ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

18 ವರ್ಷ ತುಂಬುತ್ತಿದ್ದಂತೆ ಯುವ ಜನತೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಿದ್ಧರಾಗುತ್ತಾರೆ. ವಾಸ್ತವವಾಗಿ ಯುವ ಜನರು 18 ವರ್ಷ ತುಂಬುವ ಮೊದಲೇ ವಾಹನ ಚಾಲನೆ ಮಾಡುತ್ತಿರುತ್ತಾರೆ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸುಲಭವಾಗಿ ನೀಡಲಾಗುತ್ತಿತ್ತು. ಆದರೆ ಈಗ ನಿಯಮಗಳನ್ನು ಬದಲಿಸಲಾಗಿದೆ. ಈಗ ಕೆಲವು ಕಠಿಣ ಪರೀಕ್ಷೆಗಳ ನಂತರವೇ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ. ರಸ್ತೆ ಮೇಲೆ ನಿಪುಣರಂತೆ ವಾಹನ ಚಾಲನೆ ಮಾಡುವವರು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯಲ್ಲಿ ವಿಫಲರಾಗುತ್ತಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗ ಕೆಲವೊಂದು ನಿಯಮಗಳನ್ನು ಅನುಸರಿಸದೇ ಇರುವುದೇ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ವಿಫಲರಾಗುವುದಕ್ಕೆ ಪ್ರಮುಖ ಕಾರಣ. ಡ್ರೈವಿಂಗ್ ಟೆಸ್ಟ್'ನಲ್ಲಿ ಆರ್‌ಟಿಒ ಅಧಿಕಾರಿಗಳ ಸಮ್ಮುಖದಲ್ಲಿ ಅನುಸರಿಬೇಕಾದ ನಿಯಮಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಆರಾಮವಾಗಿರಿ

ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವಾಗ ಉದ್ವೇಗಕ್ಕೆ ಒಳಗಾಗಬೇಡಿ. ಇದರಿಂದ ಹೆಚ್ಚಿನ ತಪ್ಪುಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಆತ್ಮವಿಶ್ವಾಸದಿಂದ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲ್ಗೊಳ್ಳಿ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಮೂಲ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲ್ಗೊಳ್ಳುವ ಮುನ್ನ ಆ ಟೆಸ್ಟ್'ನ ಮೂಲ ನಿಯಮಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ದೊಡ್ಡ ತಪ್ಪುಗಳಾಗುವುದನ್ನು ತಪ್ಪಿಸಬಹುದು. ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಎಲ್ಲವೂ ತಿಳಿದಿದೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದುವುದು ಸರಿಯಲ್ಲ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ವಾಹನಗಳ ಮೀರರ್ ನೋಡುವುದನ್ನು, ಹ್ಯಾಂಡ್‌ಬ್ರೇಕ್ ಹಾಕುವುದನ್ನು ಹಾಗೂ ಇಂಡಿಕೇಟರ್ ಬಳಸುವುದನ್ನು ಮರೆಯದಿರಿ. ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲ್ಗೊಳ್ಳುವ ಮುನ್ನ ಈ ಎಲ್ಲಾ ಬಿಡಿ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಪರೀಕ್ಷಿಸಿ ಕೊಳ್ಳಿ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ತರಬೇತಿ

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಭಾಗವಹಿಸುವ ಮೊದಲು 8 ಆಕಾರದ ಪ್ರದೇಶದಲ್ಲಿ, ತಿರುವುಗಳಲ್ಲಿ ಹಾಗೂ ಇಳಿಜಾರಿನ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡಿದರೆ ಒಳಿತು. ಇದರಿಂದ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಸಫಲರಾಗಲು ಸಾಧ್ಯವಾಗುತ್ತದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಸೀಟ್ ಬೆಲ್ಟ್

ಕಾರಿನ ಡ್ರೈವಿಂಗ್ ಲೈಸೆನ್ಸ್ ಪಡೆಯುವವರು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಭಾಗವಹಿಸಿದಾಗ ಸೀಟ್ ಬೆಲ್ಟ್ ಧರಿಸಲು ಮರೆಯದಿರಿ. ಕಾರಿಗೆ ಹತ್ತಿದ ನಂತರ ಮಾಡಬೇಕಾದ ಮೊದಲ ಸಂಗತಿ ಸೀಟ್ ಬೆಲ್ಟ್ ಧರಿಸುವುದು. ನಂತರ ಡ್ರೈವಿಂಗ್ ಟೆಸ್ಟ್ ಎದುರಿಸಿ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಭಾಗವಹಿಸುವಾಗ ವಾಹನದಲ್ಲಿ ಎಲ್ ಸ್ಟಿಕ್ಕರ್ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಕಾರನ್ನು ನಿಲುಗಡೆ ಮಾಡುವಾಗ ಅಥವಾ ತಿರುಗಿಸುವಾಗ ಸೂಕ್ತವಾದ ಇಂಡಿಕೇಟರ್ ಬಳಸಿ. ಈ ಎಲ್ಲಾ ಸಂಗತಿಗಳನ್ನು ಆರ್‌ಟಿಒ ಅಧಿಕಾರಿಗಳು ಗಮನಿಸುತ್ತಿರುತ್ತಾರೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಸಮಯ

ನಿಮಗಾಗಿ ನಿಗದಿಪಡಿಸಲಾದ ಸಮಯಕ್ಕೆ ಡ್ರೈವಿಂಗ್ ಟೆಸ್ಟ್ ನಡೆಯುವ ಸ್ಥಳದಲ್ಲಿರಿ. ಇಲ್ಲದಿದ್ದರೆ ಕೆಲವು ಆರ್‌ಟಿಒ ಅಧಿಕಾರಿಗಳು ಅರ್ಜಿಯನ್ನು ಮರು ಹೊಂದಿಸಿ ಬೇರೊಂದು ದಿನ ಬರಲು ಹೇಳುವ ಸಾಧ್ಯತೆಗಳಿರುತ್ತವೆ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಡ್ರೈವಿಂಗ್ ಟೆಸ್ಟ್'ಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಕೊಂಡೊಯ್ಯಲು ಮರೆಯದಿರಿ. ಯಾವುದೇ ಒಂದು ದಾಖಲೆ ಇಲ್ಲದೇ ಹೋದರೂ ಅಲೆದಾಟ ತಪ್ಪುವುದಿಲ್ಲ.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಇಂಡಿಕೇಟರ್ ಬಳಕೆ

ಈ ಮೊದಲೇ ಹೇಳಿದಂತೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಇಂಡಿಕೇಟರ್ ಬಳಸುವುದನ್ನು ಮರೆಯದಿರಿ. ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಮೇಲ್ವಿಚಾರಣೆ ನಡೆಸುವ ಆರ್‌ಟಿಒ ಅಧಿಕಾರಿ ಈ ಸಂಗತಿಗಳನ್ನು ಗಮನಿಸುತ್ತಿರುತ್ತಾರೆ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಇಂಡಿಕೇಟರ್ ಬಳಸಲು ಮರೆತರೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ವಿಫಲರಾಗುವುದು ಖಚಿತ. ಯು ಟರ್ನ್ ತೆಗೆದು ಕೊಳ್ಳುವುದಾದರೆ ಇತರ ವಾಹನ ಚಾಲಕರಿಗೆ ಕೈಗಳಿಂದ ಸನ್ನೆ ಮಾಡಲು ಮರೆಯದಿರಿ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಆರ್‌ಟಿಒ ಅಧಿಕಾರಿಗಳು ರಿವರ್ಸ್ ಟೇಕ್ ಟೆಸ್ಟ್ ನಡೆಸುತ್ತಾರೆ. ಆ ವೇಳೆ ಎಂಜಿನ್ ಅನ್ನು ರಿವರ್ಸ್ ಗೇರ್‌ಗೆ ಬದಲಿಸಬೇಕು ಹಾಗೂ ಆಫ್ ಮಾಡದೆಯೇ ರಿವರ್ಸ್‌ನಲ್ಲಿ ತೆಗೆದುಕೊಳ್ಳಬೇಕು. ಬೇಕಾ ಬಿಟ್ಟಿಯಾಗಿ ರಿವರ್ಸ್ ಗೇರ್‌ಗೆ ಬರಬಾರದು ಎಂಬ ನಿಯಮವಿದೆ. ಈ ಕಾರಣಕ್ಕೆ ಸರಿಯಾದ ರೀತಿಯಲ್ಲಿ ರಿವರ್ಸ್ ಗೇರ್'ಗೆ ಬದಲಿಸಿ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಎರಡೂ ಕೈಗಳನ್ನು ಸ್ಟೀಯರಿಂಗ್ ವ್ಹೀಲ್ ಮೇಲೆ ಇರಿಸಿ. ಅಗತ್ಯವಿದ್ದಾಗ ಮಾತ್ರ ಸ್ಟೀಯರಿಂಗ್ ವ್ಹೀಲ್‌ನಲ್ಲಿ ಒಂದು ಕೈ ಹಾಗೂ ಗೇರ್ ಮೇಲೆ ಇನ್ನೊಂದು ಕೈಯನ್ನು ಇಡಿ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಆಕ್ಸಲರೇಟರ್ ಅನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳಿತು. ನಾನು ಚೆನ್ನಾಗಿ ಪರಿಣಿತಿ ಹೊಂದಿದ್ದೇನೆ ಎಂಬ ಅತಿಯಾದ ಆತ್ಮ ವಿಶ್ವಾಸದಲ್ಲಿ ಆಕ್ಸಲರೇಟರ್ಬಳಸದೆ ಇರುವುದು ಸೂಕ್ತ.

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಪಾಲಿಸಬೇಕಾದ ಸಂಗತಿಗಳಿವು

ಮೇಲೆ ತಿಳಿಸಿದ ಈ ಸಂಗತಿಗಳನ್ನು ಅನುಸರಿಸಿದರೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಉತ್ತೀರ್ಣರಾಗುವುದು ಖಚಿತ. ಯಾವುದೇ ಉದ್ವೇಗ ಅಥವಾ ಆತುರವಿಲ್ಲದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್'ನಲ್ಲಿ ಭಾಗವಹಿಸಿದರೆ ಯಶಸ್ವಿಯಾಗುವುದು ಖಚಿತ.

Most Read Articles

Kannada
English summary
Things to keep in mind while taking driving license test. Read in Kannada.
Story first published: Monday, May 3, 2021, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X