ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಅನೇಕ ಜನರಿಗೆ ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸಬೇಕೆಂಬ ಕನಸಿರುತ್ತದೆ. ಕ್ರೂಸ್ ಹಡಗುಗಳು ಹಲವು ವಿಭಿನ್ನ ಸೌಲಭ್ಯಗಳನ್ನು ಹೊಂದಿರುತ್ತವೆ. ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುವಾಗ ಮಾಡುವ ಕೆಲವು ತಪ್ಪುಗಳಿಂದಾಗಿ ಕಹಿ ಅನುಭವವನ್ನು ಪಡೆಯಬೇಕಾಗುತ್ತದೆ.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುವಾಗ ಅನೇಕ ಜನರು ವಿವಿಧ ತಪ್ಪುಗಳನ್ನು ಮಾಡುತ್ತಾರೆ. ಅವು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಕ್ರೂಸ್ ಹಡಗುಗಳಲ್ಲಿ ಈ ತಪ್ಪುಗಳನ್ನು ಮಾಡದಿದ್ದರೆ ಸಾಯುವವರೆಗೂ ನೆನಪಿನಲ್ಲಿ ಉಳಿಯುವಂತ ಅನುಭವಗಳನ್ನು ಹೊಂದಬಹುದು.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ರಜಾದಿನಗಳನ್ನು ಕಳೆಯಲು ಕೆಲವರು ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುತ್ತಾರೆ. ಈ ರಜಾದಿನಗಳಲ್ಲಿ ಯಾವ ರೀತಿಯ ಅನುಭವವನ್ನು ಪಡೆಯಬೇಕು ಎಂಬುದರ ಆಧಾರದ ಮೇಲೆ ಕ್ರೂಸ್ ಹಡಗುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ರಜೆಯನ್ನು ವ್ಯರ್ಥ ಮಾಡಿಕೊಳ್ಳುವುದು ಸತ್ಯ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಕುಟುಂಬದೊಂದಿಗೆ ಪ್ರಯಾಣಿಸುತ್ತಿರುವವರು ಮಕ್ಕಳಿಗೆ ಸೂಕ್ತವಾಗುವ ಹಡಗುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನೈಟ್ ಲೈಫ್ ಹಾಗೂ ಮನರಂಜನೆಯನ್ನು ಬಯಸುವವರು ವಿಹಾರ ನೌಕೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಹಲವಾರು ಜನ ತಮ್ಮ ಅಭಿರುಚಿಗೆ ತಕ್ಕ ನೌಕೆಗಳನ್ನು ಅರಿಸಿಕೊಳ್ಳದೇ ಕೆಟ್ಟ ಅನುಭವವನ್ನು ಹೊಂದಿರುವ ಸಾಕಷ್ಟು ಉದಾಹರಣೆಗಳಿವೆ. ಈ ಕಾರಣಕ್ಕೆ ಪ್ರಯಾಣಕ್ಕೂ ಮುನ್ನ ಯಾವ ರೀತಿಯ ಹಡಗು ಸೂಕ್ತ ಎಂಬುದನ್ನು ನಿರ್ಧರಿಸಿದರೆ ಉತ್ತಮ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಕ್ರೂಸ್ ಹಡಗುಗಳು ಯಾವುದೇ ಸಮಯದಲ್ಲಿ ವೇಳಾಪಟ್ಟಿಯನ್ನು ಬದಲಿಸುತ್ತವೆ. ಈ ಕಾರಣಕ್ಕೆ ಕಾಲಕಾಲಕ್ಕೆ ಈ ಹಡಗುಗಳ ವೇಳಾಪಟ್ಟಿಯನ್ನು ಪರೀಕ್ಷಿಸುವುದು ಒಳ್ಳೆಯದು. ಟಿವಿ ಸೆಲೆಬ್ರಿಟಿ ಮಾರಿಯಾ ಗೊನ್ಜಾಲೆಜ್ ರೋಚೆ ಹಾಗೂ ಅವರ ಪತಿ ಅಲೆಸ್ಸಾಂಡ್ರೊ ಇದರ ಬಗ್ಗೆ ಗಮನ ಹರಿಸದೇ ಹಡಗು ಪ್ರಯಾಣವನ್ನು ತಪ್ಪಿಸಿಕೊಂಡಿದ್ದರು.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಕೈಗಳನ್ನು ಆಗಾಗ್ಗೆ ತೊಳೆಯಿರಿ

ಕ್ರೂಸ್ ಹಡಗುಗಳಲ್ಲಿ ಸೋಂಕುಗಳು ವೇಗವಾಗಿ ಹರಡುತ್ತವೆ. ಕೆಲವೊಮ್ಮೆ ಈ ಹಡಗುಗಳಲ್ಲಿರುವ ಪ್ರತಿಯೊಬ್ಬರೂ ರೋಗಕ್ಕೆ ತುತ್ತಾಗುವ ಅಪಾಯವಿರುತ್ತದೆ. ಆದ್ದರಿಂದ ರೋಗಾಣುಗಳಿಂದ ರಕ್ಷಿಸಿಕೊಳ್ಳಲು ಸೋಪ್ ಹಾಗೂ ಬೆಚ್ಚಗಿನ ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಆಗಾಗ್ಗೆ ತೊಳೆಯುವುದು ಸೂಕ್ತ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಒಂದೊಂದು ಕ್ರೂಸ್ ಹಡಗಿನಲ್ಲಿ ಒಂದೊಂದು ರೀತಿಯ ನಿಯಮಗಳಿರುತ್ತವೆ. ಕೆಲವು ಹಡಗುಗಳು ಪ್ರಯಾಣಿಕರಿಗೆ ವೈನ್, ಷಾಂಪೇನ್ ಹಾಗೂ ಬಿಯರ್ ಕೊಂಡೊಯ್ಯಲು ಅನುಮತಿ ನೀಡಿದರೆ ಕೆಲವು ಹಡಗುಗಳು ಅನುಮತಿ ನಿರಾಕರಿಸುತ್ತವೆ.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಇನ್ನೂ ಕೆಲವು ಕ್ರೂಸ್ ಹಡಗುಗಳು ಒಂದು ಬಾಟಲಿ ವೈನ್ ಹಾಗೂ ಎರಡು ಬಾಟಲಿ ಶಾಂಪೇನ್ ಕೊಂಡೊಯ್ಯಲು ಅನುಮತಿ ನೀಡುತ್ತವೆ. ಪ್ರಯಾಣಕ್ಕೂ ಮುನ್ನ ಈ ನಿಯಮಗಳ ಬಗೆಯೂ ಗಮನ ಹರಿಸುವುದು ಸೂಕ್ತ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಸುರಕ್ಷತಾ ನಿಯಮಗಳನ್ನು ಪಾಲಿಸಿ

ಕ್ರೂಸ್ ಹಡಗಿನಲ್ಲಿ ಹತ್ತಿದ ಕೂಡಲೇ ಅಲ್ಲಿನ ನಿಯಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಕ್ರೂಸ್ ಹಡಗುಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವುದು ಹೇಗೆ, ಲೈಫ್ ಜಾಕೆಟ್ ಬಳಸುವುದು ಹೇಗೆ ಎಂಬ ಎಂಬ ಬಗ್ಗೆ ತರಬೇತಿ ನೀಡಲಾಗುವುದು.

ಕ್ರೂಸ್ ಹಡಗು ಪ್ರಯಾಣಕ್ಕೂ ಮುನ್ನ, ನೆನಪಿಟ್ಟುಕೊಳ್ಳಿ ಈ ಸಂಗತಿಗಳನ್ನ...

ಅಲ್ಲಿನ ಸುರಕ್ಷತಾ ನಿಯಮಗಳನ್ನು ಅರಿತುಕೊಂಡರೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲಿದೆ. ಕ್ರೂಸ್ ಹಡಗುಗಳಲ್ಲಿರುವ ನಿಯಮಗಳನ್ನು ಪಾಲಿಸದೇ ಇರುವ ವ್ಯಕ್ತಿಗಳಿಗೆ ಕೋಸ್ಟ್ ಗಾರ್ಡ್ ಅಥವಾ ಸಂಬಂಧಪಟ್ಟ ಸ್ಥಳೀಯ ಸರ್ಕಾರವು ದಂಡ ವಿಧಿಸುವ ಸಾಧ್ಯತೆಗಳಿರುತ್ತವೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Things to keep in mind before cruise ship travel. Read in Kannada.
Story first published: Monday, October 26, 2020, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X