Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಿಮೋಟ್'ನಿಂದ ಕಾರು ಲಾಕ್ ಮಾಡುವವರೇ ಎಚ್ಚರ, ಈ ರೀತಿಯಲ್ಲೂ ಬ್ಯಾಗ್ ಎಗರಿಸುತ್ತಾರೆ ಖದೀಮರು
ಅಪರಿಚಿತನೊಬ್ಬ ಪಾರ್ಕ್ ಮಾಡಲಾಗಿರುವ ಕಾರಿನಿಂದ ಬ್ಯಾಗ್ ಕದ್ದು ಹೋಗುತ್ತಿರುವ ವೀಡಿಯೊವನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಘಟನೆ ಕಳ್ಳತನವನ್ನು ಹೀಗೂ ಮಾಡಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಬಹುತೇಕ ಕಾರು ಮಾಲೀಕರು ಕಾರುಗಳನ್ನು ನಿಲ್ಲಿಸಿದ ನಂತರ ಕಾರಿನ ಎಲ್ಲಾ ಬಾಗಿಲುಗಳು ಲಾಕ್ ಆಗಿವೆ ಎಂದೇ ನಂಬುತ್ತಾರೆ. ರಿಮೋಟ್ ನಿಂದ ಲಾಕ್ ಮಾಡಿದ ನಂತರ ಮತ್ತೊಮ್ಮೆ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ದುಷ್ಕರ್ಮಿಯೊಬ್ಬ ಹೇಗೆ ಕಾರಿನಿಂದ ಬ್ಯಾಗ್ ಅನ್ನು ಹೊತ್ತೊಯ್ಯುತ್ತಾನೆ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸುವ ಮೊದಲು ಕಾರಿನ ಬಳಿಯೇ ನಿಂತಿರುತ್ತಾನೆ. ಕಾರು ಮಾಲೀಕನಿಗೆ ಗೊತ್ತಾಗದ ರೀತಿಯಲ್ಲಿ ಕಾರಿನ ಹಿಂಭಾಗದ ಬಾಗಿಲನ್ನು ತೆರೆದು ಮುಂದೆ ಹೋಗುತ್ತಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನ ಹಿಂಬಾಗಿಲು ಸರಿಯಾಗಿ ಮುಚ್ಚದೇ ಇರುವುದನ್ನು ಗಮನಿಸದ ಕಾರು ಮಾಲೀಕ ರಿಮೋಟ್ ನಿಂದ ಕಾರನ್ನು ಲಾಕ್ ಮಾಡಿ ಅಲ್ಲಿಂದ ಹೊರಟು ಹೋಗುತ್ತಾರೆ. ಅವರು ಹೋದ ನಂತರ ಕಾರು ನಿಂತಿರುವ ಜಾಗಕ್ಕೆ ಮತ್ತೆ ಬರುವ ಖದೀಮ ಸುತ್ತಲೂ ನೋಡಿ ಕಾರಿನೊಳಗೆ ಹೋಗಿ ಕಾರಿನಿಂದ ಬ್ಯಾಗ್ ಅನ್ನು ಕದ್ದೊಯ್ಯುತ್ತಾನೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊ ಎಲ್ಲಾ ಕಾರು ಮಾಲೀಕರಿಗೆ ಪಾಠವಾಗಿದೆ. ಕಾರನ್ನು ರಿಮೋಟ್ ನಿಂದ ಲಾಕ್ ಮಾಡಿದ ತಕ್ಷಣ ಸುರಕ್ಷಿತವಾಗಿರುತ್ತದೆ ಎಂದು ನಂಬಿಕೊಂಡವರು ಈ ವೀಡಿಯೊವನ್ನೊಮ್ಮೆ ನೋಡಲೇ ಬೇಕು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ವೀಡಿಯೊ ನೋಡಿದವರು ಒಂದು ಕ್ಷಣ ಶಾಕ್ ಆಗುವುದು ಖಚಿತ. ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಖದೀಮನ ವರ್ತನೆಗಳಲ್ಲವೂ ಸೆರೆಯಾಗಿವೆ. ಆದರೆ ಈ ಘಟನೆ ನಡೆದಿರುವುದು ಎಲ್ಲಿ ಎಂಬ ಬಗ್ಗೆ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

ರಿಮೋಟ್ ನಿಂದ ಕಾರು ಲಾಕ್ ಮಾಡುವ ಕಾರು ಮಾಲೀಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಲೇಖನವನ್ನು ಪ್ರಕಟಿಸಲಾಗಿದೆ. ಕಾರ್ ಅನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ತೆರಳುವ ಮುನ್ನ ಎಷ್ಟು ಜಾಗೃತಿ ವಹಿಸಬೇಕೆಂಬುದನ್ನು ಈ ವೀಡಿಯೊ ತೋರಿಸುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ರಿಮೋಟ್ ನಿಂದಲೇ ಆಗಲಿ, ಕೀಯಿಂದಲೇ ಆಗಲಿ ಕಾರಿನ ಎಲ್ಲಾ ಡೋರುಗಳು ಸರಿಯಾಗಿ ಲಾಕ್ ಆಗಿವೆ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಅಲ್ಲಿಂದ ತೆರಳುವುದು ಸೂಕ್ತ. ಇಲ್ಲದಿದ್ದರೆ ಕಾರಿನಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡು ಗೋಳಾಡ ಬೇಕಾಗುತ್ತದೆ.

ಈ ರೀತಿಯ ಘಟನೆಗಳು ದೇಶದ ಹಲವು ಭಾಗಗಳಲ್ಲಿ ನಡೆಯುತ್ತವೆ. ಆದರೆ ಅನೇಕ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಈ ಘಟನೆಯಲ್ಲಿ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿದ್ದ ಕಾರಣ ಘಟನೆ ಬೆಳಕಿಗೆ ಬಂದಿದೆ. ಖದೀಮ ಬ್ಯಾಗ್ ಕದಿಯುವ ವೇಳೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿರುವುದು ಆತನ ಗಮನಕ್ಕೆ ಬಂದಿಲ್ಲ.