ಈ ಎಲೆಕ್ಟ್ರಿಕ್‌ ಜೀಪ್‌ ಬೆಲೆ ಹಿಮಾಲಯನ್‌ಗಿಂತಲೂ ಕಡಿಮೆ: ಈತನ ಪ್ರಯತ್ನಕ್ಕೆ ನಮ್ಮ ಸಲಾಮ್‌!

ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದಿನ ದಿನಮಾನಗಳ ಬೆಳವಣಿಗೆಗಗಳನ್ನು ನೊಡಿದರೆ ನಮಗೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಲವಾರು ವಾಹನ ನಿರ್ಮಾಣ ಸಂಸ್ಥೆಗಳು ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಪ್ರಮುಖ ವಾಹನ ನಿರ್ಮಾಣ ಕಂಪನಿಗಳು ಮಾತ್ರವಲ್ಲದೇ ಇತರ ಸ್ವತಂತ್ರ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹ ಎಲೆಕ್ಟ್ರಿಕ್‌ ವಾಹನ ಲೋಕದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಾ ಸದ್ದು ಮಾಡುತ್ತಲೇ ಇದ್ದಾರೆ. ಈ ರೀತಿಯ ಹಲವಾರು ಉದಾಹರಣೆಗಳನ್ನು ನಾವು ದಿನ ನಿತ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೊಡುತ್ತಿದ್ದೇವೆ.

This Electric Jeep Costs Cheaper Than New Royal Enfield Himalayan 452

ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಜೀಪ್‌ ಒಂದನ್ನು ಎಲೆಕ್ಟ್ರಿಕ್‌ ವಾಹನವಾಗಿ ಪರಿವರ್ತಿಸಿದ್ದು ಇದೀಗ ವಾಹನ ಲೋಕದಲ್ಲಿ ಭಾರೀ ಸದ್ದನ್ನು ಉಂಟು ಮಾಡಿದೆ. ಸಾಂತಾ ಸಿಂಗ್‌ ವ್ಲಾಗ್‌ ಎಂಬ ಚಾನಲ್‌ನಲ್ಲಿ ವ್ಯಕ್ತಿಯೊಬ್ಬ ಹಳೆಯ ಮಹೀಂದ್ರಾ ವಿಲ್ಲಿಸ್‌ ಜೀಪ್‌ ಅನ್ನು ಎಲೆಕ್ಟ್ರಿಕ್‌ ಜೀಪ್ ಆಗಿ ಪರಿವರ್ತಿಸಿದ್ದು ಇದು ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಜೀಪ್‌ ಎಂಬ ಹೆಗ್ಗಳಿಕೆಗೆ ಖ್ಯಾತಿಯಾಗಿದೆ ಎಂದು ತಿಳಿದು ಬಂದಿದೆ.

ಈ ಜೀಪ್‌ ಅನ್ನು ತಯಾರಿಸಲು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಿಂತಲೂ ಕಡಿಮೆ ವೆಚ್ಚವನ್ನು ವ್ಯಯ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಜೀಪನ್ನು ತಯಾರಿಸಲು ಒಟ್ಟಾಗಿ ಖರ್ಚು ಮಾಡಿದ ಲೆಕ್ಕವನ್ನು ನೊಡುವುದಾದರೆ ಅದು ಸುಮಾರು 2.6 ಲಕ್ಷ ರೂಪಾಯಿಗಳು. ಇದು ಇತ್ತೀಚೆಗಷ್ಟೇ ರಾಯಲ್‌ ಎನ್‌ಫೀಲ್ಡ್‌ ಬಿಡುಗಡೆಗೊಳಿಸಿದ ಹಿಮಾಲಯನ್‌ 452 ಗಿಂತಲೂ ಕಡಿಮೆ ಎಂಬುದು ಗಮನಿಸಬೇಕಾದ ಅಂಶ.

This Electric Jeep Costs Cheaper Than New Royal Enfield Himalayan 452

ಇನ್ನು ವಿಡಿಯೋದಲ್ಲಿ ಕಾಣುತ್ತಿರುವ ಈ ಜೀಪ್‌, ನಿಜವಾದ ಜೀಪ್‌ ಅಲ್ಲ. ಬದಲಾಗಿ ಇದು ಜೀಪ್‌ ರೀತಿಯಾಗಿ ಕಾಣಲು ಈ ವಿನ್ಯಾಸವನ್ನು ಅನುಕರಿಸಲಾಗಿದ್ದು, ಬೇರೆ ಬೇರೆ ವಾಹನಗಳ ಭಾಗಗಳನ್ನು ಬಳಸಿ ಈ ಜೀಪ್‌ನ ರೂಪವನ್ನು ನಿಡಲಾಗಿದೆ ಎಂಬ ವಿಷಯವನ್ನು ಇಲ್ಲಿಯೇ ಓದುಗರಿಗೆ ಮನದಟ್ಟು ಮಾಡಲಾಗುತ್ತಿದೆ.

ವಿಡಿಯೋದಲ್ಲಿ ವಿವರಿಸುವಂತೆ ಈ ಜೀಪ್‌ ರೀತಿಯಲ್ಲಿನ ಡಿಸೈನ್‌ ಅನ್ನು ಫೈಬರ್‌ ಬಳಸಿಕೊಂಡು ನಿರ್ಮಿಸಲಾಗಿದೆ. ನಿಖರವಾಗಿ ಹಳೆಯ ಕಾಲದ ಮಹೀಂದ್ರಾ ವಿಲ್ಲಿಸ್‌ ಜೀಪ್‌ ರೀತಿಯಲ್ಲಿ ಕಾಣುವಂತೆ ಮಾಡುವುದಕ್ಕಾಗಿಯೇ ಈ ವಿನ್ಯಾಸವನ್ನು ಅನುಕರಿಸಲಾಗಿದೆ. ಏನೇ ಆದರೂ ಈ ಹೊಸ ಪ್ರಯತ್ನವನ್ನು ಪ್ರತಿಯೊಬ್ಬನೂ ಸಹ ಅಭಿನಂದಿಸಲೇ ಬೇಕು ಎಂಬುದು ನಮ್ಮ ಅಭಿಪ್ರಾಯ.

ಇನ್ನು ಈ ರೀತಿಯ ಹಲವಾರು ಪ್ರಯತ್ನಗಳು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದು ಎಲ್ಲರ ಗಮನವನ್ನು ಸೆಳೆಯುತ್ತದೆ. ಕೆಲ ಸಮಯಗಳ ಹಿಂದೆ ಅಷ್ಟೇ ಕೇರಳದಲ್ಲೊಬ್ಬ ಯುವಕ ಮಾರುತಿ 800 ಕಾರನ್ನು ಬಳಸಿಕೊಂಡು ರೋಲ್ಸ್‌ ರಾಯ್ಸ್‌ ಕಾರನ್ನು ನಿರ್ಮಿಸಿ ಸುದ್ದಿಯಾಗಿದ್ದ. ಆದರೆ ಇದು ಎಲೆಕ್ಟ್ರಿಕ್‌ ಆಗಿರಲಿಲ್ಲ ಎಂಬುದಷ್ಟೇ ಇದಕ್ಕೂ ಮತ್ತು ಅದಕ್ಕೂ ಇರುವ ವ್ಯತ್ಯಾಸ.

ಕೇರಳದ 18 ವರ್ಷದ ಹದಿಫ್ ಮೊದಲಿನಿಂದಲೂ ಆಟೋಮೊಬೈಲ್ ಉತ್ಸಾಹಿಯಾಗಿದ್ದು, ಮಾರುತಿ 800 ಕಾರನ್ನು ರೋಲ್ಸ್ ರಾಯ್ಸ್‌ ಕಾರಿಂದಂತೆ ಮಾರ್ಪಾಡು ಮಾಡಿ, ಎಲ್ಲರನ್ನು ಬೆರಗುಗೊಳಿಸಿದ್ದ. ಈ ಕೆಲಸಕ್ಕೆ ಆತ ಒಟ್ಟು 45,000 ರೂಪಾಯಿ ಖರ್ಚು ಮಾಡಿದ್ದಾನೆ. ಹದಿಫ್‌ನ ಈ ಅದ್ಭುತ ಸಾಧನೆಯನ್ನು ಟ್ರಿಕ್ಸ್ ಟ್ಯೂಬ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದು 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Sunday, December 3, 2023, 12:30 [IST]
English summary
This electric jeep costs cheaper than new royal enfield himalayan 452
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+