಜಪಾನ್

ಪರಿಪೂರ್ಣ ರೇಸ್ ಮೋಟಾರುಸೈಕಲ್ ಆಗಿರುವ ಯಮಹಾ ಆರ್ ಝಡ್500 ಲಿಕ್ವಿಡ್ ಕೂಲ್ಡ್ ವಿ4 ಟು ಸ್ಟ್ರೋಕ್ ಎಂಜಿನ್ ಪಡೆದುಕೊಂಡಿದೆ. ಇದು ಮಾರಾಟ ಜಗತ್ತಿನೆಲ್ಲೆಡೆಗೆ ವಿಸ್ತರಿಸಿತ್ತು. ಜಪಾನ್ ನಲ್ಲಿ ಆರ್ ಝಡ್ ವಿ500 ಎನಿಸಿಕೊಂಡಿದ್ದ ಬೈಕ್ ಉತ್ತರ ಅಮೆರಿಕ ತಲುಪಿದಾಗ ಆರ್ ಝಡ್500 ಹಾಗೂ ಬ್ರಿಟನ್ ನಲ್ಲಿ ಆರ್ ಡಿ500 ಎಂದೆನಿಸಿಕೊಂಡಿತ್ತು. ಅಂತೆಯೇ ಡ್ಯುಯಲ್ ಎಕ್ಸಾಸ್ಟ್ ಸೇವೆಯನ್ನು ಪಡೆದುಕೊಂಡಿದೆ.

ಯಮಹಾ ವಿ ಮ್ಯಾಕ್ಸ್
ಬಿಡುಗಡೆಯಾದ ವರ್ಷ: 1985
ಎಂಜಿನ್ ಸಾಮರ್ಥ್ಯ: 1198 ಸಿಸಿ
ಅಶ್ವಶಕ್ತಿ: 145
ಭಾರ: 270 ಕೆ.ಜಿ
ಗರಿಷ್ಠ ವೇಗ: 230 km/h
ದೇಶ: ಜಪಾನ್

1980ರ ದಶಕ ಬೈಕ್ ಪ್ರೇಮ ವ್ಯಾಪಕವಾಗಿ ವ್ಯಾಪಿಸಿಕೊಳ್ಳುತ್ತಿರುವ ಸಮಯ. ಈ ವೇಳೆಯಲ್ಲಿ ಅತ್ಯಂತ ಶಕ್ತಿಶಾಲಿ ದೈತ್ಯಕಾರದ ಗಾಡಿಯೊಂದು ತಲೆದೋರಿತ್ತು. ಅದುವೇ ವಿ ಮ್ಯಾಕ್ಸ್. ಇದು ತನ್ನ ವೇಗವರ್ಧನೆಗಾಗಿ ಹೆಸರು ಮಾಡಿದ್ದು, ವಿ4 ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ.

ಯಮಹಾ ಎಫ್ ಝಡ್ ಆರ್1000
ಬಿಡುಗಡೆಯಾದ ವರ್ಷ: 1987
ಎಂಜಿನ್ ಸಾಮರ್ಥ್ಯ: 1002 ಸಿಸಿ
ಅಶ್ವಶಕ್ತಿ: 125
ಭಾರ: 240 ಕೆ.ಜಿ
ಗರಿಷ್ಠ ವೇಗ: 240 km/h
ದೇಶ: ಜಪಾನ್

ಯಮಹಾ ಎಫ್ ಝಡ್ ಆರ್1000
ಇತರೆಲ್ಲ ಯಮಹಾ ಮಾದರಿಗಳನ್ನು ಹೋಲಿಸಿದಾಗ ಎಫ್ ಝಡ್ ಆರ್1000 ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಈ ಸೂಪರ್ ಸ್ಪೋರ್ಟ್ ಬೈಕ್ ನಲ್ಲಿ ಲಿಕ್ವಿಡ್ ಕೂಲ್ಡ್ ಇನ್ ಫೋರ್ ಸಿಲಿಂಡರ್ ಎಂಜಿನ್ ಜೊತೆಗೆ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಆಳವಡಿಸಲಾಗಿತ್ತು.

ಯಮಹಾ ಜಿಟಿಎಸ್1000
ಬಿಡುಗಡೆಯಾದ ವರ್ಷ: 1993
ಎಂಜಿನ್ ಸಾಮರ್ಥ್ಯ: 1002 ಸಿಸಿ
ಅಶ್ವಶಕ್ತಿ: 100
ಭಾರ: 251 ಕೆ.ಜಿ
ಗರಿಷ್ಠ ವೇಗ: 213 km/h
ದೇಶ: ಜಪಾನ್

ಯಮಹಾ ಜಿಟಿಎಸ್1000
1993ರಲ್ಲಿ ಯಮಹಾ ಜಿಟಿಎಸ್1000 ಪರಿಚಯವಾಗಿತ್ತು. ಇದರಲ್ಲಿ ವಾಟರ್ ಕೂಲ್ಡ್ ಇನ್ ಲೈನ್ ಫೋರ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಷನ್ ಜೊತೆ ಎಬಿಎಸ್ ವ್ಯವಸ್ಥೆಯು ವಿನೂತನ ಅನುಭವ ನೀಡಿತ್ತು.

ಯಮಹಾ ವೈಝಡ್ ಎಫ್600 ಆರ್6
ಬಿಡುಗಡೆಯಾದ ವರ್ಷ: 1998
ಎಂಜಿನ್ ಸಾಮರ್ಥ್ಯ: 599 ಸಿಸಿ
ಅಶ್ವಶಕ್ತಿ: 98.7
ಭಾರ: 169 ಕೆ.ಜಿ
ಗರಿಷ್ಠ ವೇಗ: 250 km/h
ದೇಶ: ಜಪಾನ್

1990ರ ದಶಕದಲ್ಲಿ 600 ಸಿಸಿ ಬೈಕ್ ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿತ್ತು. ಇದೇ ಸಂದರ್ಭವನ್ನು ನೋಡಿಕೊಂಡು ಆರ್6 ಪ್ರವೇಶವಾಗಿತ್ತು. ಪರಿಣಾಮವೆಂಬಂತೆ ಗರಿಷ್ಠ ಹ್ಯಾಂಡ್ಲಿಂಗ್ ಹಾಗೂ ನಿರ್ವಹಣೆಯಲ್ಲಿ ಯಮಹಾ ಅದ್ಭುತ ಸ್ಥಿರತೆ ಕಾಯ್ದುಕೊಂಡಿತ್ತು.

ಯಮಹಾ ವೈಝಡ್ ಎಫ್1000 ಆರ್1
ಬಿಡುಗಡೆಯಾದ ವರ್ಷ: 1998
ಎಂಜಿನ್ ಸಾಮರ್ಥ್ಯ: 998 ಸಿಸಿ
ಅಶ್ವಶಕ್ತಿ: 150
ಭಾರ: 190 ಕೆ.ಜಿ
ಗರಿಷ್ಠ ವೇಗ: 266 km/h
ದೇಶ: ಜಪಾನ್

ಯಮಹಾ ವೈಝಡ್ ಎಫ್1000 ಆರ್1
ವಿನ್ಯಾಸದ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗದ ಯಮಹಾ 1998 ಅತ್ಯಂತ ಜನಪ್ರಿಯ ಆರ್1 ಮಾದರಿಯನ್ನು ಪರಿಚಿಸಿತ್ತು. ಒಂದು ಪರಿಪೂರ್ಣ ಕ್ರೀಡಾ ಬೈಕ್ ಆಗಿರುವ ಯಮಹಾ ಆರ್1ನಲ್ಲಿ ಹಗುರ ಭಾರದೊಂದಿಗೆ ಹೆಚ್ಚು ಬಲಶಾಲಿ ಹಾಗೂ ಅತಿ ವೇಗದ ತಂತ್ರಗಾರಿಕೆಯನ್ನು ಅನುಸರಿಸಲಾಗಿತ್ತು.

ಯಮಹಾ ಆರ್ ಎಕ್ಸ್100
ಬಿಡುಗಡೆಯಾದ ವರ್ಷ: 1985
ಎಂಜಿನ್ ಸಾಮರ್ಥ್ಯ: 98 ಸಿಸಿ
ಅಶ್ವಶಕ್ತಿ: 11
ಭಾರ: 95 ಕೆ.ಜಿ
ಗರಿಷ್ಠ ವೇಗ: 113 km/h
ದೇಶ: ಜಪಾನ್

ಭಾರತದಲ್ಲಿ ನಿರ್ವಹಣಾ ಬೈಕ್ ಗಳೆಂದರೇನು ? ಚಾಲನಾ ಅನುಭವ ಹೇಗಿರುತ್ತೇ? ಎಂಬುದನ್ನು ದೇಶದ ಜನರಿಗೆ ಮೊದಲ ಬಾರಿಗೆ ಕಳಿಸಿ ಕೊಟ್ಟಿರುವುದೇ ಯಮಹಾ ಆರ್ ಎಕ್ಸ್100 ಆಗಿದೆ. ಇದೇ ಕಾರಣಕ್ಕಾಗಿ ಈಗಲೂ ಸಾರ್ವಕಾಲಿಕ ಯಮಹಾ ಬೈಕ್ ಗಳಲ್ಲಿ ಆರ್ ಎಕ್ಸ್100 ಮಾದರಿಗೆ ಮೊದಲ ಸ್ಥಾನವಿದೆ. ಪ್ರಸ್ತುತ ಈ ಎರಡು ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಬೈಕ್ ಉತ್ಪಾದನೆ ಸ್ಥಗಿತಗೊಂಡರೂ ಈಗಲೂ ರಸ್ತೆಗಳಲ್ಲಿ ಓಡಾಡುತ್ತಿರುವುದನ್ನು ಕಾಣಬಹುದಾಗಿದೆ.


Click it and Unblock the Notifications