ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಕಾರಿನೊಳಗಿರುವ ಮೂವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಈ ಮೂವರು ಡ್ಯಾನ್ಸ್ ಮಾಡುವ ಸಮಯದಲ್ಲಿ ಕಾರು ಗಂಟೆಗೆ 105 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಆದರೆ ಡ್ರೈವರ್ ಸೀಟಿನಲ್ಲಿ ಯಾರೂ ಇರಲಿಲ್ಲ. ಈ ಮೂವರು ಯುವಕರು ಚಲಿಸುತ್ತಿದ್ದಿದ್ದು ಟೆಸ್ಲಾ ಕಾರಿನಲ್ಲಿ. ಕಾರ್ ಅನ್ನು ಆಟೋ ಪೈಲಟ್‌ ಮೋಡ್'ನಲ್ಲಿ ಹಾಕಿ ಮೂವರು ಡ್ಯಾನ್ಸ್ ಮಾಡುತ್ತಿದ್ದರು.

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಟೆಸ್ಲಾ ಕಂಪನಿಯು ತನ್ನ ಕಾರುಗಳಲ್ಲಿ ಆಟೋ ಪೈಲಟ್ ಫೀಚರ್ ಅಳವಡಿಸಿದೆ. ಈ ಫೀಚರ್, ಕಾರ್ ಅನ್ನು ಆಟೋಮ್ಯಾಟಿಕ್ ಆಗಿ ಚಾಲನೆ ಮಾಡುತ್ತಿದೆ. ಆಟೋ ಪೈಲಟ್ ಮೋಡ್ ಸ್ಟೀಯರಿಂಗ್, ಆಕ್ಸಲರೇಟರ್, ಬ್ರೇಕ್'ಗಳನ್ನು ಕಂಟ್ರೋಲ್ ಮಾಡುತ್ತದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಟೆಸ್ಲಾ ಕಾರ್ ಅನ್ನು ಆಟೋ ಪೈಲಟ್‌ಗೆ ಹಾಕಿ ನಿದ್ರಿಸಬಹುದು. ಆದರೆ ಈ ರೀತಿ ಮಾಡಬಾರದೆಂದು ಕಂಪನಿ ಹಲವು ಬಾರಿ ಹೇಳಿದೆ. ಕಾರನ್ನು ಆಟೋ ಪೈಲಟ್‌ ಮೋಡ್'ಗೆ ಹಾಕಿದರೂ ಚಾಲಕ ಸೀಟಿನಲ್ಲೇ ಇರಬೇಕೆಂದು ಕಂಪನಿ ಹಲವು ಬಾರಿ ಹೇಳಿದೆ.

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಯಾವುದೇ ಸಮಯದಲ್ಲಿ ಕಾರಿನ ನಿಯಂತ್ರಣವನ್ನು ತೆಗೆದುಕೊಳ್ಳಲು ಚಾಲಕ ಸಿದ್ಧನಾಗಿರಬೇಕು. ಈ ಹಿಂದೆ ಹಲವು ಚಾಲಕರು ಟೆಸ್ಲಾ ಕಾರುಗಳನ್ನು ಆಟೋ ಪೈಲಟ್ ಮೋಡ್'ಗೆ ಹಾಕಿ ಅಪಘಾತಕ್ಕೀಡಾದ ಘಟನೆಗಳು ವರದಿಯಾಗಿದ್ದವು.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಇನ್ನೂ ಕೆಲವರು ಟೆಸ್ಲಾ ಕಾರನ್ನು ಆಟೋ ಪೈಲಟ್‌ ಮೋಡ್'ನಲ್ಲಿಟ್ಟು ಮೊಬೈಲ್'ಗಳಲ್ಲಿ ಸಿನಿಮಾ ನೋಡುವುದು, ನಿದ್ರೆ ಮಾಡುವಂತಹ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಈ ವೇಳೆ ಚಾಲಕನ ಸೀಟಿನಲ್ಲಿ ಯಾರೂ ಇರುವುದಿಲ್ಲ.

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಟೆಸ್ಲಾ ಕಂಪನಿಯು ತನ್ನ ಆಟೋ ಪೈಲಟ್ ಮೋಡ್ ಅನ್ನು ಅಪ್ ಡೇಟ್ ಮಾಡುತ್ತಿದೆ. ಹೊಸ ಅಪ್ ಡೇಟ್ ಬಳಿಕ ಏನೇನು ಬದಲಾವಣೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಆಟೋ ಪೈಲಟ್'ನಿಂದ ಅಪಘಾತಗಳು ಸಂಭವಿಸುತ್ತಿದ್ದರೂ ಕೆಲವರು ಅದನ್ನು ಅರಿತುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಟೆಸ್ಲಾ ಕಾರಿನೊಳಗೆ ಮೂವರು ಡ್ಯಾನ್ಸ್ಮಾಡುತ್ತಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಈ ರೀತಿಯ ಘಟನೆಗಳು ಸಾರ್ವಜನಿಕರ ಪ್ರಾಣವನ್ನು ಸಹ ತೆಗೆಯಬಲ್ಲವು ಎಂಬುದನ್ನು ಗಮನಿಸಬೇಕು. ಟೆಸ್ಲಾ ಕಂಪನಿಯು ಶೀಘ್ರದಲ್ಲಿಯೇ ಭಾರತದಲ್ಲಿ ತನ್ನ ಮೊದಲ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಚಾಲಕನಿಲ್ಲದೇ 105 ಕಿ.ಮೀ ವೇಗದಲ್ಲಿ ಚಲಿಸಿದ ಕಾರಿನಲ್ಲಿ ಯುವಕರ ಭರ್ಜರಿ ಡ್ಯಾನ್ಸ್

ಭಾರತದಲ್ಲಿ ಟೆಸ್ಲಾ ಕಾರುಗಳು ಈ ವರ್ಷವೇ ಬಿಡುಗಡೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿರುವುದರಿಂದ ಟೆಸ್ಲಾ ಕಾರು ಬಿಡುಗಡೆಯನ್ನು ಮುಂದೂಡಲಾಗಿದೆ.

Most Read Articles

Kannada
English summary
Three youngsters drink and dance in driverless Tesla car. Read in Kannada.
Story first published: Thursday, June 3, 2021, 16:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X