ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ವಿನೋದ್ ಜೋಶಿ ಮಹಾರಾಷ್ಟ್ರದ ಪುಣೆಯ ಐಟಿ ಉದ್ಯೋಗಿ. 48 ವರ್ಷದ ಇವರು ಕಳೆದ ಬುಧವಾರ ತಮ್ಮ ಸೆಲ್ ಫೋನ್‌ನಲ್ಲಿ ಮೂರು ಎಸ್‌ಎಂಎಸ್'ಗಳನ್ನು ಸ್ವೀಕರಿಸಿದ್ದರು. ಈ ಎಸ್‌ಎಂಎಸ್'ಗಳಲ್ಲಿ ಅವರ ಫಾಸ್ಟ್‌ಟ್ಯಾಗ್ ಖಾತೆಯಿಂದ ರೂ.310 ಕಡಿತಗೊಳಿಸಿರುವುದಾಗಿ ತಿಳಿಸಲಾಗಿತ್ತು.

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಇದರಲ್ಲೇನು ವಿಶೇಷ ಅಂತೀರಾ? ವಾಸ್ತವವಾಗಿ ವಿನೋದ್ ಜೋಶಿ ಅವರು ಅಂದು ತಮ್ಮ ಕಾರ್ ಅನ್ನು ಇಡೀ ದಿನ ಮನೆಯಲ್ಲಿಯೇ ನಿಲ್ಲಿಸಿದ್ದರು. ಈ ಬಗ್ಗೆ ಆತಂಕಗೊಂಡಿರುವ ವಿನೋದ್ ಜೋಶಿ ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿನೋದ್ ಜೋಶಿ, ಕಳೆದ ಬುಧವಾರ ನನ್ನ ಮಗಳನ್ನು ಶಾಲೆಗೆ ಕರೆದೊಯ್ಯಲು ನನ್ನ ಕಾರನ್ನು ಸೇನಾಪತಿ ಬಾಬತ್ ರಸ್ತೆವರೆಗೆ ಮಾತ್ರ ಚಾಲನೆ ಮಾಡಿದ್ದೆ.

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಬಾಷಾನ್ ಪ್ರದೇಶದ ನನ್ನ ಮನೆಯಲ್ಲಿ ದಿನವಿಡೀ ಕಾರನ್ನು ನಿಲ್ಲಿಸಲಾಗಿದೆ ಎಂಬುದಕ್ಕೆ ನನ್ನ ಬಳಿ ಸಿಸಿಟಿವಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ವಶಿ ಟೋಲ್ ಪ್ಲಾಜಾದಲ್ಲಿ ರೂ.40 ಶುಲ್ಕ ವಿಧಿಸಲಾಗಿದೆ ಎಂಬುದಾಗಿ ಮೊದಲ ಎಸ್‌ಎಂಎಸ್ ಬಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಈ ಶಾಕ್'ನಿಂದ ಹೊರ ಬರುವ ಮುನ್ನವೇ ಕಲಾಪುರ ಟೋಲ್ ಪ್ಲಾಜಾದಲ್ಲಿ ರೂ.203 ಕಡಿತಗೊಳಿಸಲಾಗಿದೆ ಎಂದು ಎರಡನೇ ಎಸ್‌ಎಂಎಸ್ ಬಂದಿದೆ.ಮಧ್ಯಾಹ್ನ 12.40ಕ್ಕೆ ಬಂದಿರುವ ಮೂರನೇ ಎಸ್‌ಎಂಎಸ್'ನಲ್ಲಿ 67 ರೂಪಾಯಿಗಳನ್ನು ತಲೇಗಾಂವ್ ಟೋಲ್ ಪ್ಲಾಜಾದಲ್ಲಿ ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಹೀಗೆ ಅವರ ಫಾಸ್ಟ್‌ಟ್ಯಾಗ್ ಖಾತೆಯಿಂದ ಒಟ್ಟು ರೂ.310 ಕಡಿತಗೊಳಿಸಲಾಗಿದೆ. ಈ ವಿಷಯದ ಬಗ್ಗೆ ಫಾಸ್ಟ್‌ಟ್ಯಾಗ್ ನೀಡಿದ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಲು ವಿನೋದ್ ಜೋಶಿರವರು ಮಾಡಿದ ಪ್ರಯತ್ನಗಳು ವಿಫಲವಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಆದ್ದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ವಿನೋದ್ ಜೋಶಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ.

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಮನೆಯಲ್ಲಿ ನಿಲ್ಲಿಸಿದ್ದ ವಾಹನವು ಟೋಲ್ ಪ್ಲಾಜಾ ಮೂಲಕ ಹಾದುಹೋಗಿದ್ದು, ಫಾಸ್ಟ್‌ಟ್ಯಾಗ್ ಖಾತೆಯಿಂದ ಹಣ ಕಡಿತಗೊಳಿಸಲಾಗಿದೆ ಎಂಬ ಎಸ್‌ಎಂಎಸ್'ಗಳು ಈ ಹಿಂದೆಯೂ ಹಲವು ವಾಹನ ಸವಾರರಿಗೆ ಬಂದಿದ್ದವು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿರುವುದು ವಾಹನ ಸವಾರರಲ್ಲಿ ಆತಂಕವನ್ನುಂಟು ಮಾಡುತ್ತಿವೆ. ಫೆಬ್ರವರಿ 15ರ ಮಧ್ಯರಾತ್ರಿಯಿಂದ ಟೋಲ್ ಪ್ಲಾಜಾಗಳಲ್ಲಿರುವ ಎಲ್ಲಾ ಲೇನ್‌ಗಳನ್ನು ಫಾಸ್ಟ್‌ಟ್ಯಾಗ್ ಲೇನ್‌ಗಳಾಗಿ ಬದಲಿಸಲಾಗಿದೆ.

ಮನೆಯಲ್ಲಿ ನಿಲ್ಲಿಸಿರುವ ಕಾರಿಗೂ ಬೀಳುತ್ತಿದೆ ಟೋಲ್ ಶುಲ್ಕ

ಇಂತಹ ಸನ್ನಿವೇಶದಲ್ಲಿ ಈ ರೀತಿಯ ಪ್ರಕರಣಗಳು ನಿರಂತರವಾಗಿ ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಆಕ್ರೋಶವನ್ನುಂಟು ಮಾಡಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Toll fees of Rs.310 deducted from IT employee's fastag account who parked his car at home. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X