Vande Bharat Express: ಶೀಘ್ರ ಇಲ್ಲಿಂದ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್, ಗುಡ್ ನ್ಯೂಸ್?

ಕರ್ನಾಟಕವು ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಕೆಲವೇ ದಿನಗಳಲ್ಲಿ ಸಾಕ್ಷಿಯಾಗಲಿದೆ. ಶೀಘ್ರದಲ್ಲೇ ತಿರುವನಂತಪುರಂ (Thiruvananthapuram) ಹಾಗೂ ಮಂಗಳೂರು (Mangalore) ನಗರಗಳ ನಡುವೆ ಈ ರೈಲು ಸಂಚಾರ ಆರಂಭಿಸಲಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸದ್ಯ, ಕೇರಳದ ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20634) ಓಡಾಟ ನಡೆಸುತ್ತಿದೆ. ಬೆಳಗ್ಗೆ 5:20ಕ್ಕೆ ತಿರುವನಂತಪುರಂನಿಂದ ಹೊರಡುವ ರೈಲು, ಮಧ್ಯಾಹ್ನ 1:20ಕ್ಕೆ ಕಾಸರಗೂಡು ತಲುಪುತ್ತದೆ. ಈ ರೈಲನ್ನೇ ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತದೆ. ಇದಕ್ಕಾಗಿ ರೈಲ್ವೆ ಇಲಾಖೆ ಅಗತ್ಯ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ಲೋಕೋ ಪೈಲಟ್ ಗಳಿಗೆ ಚೆನ್ನೈನಲ್ಲಿ ತರಬೇತಿ ಆರಂಭವಾಗಿದೆಯಂತೆ.

Vande Bharat Express: ಶೀಘ್ರ ಇಲ್ಲಿಂದ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್, ಗುಡ್ ನ್ಯೂಸ್?

ಮಂಗಳೂರಿನಲ್ಲಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ವಹಣಾ ಘಟಕ ತಲೆ ಎತ್ತಲಿದೆ ಎಂದು ಹೇಳಲಾಗಿದೆ. ತಿರುವನಂತಪುರಂ - ಮಂಗಳೂರು ನಡುವೆ ಶೀಘ್ರದಲ್ಲೇ ಕಾರ್ಯಚರಣೆ ಶುರುವಾಗುವ ನೀರಿಕ್ಷೆಯಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮುಖ್ಯವಾಗಿ, ತಿರುವನಂತಪುರಂ-ಕಣ್ಣೂರು ಶತಾಬ್ದಿ (ರೈಲು ಸಂಖ್ಯೆ 12082) ಮತ್ತು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ (ಗಾಡಿ ಸಂಖ್ಯೆ 16307) ರೈಲುಗಳ ಸಮಯ ಪರಿಷ್ಕರಣೆಯಾಗಿದೆ.

ಕಳೆದ ತಿಂಗಳು, ಈ ಬಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದರು. 'ಕಾಸರಗೋಡು - ತಿರುವನಂತಪುರಂ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿನ ತನಕ ವಿಸ್ತರಣೆ ಮಾಡಲು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ' ಎಂದು ಹೇಳಿದ್ದರು.

ಇದರೊಟ್ಟಿಗೆ, 'ಮಂಗಳೂರು - ಬೆಂಗಳೂರು ಮಧ್ಯೆ 90 ಕಿಲೋಮೀಟರ್ ವಿದ್ಯುದ್ದೀಕರಣ ಕಾಮಗಾರಿ ಮುಕ್ತಾಯಗೊಂಡ ಬಳಿಕ, ಈ ಮಾರ್ಗದಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಓಡಾಟದ ನಡೆಸಲಿದೆ. ಮಂಗಳೂರು - ಗೋವಾ ನಡುವೆಯು ಈ ರೈಲು ಸಂಚರಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒಪ್ಪಿಗೆ ನೀಡಿದ್ದಾರೆ' ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದರು.

ತಿರುವನಂತಪುರಂ - ಮಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ರೈಲಿನ ಟಿಕೆಟ್ ದರ ಹಾಗೂ ನಿಲುಗಡೆ ನಿಲ್ದಾಣದ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ, ಬೆಂಗಳೂರು - ಹೈದರಾಬಾದ್ ಮಾರ್ಗದಲ್ಲೂ ಈ ತಿಂಗಳಾಂತ್ಯದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುವ ಸಾಧ್ಯತೆಯಿದ್ದು, ಕಲಬುರಗಿಯ ಸೇಡಂ ಹಾಗೂ ರಾಯಚೂರು ನಿಲ್ದಾಣದಲ್ಲಿ ನಿಲುಗಡೆಯಾಗಬಹುದು ಎಂದು ವರದಿಯಾಗಿದೆ.

ಇವೆರೆಡು ನಗರ ನಡುವೆ 618 ಕಿಲೋಮೀಟರ್ ದೂರವನ್ನು ಕ್ರಮಿಸಲು ವಂದೇ ಭಾರತ್ 7 - 8 ಗಂಟೆಗಳಲ್ಲಿ ತೆಗೆದುಕೊಳ್ಳಬಹುದು. ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ, ಮೂರು ಗಂಟೆ ಸಮಯಾವಕಾಶ ಕಡಿಮೆಯಾಗುವ ನೀರಿಕ್ಷೆಯಿದೆ. ಈ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿರಲಿದೆ. ದಕ್ಷಿಣ ಮಧ್ಯ ರೈಲ್ವೆ ಈ ವಂದೇ ಭಾರತ್ ರೈಲಿನ ನಿರ್ವಹಣೆಯನ್ನು ಮಾಡಲಿದೆ.

ಕರ್ನಾಟಕದಲ್ಲಿ ಈಗಾಗಲೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಓಡಾಡುವ ರೈಲು ಮಂಗಳವಾರ ಹೊರತುಪಡಿಸಿ, ಉಳಿದ ಎಲ್ಲ ದಿನಗಳಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಮತ್ತೊಂದು ರೈಲು ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚಾರ ಮಾಡುತ್ತಿದೆ

ಪ್ರಸ್ತುತ, ದೇಶದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅತುತ್ತಮ ಸೌಕರ್ಯವನ್ನು ಹೊಂದಿದ್ದು, ಗರಿಷ್ಠ ವೇಗದಲ್ಲಿ ಸಂಚರಿಸುತ್ತವೆ. ಈ ರೈಲುಗಳಲ್ಲಿ ಪ್ರತೇಕ ಎಂಜಿನ್ ಇಲ್ಲ. ಸಂಪೂರ್ಣ ಎಸಿಯಿರುವ ಇದರ ಸೀಟುಗಳು ಹೆಚ್ಚು ಆರಾಮದಾಯವಾಗಿದ್ದು, ಸ್ವಯಂ ಚಾಲಿತ ಬಾಗಿಲು, ಅಗ್ನಿ ನಿರೋಧಕ ವ್ಯವಸ್ಥೆ ಮತ್ತು ಜೈವಿಕ ಶೌಚಾಲಯವನ್ನು ಹೊಂದಿವೆ.

Article Published On: Sunday, August 27, 2023, 11:30 [IST]
English summary
Thiruvananthapuram to mangalore vande bharat express starts soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+