Just In
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 3 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- News
ಬೆಂಗಳೂರು ಟ್ರಾಫಿಕ್ನಿಂದಾಗಿ ಆಂಬುಲೆನ್ಸ್ನಲ್ಲಿ ಹಸುಗೂಸು ಸಾವು!
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರಾಫಿಕ್ ಜಾಮ್‌ಗೆ ಬೇಸತ್ತು ಬಹುಕೋಟಿ ಕಾರಿಳಿದು ಆಟೋದಲ್ಲಿ ಹೊರಟ ಮರ್ಸಿಡಿಸ್ ಬೆಂಝ್ ಸಿಇಒ
ಕೋವಿಡ್ ನಂತರ ದೇಶೀಯ ಆಟೋ ಉದ್ಯಮ ಉತ್ತಮ ಬೆಳವಣಿಗೆ ಕಾಣುತ್ತಿದೆ. ವಿಶ್ವ ಆಟೋ ಕ್ಷೇತ್ರದಲ್ಲಿ ಭಾರತ ಮೂರನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಿದೆಯಾದರೂ, ಯಾರೂ ಊಹಿಸದ ವಿಷಯವೊಂದನ್ನು ಇಲ್ಲಿ ಗಮನಿಸಬೇಕಿದೆ. ಅದೇನೆಂದರೆ ಮೀತಿಮೀರುತ್ತಿರುವ ಟ್ರಾಫಿಕ್ ಜಾಮ್.

ಹೌದು ಪ್ರತಿ ವರ್ಷ ಲಕ್ಷಾಂತರ ವಾಹನಗಳು ರಸ್ತೆಗಿಳಿಯುತ್ತಿವೆ. ಇದರ ಪ್ರಭಾವ ದೇಶದ ಪ್ರತಿಯೊಂದು ನಗರದ ಮೇಲೂ ಇದೆ. ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಎಂಬುದು ಪ್ರಮುಖ ಸಮಸ್ಯೆಯಾಗಿದೆ. ಸಿನಿಮಾ ನಟರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಟ್ರಾಫಿಕ್ ಜಾಮ್‌ನಲ್ಲಿ ಕಾಯಲೇಬೇಕು.

ಟ್ರಾಫಿಕ್‌ನಲ್ಲಿ ಸಿಲುಕಿದರೆ ಎಲ್ಲರೂ ಸಮಾನರೇ ಎಂಬುದಕ್ಕೆ ಇತ್ತೀಚಿನ ಘಟನೆಯೊಂದು ನಿದರ್ಶನವಾಗಿದೆ. ಐಷಾರಾಮಿ ಆಟೋಮೊಬೈಲ್ ಕಂಪನಿಯ ಉನ್ನತ ಕಾರ್ಯನಿರ್ವಾಹಕರೊಬ್ಬರು ತಮ್ಮ ಗಮ್ಯಸ್ಥಾನವನ್ನು ತಲುಪಲು ಕಾರಿಳಿದು ಆಟೋ-ರಿಕ್ಷಾದಲ್ಲಿ ತೆರಳಿದ್ದಾರೆ.

ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಟಿನ್ ಶ್ವೆಂಕ್ ಅವರು ಇತ್ತೀಚೆಗೆ ಪುಣೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕಿರಿಕಿರಿ ಅನುಭವಿಸಿದ್ದಾರೆ. ಟ್ರಾಫಿಕ್ ದಟ್ಟಣೆಯ ಸಮಯದಲ್ಲಿ ತಮ್ಮ ಮರ್ಸಿಡಿಸ್ ಎಸ್-ಕ್ಲಾಸ್ ಕಾರಿನಿಂದ ಹೊರಬಂದು, ಕೆಲವು ಕಿ.ಮೀಗಳವರೆಗೆ ನಡೆದು ನಂತರ ಆಟೋ-ರಿಕ್ಷಾದಲ್ಲಿ ತೆರಳಿದ್ದಾರೆ.
ಈ ಕುರಿತು ಶ್ವೆಂಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಆಟೋದಲ್ಲಿ ಪ್ರಯಾಣಿಸಿದ ಫೋಟೋವೊಂದನ್ನು ಹಂಚಿಕೊಂಡು, "ನಿಮ್ಮ ಎಸ್-ಕ್ಲಾಸ್ ಕಾರು ಅದ್ಭುತವಾದ ಪುಣೆ ರಸ್ತೆಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ನೀವು ಏನು ಮಾಡುತ್ತೀರಿ? ಬಹುಶಃ ಕಾರಿನಿಂದ ಇಳಿದು, ಕೆಲವು ಕಿ.ಮೀಗಳವರೆಗೆ ನಡೆಯಲು ಪ್ರಾರಂಭಿಸಿ, ನಂತರ ರಿಕ್ಷಾವನ್ನು ಹಿಡಿಯಬಹುದೇ? ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟ್ ಅತಿ ಕಡಿಮೆ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಇನ್‌ಸ್ಟಾ ಬಳಕೆದಾರರು ಆಟೋರಿಕ್ಷಾ ಅನುಭವದ ಬಗ್ಗೆ ಕೇಳಿದರೆ, ಇನ್ನೂ ಕೆಲವರು ಸಿಇಒ ಅವರ ವಿನಮ್ರ ಸ್ವಭಾವಕ್ಕೆ ಶ್ಲಾಘಿಸಿ ಅವರಿಗೆ ಶುಭ ಹಾರೈಸಿದರು. ಇನ್ನು ಕೆಲವರು ಭಾರತದ ಟ್ರಾಫಿಕ್‌ಗೆ ಹೊಂದಿಕೊಳ್ಳಲು ಹೊಸ ಸಣ್ಣ ಕಾರನ್ನು ಬಿಡುಗಡೆ ಮಾಡಲು ಸಲಹೆ ನೀಡಿದರು.

Schwenk 2006 ರಿಂದ ಬ್ರ್ಯಾಂಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 2018 ರಲ್ಲಿ ಮರ್ಸಿಡಿಸ್ ಬೆಂಝ್ ಇಂಡಿಯಾದ CEO ಆದರು. ಅದಕ್ಕೂ ಮೊದಲು ಅವರು Mercedes-Benz ಚೀನಾದ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಮೊದಲ ಮೇಡ್ ಇನ್ ಇಂಡಿಯಾ ಕಾರು ಬಿಡುಗಡೆ
ಮೊದಲ 'ಮೇಡ್ ಇನ್ ಇಂಡಿಯಾ' ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಆದ ಇಕ್ಯೂಎಸ್ 580 4 ಮ್ಯಾಟಿಕ್ ಬಿಡುಗಡೆಗಾಗಿ ಶ್ವೆಂಕ್ ಭಾರತದಲ್ಲಿದ್ದಾರೆ. ಈ ಕಾರನ್ನು ಪುಣೆಯ ಚಕನ್‌ನಲ್ಲಿರುವ ಜರ್ಮನ್ ವಾಹನ ತಯಾರಕರ ಉತ್ಪಾದನಾ ಘಟಕದಲ್ಲಿ ಬಿಡುಗಡೆ ಮಾಡಲಾಯಿತು. ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಸಮಾರಂಭದಲ್ಲಿ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಭಾಗವಹಿಸಿದ್ದರು.

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್‌ಗೆ ಎಕ್ಸ್‌ಶೋರೂಂ ಪ್ರಕಾರ ರೂ. 1.55 ಕೋಟಿ ಬೆಲೆ ನಿಗಧಿಪಡಿಸಿದೆ. ಈ ಕಾರು ಹೆಚ್ಚಿನ ಬ್ಯಾಟರಿ ಪ್ಯಾಕ್ ಸೇರಿದಂತೆ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಮಾದರಿಯು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳಲಿದೆ.

ಬ್ಯಾಟರಿ ಮತ್ತು ಮೈಲೇಜ್
ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಮರ್ಸಿಡಿಸ್ ಕಂಪನಿಯು 107.8 kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಎಆರ್‌ಎಐ ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ 857 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಲೆಕ್ಟ್ರಿಕ್ ಮೋಟಾರ್ ಮತ್ತು ಪರ್ಫಾಮೆನ್ಸ್
ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಆಕ್ಸೆಲ್‌ಗೂ ಪ್ರತ್ಯೇಕವಾಗಿ ಶಕ್ತಿ ಪೂರೈಕೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ಗೆ ಸಹಕಾರಿಯಾಗಿದೆ. ಎರಡು ಎಲೆಕ್ಟ್ರಿಕ್ ಮೋಟಾರ್ ಮೂಲಕ ಹೊಸ ಕಾರು 516 ಬಿಎಚ್‌ಪಿ ಮತ್ತು 855 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಹೊಸ ಕಾರು 4.3 ಸೆಕೆಂಡ್‌ಗಳಲ್ಲಿ ಪ್ರತಿಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲದು.

ಈ ಮೂಲಕ ಪ್ರತಿ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಇವಿ ಕಾರು ಮಾದರಿಯು ಡ್ರ್ಯಾಗ್ ಗುಣಾಂಕದಲ್ಲಿ ಕೇವಲ 0.20 ಹೊಂದಿದ್ದು, ಬೃಹತ್ ಗಾತ್ರ ಬ್ಯಾಟರಿ ಪ್ಯಾಕ್ ಚಾರ್ಜ್‌ಗಾಗಿ 200kW ವರೆಗಿನ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ.

200kW ಡಿಸಿ ಫಾಸ್ಟ್ ಚಾರ್ಜರ್‌ಗೆ ಪ್ಲಗ್ ಇನ್ ಮಾಡಿದಾಗ ಇಕ್ಯೂಎಸ್ ತನ್ನ ಬ್ಯಾಟರಿ ಪ್ಯಾಕ್ ಅನ್ನು ಕೇವಲ 31 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದಾಗಿದ್ದು, ಹೋಂ ಚಾರ್ಜರ್‌ನಲ್ಲಿ 7.4kW ಎಸಿ ಚಾರ್ಜಿಂಗ್ ಬಾಕ್ಸ್ ಪ್ಲಗ್ ಮಾಡಿ ಚಾರ್ಜ್ ಮಾಡಿದ್ದಲ್ಲಿ ಹೊಸ ಕಾರು ಶೇ. 10 ರಿಂದ ಶೇ. 100 ರಷ್ಟು ಚಾರ್ಜ್ ಆಗಲು ಕನಿಷ್ಠ 15 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸಾಮಾನ್ಯ ಜನರೇ ಆಗಲಿ ಶ್ರೀಮಂತರೇ ಆಗಲಿ ಟ್ರಾಫಿಕ್‌ನಲ್ಲಿ ಸಿಲುಕಿದರೆ ಎಲ್ಲರೂ ಸಮಾನರೇ ಎಂಬುದಕ್ಕೆ ಮಾರ್ಟಿನ್ ಶ್ವೆಂಕ್ ಅವರ ಘಟನೆಯೊಂದು ನಿದರ್ಶನವಾಗಿದೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಆಂಬುಲನ್ಸ್‌ಗಳಿಗೆ ಕೂಡ ದಾರಿ ಸಿಗುತ್ತಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರಗಳು ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಿದೆ.