ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳನ್ನು ಯಾವುದೇ ವ್ಯತ್ಯಾಸವಿಲ್ಲದೆ ಅದೇ ರೀತಿ ಡೂಪ್ಲಿಕೇಟ್ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಬಹುತೇಕ ಎಲ್ಲಾ ಬ್ರ್ಯಾಂಡೆಡ್ ವಸ್ತುಗಳು ಡೂಪ್ಲಿಕೇಟ್ ಚೀನಾದಲ್ಲಿ ಲಭ್ಯವಿದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಇನ್ನು ಕೂಡ ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ವೆಸ್ಪಾ ಸ್ಕೂಟರ್‌ಗಳು ಭಾರತದಲ್ಲೂ ಹೆಚ್ಚು ಜನಪ್ರಿಯವಾಗಿದೆ. ಕಾರಣ ಇದರ ರೆಟ್ರೋ ಸ್ಟೈಲ್, ಆಕರ್ಷಕ ವಿನ್ಯಾಸ ಹಾಗೂ ಪರ್ಫಾಮೆನ್ಸ್. ಇಟಲಿಯ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್ ವಿಶ್ವದಲ್ಲೇ ಹೆಚ್ಚು ಪ್ರಸಿದ್ದಿಯಾಗಿದೆ. ಮಾರಾಟದಲ್ಲೂ ಇತರ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇದೇ ವೆಸ್ಪಾ ಸ್ಕೂಟರ್ ಡಿಸೈನ್ ಕದ್ದು ಯಮಸಾಕಿ ಮೋಟಾರ್ ಎಂಬ ಚೈನೀಸ್ ತಯಾರಕರು ಹೊಸ ಗ್ಯಾಸೋಲಿನ್ ಸ್ಕೂಟರ್ ಅನ್ನು ನಿರ್ಮಿಸಿದ್ದಾರೆ. ನಾವು ಹೇಳುವ ಮಟ್ಟಿಗೆ, ಸ್ಕೂಟರ್ ಅಧಿಕೃತ ಹೆಸರನ್ನು ಹೊಂದಿಲ್ಲ. ತಯಾರಕರ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು 'ಗ್ಯಾಸೋಲಿನ್ ಸ್ಕೂಟರ್ 50cc' ಎಂದು ಉಲ್ಲೇಖಿಸಲಾಗಿದೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಹೌದು, ಈ ಸ್ಕೂಟರ್ ನಿಜವಾಗಿಯೂ ಚಿಕ್ಕ 50cc ಎಂಜಿನ್‌ನಿಂದ ಚಾಲಿತವಾಗಿದೆ, ಇದು 3.39 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಇದು ಖಂಡಿತವಾಗಿಯೂ ಇಂಡಿಯಾ-ಸ್ಪೆಕ್ ವೆಸ್ಪಾ ಝಡ್ಎಕ್ಸ್125 ಗಿಂತ ಕಡಿಮೆಯಾಗಿದೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ವೆಸ್ಪಾ ಝಡ್ಎಕ್ಸ್125 ಸ್ಕೂಟರ್ ನಲ್ಲಿ 124.45 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 9.92 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಯಮಸಾಕಿ ಸ್ಕೂಟರ್ ವೆಸ್ಪಾ ZX ನ ನಿಖರವಾದ ಪ್ರತಿರೂಪವಲ್ಲ, ಮತ್ತು ನೀವು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವ್ಯತ್ಯಾಸಗಳು ಗೋಚರಿಸುತ್ತವೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಯಮಸಾಕಿ ಸಂಪೂರ್ಣವಾಗಿ ವಿಭಿನ್ನವಾದ ಟೈಲ್ಯಾಂಪ್ ಅನ್ನು ಪಡೆಯುತ್ತದೆ ಮತ್ತು ಇದು ವಿಭಿನ್ನ ಪಿಲಿಯನ್ ಗ್ರಾಬ್ರೈಲ್ ಅನ್ನು ಸಹ ಪಡೆಯುತ್ತದೆ. ಹೆಡ್‌ಲೈಟ್ ಮುಂಭಾಗದಲ್ಲಿ ಎಕ್ಸ್-ಆಕಾರದ ಅಂಶವನ್ನು ಹೊಂದಿದೆ, ಇದು ವಿಶಿಷ್ಟ ವಿನ್ಯಾಸದ ವಿವರವಾಗಿದೆ. ಇನ್ನು ಸ್ಕೂಟರ್ ನಲ್ಲಿ ಟರ್ನ್ ಇಂಡಿಕೇಟರ್ ಸಹ ಸ್ವಲ್ಪ ವಿಭಿನ್ನ ಆಕಾರವನ್ನು ಹೊಂದಿದೆ ಮತ್ತು ಅಲಾಯ್ ವ್ಹೀಲ್ ಗಳು ನೋಡಲು ಸ್ವಲ್ಪ ವಿಭಿನ್ನವಾಗಿ ಕಾಣುತ್ತವೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾದ ಯಮಸಾಕಿ ಸ್ಕೂಟರ್‌ನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸ್ವಿಂಗರ್ಮ್-ಮೌಂಟೆಡ್ ಮೊನೊಶಾಕ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದು ಸಂಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇದು ಸ್ಕೂಟರ್‌ನ ಇತ್ತೀಚಿನ ಆವೃತ್ತಿಯಲ್ಲ ಎಂದು ಗಮನಿಸಬೇಕು. 2022ರ ಮಾದರಿಯನ್ನು ಮರುಹೊಂದಿಸಲಾಗಿದೆ, ಇದೀಗ ಹೆಕ್ಸಝಿಕಲ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ, ಆದರೂ ಇದು ಇನ್ನೂ ವೆಸ್ಪಾ ರಿಪ್ಲಿಕಾ ಭಾಸವಾಗುತ್ತಿದೆ. ಕುತೂಹಲಕಾರಿಯಾಗಿ, ಹೊಸ ಮಾದರಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಸಮಾನವಾಗಿ ಉಲ್ಲಾಸದ ಹೆಸರನ್ನು ಹೊಂದಿದೆ. ಯುರೋ 5 ನೊಂದಿಗೆ ಹೊಸ ಗ್ಯಾಸೋಲಿನ್ ಸ್ಕೂಟರ್ 50cc. ಆದರೂ ಬೆಲೆಯನ್ನು ಉಲ್ಲೇಖಿಸಲಾಗಿಲ್ಲ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೂಲದ ವಾಹನ ತಯಾರಕ ಕಂಪನಿಯಾದ ಮೋಟೋ ಹೊಸ ಸ್ಪೋರ್ಟ್ಸ್ ಬೈಕನ್ನು ಕಳೆದ ವರ್ಷ ಪರಿಚಯಿಸಿತು. ಇದು ಬಿಎಂಡಬ್ಲ್ಯು ಎಸ್1000ಆರ್‌ಆರ್ ಸೂಪರ್ ಬೈಕಿಗೆ ಹೋಲುತ್ತದೆ.ಮೋಟೋ ಎಸ್450ಆರ್‌ಆರ್ ಎಂದು ಕರೆಯಲ್ಪಡುವ ಚೀನಾ ಬೈಕ್ ಮುಂಭಾಗದ ಫಸಿಕಾ, ಸೈಡ್ ಫೇರಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನ ಹಿಂಬದಿ ವಿನ್ಯಾಸವು ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನ ಕಾಪಿಯಾಗಿದೆ. ಮೋಟೋ ಎಸ್450ಆರ್‌ಆರ್ ಬೈಕಿನ ಹೆಡ್‌ಲ್ಯಾಂಪ್ ಬ್ಲೂ-ರೆಡ್-ವೈಟ್ ಬಣ್ಣದ ಆಯ್ಕೆಯು ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನ ಕಾಪಿಯಾಗಿದೆ. ಕಂಪನಿಯ ಲೋಗೋ ಕೂಡ ಬಿಟ್ಟಿಲ್ಲ ಎನ್ನುವುದೇ ರೋಚಕ ವಿಷಯ.

ವೆಸ್ಪಾ ಝಡ್ಎಕ್ಸ್ 125 ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಚೀನಾ ಕಂಪನಿಯು ಕಾಪಿ ಮಾಡುವುದರಲ್ಲೇ ತಾವೇ ನಿಸ್ಸಿಮರು ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ವೆಸ್ಪಾ ಸ್ಕೂಟರ್ ಡಿಸೈನ್ ಕದ್ದು ಯಮಸಾಕಿ ಮೋಟಾರ್ ಎಂಬ ಚೈನೀಸ್ ತಯಾರಕರು ಹೊಸ ಗ್ಯಾಸೋಲಿನ್ ಸ್ಕೂಟರ್ ಅನ್ನು ಅದೇ ರೀತಿ ತಯಾರಿಸಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕೆಲವು ಅಂಶಗಳಲ್ಲಿ ಬದಲಾವಣೆಗಳನ್ನು ಕಂಡು ಬರುತ್ತದೆ. ಚೀನಾ ಡಿಸೈನ್ ಕಾಪಿ ಮಾಡಿ ವಾಹನಗಳನ್ನು ತಯಾರಿಸಿದ ಉದಾಹರಣೆಗಳು ಸಾಕಷ್ಟು ಇದೆ.

Most Read Articles

Kannada
English summary
This chinese scooter copycat of vespa zx 125 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X