ಹೊಸ ಕಾರಿಗಿಂತಲೂ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ಈ ವಿಶೇಷತೆಗಳಿದ್ದರೆ ಹಳೆಯ ವಾಹನಕ್ಕೆ ಮೌಲ್ಯ ಹೆಚ್ಚು!

ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರವು ಅತಿ ದೊಡ್ಡ ಉದ್ಯಮವಾಗಿ ಹೊರಹೊಮ್ಮದೆ. ವಿಶ್ವ ಆಟೋಮೊಬೈಲ್ ಕ್ಷೇತ್ರದಲ್ಲೂ ಈ ವರ್ಷ 4ನೇ ಸ್ಥಾನ ಪಡೆದುಕೊಂಡು ಭಾರತ ಗುರ್ತಿಸಿಕೊಂಡಿದೆ. ಇದಕ್ಕೆ ಕಾರಣ ದೇಶದಲ್ಲಿ ವಾಹನ ಉತ್ಪಾದನೆ ಹಾಗೂ ರಫ್ತುಗಳ ಸಂಖ್ಯೆ ಹೆಚ್ಚಾಗಿರುವುದು. ಇದು ಹೀಗಿದ್ದರೆ ಹಳೆಯ ಕಾರುಗಳ ಮಾರುಕಟ್ಟೆ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಇಂದು ಹೆಚ್ಚಿನ ಜನರು ಬಳಸಿದ ಹಳೆಯ ಕಾರುಗಳನ್ನು ಸಹ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಒಬ್ಬೊಬ್ಬರ ವಿವರಣೆ ಒಂದೊಂದು ರೀತಿಯಲ್ಲಿದ್ದು, ಬಹುತೇಕ ಮಂದಿ ಕ್ಲಾಸಿಕ್ ಕಾರುಗಳ ಶೇಖರಣೆಯೇ ನಮ್ಮ ಮುಖ್ಯ ಉದ್ದೇಶ ಎನ್ನುತ್ತಾರೆ. ಭಾರತದಲ್ಲಿ ನಾವು ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿಯಂತಹ ಕಾರುಗಳನ್ನು ಸುರಕ್ಷಿತವಾಗಿ ಇಡುವುದನ್ನು ನೋಡಿದ್ದೇವೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಇದಕ್ಕೆ ಕಾರಣ ಕೆಲವು ಕಾರುಗಳು ತನ್ನ ಹಳೆಯ ಲುಕ್ ಉಳಿಸಿಕೊಂಡು ಕ್ಲಾಸಿಕ್ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೆ ಅಂತಹ ಮಾದರಿಗಳಿಗೆ ಜನ ಕೋಟ್ಯಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಈ ಮೂಲಕ ಕೆಲವೊಮ್ಮೆ ಹಳೆಯ ಕಾರುಗಳು ಹೊಸ ಕಾರುಗಳಿಗಿಂತ ಹೆಚ್ಚು ದುಬಾರಿಯಾಗುತ್ತವೆ. ಆದರೆ ಇವುಗಳ್ನು ಹೆಚ್ಚಾಗಿ ಬಳಸುವುದಿಲ್ಲ, ಕಾರಣ ಈ ಹಳೆಯ ಕಾರುಗಳು ಉತ್ತಮ ಕಂಡಿಷನ್‌ನಲ್ಲಿರುವುದಿಲ್ಲ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಈ ಹಿಂದೆಯು ಹಳೆಯ ಕಾರುಗಳನ್ನು ಖರೀದಿಸಿ ಬಳಸಿದ ಹಲವರು ಅಪಘತಗಳಿಗೆ ತುತ್ತಾಗಿದ್ದಾರೆ. ಎಲ್ಲಾ ಕಾರುಗಳು ಕಂಡಿಷನ್‌ನಲ್ಲಿ ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ. ಕೆಲವು ಕಾರುಗಳು ಹಳೆಯದಾದರು ಮಾಲೀಕರು ಸರ್ವಿಸ್ ಮಾಡಿಸುವ ಮೂಲಕ ಉತ್ತಮವಾಗಿ ನೋಡಿಕೊಂಡಿರುತ್ತಾರೆ. ಹಾಗೆಂದು ಕೇವಲ ಕಂಡಿಷನ್ ನೋಡಿ ಕಾರಿಗೆ ಬೆಲೆ ಹೆಚ್ಚಾಗುವುದಿಲ್ಲ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಹಾಗಾದರೆ ಹಳೆಯ ಕಾರುಗಳಲ್ಲಿ ಉತ್ತಮ ಬೆಲೆಗೆ ಕಾರನ್ನು ಮಾರಾಟ ಮಾಡಬೇಕೆ ಎಂದು ನಿರ್ಧರಿಸಲು ಯಾವೆಲ್ಲಾ ಅಂಶಗಳನ್ನು ನೋಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಒಂದು ಕಾರು 25 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ ಅದನ್ನು ಹಳೆಯ ಕ್ಲಾಸಿಕ್ ಕಾರ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಅಂತಹ ಹಳೆಯ ಕಾರುಗಳಲ್ಲಿ, ಕೆಲವು ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳು ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಈ 4 ವಿಷಯಗಳು ನಿರ್ಣಾಯಕ

1. ವಾಹನಕ್ಕೆ ವಿಶೇಷತೆ ಇರಬೇಕು

2. ಹಳೆಯ ಎಂಜಿನಿಯರಿಂಗ್

4. ನಾಸ್ಟಾಲ್ಜಿಯಾ

3. ಹೂಡಿಕೆ

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಕಾರಿಗೆ ವಿಶೇಷತೆ ಇರಬೇಕು

ಹಳೆಯ ವಾಹನವೇ ಆಗಿದ್ದರೂ, ವಿಶೇಷ ವಾಹನವಾಗಿದ್ದರೆ ಹೆಚ್ಚು ಮೌಲ್ಯಯುತವಾಗಿರುತ್ತದೆ. ಅಂದರೆ ನಿರ್ದಿಷ್ಟ ವಾಹನವನ್ನು ತಯಾರಿಸಿದ ಸಮಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಉತ್ಪಾದನೆಯಾಗಿರಬೇಕು, ಆ ವಾಹನವನ್ನು ಇಷ್ಟು ವರ್ಷಗಳವರೆಗೆ ಸುರಕ್ಷಿತವಾಗಿರಿಸಬೇಕು, ಅದೇ ರೀತಿಯಲ್ಲಿ ಇಂದು ಆ ವಾಹನವನ್ನು ತಯಾರಿಸಲು ಅಥವಾ ಖರೀದಿಸಲು ಸಾಧ್ಯವಾಗದಿದ್ದರೆ ಅದನ್ನು ವಿಶೇಷ ವಾಹನವೆಂದು ಪರಿಗಣಿಸಲಾಗುತ್ತದೆ. ಇದು ಸಂಪೂರ್ಣ ವಾಹನವಾಗಿರಬೇಕಾಗಿಲ್ಲ, ವಾಹನದ ನಿರ್ದಿಷ್ಟ ಅಥವಾ ಕೆಲವು ವೈಶಿಷ್ಟ್ಯವು ವಿಶೇಷವಾಗಿದ್ದರೆ ಅದು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯನ್ನು ಹೊಂದಿರುತ್ತದೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ನಾಸ್ಟಾಲ್ಜಿಯಾ

ಸಾಮಾನ್ಯವಾಗಿ, ಹಳೆಯ ಕಾರುಗಳ ನೋಟವು ಮುಖ್ಯ ಪಾತ್ರ ವಹಿಸುತ್ತದೆ. ಹಳೆಯ ಕಾರುಗಳನ್ನು ತಯಾರಿಸಿದಾಗ ಹೇಗಿತ್ತೋ ಅದೇ ಲುಕ್‌ ಅನ್ನು ಉಳಿಸಿಕೊಂಡಿರಬೇಕು. ಉದಾಹರಣೆಗೆ, ಕೆಲವರು ಹಳೆಯ ವಾಹನಕ್ಕೆ ಹೊಸ ಎಂಜಿನ್ ಅನ್ನು ಅಳವಡಿಸುತ್ತಾರೆ. ಇದು ಹಳೆಯ ವಾಹನಕ್ಕಿಂತ ಕಡಿಮೆ ಮೌಲ್ಯವನ್ನು ಪಡೆಯುತ್ತದೆ. ಹಾಗಾಗಿ ಹಳೆಯ ನೋಟದ ಜೊತೆಗೆ ಎಲ್ಲಾ ವೈಶಿಷ್ಟ್ಯಗಳು ಹಾಗೇ ಇದ್ದರೇ ವಾಹನಕ್ಕೆ ಉತ್ತಮ ಬೆಲೆ ದೊರೆಯಲಿದೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಕೆಲವು ಹೂಡಿಕೆಗಳು

ಇಂದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಅಥವಾ ಶೀಘ್ರದಲ್ಲೇ ಸ್ಥಗಿತಗೊಳ್ಳಲಿರುವ ಉತ್ತಮ ಫೀಚರ್ಸ್, ಡಿಸೈನ್ ಒಳಗೊಂಡಿರುವ ವಾಹನಗಳನ್ನು ಈಗ ಖರೀದಿಸಿದರೆ, ಅದಕ್ಕೆ ಭವಿಷ್ಯದಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇರುತ್ತದೆ. ಇದು ಕೇವಲ ತಂತ್ರಜ್ಞಾನ ವಾಗಿರಬೇಕಿಲ್ಲ. ಬದಲಾಗಿ ವಿನ್ಯಾಸ, ವೈಶಿಷ್ಟ್ಯಗಳು, ಬಣ್ಣ, ದೇಹ ರಚನೆಯೂ ಆಗಿರಬಹುದು.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಹಳೆಯ ಇಂಜಿನಿಯರಿಂಗ್

ಆಟೋಮೊಬೈಲ್ ಕ್ಷೇತ್ರವೇ ಹಾಗೆ, ಇಂಜಿನಿಯರಿಂಗ್ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಲೇ ಇರುತ್ತದೆ. ಹಾಗಾಗಿ ನಮ್ಮಲ್ಲಿರುವ ಹಳೆಯ ಕಾರು ಅತ್ಯಂತ ಅಪರೂಪದ ಅಥವಾ ಅತ್ಯಂತ ಹಳೆಯದಾದ ಇಂಜಿನಿಯರಿಂಗ್ ಕೆಲಸವನ್ನು ಹೊಂದಿರುವ ಪ್ರಸ್ತುತ ಬಳಕೆಯಲ್ಲಿಲ್ಲದ ಅಥವಾ ಸದ್ಯಕ್ಕೆ ಅಭಿವೃದ್ಧಿಪಡಿಸಲು ಸಾಧ್ಯವಾಗದ ವಾಹನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.

ಹೊಸ ಕಾರುಗಳಿಗಿಂತ ದುಬಾರಿ ಈ ಬಳಸಿದ ಕ್ಲಾಸಿಕ್ ಕಾರುಗಳು: ನಿಮ್ಮ ವಾಹನಕ್ಕೂ ಈ ವಿಶೇಷತೆಗಳಿವೆಯೇ ನೋಡಿ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮೇಲೆ ತಿಳಿಸಲಾದ 4 ವಿಷಯಗಳನ್ನೊಳಗೊಂಡ ವಾಹನಗಳನ್ನು ಇಂದು ಅನೇಕ ಜನರು ಲಕ್ಷಗಟ್ಟಲೇ ಪಾವತಿಸಿ ಖರೀದಿಸುತ್ತಿದ್ದಾರೆ. ಕೆಲವೊಮ್ಮೆ ವಾಹನದ ಬೆಲೆ ಕೋಟಿ ರೂ.ಗು ತಲುಪಿ ಹೊಸ ಕಾರಿಗೂ ಸಿಗದ ಬೆಲೆಯನ್ನು ಪಡೆದುಕೊಳ್ಳುತ್ತದೆ. ವಾಸ್ತವವಾಗಿ ಇದಕ್ಕೆ ಕಾರಣ ಕ್ಲಾಸಿಕ್ ಮಾದರಿಗಳಲ್ಲಿನ ಎಂಜಿನೀಯರಿಂಗ್ ವರ್ಕ್ ಹಾಗೂ ವಿನ್ಯಾಸ ಇಂದಿನ ಕಾಲದಲ್ಲಿ ಸಿಗದಿರುವುದು. ಹಾಗಾಗಿಯೇ ಕ್ಲಾಸಿಕ್ ಲವರ್ಸ್ ಲಕ್ಷಗಟ್ಟಲೇ ಹಣ ಸುರಿದು ತಮ್ಮಿಷ್ಟದ ವಾಹನಗಳನ್ನು ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ.

Most Read Articles

Kannada
English summary
These Used Classic Cars Are More Expensive Than New Cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X