ಕಾರಿನಲ್ಲಿ ಆಹಾರವನ್ನಿಟ್ಟರೆ ಎದುರಾಗಬಹುದಾದ ತೊಂದರೆಗಳಿವು
ಇತ್ತೀಚಿನ ದಿನಗಳಲ್ಲಿ ಕಾರುಗಳು ಜನರ ಅಗತ್ಯವಾಗಿ ಮಾರ್ಪಟ್ಟಿವೆ. ಆದರೆ ಸಾಕಷ್ಟು ಜನರು ಆಹಾರವನ್ನು ಕಾರಿನಲ್ಲಿಯೇ ಬಿಡುತ್ತಾರೆ. ಆದರೆ ಈ ರೀತಿ ಕಾರಿನಲ್ಲಿ ಆಹಾರವನ್ನು ಬಿಡುವುದು ಎಷ್ಟು ತಪ್ಪು ಎಂಬ ಅರಿವು ಜನರಿಗಿರುವುದಿಲ್ಲ. ಕಾರಿನಲ್ಲಿ ಆಹಾರವನ್ನು ಬಿಟ್ಟರೆ ಯಾವ ರೀತಿಯ ತೊಂದರೆಗಳಾಗುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಕೊಳಕು ವಾಸನೆ
ಆಹಾರವನ್ನು ಹಲವು ದಿನಗಳವರೆಗೆ ಕಾರಿನಲ್ಲಿಯೇ ಬಿಡುವುದರಿಂದ ಆಹಾರವು ಕೊಳೆಯಲು ಆರಂಭಿಸಿ ದುರ್ವಾಸನೆಯನ್ನುಂಟುಮಾಡುತ್ತದೆ. ಈ ದುರ್ವಾಸನೆಯಿಂದಾಗಿ ಕಾರಿನೊಳಗೆ ವಿವಿಧ ಪ್ರಾಣಿಗಳು ಪ್ರವೇಶಿಸುತ್ತವೆ. ಇದರಿಂದ ಕಾರಿಗೆ ಹಾನಿಯಾಗುತ್ತದೆ. ಕೆಲವೊಮ್ಮೆ ಈ ವಾಸನೆಯು ವಾರಗಳವರೆಗೆ ಹೋಗುವುದಿಲ್ಲ.

ಈ ವಾಸನೆಯಿಂದ ಜನರು ಸಂಕಷ್ಟವನ್ನು ಅನುಭವಿಸುತ್ತಾರೆ. ಇದರಿಂದ ಕಾರು ಚಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಈ ವಾಸನೆಯನ್ನು ಹೋಗಲಾಡಿಸಲುಕಾರಿನಲ್ಲಿ ಅಡಿಗೆ ಸೋಡಾವನ್ನು ಇಡಬಹುದು. ಅಡಿಗೆ ಸೋಡಾ ಕಾರಿನಲ್ಲಿರುವ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2. ಬ್ಯಾಕ್ಟೀರಿಯಾ ಹರಡುವಿಕೆ
ಕಾರನ್ನು ಸೂರ್ಯನ ಬೆಳಕಿನಲ್ಲಿ ನಿಲ್ಲಿಸಿದಾಗ ಕಾರಿನೊಳಗಿನ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಬ್ಯಾಕ್ಟೀರಿಯಾಗಳು ಬೆಳೆಯಲು ಶಾಖ ಹಾಗೂ ತೇವಾಂಶದ ಅಗತ್ಯವಿರುತ್ತದೆ. ಈ ಕಾರಣಕ್ಕೆ ಯಾವುದೇ ಆಹಾರ ಪದಾರ್ಥವನ್ನು ಕಾರಿನೊಳಗೆ ಬಿಡದೇ ಇರುವುದು ಒಳಿತು.

3. ಫುಡ್ ಪಾಯ್ಸನಿಂಗ್
ಬ್ಯಾಕ್ಟೀರಿಯಾದ ಹರಡುವಿಕೆಯಿಂದ ಫುಡ್ ಪಾಯ್ಸನಿಂಗ್ ಉಂಟಾಗುತ್ತದೆ. ಕಾರಿನಲ್ಲಿಡುವ ಆಹಾರದಲ್ಲಿ ಬ್ಯಾಕ್ಟೀರಿಯಾ ಹರಡುತ್ತದೆ. ಆ ಆಹಾರವನ್ನು ಸೇವಿಸಿದಾಗ ಆಹಾರ ಸೇವಿಸುವ ವ್ಯಕ್ತಿಯು ಫುಡ್ ಪಾಯ್ಸನಿಂಗ್'ಗೆ ತುತ್ತಾಗುತ್ತಾನೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

4. ಇಲಿಗಳು
ಕಾರಿನಲ್ಲಿರುವ ಆಹಾರವು ಇಲಿಗಳನ್ನು ಆಕರ್ಷಿಸುತ್ತದೆ. ಕಾರಿನೊಳಕ್ಕೆ ಹೋಗಲು ಇಲಿಗಳು ಕಾರಿನ ವೈರ್, ಅಪ್‌ಹೋಸ್ಟ್ರಿ, ಎಸಿ, ಎಂಜಿನ್'ಗಳನ್ನು ಕಚ್ಚಿ ಹಾಕಿಹಾನಿಯುಂಟು ಮಾಡುತ್ತವೆ.

ಕಾರಿನ ಈ ಭಾಗಗಳನ್ನು ಸರಿಪಡಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಇಲಿಗಳು ಕಾರಿನಲ್ಲಿಯೇ ನೆಲೆಸಲು ಆರಂಭಿಸಿದರೆ ವಾಹನವನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗದೇ ಹೋಗಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

5. ಬಾಟಲ್ ಫೈರ್
ಮೊದಲ ಬಾರಿಗೆ ಈ ಶಬ್ದವನ್ನು ಕೇಳಿದರೆ ವಿಚಿತ್ರವೆನಿಸಬಹುದು. ಆದರೆ ಕಾರಿನ ಮೇಲ್ಭಾಗದಲ್ಲಿಡುವ ನೀರಿನ ಬಾಟಲಿಯಿಂದ ಕಾರುಗಳು ಬೆಂಕಿಗೆ ಆಹುತಿಯಾದ ಹಲವು ಘಟನೆಗಳು ವರದಿಯಾಗಿವೆ. ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು ಮಸೂರದಂತೆ ಕಾರ್ಯನಿರ್ವಹಿಸಿ ಸೂರ್ಯನ ಶಾಖವನ್ನು ಒಂದು ಹಂತಕ್ಕೆ ಕೇಂದ್ರೀಕರಿಸುತ್ತದೆ.

ಈ ಪ್ರಕ್ರಿಯೆಯು ಕಾರಿನ ಅಪ್‌ಹೋಸ್ಟ್ರಿಯ ತಾಪಮಾನವನ್ನು ಹೆಚ್ಚಿಸಿ ಕಾರಿಗೆ ಬೆಂಕಿ ತಗುಳಲು ಕಾರಣವಾಗಬಹುದು. ಈ ಕಾರಣಕ್ಕೆ ನೀರು ತುಂಬಿರುವ ಪ್ಲಾಸ್ಟಿಕ್ ಬಾಟಲಿಯನ್ನು ಎಂದಿಗೂ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಡಬಾರದು.


Click it and Unblock the Notifications