Just In
- 6 hrs ago
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- 6 hrs ago
ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ 650
- 7 hrs ago
ಬಿಎಂಟಿಸಿ ಸೇರ್ಪಡೆಯಾಗಲಿವೆ 921 ಎಲೆಕ್ಟ್ರಿಕ್ ಬಸ್: ಟಾಟಾ ಮೋಟಾರ್ಸ್ ಪಾಲಾದ ಹೊಸ ಟೆಂಡರ್!
- 7 hrs ago
2022ರ ಯಮಹಾ ಆರ್7, ಎಂಟಿ-09 ಬೈಕ್ಗಳ ಟೀಸರ್ ಬಿಡುಗಡೆ
Don't Miss!
- News
ಕೊಪ್ಪಳ: ಹುಲಿಹೈದರ್ ಘರ್ಷಣೆ ಪ್ರಕರಣ, 56 ಜನ ಬಂಧನ!
- Movies
2ನೇ ಮದುವೆ ಬಗ್ಗೆ ಮೇಘನಾ ರಾಜ್ ಪ್ರತಿಕ್ರಿಯೆ: ಹೇಳಿದ್ದೇನು?
- Sports
ಜಿಂಬಾಬ್ವೆ ವಿರುದ್ಧ ಓಪನರ್ ಆಗಿ ಕಣಕ್ಕಿಳಿಯದ KL ರಾಹುಲ್ ವಿರುದ್ಧ ನೆಟ್ಟಿಗರ ಟೀಕೆ!
- Education
Entrance Exams After Class 12 : ಪಿಯು ನಂತರ ಯಾವೆಲ್ಲಾ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬಹುದು ಗೊತ್ತಾ ?
- Finance
ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!
- Technology
ಇನ್ಫಿನಿಕ್ಸ್ ನೋಟ್ 12 ಪ್ರೊ 4G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಫಿಕ್ಸ್!
- Lifestyle
ನಿಮ್ಮ ಲೈಫ್ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ರೈಲಿನಲ್ಲಿ ಸುರಕ್ಷಿತವಾಗಿ ಲಗೇಜ್ ಕೊಂಡೊಯ್ಯಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್
ಭಾರತೀಯ ರೈಲ್ವೆ ದೇಶದ ಜನರ ಜೀವನಾಡಿ ಎಂದು ಹೇಳಬಹುದು. ಭಾರತದಲ್ಲಿ ಬಸ್‌ಗಳನ್ನು ಹೊರತುಪಡಿಸಿ ಅತಿ ಹೆಚ್ಚು ಜನರು ಬಳಸುವ ಸಾರ್ವಜನಿಕ ಸಾರಿಗೆಗಳಲ್ಲಿ ಭಾರತೀಯ ರೈಲು ಕೂಡ ಒಂದು. ಪ್ರತಿನಿತ್ಯ ದೇಶಾದ್ಯಂತ ಲಕ್ಷಾಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಬೆಳೆಸುತ್ತಾರೆ.

ಪ್ರತಿದಿನ 13 ಮಿಲಿಯನ್'ಗೂ ಅಧಿಕ ಜನರು ಬಳಸುವ ಮೂಲಕ ವಿಶ್ವದ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲ ಭಾರತೀಯ ರೈಲ್ವೆ ಆಗಿದೆ. ನಾವೆಲ್ಲರೂ ಜೀವನದಲ್ಲಿ ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣಿಸುತ್ತೇವೆ. ದೂರದ ರೈಲು ಪ್ರಯಾಣವು ತುಂಬಾ ಹಿತಕರವಾಗಿರುತ್ತದೆ. ರೈಲು ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಅನುಭವ ಇರುತ್ತದೆ. ಅನೇಕ ಜನರಿಗೆ ಒಳ್ಳೆಯ ಅನುಭವಗಳಿದ್ದರೆ, ಕೆಲವರಿಗೆ ಕಳ್ಳತನ ಅಥವಾ ಬೆಲೆಬಾಳುವ ವಸ್ತುಗಳ ನಷ್ಟದಂತಹ ಕೆಟ್ಟ ಅನುಭವಗಳೂ ಇವೆ. ಆದ್ದರಿಂದ ನಾವು ಲಗೇಜ್‌ನೊಂದಿಗೆ ರೈಲುಗಳಲ್ಲಿ ಪ್ರಯಾಣಿಸುವಾಗ ಸುರಕ್ಷಿತವಾಗಿ ಪ್ರಯಾಣಿಸುವುದು ಹೇಗೆ ಎಂಬ ಮಾಹಿತಿಗಳನ್ನು ಓದುಗರಿಗೆ ಈ ಲೇಖನ ಮೂಲಕ ಪ್ರಯತ್ನಿಸಿದ್ದೇವೆ.

ದೂರದ ಪ್ರಯಾಣಕ್ಕಾಗಿ ಜನರೂ ಹೆಚ್ಚು ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ವಿಮಾನಕ್ಕೆ ಹೋಲಿಸಿದರೆ ರೈಲಿನಲ್ಲಿ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸಬಹುದು ಎನ್ನುವ ಕಾರಣಕ್ಕೂ ಜನ ರೈಲಿ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗಲೂ ಇಂತಿಷ್ಟೇ ಸಾಮಾನು ಸರಂಜಾಮು ಕೊಂಡೊಯ್ಯಬೇಕು ಎನ್ನುವ ಮಿತಿ ಇದೆ.

ಆದರೆ ಪ್ರಯಾಣಿಕರು ಮಾತ್ರ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಯಾಣಿಸುತ್ತಾರೆ. ಇದು ಬಹಳಷ್ಟು ವೇಳೆ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ರೀತಿಯ ಪ್ರಯಾಣದಲ್ಲಿ ನಾವು ಸಾಮಾನ್ಯವಾಗಿ ನಮ್ಮ ಸಾಮಾನುಗಳನ್ನು ನಮ್ಮೊಂದಿಗೆ ರೈಲುಗಳಲ್ಲಿ ಒಯ್ಯುತ್ತೇವೆ. ಹಾಗೆ ಇಟ್ಟುಕೊಂಡು ರಾತ್ರಿ ವೇಳೆ ಸಾಮಾನುಗಳು ಕಳೆದು ಹೋಗುವುದು ಅಥವಾ ಕಳ್ಳತನವಾಗುವಂತಹ ಘಟನೆಗಳು ನಡೆಯಬಹುದು.

ಲಗೇಜ್‌ಗಾಗಿ ಪಾರ್ಸೆಲ್ ಬುಕ್ಕಿಂಗ್
ರೈಲ್ವೆ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು. ಯಾರಾದರೂ ಇದಕ್ಕಿಂತ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಯಾಣಿಸಿದರೆ, ಅವರು ಪ್ರತ್ಯೇಕವಾಗಿ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ. ರೈಲ್ವೆಯ ಕೋಚ್ ಪ್ರಕಾರ, ಸಾಮಾನುಗಳ ತೂಕವು ವಿಭಿನ್ನವಾಗಿರುತ್ತದೆ.

ರೈಲ್ವೆಯ ಪ್ರಕಾರ, ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಕರು 40 ಕೆಜಿಯಷ್ಟು ಲಗೇಜ್‌ಗಳನ್ನು ಸಾಗಿಸಬಹುದು. ಎಸಿ-ಟಯರ್ ವರೆಗೆ 50 ಕೆಜಿ ಲಗೇಜ್ ಅನ್ನು ಸಾಗಿಸಲು ವಿನಾಯಿತಿ ಇದೆ. ಆದರೆ ಪ್ರಥಮ ದರ್ಜೆ ಎಸಿಯಲ್ಲಿ ಪ್ರಯಾಣಿಕರು 70 ಕೆಜಿಯಷ್ಟು ಸಾಮಾನು ಸರಂಜಾಮುಗಳನ್ನು ಸಾಗಿಸಬಹುದು.

ನಿಗದಿತ ಮಿತಿಯನ್ನು ಮೀರಿದ ಸಾಮಾನು ಸರಂಜಾಮುಗಳ ಸಾಗಿಸಿದರೆ, ಅಂಥ ಪ್ರಯಾಣಿಕರಿಗೆ ರೈಲ್ವೆಯು ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು. ಇದರೊಂದಿಗೆ, ಗ್ಯಾಸ್ ಸಿಲಿಂಡರ್, ದಹಿಸುವ ರಾಸಾಯನಿಕಗಳು, ಪಟಾಕಿ, ದುರ್ವಾಸನೆಯ ವಸ್ತುಗಳು, ಎಣ್ಣೆ, ಗ್ರೀಸ್, ತುಪ್ಪತಂದ ವಸ್ತುಗಳು ಒಡೆಯುವ ಅಥವಾ ತೊಟ್ಟಿಕ್ಕುವ ಮೂಲಕ ಬೇರೆ ವಸ್ತುಗಳಿಗೆ ಹಾನಿ ಉಂಟು ಮಾಡಬಹುದು.

ರೈಲು ಪ್ರಯಾಣದ ವೇಳೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವುದು ಕೂಡ ಅಪರಾಧವಾಗಿದೆ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಈ ನಿಷೇಧಿತ ವಸ್ತುಗಳಲ್ಲಿ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರೆ, ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು.

ತೂಕ
ರೈಲುಗಳಲ್ಲಿ, 40 ಕೆಜಿ ತೂಕದ ಲಗೇಜ್ ಅನ್ನು ಸ್ಲೀಪರ್ ಕ್ಲಾಸ್‌ನಲ್ಲಿಯೇ ಸಾಗಿಸಬಹುದು. ಸಾಮಿಗ್ರಿಗಳನ್ನು ಒಂದೇ ಪ್ಯಾಕ್‌ನಲ್ಲಿ ಇಡುವುದಕ್ಕಿಂತ ಪ್ರತ್ಯೇಕವಾಗಿ ಪ್ಯಾಕ್ ಮಾಡಬಹುದು ಮತ್ತು ಅದು ಹೆಚ್ಚು ತೂಕವನ್ನು ಹೊಂದಿರುತ್ತದೆ. ಹೆಚ್ಚು ತೂಕ ಹೊಂದಿದ್ದರೆ ಕಳ್ಳರು ಒಂಟಿಯಾಗಿ ಸಾಗಿಸುವುದು ಕಷ್ಟ. ಈ ರೀತಿಯಾಗಿ ನಿಮ್ಮೊಂದಿಗೆ ಲಗೇಜ್ ಸುರಕ್ಷಿತವಾಗಿರುತ್ತದೆ.

ಲೇಬಲ್ ಮಾಡಿ
ರೈಲ್ವೆಯಲ್ಲಿ ಸಾಮಾನು ಸರಂಜಾಮುಗಳು ಸಾಮಾನ್ಯವಾಗಿ ಕದ್ದಕ್ಕಿಂತ ಹೆಚ್ಚಾಗಿ ಕಳೆದುಹೋಗುತ್ತವೆ. ಆದ್ದರಿಂದ, ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಾವು ಸಾಗಿಸುವ ಎಲ್ಲಾ ಸಾಮಾನುಗಳ ಮೇಲೆ ನಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳನ್ನು ಬರೆಯಬೇಕುಇದರಿಂದ ಏನಾದರೂ ಕಳೆದುಹೋದರೆ ಅಥವಾ ನಾವು ಅದನ್ನು ಕಳೆದುಕೊಂಡರೆ, ಯಾರಾದರೂ ಅದನ್ನು ಕಂಡು ಪೊಲೀಸರಿಗೆ ಒಪ್ಪಿಸಿದರೆ, ಅವರು ನಮ್ಮನ್ನು ಸಂಪರ್ಕಿಸಲು ಮತ್ತು ನಮ್ಮ ವಸ್ತುಗಳನ್ನು ನಮಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ.

ಲಗೇಜ್‌ಗಳಿಗೆ ಬೀಗ
ಸೂಟ್‌ಕೇಸ್ ಬ್ಯಾಗ್‌ನಂತೆ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯುವಾಗ, ಅದನ್ನು ಯಾರೂ ತೆರೆಯದಂತೆ ಸಣ್ಣ ಬೀಗದಿಂದ ಲಾಕ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಇಷ್ಟು ಮಾತ್ರವಲ್ಲದೆ ನಿಮ್ಮ ಸಾಮಾನು ಸರಂಜಾಮುಗಳಿಗೆ ಚೈನ್ ಹಾಕಿ ಸೀಟಿಗೆ ಕಟ್ಟಿ ಕೀ ಸುರಕ್ಷಿತವಾಗಿರಿಸಲು ನೀವು ಮಲಗಿರುವಾಗ ಕಳ್ಳರು ನಿಮ್ಮ ಸಾಮಾನು ಕದಿಯಲು ಪ್ರಯತ್ನಿಸಿದರೂ ಅಷ್ಟು ಸುಲಭವಾಗಿ ಕದಿಯಲು ಸಾಧ್ಯವಿಲ್ಲ.

ಮೊಬೈಲ್, ಪರ್ಸ್‌ಗಳು, ಲ್ಯಾಪ್‌ಟಾಪ್‌ಗಳು
ರೈಲಿನಲ್ಲಿ ಬರುವ ಅನೇಕರಿಗೆ ರಾತ್ರಿ ಮಲಗುವಾಗ ಸೆಲ್ ಫೋನ್ ನೋಡಿಕೊಂಡು ನಿದ್ದೆಗೆ ಜಾರುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ತಮ್ಮ ಸೆಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ತಮ್ಮ ಹಾಸಿಗೆಯ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ಇದು ಕಳ್ಳರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅವರು ಸುಲಭವಾಗಿ ಕದಿಯುತ್ತಾರೆ. ರೈಲಿನಲ್ಲಿ ಮಲಗುವ ಮೊದಲು ಸೆಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಸುರಕ್ಷಿತವಾಗಿರಿಸಿ ನಂತರ ಮಲಗಿಕೊಳ್ಳಿ.

ಅಜಾಗರೂಕತೆಯಿಂಡ ಇರಬೇಡಿ
ಕೆಲವರು ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸಿ ಶೌಚಾಲಯಕ್ಕೆ ಹೋಗಬೇಕಾದಾಗ ತಂದಿದ್ದ ಲ್ಯಾಪ್ ಟಾಪ್ ಗಳನ್ನು ಬಳಸಿ ಪಕ್ಕದಲ್ಲಿದ್ದವರಿಗೆ ತಮ್ಮ ವಸ್ತುಗಳನ್ನು ನೋಡಿಕೊಳ್ಳಲು ಹೇಳಿ ಹೊರಡುತ್ತಾರೆ. ವಾಪಸ್ ಬಂದು ನೋಡಿದಾಗ ಪಕ್ಕದವರು ಇರುವುದಿಲ್ಲ, ತಂದಿದ್ದ ವಸ್ತುವೂ ಇರುವುದಿಲ್ಲ. ಆದ್ದರಿಂದ ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ ಜಾಗರೂಕರಾಗಿರಿ ಮತ್ತು ನಿಮಗೆ ಮೊದಲು ತಿಳಿದಿಲ್ಲದ ಯಾರನ್ನೂ ನಂಬದಿರಿ.