ಹೊಸ ಕಾರು ಖರೀದಿಯ ವೇಳೆ ನೆನಪಿಡಬೇಕಾದ ಸಂಗತಿಗಳಿವು!

By Manoj Bk

ಹೊಸ ಕಾರು ಖರೀದಿಸಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಕಾರು ಖರೀದಿಸುವ ಮೊದಲು ಜನರು ಶೋರೂಂಗಳಿಗೆ ತೆರಳಿ ಕಾರುಗಳಿಗೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ವಿಚಾರಿಸುತ್ತಾರೆ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ವಿಚಾರಿಸುವಾಗ ಮಾರಾಟ ಪ್ರತಿನಿಧಿಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಕೆಲವು ಸಂಗತಿಗಳನ್ನು ಮಾರಾಟ ಪ್ರತಿನಿಧಿಗಳ ಬಳಿ ಹೇಳದೆ ಇರುವುದೇ ಒಳಿತು. ಇದರಿಂದ ಮಾರಾಟ ಪ್ರತಿನಿಧಿಗಳು ಗ್ರಾಹಕರಿಗೆ ವಂಚಿಸುವುದು ತಪ್ಪುತ್ತದೆ. ಮಾರಾಟ ಪ್ರತಿನಿಧಿಗಳ ಬಳಿ ಯಾವ ವಿಷಯಗಳನ್ನು ಹೇಳಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಈ ಕಾರೇ ನನಗೆ ಬೇಕು ಎಂಬ ಮಾತು

ಜನರು ಅವರಿಗೆ ಇಷ್ಟವಾದ ಕಾರುಗಳನ್ನು ಖರೀದಿಸಲು ಹೆಚ್ಚು ಬೆಲೆ ತೆರಲು ಸಿದ್ಧರಿರುತ್ತಾರೆ ಎಂಬುದು ಕಾರು ಮಾರಾಟ ಪ್ರತಿನಿಧಿಗಳಿಗೆ ತಿಳಿದಿರುತ್ತದೆ. ಒಂದು ವೇಳೆ ನೀವು ಎಷ್ಟೇ ಬೆಲೆಯಾದರೂ ಪರವಾಗಿಲ್ಲ ಇದೇ ಕಾರು ಬೇಕು ಎಂದು ಹೇಳಿದರೆ ಮಾರಾಟ ಪ್ರತಿನಿಧಿಗಳು ಬೆಲೆ ಏರಿಸಲು ಸಿದ್ದರಾಗುತ್ತಾರೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ನಮ್ಮ ಬಜೆಟ್'ಗೆ ಸರಿ ಹೋಗದಿದ್ದರೆ ಇನ್ನೊಂದು ಕಾರನ್ನು ಖರೀದಿಸುವುದಾಗಿ ಮಾರಾಟ ಪ್ರತಿನಿಧಿಗಳಿಗೆ ತಿಳಿಸಿ. ಆಗ ಮಾರಾಟ ಪ್ರತಿನಿಧಿಗಳು ಕಾರಿನ ಬೆಲೆ ಕಡಿಮೆ ಮಾಡುವುದರ ಜೊತೆಗೆ ಹೆಚ್ಚುವರಿ ಕೊಡುಗೆಗಳನ್ನು ನೀಡುವುದಕ್ಕೆ ಮುಂದಾಗುತ್ತಾರೆ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಕಾರಿನ ಬಗ್ಗೆ ಏನೂ ತಿಳಿದಿಲ್ಲ

ಗ್ರಾಹಕರು ನಮಗೆ ಈ ಕಾರಿನ ಬಗ್ಗೆ ಏನೂ ತಿಳಿದಿಲ್ಲವೆಂದು ಹೇಳಿದರೆ ಕಾರು ಮಾರಾಟ ಪ್ರತಿನಿಧಿಗಳು ಅಗತ್ಯವಿಲ್ಲದ ಸಂಗತಿಗಳನ್ನೆಲ್ಲಾ ಹೇಳುತ್ತಾರೆ. ಈ ಮೂಲಕ ಗ್ರಾಹಕರಿಗೆ ಯಾಮಾರಿಸಲು ಮುಂದಾಗುತ್ತಾರೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಈ ಕಾರಣಕ್ಕೆ ಕಾರು ಖರೀದಿಗೂ ಮುನ್ನ ಕಾರಿನ ಬಗೆಗಿನ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ನಿಮಗೆ ಎಲ್ಲಾ ಸಂಗತಿಗಳು ಗೊತ್ತು ಎಂದು ಮಾರಾಟ ಪ್ರತಿನಿಧಿಗಳಿಗೆ ತಿಳಿದರೆ ನಿಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಪಾವತಿಯ ಬಗ್ಗೆ ಮಾಹಿತಿ

ಹೊಸ ಕಾರು ಖರೀದಿಸುವ ಗ್ರಾಹಕರಲ್ಲಿ 84%ನಷ್ಟು ಜನರು ಹಣಕಾಸಿನ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಒಂದು ವೇಳೆ ನೀವು ಪೂರ್ತಿಯಾಗಿ ಹಣ ಪಾವತಿಸುತ್ತಿದ್ದರೂ ಅದರ ಬಗ್ಗೆ ಮಾರಾಟ ಪ್ರತಿನಿಧಿಗೆ ಮುಂಚಿತವಾಗಿ ಹೇಳದಿರಿ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಹಣಕಾಸು ಮೂಲಕ ಕಾರನ್ನು ಖರೀದಿಸಲಿದ್ದೀರಿ ಎಂದು ಕಾರು ವಿತರಕರು ಭಾವಿಸಿದರೆ ಯೋಗ್ಯ ಬೆಲೆಗೆ ಮಾರಾಟ ಮಾಡುವ ಸಾಧ್ಯತೆಗಳಿರುತ್ತವೆ. ಪೂರ್ತಿಯಾಗಿ ಹಣ ಪಾವತಿಸುವ ಬಗ್ಗೆ ಮೊದಲೇ ಮಾಹಿತಿ ನೀಡಿದರೆ ಬೆಲೆ ಹೆಚ್ಚು ಮಾಡುವ ಸಾಧ್ಯತೆಗಳಿರುತ್ತವೆ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ತಕ್ಷಣವೇ ಕಾರು ಬೇಕು

ನಿಮಗೆ ತುರ್ತಾಗಿ ಕಾರಿನ ಅಗತ್ಯವಿದ್ದರೂ ಸಹ ಕಾರು ಮಾರಾಟ ಪ್ರತಿನಿಧಿಗಳಿಗೆ ಅದರ ಬಗ್ಗೆ ತಿಳಿಸದಿರುವುದು ಉತ್ತಮ. ಈ ತಪ್ಪನ್ನು ಮಾಡಿದರೆ ಕಾರಿಗೆ ಹೆಚ್ಚಿನ ಬೆಲೆ ತೆರ ಬೇಕಾಗುತ್ತದೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ಆದಾಯದ ಬಗ್ಗೆ ಮಾಹಿತಿ

ನೀವು ಹೆಚ್ಚು ಆದಾಯವನ್ನು ಪಡೆಯುತ್ತಿದ್ದರೆ ಮಾರಾಟ ಪ್ರತಿನಿಧಿಗಳಿಗೆ ಅದರ ಬಗ್ಗೆ ಮಾಹಿತಿ ನೀಡದಿರಿ. ಹಾಗೆ ಹೇಳಿದರೆ ಕಾರಿಗೆ ಹೆಚ್ಚು ಬೆಲೆ ನೀಡಲು ಸಿದ್ದರಿದ್ದೀರಿ ಎಂದು ಮಾರಾಟ ಪ್ರತಿನಿಧಿಗಳು ಅರಿತುಕೊಳ್ಳುತ್ತಾರೆ.

ಹೊಸ ಕಾರು ಖರೀದಿ ವೇಳೆ ನೆನಪಿಡಬೇಕಾದ ಸಂಗತಿಗಳಿವು

ನಂತರ ಬೆಲೆ ಹೆಚ್ಚಿಸುವ ಸಾಧ್ಯತೆಗಳಿರುತ್ತವೆ. ಕಾರು ಮಾರಾಟ ಪ್ರತಿನಿಧಿಗಳಿಗೆ ತಿಂಗಳಿಗೆ ಇಂತಿಷ್ಟು ಕಾರುಗಳನ್ನು ಮಾರಾಟ ಮಾಡಬೇಕೆಂಬ ಗುರಿಯಿರುತ್ತದೆ. ಜೊತೆಗೆ ಗ್ರಾಹಕರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈ ಕಾರಣಕ್ಕೆ ಹೊಸ ಕಾರು ಖರೀದಿಗೂ ಮುನ್ನ ಆತುರ ಪಡುವುದು ಸರಿಯಲ್ಲ.

Most Read Articles

Kannada
English summary
Things should never say to car sales representatives. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X