ಹೊಟ್ಟೆ ತುಂಬಾ ಬಿರಿಯಾನಿ ತಿನ್ನಲು ಪಾವತಿಸಿದ್ದು ರೂ.275 : ಸಿಕ್ಕಿದ್ದು 7 ಲಕ್ಷದ ನಿಸ್ಸಾನ್ ಕಾರು..ಅದೃಷ್ಟವಂತ!

ಹೈದರಬಾದ್ ಶೈಲಿಯ ದಮ್ ಬಿರಿಯಾನಿ (Dum Biryani)ಯನ್ನು ಪ್ರತಿಯೊಬ್ಬರು ಇಷ್ಟಪಟ್ಟು ಸವಿಯುತ್ತಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಹುಟ್ಟುಹಬ್ಬ, ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ 'ಬಿರಿಯಾನಿ' ಖಾಯಂ ಖಾದ್ಯ. ಸಣ್ಣ ವಯಸ್ಸಿನಿಂದ ಹಿಡಿದು, ಹಿರಿಯವರೆಗೆ ಹೊಟ್ಟೆ ತುಂಬಾ ತಿನ್ನಬೇಕೆನ್ನುವಷ್ಟು ಬಿರಿಯಾನಿ ರುಚಿಯಾಗಿರುತ್ತದೆ.

ಆಂಧ್ರ ಪ್ರದೇಶದ ತಿರುಪತಿ (Tirupati) ನಗರದಲ್ಲಿರುವ ರೋಬೋ ಹೋಟೆಲ್, ಸೆಪ್ಟೆಂಬರ್ ತಿಂಗಳಲ್ಲಿ ವಿನೂತನ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಅದರ ಭಾಗವಾಗಿ ಈ ಹೋಟೆಲ್ ನಲ್ಲಿ ಬಿರಿಯಾನಿ ತಿಂದ ಎಲ್ಲರಿಗೂ ಲಕ್ಕಿ ಡ್ರಾ ಕೂಪನ್ ವಿತರಿಸಲಾಗಿದೆ. ಇತ್ತೀಚೆಗೆ ಬಿರಿಯಾನಿ ತಿಂದ ವ್ಯಕ್ತಿಯೊಬ್ಬರು 7 ಲಕ್ಷ ಬೆಲೆ ಬಾಳುವ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾರನ್ನು ತನ್ನದಾಗಿಸಿಕೊಂಡಿದ್ದಾರೆ.

ಹೊಟ್ಟೆ ತುಂಬಾ ಬಿರಿಯಾನಿ ತಿನ್ನಲು ಪಾವತಿಸಿದ್ದು 275 ರೂಪಾಯಿ: ಸಿಕ್ಕಿದ್ದು 7 ಲಕ್ಷದ ನಿಸ್ಸಾನ್ ಕಾರು.. ಅದೃಷ್ಟವಂತ!

ಹೊಸ ವರ್ಷ ಆಚರಿಸಲು ಭಾನುವಾರ ರಾತ್ರಿ ಹೋಟೆಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಲೀಕ ಭರತ್ ಕುಮಾರ್ ರೆಡ್ಡಿ ಮತ್ತು ಅವರ ಪತ್ನಿ ನೀಲಿಮಾ ಲಕ್ಕಿ ಡ್ರಾ ನಡೆಸಿದ್ದಾರೆ. ತಿರುಪತಿಯ ರಾಹುಲ್ ಅದರಲ್ಲಿ ಗೆದಿದ್ದು, ಈ ಬಗ್ಗೆ ಸ್ವತಃ ಹೋಟೆಲ್ ಮಾಲೀಕರೇ ರಾಹುಲ್ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಆ ನಂತರ ಕಾರನ್ನು ಹಸ್ತಾಂತರಿಸಿದ್ದಾರೆ.

ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿವಿಧ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, 23 ಸಾವಿರಕ್ಕೂ ಹೆಚ್ಚು ಕೂಪನ್ ಗಳನ್ನು ನೀಡಲಾಗಿತ್ತು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ರೂ.6 ಲಕ್ಷದಿಂದ ರೂ.11.02 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಹೊಟ್ಟೆ ತುಂಬಾ ಬಿರಿಯಾನಿ ತಿನ್ನಲು ಪಾವತಿಸಿದ್ದು 275 ರೂಪಾಯಿ: ಸಿಕ್ಕಿದ್ದು 7 ಲಕ್ಷದ ನಿಸ್ಸಾನ್ ಕಾರು.. ಅದೃಷ್ಟವಂತ!

ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಇ, ಎಕ್ಸ್ಎಲ್ ಸೇರಿದಂತೆ 4 ರೂಪಾಂತರ ಹಾಗೂ ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲಾಕ್, ಸ್ಯಾಂಡ್‌ಸ್ಟೋನ್ ಬ್ರೌನ್ ಒಳಗೊಂಡಂತೆ 3-ಡುಯಲ್ ಟೋನ್, 5-ಮೊನೊಟೋನ್ ಬಣ್ಣಗಳೊಂದಿಗೆ ಲಭ್ಯವಿದೆ. 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವಿನ್ಯಾಸದ ದೃಷ್ಟಿಯಿಂದಲ್ಲೂ ನೋಡಲು ಸಾಕಷ್ಟು ಅತ್ಯಾಧುನಿಕವಾಗಿದೆ.

ನೂತನ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, 2 ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 1 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 PS ಗರಿಷ್ಠ ಪವರ್, 96 Nm ಪೀಕ್ ಟಾರ್ಕ್, 1 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 PS ಪವರ್, 160 Nm ಪೀಕ್ ಟಾರ್ಕ್ ಹೊರ ಹಾಕುವ ಶಕ್ತಿಯನ್ನು ಹೊಂದಿದೆ.

ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್ ಇಲ್ಲವೇ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ವೇರಿಯೆಂಟ್ಸ್ ಅನ್ವಯ 17.40 kmpl - 20 kmpl ಇಂಧನ ದಕ್ಷತೆಯನ್ನು ಪಡೆದಿದೆ. 336 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ.

ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಜೆಬಿಎಲ್ ಸ್ಪೀಕರ್‌, ಆಂಬಿಯೆಂಟ್ ಲೈಟಿಂಗ್ ಅನ್ನು ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ಪಡೆದಿದೆ.

ಸುರಕ್ಷತೆಯ ವಿಚಾರದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, 360 - ಡಿಗ್ರಿ ಕ್ಯಾಮೆರಾ, ಹಿಲ್-ಸ್ಟಾರ್ಟ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ. ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗೆ ಕಿಯಾ ಸೋನೆಟ್, ಹುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ ಸೇರಿದಂತೆ ಹಲವು ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

Article Published On: Tuesday, January 2, 2024, 16:19 [IST]
English summary
Tirupati man won 7 lakh worth nissan magnite car eat rs 275 dum biryani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+