ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರತಿಭಾ ಪಾಟೀಲ್ ನಂತರ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಎರಡನೇ ಮಹಿಳೆಯೆಂಬ ಗೌರವಕ್ಕೆ ಪಾತ್ರರಾಗಿರುವ ದ್ರೌಪದಿ ಮುರ್ಮು ಅವರು, ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಒಡಿಸ್ಸಾದ ಬುಡಕಟ್ಟು ಜನಾಂಗದ ಬಹುಸಂಖ್ಯಾತ ಪ್ರದೇಶವಾದ ಮಯೂರ್‌ಭಂಜ್‌ನಲ್ಲಿ 1958 ರಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು, ಭಾರತದ ರಾಷ್ಟ್ರಪತಿ ಸ್ಥಾನವನ್ನು ತಲುಪಲು ಬಹಳಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಇದೀಗ ದೇಶದ ಮೊದಲ ಪ್ರಜೆಯಾಗಿರುವ ಅವರಿಗೆ ಪ್ರಯಾಣದ ವೇಳೆ ಯಾವೆಲ್ಲಾ ಭದ್ರತೆ ಒದಗಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ...

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ವಿಶ್ವದ ಅತ್ಯಂತ ಸುರಕ್ಷಿತ ವಾಹನವೊಂದು ರಾಷ್ಟ್ರಪತಿ ಮುರ್ಮು ಅವರಿಗಾಗಿ ಕಾಯುತ್ತಿದೆ. ಕಳೆದ ವರ್ಷ ಖರೀದಿಸಿದ Mercedes Maybach S600 Pullman Guard ಇನ್ಮುಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಯಾಣದ ಅಧಿಕೃತ ವಾಹನವಾಗಲಿದೆ. ಗರಿಷ್ಠ ಸುರಕ್ಷತೆ, ಶಕ್ತಿ ಮತ್ತು ವಿಶಿಷ್ಟ ವೈಶಿಷ್ಟ್ಯಗಳ ವಿಷಯದಲ್ಲಿ ಕಾರನ್ನು ಹೆಚ್ಚು ಕಸ್ಟಮೈಸ್ ಮಾಡಲಾಗಿದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿಗಳ ಈ ವಿಶೇಷ ಕಾರಿನಲ್ಲಿ ಏನೆಲ್ಲಾ ವಿಶೇಷತೆಗಳಿವೆಯೆಂದರೆ, ಇದು 2011 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದ ವಾಹನದ ಮಾರ್ಪಡಿಸಿದ ಆವೃತ್ತಿಯಾಗಿದೆ. VR9 ಮಟ್ಟದ ಬ್ಯಾಲಿಸ್ಟಿಕ್ ರಕ್ಷಣೆಯೊಂದಿಗೆ ಪುಲ್ಮನ್ ಗಾರ್ಡ್ ಅನ್ನು ಟ್ಯಾಂಕ್‌ಗಳಂತಹ ಯುದ್ಧ ಶಸ್ತ್ರಾಸ್ತ್ರಗಳಿಂದಲೂ ಪ್ರಯಾಣಿಕರನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿಯವರಿಗಾಗಿ ಬುಲೆಟ್ ಪ್ರೂಫ್ ಕಾರುಗಳ ಒಂದಷ್ಟು ಗುಂಪೇ ಇದೆ. ಅವುಗಳಲ್ಲಿ ಕೆಲವನ್ನು ತುರ್ತು ಸಂದರ್ಭಗಳಲ್ಲಿ ಬಿಡಿ ಕಾರಾಗಿಯೂ ಬಳಸಬಹುದು. ಈಗ ಮರ್ಸಿಡಿಸ್ ಮೇಬ್ಯಾಕ್ S600 ಪುಲ್ಮನ್ ಗಾರ್ಡ್ ನ ವಿಶೇಷತೆಗಳನ್ನು ನೋಡುವುದಾದರೆ, ಈ ವಾಹನವು VR9-ಹಂತದ ಬ್ಯಾಲಿಸ್ಟಿಕ್ ರಕ್ಷಣೆ, 44 ಕ್ಯಾಲಿಬರ್ ರಕ್ಷಣೆ, ಮಿಲಿಟರಿ ರೈಫಲ್ಸ್ ಹೊಡೆತಗಳು, ಬಾಂಬ್‌ಗಳು, ಸ್ಫೋಟಕಗಳು ಮತ್ತು ಅನಿಲ ದಾಳಿಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ವಾಹನವು ಬುಲೆಟ್ ಪ್ರೂಫ್ ಅಲಾಯ್ ವೀಲ್‌ಗಳು ಹೊಂದಿದ್ದು, ಮುಖ್ಯವಾಗಿ ಗ್ಯಾಸ್ ದಾಳಿಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಮ್ಲಜನಕದ ಪೂರೈಕೆ ಕೂಡ ಇದರಲ್ಲಿ ಲಭ್ಯವಿದೆ. ಇದರ ಉದ್ದಳತೆಗಳನ್ನು ನೋಡುವುದಾದರೆ, ಮರ್ಸಿಡಿಸ್ ಮೇಬ್ಯಾಕ್ S600 ಪುಲ್‌ಮನ್ ಗಾರ್ಡ್ 5,453 ಎಂಎಂ ಉದ್ದ, 1,899 ಎಂಎಂ ಅಗಲ, 1,498 ಎಂಎಂ ಎತ್ತರ ಮತ್ತು 3,365 ಎಂಎಂ ವೀಲ್‌ಬೇಸ್ ಹೊಂದಿದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಇದು ವಿಸ್ತರಿಸಿದ ಲಿಮೋಸಿನ್ ಆಗಿರುವುದರಿಂದ, S600 ಆವೃತ್ತಿಯ ಆಯಾಮಗಳು ಭವ್ಯವಾಗಿರುತ್ತವೆ. ರಾಷ್ಟ್ರಪತಿಗಳ ಗರಿಷ್ಠ ಸೌಕರ್ಯವನ್ನು ಒದಗಿಸಲು ಕ್ಯಾಬಿನ್ ಒಳಗೆ ಉತ್ತಮ ಸ್ಥಳಾವಕಾಶವನ್ನು ನೀಡುತ್ತದೆ. ಇನ್ನು ಮರ್ಸಿಡಿಸ್ ಮೇಬ್ಯಾಕ್ S600 ಪುಲ್ಮನ್ ಗಾರ್ಡ್ 6.0-ಲೀಟರ್ V12 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಇದು ಗರಿಷ್ಠ 530 ಬಿಎಚ್‌ಪಿ ಮತ್ತು 830 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ DCT ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಏರ್ ಸಸ್ಪೆನ್ಷನ್ ಮತ್ತು ರನ್-ಫ್ಲಾಟ್ ಟೈರ್‌ಗಳು ರಾಷ್ಟ್ರಪತಿಗಳ ವಾಹನದ ಇತರ ವೈಶಿಷ್ಟ್ಯಗಳಾಗಿವೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಮರ್ಸಿಡಿಸ್ ಮೇಬ್ಯಾಕ್ S600 ಪುಲ್ಮನ್ ಗಾರ್ಡ್ 100 km/h ತಲುಪಲು 8 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ ಎಂದು ಹೇಳಲಾಗುತ್ತಿದೆ. 4 ಆಸನಗಳ ಕಾರು 530 ಲೀಟರ್ ಬೂಟ್ ಸ್ಪೇಸ್ ಮತ್ತು 80 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ದೇಶದ ಪ್ರಥಮ ಪ್ರಜೆಯನ್ನು ಹೊತ್ತೊಯ್ಯಲು ವಿನ್ಯಾಸಗೊಳಿಸಲಾಗಿರುವ ಈ ಕಾರು ದೇಶದಲ್ಲೇ ಅತ್ಯಂತ ಸುರಕ್ಷಿತ ಕಾರು ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು 10 ಕೋಟಿ ರೂ. ಇರಬಹದಾಗಿದ್ದು, ಎಲ್ಲಾ ವೈಶಿಷ್ಟ್ಯಗಳು ಮತ್ತು ರಕ್ಷಾಕವಚ ರಕ್ಷಣೆಯೊಂದಿಗೆ, ಕಾರು ಐದು ಟನ್‌ಗಳಿಗಿಂತ ಹೆಚ್ಚು ತೂಕವಿರಬಹುದು.

ವಿಶ್ವದ ಅತ್ಯಂತ ಸುರಕ್ಷಿತ ವಾಹನದಲ್ಲಿ ಪ್ರಯಾಣಿಸಲಿದ್ದಾರೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2007-2012ರ ಅವಧಿಯಲ್ಲಿ ಸೇವೆ ಸಲ್ಲಿಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಕಾಲದಿಂದಲೂ ಮರ್ಸಿಡಿಸ್ ಮೇಬ್ಯಾಕ್ S600 ಪುಲ್‌ಮ್ಯಾನ್ ಅಧಿಕೃತ ಕಾರು ಆಗಿರುವುದು ಗಮನಾರ್ಹವಾಗಿದೆ. ಈ ಕಾರು ಎಲ್ಲಾ ವಿಧಗಳಲ್ಲೂ ರಕ್ಷಣೆಯನ್ನು ನೀಡುವ ಕಾರಣ ಇದನ್ನು ಮುಂದಿನ ಎರಡು ಅವಧಿಗಳಿಗೂ ಮುಂದುವರೆಸುವ ಸಾಧ್ಯತೆಯಿದೆ.

Most Read Articles

Kannada
English summary
The new President Draupadi Murmu will travel in the safest vehicle in the world
Story first published: Monday, July 25, 2022, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X