ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಕೆಲವು ಪೊಲೀಸರ ವಿರುದ್ಧ ಆರೋಪಗಳು ಕೇಳಿ ಬಂದರೂ ಸಾರ್ವಜನಿಕರು ಈಗಲೂ ಸಹ ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಪೊಲೀಸರಿಂದ ತಮಗೆ ನ್ಯಾಯ ಹಾಗೂ ರಕ್ಷಣೆ ಸಿಗುತ್ತದೆ ಎಂಬುದು ಬಹುತೇಕ ಜನರ ಅಭಿಪ್ರಾಯ.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಅದರಂತೆ ಹಲವು ಪೊಲೀಸ್ ಠಾಣೆಗಳು ಮಾನವೀಯತೆಯಿಂದ ಹಾಗೂ ಘನತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣಬಹುದು. ಪೊಲೀಸ್ ಠಾಣೆ ಸಮೀಪ ಕಾರು ನಿಲ್ಲಿಸಿದರೆ ಯಾವುದೇ ತೊಂದರೆಯಾಗುವುದಿಲ್ಲವೆಂಬ ಅತಿಯಾದ ಆತ್ಮವಿಶ್ವಾಸದಿಂದ ತನ್ನ ಕಾರನ್ನು ಬಿಟ್ಟುಹೋದ ವ್ಯಕ್ತಿಯೊಬ್ಬರಿಗೆ ದೊಡ್ಡ ಆಘಾತ ಎದುರಾಗಿದೆ.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಪೊಲೀಸ್ ಠಾಣೆ ಸಮೀಪವೇ ನಿಲ್ಲಿಸಿದ್ದ ಕಾರಿನ ವ್ಹೀಲ್'ಗಳನ್ನು ಕಳವು ಮಾಡಲಾಗಿದೆ. ಪೊಲೀಸ್ ಠಾಣೆ ಸಮೀಪ ನಿಲ್ಲಿಸಿದ್ದ ಕಾರಿನಲ್ಲಿದ್ದ ವ್ಹೀಲ್'ಗಳನ್ನೇ ಕಳುವು ಮಾಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಇದರಿಂದಾಗಿ ಕಳ್ಳರು ನಿರ್ಭಯವಾಗಿ ಓಡಾಡುತ್ತಿರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳತನ ಹಾಗೂ ವಾಹನಗಳ ಬಿಡಿಭಾಗಗಳ ಕಳ್ಳತನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಕಳುವು ಪ್ರಕರಣಗಳು ಹೆಚ್ಚಾಗಿವೆ.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

30 ವರ್ಷದ ಮಹಾರಾಷ್ಟ್ರದ ಪುಣೆ ನಿವಾಸಿ ರವೀಂದ್ರ ಭಗತ್‌ಚಂದ್ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹೊಂದಿದ್ದಾರೆ. ಕಳೆದ ಸೋಮವಾರ ಅವರ ಮನೆಯಲ್ಲಿ ಸಣ್ಣ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಲು ಅವರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಅವರ ಮನೆಯಲ್ಲಿ ವಾಹನ ನಿಲುಗಡೆ ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ, ಅವರು ತಮ್ಮ ಕಾರನ್ನು ಸುರಕ್ಷಿತ ಸ್ಥಳದಲ್ಲಿ ಪಾರ್ಕ್ ಮಾಡಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಸಿಕಾಲಿ ಪೊಲೀಸ್ ಠಾಣೆಯ ಬಳಿ ಕಾರು ನಿಲ್ಲಿಸಿದ್ದಾರೆ.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ತಮ್ಮ ಸೆಲೆರಿಯೊ ಕಾರನ್ನು ಸೋಮವಾರ ರಾತ್ರಿ ಪೊಲೀಸ್ ಠಾಣೆಯಿಂದ 50 ಮೀಟರ್ ದೂರದಲ್ಲಿರುವ ರಸ್ತೆಬದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದಾರೆ. ಪೊಲೀಸ್ ಠಾಣೆ ಸಮೀಪದಲ್ಲಿರುವ ಕಾರಣಕ್ಕೆ ಕಳ್ಳತನವಾಗುವುದಿಲ್ಲವೆಂದು ವಿಶ್ವಾಸವನ್ನು ಅವರು ಹೊಂದಿದ್ದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಆದರೆ ಮರುದಿನ ಬೆಳಿಗ್ಗೆ ಕಾರನ್ನು ತೆಗೆದುಕೊಳ್ಳಲು ಬಂದಾಗ ಅಲ್ಲಿದ್ದ ದೃಶ್ಯ ನೋಡಿ ಬೆಚ್ಕಿ ಬಿದ್ದಿದ್ದಾರೆ. ಕಾರಿನಲ್ಲಿದ್ದ ವ್ಹೀಲ್'ಗಳನ್ನು ಹೊರ ತೆಗೆದಿದ್ದ ಖದೀಮರು ವ್ಹೀಲ್'ಗಳಿದ್ದ ಜಾಗದಲ್ಲಿ ದೊಡ್ಡ ಕಲ್ಲುಗಳನ್ನು ಇಟ್ಟಿದ್ದರು.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಅವರು ತಕ್ಷಣವೇ ಹತ್ತಿರದಲ್ಲಿಯೇ ಇದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಸಿಸಿಟಿವಿಯಲ್ಲಿ ನಾಲ್ಕು ಜನರು ವಿವಿಧ ವಾಹನಗಳಲ್ಲಿ ಬಂದು ವ್ಹೀಲ್'ಗಳನ್ನು ಕದಿಯುತ್ತಿರುವುದು ಕಂಡು ಬಂದಿದೆ. ಪೊಲೀಸರು ಈ ಅಪರಿಚಿತ ವ್ಯಕ್ತಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಳ್ಳರು ಕಾರಿನ ವ್ಹೀಲ್ ಮಾತ್ರವಲ್ಲದೆ ಕಾರಿನ ಬ್ರೇಕ್ ಕ್ಯಾಲಿಪರ್‌ ಹಾಗೂ ಡಿಸ್ಕ್'ಗಳನ್ನು ಸಹ ಕದ್ದಿದ್ದಾರೆ.

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಕಳುವಾಗಿರುವ ಟಯರ್‌ಗಳು ಮೊತ್ತ ರೂ.20 ಸಾವಿರಗಳೆಂದು ತಿಳಿದು ಬಂದಿದೆ. ಕಾರಿನ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಸೆರೆಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೊಲೀಸ್ ಠಾಣೆ ಬಳಿ ನಿಂತಿದ್ದ ಕಾರಿನಿಂದಲೇ ಟಯರ್'ಗಳನ್ನು ಕದ್ದೊಯ್ದ ಖದೀಮರು

ಈ ರೀತಿಯ ಘಟನೆಗಳಿಂದ ವಾಹನ ಮಾಲೀಕರು ಭಯಭೀತರಾಗುತ್ತಿದ್ದಾರೆ. ಈ ರೀತಿಯ ಘಟನೆಗಳು ಸುರಕ್ಷಿತ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರದ ವಾಹನ ಮಾಲೀಕರ ನಿದ್ರೆ ಕೆಡಿಸಿವೆ. ಈ ರೀತಿಯ ಘಟನೆಗಳಾಗುವುದನ್ನು ತಡೆಗಟ್ಟಲು ಸರಿಯಾದ ಪಾರ್ಕಿಂಗ್ ಸ್ಥಳವನ್ನು ಹೊಂದಿರುವುದು ಅವಶ್ಯಕ. ಈ ಘಟನೆಯ ಬಗ್ಗೆ ಪುಣೆ ಮಿರರ್ ವರದಿ ಪ್ರಕಟಿಸಿದೆ.

Most Read Articles

Kannada
English summary
Thieves steal wheels of celerio car parked in front of the police station. Read in Kannada.
Story first published: Friday, February 19, 2021, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X