India
YouTube

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ನೀವು ಖರೀದಿಸಿದ ಮೊದಲ ಕಾರು ಅಥವಾ ನಿಮಗಾಗಿ ಖರೀದಿಸಿದ ಮೊದಲ ಮೊಬೈಲ್ ಫೋನ್ ನೆನಪಿದೆಯೇ? ಮೊದಲನೆಯದು ಯಾವಾಗಲೂ ವಿಶೇಷವಾಗಿರುತ್ತದೆ. ಹಾಗೆಯೇ ಸ್ವಂತ ದುಡ್ಡಿನಲ್ಲಿ ಸಾಲ ಮಾಡದೇ ಕಾರು, ಬೈಕ್ ಖರೀದಿಸುವ ಕನಸು ಹಲವರಿಗಿರುತ್ತದೆ. ಇಂತಹ ಕನಸೊಂದನ್ನು ಕಂಡಿದ್ದ ವೃದ್ಧರೊಬ್ಬರು ತಮ್ಮ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಗುಜರಾತ್‌ ಮೂಲದ ನಾನಾಜಿ ಎಂದೇ ಖ್ಯಾತರಾಗಿರುವ ರಾಧಾ ಕ್ರಿಶನ್ ಚೌಧರಿ ಅವರು ಅವಿಮೀ ಹರ್ಬಲ್ ಎಂಬ ಆಯುರ್ವೇದ ಕಂಪನಿಯನ್ನು ಇತ್ತೀಚೆಗೆ ಆರಂಭಿಸಿದ್ದರು. ಅವರ ಆಯುರ್ವೇದ ಕಂಪನಿಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅವರ ಸಂಪೂರ್ಣ ಕಥೆಯನ್ನು ವಿವರಿಸುವ ರೀಲ್ ಅನ್ನು ಹಂಚಿಕೊಂಡಿದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

"ನಾವು ಅವಿಮೀ ಹರ್ಬಲ್ ಅನ್ನು ಸ್ಥಾಪಿಸಿದ್ದು, ಅದನ್ನು ಜನಪ್ರಿಯಗೊಳಿಸಿ ಕೇವಲ 6 ತಿಂಗಳ ಅವಧಿಯಲ್ಲಿ ಪ್ರಪಂಚದಾದ್ಯಂತದ ಜನರ ಮನ್ನಣೆ ಗಳಿಸಿದ್ದೇವೆ. ಹಾಗಾದರೆ ರಾತ್ರೋರಾತ್ರಿ ಯಶಸ್ವಿಯಾಗಿರುವುದಾದರೂ ಹೇಗೆ??? ಎಂದು ತಮ್ಮ ಅಧಿಕೃತ ಇನ್‌ಸ್ಟಾ ಪೇಜ್‌ನಲ್ಲಿ ಬರೆದುಕೊಂಡಿರುವ ಸಂಸ್ಥೆ, ವಿಷನ್ & ಮಿಷನ್, ನಂಬಿಕೆ, ಕಠಿಣ ಪರಿಶ್ರಮ ಮತ್ತು ಟೀಮ್ ವರ್ಕ್ ಮುಂತಾದ ಅಂಶಗಳನ್ನು ಇಲ್ಲಿ ಹೈಲೈಟ್ ಮಾಡಲಾಗಿದ್ದು ಒಂದೊಂದು ಪದಕ್ಕೂ ವಿವರಣೆ ನೀಡಲಾಗಿದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

1. ವಿಷನ್ ಮತ್ತು ಮಿಷನ್

ಆಯುರ್ವೇದದ ಬಳಕೆಯ ಮೂಲಕ ಜನರು ತಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡಲು ನಾವು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮಿಷನ್ ಹೊಂದಿದ್ದೇವೆ. ಹಾಗಾಗಿಯೇ ಯಾವುದೇ ಅಡೆತಡೆಗಳು ಬಂದರೂ ನಮ್ಮ ಸ್ಪಷ್ಟತೆ ನಮಗಿರುವುದರಿಂದ ಮುನ್ನಡೆಯುತ್ತಿದ್ದೇವೆ.

2. ನಂಬಿಕೆ

ವ್ಯವಹಾರ ಕಠಿಣವಾಗುತ್ತಾ ಹೋದಾಗ ಜನರು ನಮ್ಮನ್ನು ಸಾರ್ವಜನಿಕವಾಗಿ 'ವಂಚನೆ' ಎಂದು ಕರೆದಾಗ, ನಮ್ಮನ್ನು ಮುಂದುವರಿಸುವುದು ಯಾವುದು? ನಂಬಿಕೆ. ನಾವು ಮಾಡುತ್ತಿರುವುದು ಸರಿ ಎಂದು ನಮಗೆ ತಿಳಿದಿದೆ, ಅದೇ ನಮ್ಮನ್ನು ವ್ಯಾಪಾರದಲ್ಲಿ ಬೆಳೆಯಲು ಪ್ರೇರೇಪಿಸುತ್ತಿದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

3. ಹಾರ್ಡ್ ವರ್ಕ್

ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ರಾತ್ರೋರಾತ್ರಿ ಯಶಸ್ವಿಯಾಗಲು ನನಗೆ 25 ವರ್ಷಗಳು ಬೇಕಾಯಿತು. ನಿಷ್ಠಾವಂತ ಹಾಗೂ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ತಂಡವೊಂದರ ಸಹಕಾರ ಸಿಕ್ಕರೆ ಏನನ್ನು ಬೇಕಾದರು ಸಾಧಿಸಬಲ್ಲ. ಹಾಗೆಯೇ ಎಷ್ಟೇ ಕಷ್ಟ ಎದುರಾದರೂ ಕಠಿಣ ಪರಿಶ್ರಮವನ್ನು ಕೈಬಿಡಬಾರದು.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

4. ತಂಡದ ಕೆಲಸ

ಟೀಮ್ ವರ್ಕ್ ಅನ್ನು ಕಡಿಮೆ ಅಂದಾಜು ಮಾಡಬೇಡಿ. ಆರಂಭದ ದಿನಗಳಲ್ಲಿ ನನ್ನ ಕುಟುಂಬದವರೆಲ್ಲರೂ ನನಗೆ ಸಹಾಯ ಮಾಡಲು ಒಗ್ಗೂಡಿದರು. ಅವರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಒಂದು ಟೀಮ್ ವರ್ಕ್ ಇಡೀ ವ್ಯಾಪಾರದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಈ ರೀತಿ ಬರೆದು ಅಪ್‌ಲೋಡ್ ಮಾಡಿದ ನಂತರ, ವಿಡಿಯೋಗೆ ಲಕ್ಷಾಂತರ ಲೈಕ್‌ಗಳು ಬಂದಿವೆ. "Nanajiiiiii....ನಾನು ದೊಡ್ಡ ಅಭಿಮಾನಿ....ಹೇಗಾದರೂ ನಾನು ನಿನ್ನನ್ನು ನೋಡಬೇಕು... ನಾನು ತೈಲ ಮತ್ತು ಸ್ಪ್ರೇ ಅನ್ನು ಖರೀದಿಸಿದೆ... ದಯವಿಟ್ಟು ಶಾಂಪೂವನ್ನು ಮರುಸ್ಥಾಪಿಸಿ..... ನಿಮ್ಮ ಹೊಸ ಕಾರಿಗೆ ಅಭಿನಂದನೆಗಳು ಎಂದು Instagram ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಇನ್ನು ಕಾರಿನ ವಿಷಯಕ್ಕೆ ಬಂದರೆ ರಾಧಾ ಕ್ರಿಶನ್ ಚೌಧರಿ ಅವರು, 2022ರ ಮಾರುತಿ ಸುಜುಕಿಯ ವ್ಯಾಗನ್ ಆರ್‌ ಅನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಕಾರನ್ನು ವಿನೂತನ ಫೀಚರ್ಸ್‌ಗಳೊಂದಿಗೆ ಮಾರುತಿ ಸುಜುಕಿ ಉನ್ನತೀಕರಿದೆ. ಹೊಸ ವ್ಯಾಗನ್ಆರ್ ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ಎನ್ನುವ ನಾಲ್ಕು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ರಾಧಾ ಕ್ರಿಶನ್ ಅವರು ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಮಾರುತಿ ಸುಜುಕಿ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಸಿಎನ್‌ಜಿ ಆವೃತ್ತಿಗಳ ಆಯ್ಕೆ ಹೆಚ್ಚಿಸಿದ್ದು, ವ್ಯಾಗನ್ಆರ್ ಮಾದರಿಯಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿವೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

1.0 ಲೀಟರ್ ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರ ಬೇಡಿಕೆ ಅನುಸಾರವಾಗಿ ಸಿಎನ್‌ಜಿ ಮಾದರಿಯಲ್ಲಿ ವಿಶೇಷವಾಗಿ ಎಲ್ಎಕ್ಸ್ಐ ಸಿಎನ್‌ಜಿ ಟೂರ್ ಹೆಚ್3 ಎನ್ನುವ ವೆರಿಯೆಂಟ್ ಅಭಿವೃದ್ದಿಪಡಿಸಿದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಇದರೊಂದಿಗೆ ಹೊಸ ಕಾರಿನಲ್ಲಿ ಈ ಹಿಂದಿನ ಮಾದರಿಯಲ್ಲಿವಂತೆಯೇ ಪ್ರಮುಖ ವಿನ್ಯಾಸಗಳೊಂದಿಗೆ ಗಲ್ಯಾಂಟ್ ರೆಡ್ ಮತ್ತು ಬ್ಲ್ಯಾಕ್ ರೂಫ್, ಮ್ಯಾಗ್ಮಾ ಗ್ರೇ ಮತ್ತು ಬ್ಲ್ಯಾಕ್ ರೂಫ್ ನೀಡಲಾಗಿದ್ದು, ಡ್ಯುಯಲ್ ಟೋನ್ ಹೊಂದಿರುವ ಜೆಡ್ಎಕ್ಸ್ಐ ಪ್ಲಸ್ ಮಾದರಿಯ ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 12 ಸಾವಿರದಷ್ಟು ದುಬಾರಿಯಾಗಿರಲಿದೆ.

25 ವರ್ಷ ಶ್ರಮಿಸಿ 85ನೇ ವಯಸ್ಸಿನಲ್ಲಿ ಕಾರು ಖರೀದಿಸಿದ ವೃದ್ಧನ ಯಶಸ್ಸಿಗೆ ಪ್ರಶಂಸೆಗಳ ಮಹಾಪೂರ

ಮಾರುತಿ ಸುಜುಕಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಟ್ಯಾಂಡರ್ಡ್ ಆಗಿ ಪ್ರತಿ ವೆರಿಯೆಂಟ್‌ನಲ್ಲೂ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಎಂಜಿನ್ ಇಮ್‌ಮೊಬಿಲೈಸರ್, ಆಟೋಮ್ಯಾಟಿಕ್ ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಪ್ರಮುಖ ಸುರಕ್ಷಾ ಫೀಚರ್ಸ್ ಜೋಡಣೆ ಮಾಡಿದೆ.

Most Read Articles

Kannada
English summary
The success of an old man who worked hard for 25 years and bought a car at the age of 85
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X