ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಕೇಳಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರೊಬ್ಬರು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅಥವಾ ಪಿಯುಸಿ ಪ್ರಮಾಣಪತ್ರವನ್ನು ಹೊಂದಿಲ್ಲದ ಕಾರಣ ಸಂಚಾರ ಪೊಲೀಸರು ಚಲನ್ ನೀಡಿದ್ದಾರೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಘಟನೆಯನ್ನು ಫೇಸ್‌ಬುಕ್ ಗ್ರೂಪ್‌ವೊಂದರಲ್ಲಿ ವಿವರಿಸಿ ಚಲನ್ ಅನ್ನು ಪೋಸ್ಟ್ ಮಾಡಲಾಗಿದೆ. ಟ್ರಾಫಿಕ್ ಪೊಲೀಸರು ನೀಡಿದ ರಶೀದಿಯು ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ರಶೀದಿಯ ಪ್ರಕಾರ, ಕೇರಳ ಪೊಲೀಸರು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿಲ್ಲದ ಮೇರೆಗೆ ಚಲನ್ ನೀಡಿದ್ದಾರೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ದಂಡದ ಮೊತ್ತವು ರೂ 250 ಇದ್ದು, ರಶೀದಿಯಲ್ಲಿ ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 213(5)(ಇ) ಅನ್ನು ಸಹ ಉಲ್ಲೇಖಿಸಲಾಗಿದೆ. ಘಟನೆ ವಿಲಕ್ಷಣವಾಗಿ ಕಾಣಿಸಬಹುದು ಆದರೆ ಇಂತಹ ತಪ್ಪು ಚಲನ್‌ಗಳನ್ನು ನಾವು ನೋಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪೊಲೀಸರು ಹೆಲ್ಮೆಟ್ ಧರಿಸದ ಕಾರು ಚಾಲಕರಿಗೆ ಚಲನ್ ನೀಡಿರುವುದನ್ನು ನೋಡಿದ್ದೇವೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಅಲ್ಲದೆ, ದ್ವಿಚಕ್ರವಾಹನದಲ್ಲಿ ಸೀಟ್‌ಬೆಲ್ಟ್ ಧರಿಸದಿರುವ ವ್ಯಕ್ತಿಗೆ ದಂಡ ಹಾಕಿದ್ದನ್ನೂ ನೋಡಿದ್ದೇವೆ. ಇತ್ತೀಚೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಚಲನ್ ಸ್ವೀಕರಿಸಿದ ನಂತರ ಆಘಾತಕ್ಕೊಳಗಾಗಿದ್ದರು. ಇಲ್ಲದೇ ಇರುವ ಸಂಚಾರಿ ನಿಯಮಗಳನ್ನು ಪಾಲಿಸಲು ಸಂಚಾರ ಪೊಲೀಸರು ಕಿರುಕುಳ ನೀಡುತ್ತಿರುವುದು ಇದೇ ಮೊದಲಲ್ಲ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ದಂಡ ವಿಧಿಸುವ ನಿರ್ವಾಹಕರು ಕಾರಣವನ್ನು ತಪ್ಪಾಗಿ ನಮೂದಿಸುವುದರಿಂದ ಇಂತಹ ತಪ್ಪು ದಂಡಗಳು ಸಂಭವಿಸಬಹುದು ಎಂದು ಪೊಲೀಸರು ಹೇಳಿದ್ದಾರೆ. ಆದರೂ ಈ ರೀತಿಯ ಪ್ರಕರಣದಲ್ಲಿ, ಹೆಲ್ಮೆಟ್ ಧರಿಸದಿದ್ದಕ್ಕಾಗಿ ಕಾರು ಚಾಲಕನು ದಂಡವನ್ನು ಪಡೆದಿದ್ದಾನೆ. ನಂತರ ಕಾರಿನ ನೋಂದಣಿ ಸಂಖ್ಯೆಗೆ ಹೊಂದಿಕೆಯಾಗುವ ನಕಲಿ ನಂಬರ್ ಪ್ಲೇಟ್ ಬಳಸಿ ಸ್ಕೂಟರ್ ಪತ್ತೆಯಾಗಿದೆ ಎಂದು ಗಮನಿಸಬೇಕು.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಯಾವುದೋ ಕೆಲವು ಪ್ರಕರಣಗಳಲ್ಲಿ ಪೊಲೀಸರ ತಪ್ಪು ಕಾಣಿಸಬಹುದು, ಆದರೆ ಬಹುತೇಕ ಪ್ರಕರಣಗಳಲ್ಲಿ ನಕಲಿ ನಂಬರ್‌ ಪ್ಲೇಟ್‌ ಬಳಸುತ್ತಿರುವುದು ಸಾಬೀತಾಗಿದೆ. ಹಲವರು ನಕಲಿ ನಂಬರ್ ಪ್ಲೇಟ್‌ ಬಳಸುವುದರಿಂದ ಮೂಲ ನಂಬರ್‌ ಹೊದಿರುವ ವಾಹನಗಳ ಮಾಲೀಕರಿಗೆ ಚಲನ್‌ಗಳು ಹೋಗುತ್ತಿವೆ. ಮೇಲೆ ತಿಳಿಸಲಾದ ಬಹಳಷ್ಟು ಪ್ರಕರಣಗಳು ಇಂತಹವೇ ಆಗಿವೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಹೀಗೆ ನಕಲಿ ನಂಬರ್‌ ಪ್ಲೇಟ್ ಬಳಸುವವರು ಕಂಡುಬಂದಲ್ಲಿ ಪೊಲೀಸರು ಕಠಣ ಕ್ರಮ ಕೈಗೊಳ್ಳುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸುವ ಪುಂಡರ ವಾಹನಗಳನ್ನು ಸೀಜ್ ಮಾಡಿ ಅವರಿಗೆ ಭಾರೀ ದಂಡ ವಿಧಿಸಲಾಗುತ್ತಿದೆ. ಕರ್ನಾಟಕದಲ್ಲೂ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಮಾಡದ ತಪ್ಪಿಗೆ ಚಲನ್‌ಗಳು ಬರುತ್ತಿರುವ ಕುರಿತು ಹಲವರು ಪೊಲೀಸರಿಗೆ ದೂರುಗಳನ್ನು ನೀಡಿದ್ದಾರೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

EV ಗಳಿಗೆ ಯಾವುದೇ PUCC ಅಗತ್ಯವಿಲ್ಲ

ಎಲೆಕ್ಟ್ರಿಕ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವ ಯಾವುದೇ ಕೇಂದ್ರವಿಲ್ಲ. ನಿಷ್ಕಾಸ ಹೊಗೆಯನ್ನು ಪರೀಕ್ಷಿಸಿ ಮತ್ತು ಅಪಾಯಕಾರಿ ಹೊರಸೂಸುವಿಕೆಯ ಮಟ್ಟವನ್ನು ಪರಿಶೀಲಿಸುವ ಮೂಲಕ ಪಿಯುಸಿಸಿಯನ್ನು ನೀಡಲಾಗುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಯಾವುದೇ ನಿಷ್ಕಾಸ ಹೊಗೆ ಇರುವುದಿಲ್ಲ, ಆದ್ದರಿಂದ ಅಂತಹ ವಾಹನಗಳಿಗೆ ಪಿಯುಸಿಸಿ ನೀಡಲು ಸಾಧ್ಯವಿಲ್ಲ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಆದರೆ ಪಳೆಯುಳಿಕೆ ಇಂಧನಗಳಿಂದ ಚಾಲಿತವಾಗುವ ವಾಹನಗಳಿಗೆ ಪಿಯುಸಿಸಿ ಬಹಳ ಮುಖ್ಯವಾಗಿದೆ. ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ, ಇಂಧನ ಪಂಪ್‌ಗಳಲ್ಲಿ ಪಿಯುಸಿಸಿಯನ್ನು ಪರಿಶೀಲಿಸಲಾಗುತ್ತದೆ. ಈ ವೇಳೆ ಪ್ರಮಾಣಪತ್ರವನ್ನು ನೀಡಲು ವಿಫಲವಾದರೆ ವಾಹನಕ್ಕೆ ಇಂಧನ ನೀಡುವುದಿಲ್ಲ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಮಾನ್ಯವಾದ ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದಿದ್ದರೆ, ಅವರಿಗೆ ಇಂಧನವನ್ನು ನಿರಾಕರಿಸಲಾಗುವುದು. ಅಂತಹ ಸಂದರ್ಭದಲ್ಲಿ, ವಾಹನ ಚಾಲಕರಿಗೆ ಇಂಧನ ಪಂಪ್‌ನಲ್ಲಿಯೇ ಮಾನ್ಯವಾದ ಪಿಯುಸಿ ಪ್ರಮಾಣಪತ್ರವನ್ನು ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ. ಇದು ಪಿಯುಸಿ ಪ್ರಮಾಣಪತ್ರದ ಬಳಕೆಯನ್ನು ಕಡ್ಡಾಯಗೊಳಿಸಲು ಮತ್ತು ಕಾಲಕಾಲಕ್ಕೆ ಮಾಲಿನ್ಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ

ಭಾರತವು ತನ್ನ ಹೆಚ್ಚಿನ ಇಂಧನ ಅಗತ್ಯಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಏರುತ್ತಿರುವ ಇಂಧನ ಬೆಲೆಗಳೊಂದಿಗೆ, ಎಥೆನಾಲ್ ಮಿಶ್ರಿತ ಇಂಧನ ಮತ್ತು ವಿದ್ಯುತ್‌ನಂತಹ ಪರ್ಯಾಯ ಇಂಧನ ಆಯ್ಕೆಗಳಿಗೆ ಸರ್ಕಾರವು ಒತ್ತಾಯಿಸುತ್ತಿದೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಇದು ಇಂಧನ ಆಮದಿನ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಭಾರತವು ಪ್ರಸ್ತುತ ತನ್ನ ಇಂಧನ ಬೇಡಿಕೆಯ ಶೇ 82 ಕ್ಕಿಂತ ಹೆಚ್ಚು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತದೆ. ಪರ್ಯಾಯ ಇಂಧನಗಳು ಮತ್ತು ಎಲೆಕ್ಟ್ರಿಕ್ ಕಾರುಗಳ ಬಳಕೆಯಿಂದ, ಭವಿಷ್ಯದಲ್ಲಿ ಆ ಮಟ್ಟದ ಅವಲಂಬನೆಯು ಕಡಿಮೆಯಾಗುವ ಸಾಧ್ಯತೆಯಿದೆ.

ವಿಚಿತ್ರ ಘಟನೆ: ಮಾಲಿನ್ಯ ಪ್ರಮಾಣಪತ್ರ ಕೇಳಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ವಾಹನಗಳ ಸಂಖ್ಯೆ 2019ರ ಪ್ರಕಾರ 29 ಕೋಟಿಗೂ ಅಧಿಕವಿದ್ದು, ಇವೆಲ್ಲವೂ ಇಂಧನ ಚಾಲಿತ ವಾಹನಗಳಾಗಿವೆ. ಕಾರ್ಬನ್ ಹೊರಸೂಸುವಿಕೆಯು ಬಹುತೇಕ ವಾಹನಗಳಿಂದಲೇ ಹೆಚ್ಚಾಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸರ್ಕಾರಗಳು ಶ್ರಮಿಸುತ್ತಿವೆ. ಈ ನಡುವೆ ಎಲೆಕ್ಟ್ರಿಕ್ ವಾಹನಗಳಿಗೆ ಮಾಲಿನ್ಯ ಕುರಿತು ದಂಡ ಹಾಕಿರುವುದು ವಿಪರ್ಯಾಸ.

Most Read Articles

Kannada
English summary
The traffic police fined an electric scooter for not having a pollution certificate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X