ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

'ದೀಪಾವಳಿ ಹಬ್ಬ' ಹೆಸರೇ ಹೇಳುವಂತೆ ಹಬ್ಬದಂದು ದೀಪಗಳನ್ನು ಬೆಳಗಿ ಮನೆಯೆಲ್ಲಾ ಕಾಂತಿ ತುಂಬಿ ಸಂಭ್ರಮಿಸುವುದಾಗಿದೆ. ಈ ಹಬ್ಬದಂದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರು ಪಟಾಕಿಗಳನ್ನು ಸಿಡಿಸುವುದು ಸರ್ವೇಸಾಮಾನ್ಯ. ಆದರೆ ಯಾರೂ ಕೂಡ ಪಟಾಕಿಗಳಿಂದ ಇತರ ವಸ್ತುಗಳನ್ನು ಹಾನಿಮಾಡಲು ಬಯಸುವುದಿಲ್ಲ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಟಾಕಿ ಹೊಡೆಯುವಾಗ ತಮ್ಮ ವಾಹನಗಳಿದ್ದರೆ ಅವುಗಳನ್ನು ಭದ್ರವಾಗಿಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯೂಟ್ಯೂಬರ್ ಬರೊಬ್ಬರಿ ಒಂದು ಲಕ್ಷ ಪಟಾಕಿಗಳನ್ನು ಕಾರಿನ ಮೇಲೆ ಅಲಂಕರಿಸಿ ಸಿಡಿಸಿದ್ದಾನೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಇಷ್ಟಕ್ಕೂ ಸಿಡಿಸಿದ್ದಾದ್ರೂ ಯಾಕೆ ಎಂದರೆ ಯೂಟ್ಯೂಬ್ ವೀವ್ಸ್‌ಗಾಗಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಯೂಟ್ಯೂಬ್ ಚಾನಲ್ ತೆರೆದು ಹಣಗಳಿಸಲು ಮುಂದಾಗಿದ್ದಾರೆ. ಆದರೆ ಚಾನಲ್ ತೆರೆದಾಕ್ಷಣ ನಮಗೆ ಹಣ ಬರುವುದಿಲ್ಲ ಬದಲಾಗಿ ಜನರನ್ನು ಆಕರ್ಷಿಸಲು ಒಂದಷ್ಟು ಸೃಜನಶೀಲವಾದ ವಿಡಿಯೋಗಳನ್ನು ಮಾಡಬೇಕಾಗುತ್ತದೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಹಾಗಾಗಿ ಈ ಯೂಟ್ಯೂಬರ್ ಹಬ್ಬಕ್ಕೆ ಹೊಸ ಆಲೋಚನೆಯೊಂದಿಗೆ ಬಂದಿದ್ದಾನೆ, ಬರೋಬ್ಬರಿ ಒಂದು ಲಕ್ಷ ಪಟಾಕಿಗಳನ್ನು ಕಾರಿನ ಮೇಲೆ ಅಲಂಕರಿಸಿ ಸಿಡಿಸಿದ್ದಾನೆ. ಈ ಘಟನೆಯ ಕುರಿತ ವಿವರವಾದ ಮಾಹಿತಿಯನ್ನು ನೋಡುವುದಾದರೆ, ರಾಜಸ್ಥಾನದ ಅಲ್ವಾರ್ ನಲ್ಲಿ ಈ ವಿಡಿಯೋವನ್ನು ಚಿತ್ರಿಸಲಾಗಿದೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಈ ವಿಡಿಯೋವನ್ನು ಅಮಿತ್ ಶರ್ಮಾ ಎಂಬ ಯೂಟ್ಯೂಬರ್ ಮಾಡಿದ್ದಾನೆ. ತನ್ನ ಕಾರಿನ ಮೇಲೆ ಪಟಾಕಿಗಳನ್ನು ಪೇರಿಸಿ, ಮುಂಭಾಗದ ಗಾಜು ಮತ್ತು ಹೆಡ್‌ಲೈಟ್‌ಗಳನ್ನು ಹಾಗೆಯೇ ಬಿಟ್ಟಿದ್ದಾನೆ. ವೀಡಿಯೋದಲ್ಲಿ ನೀವು ಗಮನಿಸಿದರೆ ಪಟಾಕಿಗಳಿಂದ ಅಲಂಕೃತವಾಗಿರುವ ಕಾರನ್ನು ನೋಡಬಹುದು.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಬಳಿಕ ಯೂಟ್ಯೂಬರ್ 1, 2, 3 ಎಂದು ಹೇಳುತ್ತಾ ಅಷ್ಟೂ ಪಟಾಕಿಗಳನ್ನು ಒಮ್ಮಲೆ ಸ್ಪೋಟಿಸಿದ್ದಾನೆ. ನಂತರ ಪಟಾಕಿಗಳ ದಹನವು ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ಇಡೀ ಸ್ಥಳವು ಸ್ವಲ್ಪ ಸಮಯದವರೆಗೆ ಭಾರೀ ಶಬ್ದದಿಂದ ತುಂಬಿರುತ್ತದೆ. ಕೊನೆಗೆ ಬೆಳ್ಳಗಿದ್ದ ಕಾರು ಒಂದೇ ಸಮನೇ ಕಪ್ಪಗಾಗಿಬಿಡುತ್ತದೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಬಿಳಿ ಬಣ್ಣದಲ್ಲಿದ್ದ ಇಡೀ ಕಾರು ಅಂತಿಮವಾಗಿ ಕಪ್ಪು ಬಣ್ಣಕ್ಕೆ ತಿರುಗಿತು. ಆದರೆ, ಮುಂಭಾಗದ ಗಾಜನ ಮೇಲೆ ಪಟಾಕಿಗಳು ಜೋಡಿಸದಿದ್ದ ಕಾರಣ, ಅದು ಹೆಚ್ಚಾಗಿ ಹಾನಿಗೊಳಗಾಗಲಿಲ್ಲ. ಆದರೆ ಪಟಾಕಿ ಹೆಚ್ಚು ಸ್ಫೋಟಗೊಂಡಿದ್ದರಿಂದ ಸ್ವಲ್ಪ ಹಾನಿಯಾಗಿದೆ, ಅದನ್ನು ನೀವು ವೀಡಿಯೊದಲ್ಲಿ ಸ್ಪಷ್ಟವಾಗಿ ನೋಡಬಹುದು.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಒಂದೇ ಬಾರಿಗೆ ಒಂದು ಲಕ್ಷ ಪಟಾಕಿ‌ ಸ್ಫೋಟಗೊಂಡಿದ್ದರಿಂದ ಕಾರ್‌ ಪೂರ್ತಿ ಹೊಗೆಯಿಂದ ತುಂಬಿತ್ತು. ಕೆಲವರು ಕಾರಿನ ಬಾಗಿಲು ತೆರೆದ ಕೂಡಲೇ ಒಳಗಿದ್ದ ಹೊಗೆಯೆಲ್ಲ ಹೊರಬಂತು. ಆದರೆ ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಅಷ್ಟು ಸ್ಪೋಟಗೊಂಡರೂ ಕಾರಿನ ಎಂಜಿನ್‌ಗೆ ಮಾತ್ರ ಯಾವುದೇ ಹಾನಿಯಾಗಿರಲಿಲ್ಲ.

ಕಾರಿನ ಎಂಜಿನ್ ಡ್ಯಾಮೇಜ್ ಆಗದ ಕಾರಣ ಯೂಟ್ಯೂಬರ್ ತನ್ನ ಸ್ನೇಹಿತರೊಂದಿಗೆ ಖುಷಿಯಿಂದ ಮತ್ತದೇ ಕಾರಿನಲ್ಲಿ ಓಡಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಹಲವರು ಹುಚ್ಚುತನದ ಪರಾಕಾಷ್ಟೆ ಎಂಬೆಲ್ಲಾ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಇಲ್ಲಿ ನಾವು ನೋಡುತ್ತಿರುವ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಎಂದು ಕಾಣುತ್ತಿದೆ, ಇದು ದೇಶೀಯ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಇದು ತುಂಬಾ ಹಳೆಯ ಮಾದರಿಯಂತೆ ಕಾಣುತ್ತಿದೆ. ಇಷ್ಟೆಲ್ಲಾ ಪಟಾಕಿಗಳನ್ನು ಹೊಡೆದರೂ ಕಾರಿನ ಎಂಜಿನ್‌ಗೆ ಯಾವುದೇ ಹಾನಿಯಾಗಿಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಇಂತಹ ಪ್ರಯೋಗಗಳು ತುಂಬಾ ಅಪಾಯಕಾರಿ. ವಾಸ್ತವವಾಗಿ, ಕಾರ್ ಅನ್ನು ಪಟಕಾಗಳಿಂದ ಸ್ಫೋಟಿಸುವಾಗ ಎಂಜಿನ್ ಕೂಡ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಆದರೆ, ಇಡೀ ದೃಶ್ಯ ಬಯಲು ಜಾಗದಲ್ಲಿ ನಡೆದಿದ್ದರಿಂದ ಸ್ಫೋಟಗೊಂಡರೂ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಒಟ್ಟಿನಲ್ಲಿ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಸದ್ಯ ಕಾರಿನ ಮೇಲೆ ಪಟಾಕಿಗಳನ್ನಿಟ್ಟು ಸಿಡಿಸಿದ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಸಿಕ್ಕಾಪಟ್ಟೆ ಷೇರ್ ಮಾಡಲಾಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಕ್ಕಳು ಇಂತಹ ವಿಡಿಯೋಗಳನ್ನು ನೋಡಿದರೆ ಅನುಸರಿಸುವುದು ಖಚಿತ. ಹಾಗಾಗಿ ಮನೆಯಲ್ಲಿನ ಪೋಷಕರು ಜಾಗರೂಕರಾಗಿರಬೇಕು.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಮಕ್ಕಳು ಇಂತಹ ವಿಡಿಯೋಗಳು ನೋಡದಂತೆ ಎಚ್ಚರಿಕೆ ವಹಿಸಬೇಕು. ಯೂಟ್ಯೂಬರ್‌ಗಳು ಸಹ ತಮ್ಮ ವೀವ್ಸ್‌ಗಾಗಿ ಮಾಡುವ ಇಂತಹ ವಿಡಿಯೋಗಳು ಹಲವರನ್ನು ಪ್ರಭಾವಿತಗೊಳಿಸುತ್ತವೆ. ಇದನ್ನೇ ಅನುಸರಿಸಿ ಮಾಡುವ ಪ್ರಯೋಗಗಳು ಕೆಲವೊಮ್ಮೆ ಭಾರೀ ಅನಾಹುತಕ್ಕೆ ಕಾರಣವಾಗಬಹುದು.

ಒಂದು ಲಕ್ಷ ಪಟಾಕಿಗಳಿಂದ ಸ್ವಿಫ್ಟ್ ಕಾರನ್ನು ಅಲಂಕರಿಸಿ ಕಿಡಿ ಹಚ್ಚೇಬಿಟ್ಟ...ಮುಂದೇನಾಯ್ತು ವಿಡಿಯೋ ನೋಡಿ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೀಪಾವಳಿ ಹಬ್ಬ ದೀಪಗಳ ಸಂಭ್ರಮವಿದ್ದಂತೆ. ಪಟಾಕಿಗಳು ಹಬ್ಬಕ್ಕೆ ಖುಷಿ ತರಬೇಕೇ ಹೊರತು ಹಾನಿಯುಂಟು ಮಾಡಬಾರದು, ಆದ್ದರಿಂದ ಬಹಳ ಜಾಗರೂಕರಾಗಿರಬೇಕು. ಆದರೆ ರಾಜಸ್ಥಾನದಲ್ಲಿ ನಡೆದಿರುವ ಘಟನೆ ಅಷ್ಟೊಂದು ಸ್ವೀಕಾರಾರ್ಹವಲ್ಲ, ಮತ್ತೆ ಇಂತಹ ಘಟನೆ ನಡೆದರೆ ಎಂತಹ ತೊಂದರೆ ಎದುರಾಗುವುದೋ ಗೊತ್ತಿಲ್ಲ. ಹಾಗಾಗಿ ಇಂತಹ ಘಟನೆಗಳನ್ನು ಎಂದಿಗೂ ಪ್ರೋತ್ಸಾಹಿಸಬಾರದು.

Article Published On: Tuesday, October 25, 2022, 11:07 [IST]
English summary
The Swift car was decorated with lakhs of firecrackers and ignited Watch the video for what happened
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+