ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಟೋಲ್ ಶುಲ್ಕ ಸಂಗ್ರಹ
ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಜಾರಿಯಲ್ಲಿರುವ ರಾಜ್ಯಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ಮೇ ತಿಂಗಳಿನಲ್ಲಿ ದೇಶಾದ್ಯಂತವಿರುವ ಟೋಲ್'ಗಳಲ್ಲಿ ಟೋಲ್ ಸಂಗ್ರಹವು 25% ನಿಂದ 30%ನಷ್ಟು ಕಡಿಮೆಯಾಗುವ ನಿರೀಕ್ಷೆಗಳಿವೆ. ಇಂಡಿಯನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್‌ಎ ಪ್ರಕಾರ ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶದ ಹಲವಾರು ರಾಜ್ಯಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಲಾಕ್‌ಡೌನ್ ಹೈವೇಗಳಲ್ಲಿ ವಾಹನಗಳ ಚಲನೆಯನ್ನು ಕಡಿಮೆ ಮಾಡಿದೆ.

ಇದರಿಂದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ತಿಂಗಳ ಟೋಲ್ ಸಂಗ್ರಹವು 25%ನಿಂದ 30%ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳ ಟೋಲ್ ಸಂಗ್ರಹವು 10%ನಷ್ಟು ಕಡಿಮೆಯಾಗಿದೆ ಎಂದು ಐಸಿಆರ್‌ಎ ವರದಿ ಮಾಡಿದೆ.
MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಈ ತಿಂಗಳ ಮೂರನೇ ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಲಾಕ್‌ಡೌನ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸುವ ನಿರೀಕ್ಷೆಗಳಿವೆ. ಜೂನ್‌ನಿಂದ ಟೋಲ್ ಸಂಗ್ರಹವು ಹೆಚ್ಚಾಗಲಿದೆ ಎಂದು ಐಸಿಆರ್‌ಎ ಹೇಳಿದೆ.

2019-20ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೂ.26,851 ಕೋಟಿ ಟೋಲ್ ಸಂಗ್ರಹಿಸಲಾಗಿತ್ತು. 2018-19ರಲ್ಲಿ ಈ ಪ್ರಮಾಣವು ರೂ.24,396 ಕೋಟಿಗಳಾಗಿತ್ತು. ಐಸಿಆರ್‌ಎ ಮಾರ್ಚ್ 11ರಿಂದ ಮೇ 10ರವರೆಗೆ 11 ರಾಜ್ಯಗಳ ಟೋಲ್ ಸಂಗ್ರಹದ ಬಗ್ಗೆ ವರದಿ ಸಿದ್ಧಪಡಿಸಿದೆ.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಈ ವರದಿಯ ಪ್ರಕಾರ ಮಹಾರಾಷ್ಟ್ರವು ಟೋಲ್ ಸಂಗ್ರಹದಲ್ಲಿ ಹೆಚ್ಚು ನಷ್ಟ ಅನುಭವಿಸಿದೆ. ಮಹಾರಾಷ್ಟ್ರದಲ್ಲಿ ಇತರ ರಾಜ್ಯಗಳಿಗಿಂತ ಮೊದಲೇ ಲಾಕ್‌ಡೌನ್ಜಾರಿಗೊಳಿಸಲಾಗಿತ್ತು.

ಈ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಟೋಲ್ ಸಂಗ್ರಹವು ಗಮನಾರ್ಹವಾಗಿ ಕಡಿಮೆಯಾಗಿದೆ. ಮಹಾರಾಷ್ಟ್ರದ ಹೊರತಾಗಿ, ರಾಜಸ್ಥಾನವೂ ಸಹ ಟೋಲ್ ಸಂಗ್ರಹದಲ್ಲಿ ಭಾರಿ ಇಳಿಕೆ ದಾಖಲಿಸಿದೆ.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ರಾಜಸ್ಥಾನದಲ್ಲಿ ಇತರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳ ಮೇಲೆ ನಿಷೇಧ ಹೇರಲಾಗಿದೆ. ಇದರಿಂದ ರಾಜಸ್ಥಾನದಲ್ಲಿ ಟೋಲ್ ಸಂಗ್ರಹವು ತೀವ್ರವಾಗಿ ಕಡಿಮೆಯಾಗಿದೆ. ಕರೋನಾ ಮೊದಲ ಅಲೆಗಿಂತ ಭಿನ್ನವಾಗಿ ಈ ಬಾರಿಯ ಲಾಕ್‌ಡೌನ್'ನಲ್ಲಿ ಉತ್ಪಾದನೆ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿದ ಕಂಪನಿಗಳಿಗೆ ವಿನಾಯಿತಿ ನೀಡಲಾಗಿದೆ.

ಇದರಿಂದ ಹೆದ್ದಾರಿಗಳಲ್ಲಿ ಕಮರ್ಷಿಯಲ್ ವಾಹನಗಳು ಸಂಚರಿಸುತ್ತಿವೆ. ಕರೋನಾ ವೈರಸ್ ಎರಡನೇ ಅಲೆಯ ಕಾರಣಕ್ಕೆ 2021-22ರ ಆರ್ಥಿಕ ವರ್ಷದಲ್ಲಿ ಟೋಲ್ಆದಾಯದಲ್ಲಿ ಭಾರೀ ಇಳಿಕೆ ಕಂಡು ಬರುಲಿದೆ ಎಂದು ಐಸಿಆರ್‌ಎ ತಿಳಿಸಿದೆ.


Click it and Unblock the Notifications