ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಾರ್ವಜನಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಭಾರತದಲ್ಲಿನ ಹಲವು ನಗರಗಳಲ್ಲಿ ಇಂದಿಗೂ ಸರಿಯಾದ ರಸ್ತೆಗಳು ಇಲ್ಲ. ನಗರಗಳೇ ಹಾಗಿದ್ದರೇ ತಾಲೂಕುಗಳ ಪರಿಸ್ಥಿತಿ ಹೇಳತೀರದ್ದು, ಒಮ್ಮೆ ಮಳೆ ಬಂದರೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಇಂತಹ ರಸ್ತೆಗಳಲ್ಲಿ ಸಾಮಾನ್ಯವಾಗಿ ಓಡಾಡುವುದೇ ಕಷ್ಟ, ಆದ್ರೆ ಇಲ್ಲೊಬ್ಬ ಟಾಟಾ ಏಸ್‌ನಲ್ಲಿ ದೊಡ್ಡ ಆನೆಯನ್ನೇ ಸಾಗಿಸಿದ್ದಾನೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಸಣ್ಣ ವಾಣಿಜ್ಯ ವಾಹನ ಚಾಲಕನೊಬ್ಬ ದೊಡ್ಡ ಆನೆಯನ್ನು ಟಾಟಾ ಏಸ್‌ನ ಹಿಂಭಾಗದಲ್ಲಿ ಜೋಡಿಸಲಾದ ಟ್ರೇಲರ್‌ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ. ಟಾಟಾ ಏಸ್‌ನಂತಹ ಸಣ್ಣ ವಾಹನದಲ್ಲಿ ಬೃಹತ್ ಗಾತ್ರದ ಆನೆಯನ್ನು ಸಾಗಿಸುವುದು ಕಂಡು ಅಚ್ಚರಿಗೊಂಡ ಹಿಂಬದಿಯ ಕಾರು ಚಾಲಕ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.

ಟಾಟಾ ಏಸ್ ಅನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ 'ಚೋಟಾ ಹಾಥಿ' (ಸಣ್ಣ ಆನೆ) ಎಂದು ಮಾರಾಟ ಮಾಡಲಾಗುತ್ತದೆ. ಇದೀಗ ಇದೇ ಹೆಸರನ್ನು ಬಳಸಿಕೊಂಡು ಟಾಟಾ ಏಸ್‌ನಲ್ಲಿ ಸಾಗಿಸಲಾಗುತ್ತಿರುವ ಮತ್ತೊಂದು 'ಹಾಥಿ'ಯ ಕುರಿತು ಬಹಳಷ್ಟು ಮೀಮ್‌ಗಳು ವೈರಲ್ ಆಗುತ್ತಿವೆ. ಇದರ ಜೊತೆಗೆ ಸಾಕಷ್ಟು ವಿರೋಧಗಳು ಕೂಡ ವ್ಯಕ್ತವಾಗಿವೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಅಂತಹ ಭಾರವಾದ ಪ್ರಾಣಿಯನ್ನು ಸಾಗಿಸುವುದು ಪ್ರಾಣಿಗಳಿಗೆ ಮಾತ್ರವಲ್ಲ, ಸುತ್ತಮುತ್ತಲಿನ ಎಲ್ಲರಿಗೂ ಅಪಾಯಕಾರಿಯಾಗಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇರುವ ಸ್ಥಳ ತಿಳಿದಿಲ್ಲವಾದರೂ, ಆನೆಯ ಮೇಲಿನ ಆಭರಣಗಳನ್ನು ಗಮನಿಸಿದರೆ, ವೀಡಿಯೊ ದಕ್ಷಿಣ ಭಾರತದ್ದೇ ಎಂದು ತಿಳಿಯಬಹುದು.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ನಿರ್ಮಾಣ ಹಂತದಲ್ಲಿರುವ ಕಂಬಗಳು ಫ್ಲೈಓವರ್ ಅಥವಾ ಮೆಟ್ರೋದ ಅಭಿವೃದ್ಧಿಯನ್ನು ವಿಡಿಯೋದಲ್ಲಿ ಕಾಣಬಹುದು. ಮುಖ್ಯವಾದ ವಿಷಯವೆಂದರೆ ಹೆದ್ದಾರಿಯು ಜನನಿಬಿಡವಾಗಿದ್ದು, ಟ್ರೇಲರ್‌ನಲ್ಲಿರುವ ಆನೆ ಸಾಗುವ ಅದೇ ಮಾರ್ಗದಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿವೆ. ಅಲ್ಲದೇ ಟ್ರೇಲರ್ ಮತ್ತು ವಾಹನದ ಗಾತ್ರವು ಆನೆಗೆ ತುಂಬಾ ಚಿಕ್ಕದಾಗಿದ್ದು, ಆನೆಯು ಟ್ರೇಲರ್ ಮೇಲೆ ನಿಂತಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಆನೆಯನ್ನು ಸುರಕ್ಷಿತವಾಗಿರಿಸಲು ಸರಿಯಾದ ಸರಂಜಾಮು ಕೂಡ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಒಂದು ಸಣ್ಣ ತಪ್ಪು ಕೂಡ ಭಾರಿ ಅನಾಹುತಕ್ಕೆ ಕಾರಣವಾಗಬಹುದು. ಉದಾಹರಣೆಗೆ ಹಾರ್ಡ್ ಬ್ರೇಕಿಂಗ್, ತೀಕ್ಷ್ಣವಾದ ತಿರುವು ಅಥವಾ ಹೆಚ್ಚಿನ ವೇಗದ ಚಾಲನೆಯಿಂದ ಪ್ರಾಣಿಯು ವಾಹನದಿಂದ ಸುಲಭವಾಗಿ ಬೀಳಲು ಕಾರಣವಾಗಬಹುದು.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಭಾರತವು ಅನೇಕ ಸಾಕಿದ ಆನೆಗಳನ್ನು ಹೊಂದಿರುವುದರಿಂದ ಆನೆಯನ್ನು ಸಾಗಿಸುವುದು ಅಸಾಮಾನ್ಯವೇನಲ್ಲ. ಅವುಗಳನ್ನು ಸಾಮಾನ್ಯವಾಗಿ ದೊಡ್ಡ ವಾಣಿಜ್ಯ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಅಂತಹ ಬೃಹತ್ ಆನೆಯು ಸರಿಯಾದ ಹೊದಿಕೆ, ಸರಂಜಾಮು ಮತ್ತು ವಾಹನದ ಸರಂಜಾಮು ಇಲ್ಲದೆ ಪ್ರಯಾಣಿಸುವುದು ತುಂಬಾ ಅಪಾಯಕಾರಿಯಾಗಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಟಾಟಾ ಏಸ್ ಲೋಡ್ ಸಾಮರ್ಥ್ಯ

ಪ್ರಯಾಣಿಕರ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್, ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಟಾಟಾ ಏಸ್ ವಾಣಿಜ್ಯ ವಾಹನನ್ನು ಮಾರುಕಟ್ಟೆಗೆ ಪರಿಚಯಿಸಿತು. ಕಂಪನಿಯು ಇದುವರೆಗೆ 19 ಲಕ್ಷ ಗ್ರಾಹಕರನ್ನು ಹೊಂದಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಹೆಚ್ಚು ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಟಾಟಾ ಏಸ್ ಭಾರತೀಯ ಮಾರುಕಟ್ಟೆಯಲ್ಲಿ ಸಮರ್ಥ ಮತ್ತು ಅತ್ಯಂತ ಯಶಸ್ವಿ ಸಣ್ಣ ವಾಣಿಜ್ಯ ವಾಹನವಾಗಿ ಹೊರಹೊಮ್ಮಿದೆ. ಆದರೆ ಕಂಪನಿಯು ಇದಕ್ಕೆ 750 ಕೆ.ಜಿಯಷ್ಟು ಸೀಮಿತ ಭಾರ ಹೊರುವ ಸಾಮರ್ಥ್ಯವನ್ನು ನೀಡಿದೆ. ಆನೆಯ ಗಾತ್ರವನ್ನು ನೋಡಿದರೆ 5,000 ಕೆ.ಜಿಯಷ್ಟು ಭಾರವಿರುವಂತೆ ಕಾಣುತ್ತಿದ್ದು, ಕಂಪನಿ ನಿಗಧಿಪಡಿಸಿರುವ ಭಾರಕ್ಕಿಂತ ಹೆಚ್ಚಿನ ಭಾರವನ್ನು ಸಾಗಿಸುವುದರಿಂದ ಅಪಾಯವಿದ್ದೇ ಇರುತ್ತದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಟಾಟಾ ಏಸ್ ಎಲೆಕ್ಟ್ರಿಕ್ ಕಾರ್ಗೋ

ಟಾಟಾ ಮೋಟಾರ್ಸ್(Tata Motors) ಕಂಪನಿಯು ಇತ್ತೀಚೆಗೆ ಏಸ್ ಇವಿ(Ace EV) ಮೂಲಕ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಅಧ್ಯಾಯ ಆರಂಭಿಸಿದೆ. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದಲ್ಲಿನ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಏಸ್ ಲಘು ವಾಣಿಜ್ಯ ವಾಹನವನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವೊಜೆನ್(Evogen) ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಇದೀಗ ಎಲೆಕ್ಟ್ರಿಕ್ ಮಾದರಿಯ ಮೂಲಕ ಮತ್ತೊಂದು ಕ್ರಾಂತಿಕಾರಕ ಬದಲಾವಣೆಗೆ ಸಿದ್ದವಾಗಿದೆ. ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ 27kW ಮೋಟಾರ್ ಜೋಡಣೆ ಹೊಂದಿದ್ದು, 130 ಎನ್ಎಂ ಪೀಕ್ ಟಾರ್ಕ್‌ನೊಂದಿಗೆ 208 ಎಫ್‌ಟಿ3 ಅತ್ಯಧಿಕ ಕಾರ್ಗೋ ಖಚಿತಪಡಿಸುತ್ತದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಹೊಸ ತಂತ್ರಜ್ಞಾನ ಪರಿಣಾಮ ಹೊಸ ವಾಹನದ ಕಂಟೈನರ್ ಸಾಕಷ್ಟು ಹಗುರವಾಗಿದ್ದು, ಇ-ಕಾಮರ್ಸ್ ಲಾಜಿಸ್ಟಿಕ್ಸ್‌ ಇದು ಲಾಭದಾಯಕ ಅಂಶವಾಗಿದೆ. ಜೊತೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲೂ ಹೊಸ ಇವಿ ವಾಹನ ಸುಲಭವಾಗಿ ಚಾಲನೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಏಸ್ ಎಲೆಕ್ಟ್ರಿಕ್ ವಾಹನವು ಸಾಮಾನ್ಯ ಇವಿ ಚಾರ್ಜಿಂಗ್‌ ಮಾತ್ರವಲ್ಲದೇ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದ್ದು, ಕೊನೆಯ ಮೈಲಿ ಸರಕು ಸಾಗಾಣಿಕೆಗೆ ಅನುಕೂಲಕರವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ಅಳವಡಿಸಿಕೊಳ್ಳಲು ಇದು ಗ್ರಾಹಕರಿಗೆ ನೆರವಾಗಲಿದೆ.

ಟಾಟಾ ಏಸ್ ಸಾಮರ್ಥ್ಯಕ್ಕೆ ದಂಗಾದ ಸಹ ಪ್ರಯಾಣಿಕರು: ದೊಡ್ಡ ಆನೆಯನ್ನೇ ಸಾಗಿಸಿದ ಸಣ್ಣ ಆನೆ

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಣಿಜ್ಯ ವಾಹನ ಇವಿ ಬ್ಯಾಟರಿಯಲ್ಲಿ ಅಡ್ವಾನ್ಸ್ ಬ್ಯಾಟರಿ ಕೂಲಿಂಗ್ ಸಿಸ್ಟಂ ಜೋಡಣೆ ಮಾಡಿದ್ದು, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹಿನ್ನಲೆಯಲ್ಲಿ ಹೊಸ ವಾಹನ ಮೈಲೇಜ್ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಲಿದೆ.

Most Read Articles

Kannada
English summary
The public rioted after seeing the potential of the Tata Ace a small vehicle carrying a big elephant
Story first published: Sunday, September 4, 2022, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X