Maruti Brezza ಕಳ್ಳತನ... ಟೆನ್ಷನ್ ಬೇಡ... ಪತ್ರ ಬರೆದಿಟ್ಟು ಮಾಲೀಕನಿಗೆ ಕಳ್ಳರ ಸಾಂತ್ವಾನ
ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲೂ ಕಳ್ಳತನ ಸರ್ವೇ ಸಾಮಾನ್ಯ. ಆದರೆ ಇಂತಹ ಕಳ್ಳರು ವಿರಳವಾಗಿರುತ್ತಾರೆ. ಕದ್ದ ಕಾರನ್ನು ಹಿಂದಿರುಗಿಸುವುದಾಗಿ ಪತ್ರ ಬರೆದಿಟ್ಟದ್ದನ್ನು ಕಂಡು ಮಾಲೀಕ ದಂಗಾಗಿದ್ದಾನೆ. ಕೆಲವರಿಗೆ ಇದು ಆಶ್ಚರ್ಯವೆನಿಸಿದರೂ ಕಳ್ಳರು ಭರವಸೆ ನೀಡಿರುವ ಪತ್ರವು ಭಾರೀ ವೈರಲ್ ಆಗಿದೆ.
ಅಸ್ಸಾಂನ ದರ್ರಾಂಗ್ ಜಿಲ್ಲೆಯ ಮಂಗಳದೈ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಅಬ್ದುಲ್ ಅಜೀಜ್ ಎಂಬುವರ ಮನೆಯಿಂದ ಹೊಚ್ಚಹೊಸ ಕಾರನ್ನು ಕದ್ದೊಯ್ದ ಕಳ್ಳರು ಕೆಲವೇ ದಿನಗಳಲ್ಲಿ ಹಿಂದಿರುಗಿಸುವುದಾಗಿ ಭರವಸೆ ನೀಡಿ ಸುಮ್ಮನಿರಲು ಸೂಚಿಸಿದ್ದಾರೆ. ನಾವೆಲ್ಲರೂ ಈ ಹಿಂದೆ ಕಾರು ಕಳ್ಳತನದ ಬಗ್ಗೆ ಕೇಳಿದ್ದೇವೆ, ಕಳ್ಳರು ಒಮ್ಮೆ ಕಾರನ್ನು ಕದ್ದರೆ ಅದು ಪತ್ತೆಯಾಗುವುದಿಲ್ಲ. ಈ ವಿಷಯ ಮಾಲೀಕನಿಗೂ ತಿಳಿದಿರುವಂತಿದೆ ಹಾಗಾಗಿಯೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ವರದಿಗಳ ಪ್ರಕಾರ, AS 01 FL 7552 ನೋಂದಣಿ ಸಂಖ್ಯೆಯ ಕಾರನ್ನು ಮಾಲೀಕ ಅಬ್ದುಲ್ ಅಜೀಜ್ ಅವರ ಮನೆಯಿಂದ ಕಳವು ಮಾಡಲಾಗಿದ್ದು, ಈ ಕುರಿತು ಮಂಗಳದಾಯಿ ಪಟ್ಟಣದ ಜನರಾಮ್ ಚೌಕ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಳ್ಳರು ಅವರ ಹಾಸಿಗೆಯ ಪಕ್ಕದ ಟೇಬಲ್ ಮೇಲಿದ್ದ ಕಾರಿನ ಕೀ ಮತ್ತು ಅವರ ಮನೆಯಿಂದ ಹಣವನ್ನು ಕದ್ದಿದ್ದಾರೆ ಎಂದು ಅಜೀಜ್ ದೂರಿದ್ದಾರೆ. ಹಾಗೆಯೇ ಕಾರು ಕದ್ದೊಯ್ದ ಕಳ್ಳರು ಚೀಟಿ ಬರೆದಿಟ್ಟು ಹೋಗಿದ್ದಾರೆ.
ಘಟನೆಯಿಂದ ಬೇಸರಗೊಂಡು ಗಲಾಟೆ ಮಾಡಬೇಡಿ, ಮೂರು ದಿನ ಸುಮ್ಮನಿದ್ದರೇ ನಿಮ್ಮ ಕಾರನ್ನು ಹಿಂತಿರುಗಿಸುತ್ತೇವೆ. ಸುಮ್ಮನೆ ಗಲಾಟೆ ಮಾಡಿ ಪೊಲೀಸರಿಗೆ ದೂರು ನೀಡಲು ಮುಂದಾದರೆ ನಿಮ್ಮ ಕಾರನ್ನು ಎಂದಿಗೂ ನೋಡಲು ಸಾಧ್ಯವಿಲ್ಲ ಎಂದು ಚೀಟಿಯಲ್ಲಿ ಪರೆದಿಟ್ಟು ಎಚ್ಚರಿಕೆ ನೀಡಿದ್ದಾರೆ. ಉಳಿದಂತೆ ಕಳ್ಳರು ಬೇರೆ ಏನಾದರೂ ಬರೆದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಮ್ಮ ಪ್ರಮೆಯವಿಲ್ಲದೇ ವಾಹನಗಳನ್ನು ಮುಟ್ಟಿದರೇ ಸುಮ್ಮನಿರದ ಮಾಲೀಕರು ಕದ್ದೊಯ್ದು ಎಚ್ಚರಿಕೆ ನೀಡಿದರೆ ಸುಮ್ಮನಿರುವರೇ?

ಘಟನೆಯಿಂದ ಹೆಚ್ಚು ಕೋಪಗೊಂಡಿರುವ ಮಾಲೀಕ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಬ್ದುಲ್ ಅಜೀಜ್ ಹೊಸ ಮಾರುತಿ ಬ್ರೆಝಾ ZXi ಮಾದರಿಯನ್ನು ಕಳೆದುಕೊಂಡಿದ್ದು, ಇದನ್ನು ಕಳೆದ ಮಾರ್ಚ್ 20, 2023 ರಂದು ನೋಂದಾಯಿಸಲಾಗಿದೆ. ಅಬ್ದುಲ್ ಅಜೀಜ್ ಅವರದ್ದು ಸ್ವಂತ ಮನೆಯಾಗಿದ್ದು, ಅವರ ಜಾಗದಲ್ಲಿಯೇ ಕಾರನ್ನು ನಿಲ್ಲಿಸಲಾಗಿತ್ತು. ತುಂಬಾ ಸುಲಭವಾಗಿ ಯಾರಿಗೂ ತುಸು ಅನುಮಾನ ಬಾರದಂತೆ ಅಜೀಜ್ ಅವರ ಕಾರನ್ನು ಎಗರಿಸಿರುವುದು ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ದೆಹಲಿಯಲ್ಲಿ 100ಕ್ಕೂ ಹೆಚ್ಚು ಕಾರುಗಳ ಕಳ್ಳತನ:
ಉತ್ತರ ಭಾರತದಲ್ಲಿ ಕಾರುಗಳ ಕಳ್ಳತನ ಹೆಚ್ಚಾಗಿದೆ. ಕೇವಲ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಆ್ಯಪ್ ಮೂಲಕ ತುಂಬಾ ಸುಲಭವಾಗಿ ಕಾರ್ ಲಾಕ್ ಅನ್ನು ಡಿಕೋಡ್ ಮಾಡಿ ಕದ್ದೊಯ್ಯುತ್ತಿದ್ದಾರೆ. ಕಳ್ಳರು ಮೊದಲಿಗೆ ಮೊಬೈಲ್ ಆಪ್ ಅನ್ನು ಸಿಸ್ಟಮ್‌ಗೆ ಕನೆಕ್ಟ್ ಮಾಡಿ ನಂತರ ಲಾಕ್ ಡಿಕೋಡ್ ಮಾಡುವ ಮೂಲಕ ಕೇವಲ ಎರಡೇ ನಿಮಿಷದಲ್ಲಿ ಕಾರನ್ನು ಕದ್ದು ಪರಾರಿಯಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಜಿಪಿಎಸ್ ಕೂಡ ನಿಷ್ಕ್ರಿಯಗೊಳ್ಳುತ್ತದೆ. ಇದಾದ ನಂತರ ಕಾರಿನ ಮೂಲ ಕೀ ಕೂಡ ಕೆಲಸ ಮಾಡುವುದಿಲ್ಲ.
ಈ ಅಂತಾರಾಜ್ಯ ಗ್ಯಾಂಗ್ ದೆಹಲಿ ಎನ್‌ಸಿಆರ್‌ನಲ್ಲಿ 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಇಸಿಎಂ (ಎಂಜಿನ್ ಕಂಟ್ರೋಲ್ ಯುನಿಟ್) ಪ್ಲೇಟ್ ಹ್ಯಾಕ್ ಮಾಡಲು ಬಳಸಿದ ಇಂಟರ್ನೆಟ್ ಸಂಪರ್ಕಿತ ಸಿಸ್ಟಮ್, ಮೊಬೈಲ್, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರನ್ನು ಕದ್ದ ನಂತರ ನಕಲಿ ದಾಖಲೆಗಳನ್ನು ತಯಾರಿಸಿ ಮತ್ತೊಂದು ನಂಬರ್ ಪ್ಲೇಟ್ ಹಾಕಿ ಕಾರನ್ನು ಮಾರಾಟ ಮಾಡುತ್ತಾರೆ. ಲೂಧಿಯಾನ ಮತ್ತು ಬಿಹಾರದಲ್ಲಿ ಹೆಚ್ಚಿನ ಕಾರುಗಳನ್ನು ಒಂದೆಡೆ ಸೇರಿಸಲಾಗುತ್ತಿತ್ತು. ಪೊಲೀಸರ ಪ್ರಕಾರ, ಈ ಗ್ಯಾಂಗ್ ಹೆಚ್ಚಾಗಿ ಸುಜುಕಿ ಕಾರುಗಳನ್ನು ಕದಿಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications