ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವುದರಿಂದ ಜನರು ತಮ್ಮ ವಾಹನಗಳನ್ನು ಹೊರತೆಗೆಯಲು ಹಲವು ದಿನಗಳು ಬೇಕಾಗುತ್ತವೆ. ಲಾಕ್‌ಡೌನ್ ಅವಧಿಯಲ್ಲಿ ವಿನಾಕಾರಣ ಹೊರ ಬರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಕೆಲವರು ಬೈಕುಗಳನ್ನು ಮನೆಯ ಬಳಿಯೇ ಚಾಲನೆ ಮಾಡುತ್ತಿದ್ದಾರೆ. ಆದರೆ ಕಾರುಗಳನ್ನು ಹೊರ ತೆಗೆದು ಸುತ್ತಾಡುವುದು ಅಷ್ಟು ಸುಲಭವಲ್ಲ. ಆದರೆ ಕಾರುಗಳನ್ನು ಆಗಾಗ್ಗೆ ಸ್ಟಾರ್ಟ್ ಮಾಡಿ ಕನಿಷ್ಠ ಕೆಲವು ಅಡಿಗಳಷ್ಟಾದರೂ ಚಲಿಸಬೇಕು ಎಂಬುದು ವಾಹನ ಪರಿಣಿತರ ಅಭಿಪ್ರಾಯ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಲಾಕ್‌ಡೌನ್ ಕಾರಣಕ್ಕೆ ಕಾರುಗಳನ್ನು ಒಂದೇ ಸ್ಥಳದಲ್ಲಿ ದೀರ್ಘಕಾಲ ನಿಲ್ಲಿಸಿದರೆ, ವಿವಿಧ ಮೆಕಾನಿಕಲ್ ಭಾಗಗಳಿಗೆ ಸಮಸ್ಯೆಗಳು ಉಂಟಾಗುತ್ತವೆ. ಇವುಗಳ ರಿಪೇರಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಅಲ್ಲದೇ ದೀರ್ಘಕಾಲದವರೆಗೆ ಕಾರುಗಳನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದರೇ ಅವುಗಳ ಕಳ್ಳತನವಾಗಬಹುದು. ಕಾರು ಕದಿಯಲು ಸಾಧ್ಯವಾಗದಿದ್ದರೆ ಅವುಗಳ ಬಿಡಿ ಭಾಗಗಳನ್ನೇ ಕದಿಯಲಾಗುತ್ತದೆ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಇದೇ ರೀತಿಯ ಘಟನೆಯೊಂದು ಪಂಜಾಬ್‌ನಿಂದ ವರದಿಯಾಗಿದೆ. ಡಾ.ಆಕಾಶ್ ಎಂಬುವವರು ಪಂಜಾಬ್‌ನ ಪಠಾಣ್‌ಕೋಟ್ ಸಿವಿಲ್ ಆಸ್ಪತ್ರೆಯ ಕರೋನಾ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಡಾ.ಆಕಾಶ್ ತಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಎಂದಿನಂತೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲಸದಲ್ಲಿ ನಿರತರಾಗಿದ್ದ ಅವರು ತಮ್ಮ ಕಾರಿನ ಬಗ್ಗೆ ಗಮನ ಹರಿಸಲಿಲ್ಲ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಕೆಲಸ ಮುಗಿಸಿ ಮನೆಗೆ ಹೋಗಲು ಆಕಾಶ್'ರವರು ತಮ್ಮ ಕಾರಿನ ಬಳಿ ಬಂದಾಗ ಅವರಿಗೆ ಅಚ್ಚರಿ ಎದುರಾಗಿತ್ತು. ಅವರ ಕಾರುಗಳಲ್ಲಿದ್ದ ಟಯರ್'ಗಳನ್ನು ಕದ್ದಿದ್ದ ಖದೀಮರು ಕಾರಿನ ಸುತ್ತಲೂ ಇಟ್ಟಿಗೆಗಳನ್ನು ಇಟ್ಟಿದ್ದರು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಈ ಬಗ್ಗೆ ಮಾತನಾಡಿರುವ ಡಾ.ಆಕಾಶ್, ನಾನು ಪಠಾಣ್‌ಕೋಟ್ ಸಿವಿಲ್ ಆಸ್ಪತ್ರೆಯ ಕರೋನಾ ಐಸೊಲೇಷನ್ ವಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ನಾನು ಆಸ್ಪತ್ರೆ ಹೊರಗೆ ಕಾರು ನಿಲ್ಲಿಸಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಈ ವೇಳೆ ಕಳ್ಳರು ನನ್ನ ಕಾರಿನ ಟಯರ್'ಗಳನ್ನು ಕದ್ದಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಹೊರಗೆ ಕತ್ತಲು ಕವಿದಿದ್ದ ಕಾರಣ ಕಳ್ಳರು ಕಾರಿನ ಎಲ್ಲಾ 4 ಟಯರ್'ಗಳನ್ನು ಕದ್ದೊಯ್ದಿದ್ದಾರೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಈ ಬಗ್ಗೆ ಆಸ್ಪತ್ರೆಯ ಹಿರಿಯ ಅಧಿಕಾರಿ ಡಾ.ರಾಕೇಶ್ ಸರ್ಪಾಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕರ್ತವ್ಯ ನಿರತ ವೈದ್ಯರ ಕಾರಿನ ಟಯರ್'ಗಳನ್ನು ಕದ್ದೊಯ್ದ ಖದೀಮರು

ಯಾವುದೇ ಸಲಕರಣೆಗಳನ್ನು ಬಳಸದೇ ಕಾರಿನ ಎಲ್ಲಾ ನಾಲ್ಕು ಟಯರ್'ಗಳನ್ನು ತೆಗೆದು ಕಾರಿನ ಸುತ್ತ ಇಟ್ಟಿಗೆಗಳನ್ನು ಇಟ್ಟಿರುವುದನ್ನು ನೋಡಿದರೆ ಇದು ಖಂಡಿತ ವೃತ್ತಿಪರ ಕಳ್ಳರ ಕೈವಾಡ ಎಂಬುದರಲ್ಲಿ ಅನುಮಾನವಿಲ್ಲ. ಈ ಕೃತ್ಯದಲ್ಲಿ 3-4 ಕಳ್ಳರು ಭಾಗಿಯಾಗಿರುವ ಸಾಧ್ಯತೆಗಳಿವೆ. ಈ ಬಗ್ಗೆ ಜಾಗ್ರಣ್ ಪತ್ರಿಕೆ ವರದಿ ಮಾಡಿದೆ.

ಗಮನಿಸಿ: ಮೊದಲ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Thieves steals doctor's car tyres while he was on duty. Read in Kannada.
Story first published: Friday, June 4, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X