ಇಂಡಿಯನ್ ಬೈಕ್ ವೀಕ್ 2023ಗೆ ಇನ್ನು ಕೆಲವೇ ದಿನ: ಬೈಕ್ ಪ್ರೀಯರ ಹಬ್ಬದ ಬಗ್ಗೆ ತಿಳಿದಿರಬೇಕಾದ ವಿಷಯಗಳು
ದೇಶ ವಿದೇಶಗಳಿಂದ ಬರುವ ಮೋಟಾರ್‌ಸೈಕಲ್ ಅಭಿಮಾನಿಗಳಿಗಾಗಿ ನಿರ್ವಹಿಸಲಾಗುವ ಇಂಡಿಯಾ ಬೈಕ್ ವೀಕ್ ಇದೇ ತಿಂಗಳ ೮ ಮತ್ತು ೯ ರಂದು ಗೋವಾದಲ್ಲಿ ನಡೆಯಲಿದೆ . ಈ ಐಬಿಡಬ್ಲ್ಯು ವೇದಿಕೆಯು ವಾಹನ ಬ್ರ್ಯಾಂಡ್‌ಗಳಿಗೆ ತಮ್ಮ ಹೊಸ ಮತ್ತು ಮುಂಬರುವ ಬೈಕ್‌ಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.
ಪ್ರತಿಬಾರಿಯ ಐಬಿಡಬ್ಲ್ಯು (Indian Bike Week) ನಡೆಯುವಾಗಲೂ ಹಲವಾರು ವಿಶಶೀಷ್ಟವಾದ ಬೈಕ್‌ಗಳು ಹೊರಬರುತ್ತವೆ. ಈ ಬಾರಿ ಯಾವುದೆಲ್ಲಾ ಬೈಕ್‌ಗಳು ಅನಾವರಣಗೊಳ್ಳಲಿದೆ ಎಂದು ಕಾದು ನೋಡಬೇಕು. ಈಗಾಗಲೇ ಐಬಿಡಬ್ಲ್ಯು ಗೆ ಇರುವ ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಹರಿಬಿಡಲಾಗಿದ್ದು ಡೇ ಪಾಸ್ ರೂ 2499 ಮತ್ತು ವೀಕೆಂಡ್ ಪಾಸ್‌ಗಳಿಗೆ ಸುಮಾರು 2999 ರೂಗಳನ್ನು ನಿಗದಿಪಡಿಸಲಾಗಿದೆ.

ಈ ಬೈಕ್‌ಗಳ ಹಬ್ಬವನ್ನು ಸೆವೆಂಟಿ ಇಎಮ್‌ಜಿ ಯು ಗಲ್ಫ್ ಸಿಂಟ್ರಾಕ್‌ನ ಪಾಟ್ನರ್‌ಶಿಪ್‌ನೊಂದಿಗೆ ಆಯೋಜಿಸಲಾಗುತ್ತಿದೆ. ಇನ್ನು ಈ ಬೈಕ್‌ಗಳ ಹಬ್ಬದಲ್ಲಿ ಒಟ್ಟು ಆರು ಟ್ರ್ಯಾಕ್‌ಗಳಿದ್ದು, ಇದರಲ್ಲಿ ಮೂರು ಟ್ರ್ಯಾಕ್ ಅನ್ನು ಸಿಯಟ್ ಕಂಪನಿಯು ಸಿದ್ದಪಡಿಸಿದೆ. ಈ ಟ್ರ್ಯಾಕ್‌ಗಳಲ್ಲಿ ಕಸರತ್ತುಗಳನ್ನು ನೋಡಲು ಬೈಕ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ.
ಇನ್ನು ಕಳೆದ ಬಾರಿಯ ಐಬಿಡ್ಲ್ಯೂನಲ್ಲಿ (Indian Bike Week) ಹಲವಾರು ಬೈಕ್‌ಗಳು ಅನಾವರಣಗೊಂಡಿತ್ತು. ಇದರಲ್ಲಿ ಪ್ರಮುಖವಾದುದೆಂದರೆ 822 ಸಿಸಿಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್. ಆಟೋಲಾಗ್ ಡಿಸೈನ್ ಮತ್ತು ಆಟೋ ಎಂಜಿನಾ ಅವರು ನಿರ್ಮಿಸಿದ ಕಸ್ಟಮ್ ಬೈಕ್ ಆಗಿದ್ದು, ಇವರು 822cc ಎಂಜಿನ್‌ಗಾಗಿ ಸಮಾನಾಂತರವಾದ 411cc ಅವಳಿ ಹಿಮಾಲಯನ್ ಎಂಜಿನ್‌ಗಳನ್ನು ಒಟ್ಟಿಗೆ ಅಳವಡಿಸಲಾಗಿತ್ತು.

ಇದು ಸುಮಾರು 45 hp ಪವರ್ ಮತ್ತು 55 Nm ಟಾರ್ಕ್ ಅನ್ನು ನೀಡುತ್ತದೆ. ಎರಡರಿಂದ ಒಂದು ಎಕ್ಸಾಸ್ಟ್, ಸ್ವಿಂಗರ್ಮ್ ಮತ್ತು ಫ್ರೇಮ್‌ನ ಕೆಳಗಿನ ಅರ್ಧದಷ್ಟು ಇತರ ಭಾಗಗಳು ಮತ್ತು ಘಟಕಗಳನ್ನು ಕಸ್ಟಮ್ ಮಾಡಲಾಗಿದೆ. ನಿರ್ಮಾಣದ ಒಟ್ಟು ವೆಚ್ಚ ಸುಮಾರು 12 ರಿಂದ 13 ಲಕ್ಷ ರೂಪಾಯಿ ಎಂದು ಆಟೋಲಾಗ್ ವಿವರಿಸಿತ್ತು. ಆದರೆ ತಂಡವು ವೆಚ್ಚವನ್ನು ಸುಗಮಗೊಳಿಸುವ ಮತ್ತು ಫ್ರೇಮ್ ಅನ್ನು ಇನ್ನಷ್ಟು ಸ್ಲಿಮ್ಮಿಂಗ್ ಮಾಡುವಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿತ್ತು.
2023 BMW S1000RR ಕಳೆದ IBW ನಲ್ಲಿ ಹೆಚ್ಚಿನ ಅಭಿಮಾನಿಗಳ ನಡುವೆ ಬಹಿರಂಗಪಡಿಸಲಾಯಿತು. ಹೊಸ ಮಾದರಿಯನ್ನು ಹೆಚ್ಚಿನ ಪವರ್‌ನೊಂದಿಗೆ ಪ್ಯಾಕ್ ಮಾಡಲಾಗಿದೆ. ಈ ಬೈಕ್ ಕೇವಲ 197 ಕೆ.ಜಿ ಇದ್ದು (ಸಂಪೂರ್ಣ ಇಂಧನದೊಂದಿಗೆ) ತೂಕದ ಮೇಲೆ 210 ಎಚ್‌ಪಿ ಪವರ್ ನೀಡುತ್ತದೆ.
ಈ ಬೈಕ್‌ನ ಇತರ ಫೀಚರ್ ನೋಡುವುದಾದರೆ ನಮಗೆ ಡ್ಯಾಷ್ ಬೋರ್ಡ್‌ನಲ್ಲಿ M-ಶೈಲಿಯ ವೈಶಿಷ್ಟ್ಯಗಳೊಂದಿಗೆ ಉತ್ತಮ ಅಪ್‌ಗ್ರೇಡ್ ಅನ್ನು ಕಾಣಬಹುದಾಗಿದೆ. ಮುಖ್ಯವಾಗಿ ವಿಂಗ್ಲೆಟ್‌ಗಳ ಸೇರ್ಪಡೆಗಳನ್ನು ನೀಡಲಾಗಿದೆ. 2023 S1000RR ನ ಅಧಿಕೃತ ಬಿಡುಗಡೆಯು ಕಳೆದ ಡಿಸೆಂಬರ್ 10 ರಂದು ನಡೆದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications