ಗಂಟೆಗೆ 130 ಕಿಮೀ ವೇಗದಲ್ಲಿ ಟ್ರಕ್‌ಗೆ ಗುದ್ದಿದ ಟಾಟಾ ಸಫಾರಿ : ಕಾರು ನಜ್ಜುಗುಜ್ಜಾದರೂ ಪ್ರಯಾಣಿಕರು ಸೇಫ್‌

ಭಾರತದಲ್ಲಿ ಟಾಟಾ ಮೋಟಾರ್ಸ್‌ ಅತೀ ಹೆಚ್ಚು ಜನಪ್ರಿಯತೆ ಪಡೆದಿರುವ ಕಂಪನಿ ಎಂದರೆ ತಪ್ಪಾಗಲಾರದು. ಕಳೆದ ಕೆಲವು ವರುಷಗಳಿಂದ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಟಾಟಾ ಕಾರುಗಳಂತೂ ಸುರಕ್ಷತೆಗೆ ಹೆಚ್ಚು ಒತ್ತು ನಿಡುತ್ತಿರುವುದರಿಂದಲೇ ಜನ ಸಾಮಾನ್ಯರಿಗೆ ಹೆಚ್ಚು ಆಪ್ತವಾಗುತ್ತಿರುವುದು ಮತ್ತು ಒಂದಿಲ್ಲೊಂದು ರೀತಿ ಸದಾ ಸುದ್ದಿಯಲ್ಲಿರುವುದು.

ಟಾಟಾ ಸಫಾರಿ ಕಾರೊಂದು ಬರೋಬ್ಬರಿ ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ಅಪಘಾತಕ್ಕೀಡಾಗಿದ್ದರೂ ಅದರಲ್ಲಿದ್ದ ಮೂರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆಯೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿರ್ದಿಷ್ಟವಾಗಿ ಯಾವ ಜಾಗದಲ್ಲಿ ಘಟನೆ ನಡೆದಿದೆ ಎಂದು ಇದುವರೆಗೆ ವರದಿಯಾಗಿಲ್ಲವಾದರೂ ಅಪಘಾತಕ್ಕೀಡಾದ ಕಾರನ್ನು ಕಂಡರೆ ಅದರಲ್ಲಿದ್ದ ಪ್ರಯಾಣಿಕರು ಸುಳಿವೂ ಸಿಗದಂತೆ ನೇರವಾಗಿ ಯಮರಾಯನ ಬಳಿ ತಲುಪಿರಬಹುದು ಎಂಬ ಆಲೋಚನೆ ಬರುವುದಂತೂ ಖಂಡಿತ.

ಗಂಟೆಗೆ 130 ಕಿಮೀ ವೇಗದಲ್ಲಿ ಟ್ರಕ್‌ಗೆ ಗುದ್ದಿದ ಟಾಟಾ ಸಫಾರಿ

ಟಾಟಾ ಸಫಾರಿ ಭಾರತದಲ್ಲಿ ತುಂಬಾ ಪ್ರಸಿದ್ದಿ ಪಡೆದಿರುವ ಕಾರು. ಸೆವೆನ್‌ ಸೀಟರ್‌ ವಿಭಾಗದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದೂ ಒಂದು. ಹಲವಾರು ವರ್ಷಗಳಿಂದ ಭಾರತೀಯ ಅಟೋಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲೇ ಇದೆ. ಎನ್‌-ಸಿಎಪಿ ಕಾರಿನ ಕ್ರ್ಯಾಷ್‌ ಟೆಸ್ಟ್‌ ನಡೆಸದೇ ಇದ್ದರೂ, ಈಗಾಗಲೇ ನಡೆದಿರುವ ಹಲವಾರು ಅಪಘಾತ ಪ್ರಕರಣಗಳಿಂದ ಇದು ಎಷ್ಟು ಬಲಿಷ್ಟವಾಗಿದೆ ಎಂಬುದು ಪದೇ ಪದೇ ಸಾಬೀತು ಪಡಿಸುತ್ತಲೇ ಇದೆ.

ಇದೀಗ ಮೇಲೆ ತಿಳಿಸಿರುವ ಘಟನೆ ಇದರ ಬಲಿಷ್ಟತೆಯನ್ನು ಸಾರುವ ಸಾಲಿಗೆ ಸೇರಲಿದೆ. ಹೌದು, ದೊರೆತಿರುವ ಮಾಹಿತಿ ಪ್ರಕಾರ ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ನುಗ್ಗಿ ಬರುತ್ತಿದ್ದ ಟಾಟಾ ಸಫಾರಿ ತನ್ನ ಮುಂದೆ ಇದ್ದಂತಹ ಟ್ರಕ್‌ನ ಹಿಂಬಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತಿವ್ರತೆ ಎಷ್ಟಿತ್ತೆಂದರೆ, ಟಾಟಾ ಸಫಾರಿ ಗುದ್ದಿದ ರಭಸಕ್ಕೆ ಟ್ರಕ್‌ನ ಹಿಂಭಾಗದ ಟೈರ್‌ಗಳು ಆಕ್ಸಿಲ್‌ ಸಮೇತ ಹೆದ್ದಾರಿಯಲ್ಲಿ ಕಳಚಿ ಬಿದ್ದಿದೆ.

ಇನ್ನು ಅಪಘಾತಕ್ಕೀಡಾದ ಕಾರು ನುಜ್ಜುಗುಜ್ಜಾಗಿದ್ದು, ಕಾರಿನ ಡ್ರೈವರ್‌ ಪಕ್ಕ ಕೂತಿದ್ದ ಸಹ ಚಾಲಕನಿಗೆ ಕೊಂಚ ಹೆಚ್ಚು ಗಾಯಗಳಾಗಿದ್ದರೂ, ಕಾರಿನಲ್ಲಿದ್ದ ಮೂರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದಲ್ಲಿ ಕಾಣುವಂತೆ ಟಾಟಾ ಸಫಾರಿ ಕಾರಿಗೂ ಸಹ ಹಾನಿಯಾಗಿದೆ. ಕಾರಿನ A ಪಿಲ್ಲರ್‌ಗೆ ವಿಪರೀತ ಹಾನಿಯಾಗಿದ್ದರೂ ಕ್ಯಾಬಿನ್‌ ಅಪಘಾತದಿಂದ ಕೊಂಚ ಪಾರಾಗಿರುವುದನ್ನು ಕಾಣಬಹುದು. ಅಪಘಾತದಲ್ಲಿ ಮೂವರು ಪ್ರಯಾಣಿಕರೂ ಸಹ ಸೀಟ್‌ ಬೆಲ್ಟ್‌ ಧರಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿರಲು ಕಾರಣವಾಗಿರಬಹುದು.

ಹಿಂದೆಯೂ ಟಾಟಾ ಸಫಾರಿ, ಹ್ಯಾರಿಯರ್‌ ಕಾರುಗಳು ಅಪಘಾತಕ್ಕೆ ಒಳಗಾಗಿದ್ದರೂ ಇಷ್ಟೊಂದು ಹಾನಿಯಾಗಿದ್ದನ್ನು ಇಲ್ಲಿಯವರೆಗೆ ಕಂಡಿಲ್ಲ. ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ಕಾರನ್ನು ಚಲಾಯಿಸುವುದು ನಿಜಕ್ಕೂ ಅಪಾಯಕಾರಿಯಾದ ವಿಷಯ. ಕಾರು ಗುದ್ದಿದ ರಭಸಕ್ಕೆ ಟ್ರಕ್‌ನ ಹಿಂಭಾಗದ ಟೈರ್‌ಗಳು ಆಕ್ಸಿಲ್‌ ಸಮೇತವಾಗಿ ಕಿತ್ತು ಬರಬೇಕಾದರೆ, ಕಾರಿನ ವೇಗ ಎಷ್ಟಿತ್ತೆಂದು ಊಹಿಸಿದರೆ ಭಯವಾಗುವುದಂತೂ ಖಂಡಿತ. ಇನ್ನು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ವರದಿಯಾಗಿಲ್ಲ.

ಟಾಟಾ ಸಫಾರಿ, ಹ್ಯಾರಿಯರ್‌ ಇನ್ನೂ N-CAP ಟೆಸ್ಟ್‌ಗೆ ಒಳಗಾಗಿಲ್ಲ:

ಹೌದು, ಟಾಟಾದ ಹಲವಾರು ಹೊಸ ಕಾರುಗಳು N-CAP ಟೆಸ್ಟ್‌ಗೆ ಒಳಗಾಗಿದ್ದರೂ ಎರಡು ಕಾರುಗಳನ್ನು ಮಾತ್ರ ಟಾಟಾ ಮೋಟಾರ್ಸ್‌ ಇದುವರೆಗೂ ಸೇಫ್ಟಿ ರೇಟಿಂಗ್‌ಗೆ ಕಳುಹಿಸಿಲ್ಲ. ಇದರ ಕುರಿತಾಗಿ ಟಾಟಾ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದಾಗ್ಯೂ ಹಲವಾರು ಅಪಘಾತ ಪ್ರಕರಣಗಳಲ್ಲಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿರುವ ಉದಾಹರಣೆಗಳನ್ನು ನೋಡಬಹುದು.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:

ಟಾಟಾ ಮೋಟಾರ್ಸ್‌ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಕಾರುಗಳನ್ನು ನಿರ್ಮಾಣ ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಭಾರತದಲ್ಲಿ ಟಾಟಾ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಟಾಟಾದ ಬಹುತೇಕ ಎಲ್ಲಾ ಕಾರುಗಳು ಸುರಕ್ಷಿತವಾಗಿದೆಯೂ ಹೌದು. ಆದರೆ ಕಾರಣಕ್ಕಾಗಿ ವಾಹನಗಳನ್ನು ಹೆದ್ದಾರಿಯಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಓಡಿಸುವುದು ಯಾವತ್ತಿದ್ದರೂ ಅಪಾಯವೇ ಸರಿ. ಹಾಗಾಗಿ ವಾಹನಗಳನ್ನು ಮಿತ ವೇಗದಲ್ಲಿ ಓಡಿಸುವುದರಿಂದ ಅಪಘಾತಗಳನ್ನು ಆದಷ್ಟು ಕಡಿಮೆ ಮಾಡಬಹುದು.

Article Published On: Tuesday, February 7, 2023, 14:47 [IST]
English summary
Three passengers survive a high speed crash of a tata safari into a truck at 130 kmh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+